AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕಾಸಿಗಾಗಿ ನೀವು ಮಾಡಿದ ಪ್ರಯತ್ನ ವಿಫಲವಾಗಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ ಶನಿವಾರ ಬಾಳಿಗೆ ಬೆಳದಿಂಗಳು, ಪರವಶದಿಂದ ಪರದಾಟ, ಓಲೈಕೆ, ನೌಕರರ ಮೇಲೆ ಅನಿಯಂತ್ರಣ ಇವೆಲ್ಲ ಇಂದಿನ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಹಣಕಾಸಿಗಾಗಿ ನೀವು ಮಾಡಿದ ಪ್ರಯತ್ನ ವಿಫಲವಾಗಲಿದೆ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jun 21, 2025 | 1:59 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ : ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವೈಧೃತಿ, ಕರಣ: ಭದ್ರ, ಸೂರ್ಯೋದಯ – 06 : 06 am, ಸೂರ್ಯಾಸ್ತ – 07 : 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:20 – 10:57, ಯಮಘಂಡ ಕಾಲ 14:12 – 15:49, ಗುಳಿಕ ಕಾಲ 06:06 – 07:43

ಮೇಷ ರಾಶಿ: ಸೂಚನೆಗಳನ್ನು ಪಾಲಿಸದೇ ಸಿಕ್ಕಿಬೀಳುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಅಪರಿಚಿತರು ನಿಮ್ಮನ್ನು ಕಾಣಬೇಕೆಂದು ಬಂದು ಉದ್ಯೋಗದಲ್ಲಿ ಪಾಲುದಾರಿಕೆಯ ಪ್ರಸ್ತಾಪ ಮಾಡುವರು. ಧಾರ್ಮಿಕ ಕಾರ್ಯದಿಂದ ಆದಾಯ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವಿರಿ. ಸದಾ ಉದ್ವೇಗದಲ್ಲಿಯೇ ಇರುವ ನಿಮಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು. ಪರರ ವಶದಿಂದ ಪಾರುಗುವುದು ಕಷ್ಟ. ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ಬೇಡವೆಂದರೂ ನಿಮಗೇ ಬರಲಿದೆ. ಮನೆಯಲ್ಲಿ ಕಛೇರಿಯ ವಿಷಯವಾಗಿ ಜಗಳವೂ ನಡೆಯಬಹುದು. ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ಸರಿಯಾಗುವ ತನಕ ತಾಳ್ಮೆ ಇರಲಿ. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.

ವೃಷಭ ರಾಶಿ: ಸ್ವಪ್ರತಿಷ್ಠೆಯನ್ನು ನಿಲ್ಲಿಸಿ, ಇಲ್ಲವೇ ತೋರಿಸುವಲ್ಲಿ ಮಾತ್ರ ಇರಲಿ. ಇಲ್ಲವಾದರೆ ನಿಮ್ಮ ಬಳಿ ಯಾರೂ ಬರಲಾರರು. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಆರ್ಥಿಕಸ್ಥಿತಿಯು ಅಭಿವೃದ್ಧಿ ಹೊಂದಿದರೂ ಯಾವುದೋ ಕಾರಣಕ್ಕೆ ಅದು ಖಾಲಿಯಾಗುವುದು. ಸಾಹಿತ್ಯದ ಮೂಲಕ ಯಶಸ್ಸು ಕಾಣುವ ಆಸೆ ಹೆಚ್ಚುವುದು. ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿಸಿರಿಕೊಳ್ಳಿ. ನಂಬಿಕೆಯನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯೂ ಆಗಲಿದೆ. ಕೋಪದಿಂದ ಏನನ್ನಾದರೂ ಹೇಳಿ ಅನಂತರ ಮುಜುಗರವನ್ನು ಅನುಭವಿಸುವಿರಿ. ತಾಳ್ಮೆ‌ ನಿಮಗೆ ಬಹಳ ಮುಖ್ಯವಾಗಲಿದೆ. ಸರ್ಕಾರದ ಕೆಲಸವು ಮುಂದಿನವಾರಕ್ಕೆ ಹೋಗಲಿದೆ. ನಿಮ್ಮ ಜೀವನವನ್ನು ನೀವೇ ನೋಡಿಕೊಳ್ಳುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಪಕ್ಷಪಾತದಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ.

ಮಿಥುನ ರಾಶಿ: ಆದಾಯಕ್ಕಿಂತ ಹೆಚ್ಚು ಹಣ ಸಿಗಬಹುದು ನಿಮ್ಮ ಬಳಿ. ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗುವುದು. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದರೆ ನಿಮ್ಮ ಬೆಲೆಯೇ ಕಡಿಮೆಯಾಗುವುದು. ಒಮ್ಮೆ ಹೇಳಿ‌ ಸುಮ್ಮನಾಗಿ. ದೀರ್ಘಕಾಲದ ಹೂಡಿಕೆಗೆ ಮನಸ್ಸು ಮಾಡುವಿರಿ. ಕೆಲವು ದಿನ ಹೀಗೆ ಇರಲಿದೆ. ದೈವದಲ್ಲಿ ಭಕ್ತಿಯಿಡಿ. ಯಾರ ಮೇಲೇ ಕುತಂತ್ರ ಮಾಡುವ ಅವಶ್ಯಕತೆ ಇಲ್ಲ. ನಿಮಗೆ ಸಿಗಬೇಕಾದುದು ಸಿಕ್ಕೇ ಸಿಗುತ್ತದೆ. ಸಿಗಲಿಲ್ಲವೆಂದರೆ ನಿಮ್ಮದಲ್ಲ ಅದು ಎಂದರ್ಥ. ಚಿಕಿತ್ಸೆಯಿಂದ ಕಳವಳವಾಗಲಿದೆ. ಅಧಿಕಾರವನ್ನು ಸಂತೋಷಪಡಿಸಲು ಏನನ್ನಾದರೂ ಮಾಡುವಿರಿ. ನಿಮ್ಮ ಮಾತು ಲೀಲಾಜಾಲವಾಗಿ ಹರಿದುಬರಲಿದೆ. ಭೂಮಿಯ ವ್ಯವಹಾರ ಸದ್ಯ ಬೇಡ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ. ಮೂರ್ತಿಯಾಗಲು ಪೆಟ್ಟು ತಿನ್ನಬೇಕಾಗುವುದು.

ಕರ್ಕಾಟಕ ರಾಶಿ: ಒಲಿದು ಬಂದರಷ್ಟೇ ನಿಮ್ಮದಾಗಬಹುದು. ಬಲದಿಂದ ಒಡಕು ಬರಬಹುದು. ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರಲಿದೆ. ಬೇಸರಿಸಬೇಕಿಲ್ಲ‌. ಔಷಧ ವ್ಯಾಪಾರದಲ್ಲಿ ಆದಾಯ ಚುರುಕಾಗಲಿದೆ. ಮುಂಬರುವ ದಿನಗಳು ಅವನ್ನೆಲ್ಲ ಸರಿದೂಗಿಸುವುದು‌ ಅಧಿಕಾರಿಗಳು ನಿಮ್ಮ ಕಾರ್ಯವನ್ನು ಕಂಡು ಪ್ರಶಂಸಿಸುವರು. ಶತ್ರುವಿಗೆ ಮಾಡಬೇಕಾದುದನ್ನು ರಹಸ್ಯವಾಗಿ ಮಾಡುವಿರಿ. ಕಲಾವಿದರು ಕಲಾಪ್ರದರ್ಶನಕ್ಕೆ ವಿದೇಶಕ್ಕೆ ತೆರಳಬಹುದು. ಬೇಕಾದ ವ್ಯವಸ್ಥೆಯ ಜೊತೆ ಹೋಗಿ. ಪರರ ಬೆಳವಣಿಗೆಗೆ ಅಸೂಯೆ ಬರಬಹುದು. ನಿಮ್ಮನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಹಣವೂ ಗೊತ್ತಾಗದಂತೆ ಖಾಲಿಯಾದೀತು. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು.

ಸಿಂಹ ರಾಶಿ: ಒಂಟಿಯಾಗಿ ಇದ್ದು ಹಳೆಯ ನಕಾರಾತ್ಮಕ ವಿಚಾರಗಳನ್ನು ಸ್ಮರಿಸಿಕೊಳ್ಳುವಿರಿ. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸಬೇಕಾಗುವುದು. ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ನಿಮ್ಮ ಕೆಲಸದ ಬಗ್ಗೆ ನಿಮ್ಮ ಗಮನವಿರಲಿ. ಗೌಪ್ಯ ಸಂಗತಿ ನಿಮ್ಮಿಂದ ಬಯಲಾಗುವುದು. ಇನ್ನೊಬ್ಬರ ಕುರಿತು ಟೀಕೆ ಮಾಡುವುದನ್ನು ನಿಲ್ಲಿಸಿ. ಅಶ್ಲೀಷಪದಗಳನ್ನು ಬಳಸಿ ಮನೆಯಲ್ಲಿ ಬೈಗುಳ ತಿನ್ನುವಿರಿ. ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವಿರಿ. ಯೋಗಕ್ಕೆ ಸಿಗುವ ಗೌರವ ಯೋಗ್ಯತೆಗೆ ಸಿಗದು. ಕಛೇರಿಯ ಹಾಗೂ ಮನೆಯ ಕೆಲಸವನ್ನು ನಿಭಾಯಿಸುವುದು ನಿಮಗೆ ಕಷ್ಟವೇ. ಆದರೂ ಅನಿವಾರ್ಯವಾಗಿರುತ್ತದೆ. ಉದಾಸೀನದಿಂದ ಅವಕಾಶದಿಂದ ವಂಚಿತರಾಗುವಿರಿ. ಕಾರ್ಯಕ್ಕಾಗಿ ಇಂದಿನ ಓಡಾಟವು ವ್ಯರ್ಥವೇ ಸರಿ. ನಿನ್ನೆಯ ಘಟನೆಯನ್ನು ನೆನಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇದ್ದರೂ ಮನೆಯಲ್ಲಿ ಕುಳಿತು ಬೇಸರವಾಗುವುದು.

ಕನ್ಯಾ ರಾಶಿ: ಹಣಕಾಸಿಗಾಗಿ ನೀವು ಮಾಡಿದ ಪ್ರಯತ್ನ ವಿಫಲವಾಗಲಿದೆ. ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಲಿದ್ದೀರಿ. ಇಷ್ಟು ವರ್ಷದ ಪರಿಶ್ರಮವು ಇಂದು ವ್ಯರ್ಥವಾಗುವುದು. ವಿಶೇಷವಾಗಿ ವಿದ್ಯಾರ್ಥಿಗಳು ಈ ವಿಚಾರದಲ್ಲಿ ಹತಾಶೆಗೊಳ್ಳುವರು. ಭವಿಷ್ಯಕ್ಕೆ ಹಣವನ್ನು ಹೂಡುವ ಮನಸ್ಸಿದ್ದರೂ ಹಣದ ಕೊರತೆ ಇರಲಿದೆ. ನಿಮ್ಮ ಕಲ್ಮಶ ಮನಸನ್ನು ಯಾರಿಗೂ ತೋರಿಸಬೇಡಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗುವುದು. ಪ್ರೇಯಸಿಯ ಸಂಪರ್ಕವು ಸಿಗದೇ ಬೇಸರಿಸುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಉತ್ತಮ. ಪ್ರಾಣಿಯಿಂದ ಭಯವಾಗಲಿದೆ. ಬೇಡವಾದುದರ ಬಗ್ಗೆ ಆಸೆ ಬೇಡ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.

‘ಎಕ್ಕ’ ಸಿನಿಮಾಗೆ ಭರ್ಜರಿ ಓಪನಿಂಗ್; ಯುವ ರಾಜ್​ಕುಮಾರ್ ಹೇಳಿದ್ದೇನು?
‘ಎಕ್ಕ’ ಸಿನಿಮಾಗೆ ಭರ್ಜರಿ ಓಪನಿಂಗ್; ಯುವ ರಾಜ್​ಕುಮಾರ್ ಹೇಳಿದ್ದೇನು?
ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಅಳುತ್ತಿರುವ ಮಕ್ಕಳು
ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಅಳುತ್ತಿರುವ ಮಕ್ಕಳು
7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ
7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ
ಕೇವಲ 3000 ರೂ.ನಿಂದ 7000 ಕೋಟಿ ದುಡಿದ ಬಾಬು ಪ್ಯಾಲೇಸ್ ಹೇಗಿದೆ ನೋಡಿ
ಕೇವಲ 3000 ರೂ.ನಿಂದ 7000 ಕೋಟಿ ದುಡಿದ ಬಾಬು ಪ್ಯಾಲೇಸ್ ಹೇಗಿದೆ ನೋಡಿ
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ