Literature: ನೆರೆನಾಡ ನುಡಿಯೊಳಗಾಡಿ: ಚಂದ್ರಕಾಂತ ಪೋಕಳೆ ಅನುವಾದಿಸಿದ ಹಮೀದ ದಳವಾಯಿ ಕಥೆ ‘ಬಾಬುಖಾನನ ಗ್ರಾಮೋಫೋನ್’

Short Story of Hamid Dalwai : ಬಾಬುಖಾನ ಒಳಗೆ ಹೋಗಿ ಮತ್ತೆ ನಾಯಿ ಹಾಡುವಂತೆ ಮಾಡಿ, ಮರಳಿ ಪಡಸಾಲೆಯ ಬಾಗಿಲಿಗೆ ಬಂದು ನಿಲ್ಲುತ್ತಿದ್ದ. ನಮ್ಮ ಪಹರೇ ಕಾಯುತ್ತಿರುವಂತೆ ಅನಿಸುತ್ತಿತ್ತು. ನಾವು ಅವನ ಗ್ರಾಮೋಫೋನಿನ ನಾಯಿಯನ್ನು ಅಪಹರಣ ಮಾಡಲು ಬಂದಿರುವೆವೇನೊ, ಎಂದವನು ಭಾವಿಸುತ್ತಿದ್ದ.

Literature: ನೆರೆನಾಡ ನುಡಿಯೊಳಗಾಡಿ: ಚಂದ್ರಕಾಂತ ಪೋಕಳೆ ಅನುವಾದಿಸಿದ ಹಮೀದ ದಳವಾಯಿ ಕಥೆ ‘ಬಾಬುಖಾನನ ಗ್ರಾಮೋಫೋನ್’
ಮರಾಠಿ ಲೇಖಕ ಹಮೀದ ದಳವಾಯಿ ಮತ್ತು ಅನುವಾದಕ ಚಂದ್ರಕಾಂತ ಪೋಕಳೆ
Follow us
ಶ್ರೀದೇವಿ ಕಳಸದ
|

Updated on:May 20, 2022 | 11:22 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಮರಾಠಿ ಲೇಖಕ ಹಮೀದ ದಳವಾಯಿ (1932-1877) ಸಂವಿಧಾನದ ಕಾಯ್ದೆಯಂತೆ ಸಾಮಾಜಿಕ ಬದಲಾವಣೆ ಸುಧಾರಣೆಯಾಗಬೇಕೆಂಬ ನಿಲುವನ್ನು ಹೊಂದಿದ್ದರು. ಅದಕ್ಕಾಗಿ ವೈಚಾರಿಕ ಲೇಖನಗಳನ್ನು ಬರೆದರು. ಉಪನ್ಯಾಸ, ವಿಚಾರ ಸಂಕಿರಣ, ಸಂವಾದಗಳನ್ನು ಏರ್ಪಡಿಸಿದರು. ಮುಸ್ಲಿಂ ಸಮುದಾಯ ಸುಶಿಕ್ಷಿತ, ಸೆಕ್ಯುಲರ್ ಮತ್ತು ಪ್ರಜಾಪ್ರಭುತ್ವವಾದಿಯಾಗಬೇಕೆಂಬ ಅವರ ಪ್ರಯತ್ನ ಸತತವಾಗಿತ್ತು. ಅವರ ‘ಇಂಧನ’ ಕಾದಂಬರಿ ಬಹಳ ಚರ್ಚೆಗೊಳಗಾಯಿತು. ಅವರ ಪ್ರಸಿದ್ಧ ಕೃತಿ ‘ಮುಸ್ಲಿಂ ಪಾಲಿಟಿಕ್ಸ್ ಇನ್ ಇಂಡಿಯಾ’. ‘ಇವರ ಸಾಹಿತ್ಯ ವಿಶೇಷತೆಯು ಅವರ ವಾಸ್ತವದ ಸಮ್ಯಕ್ ಗ್ರಹಿಕೆಯಲ್ಲಿದೆ ಮತ್ತು ನಿರ್ಭಯವಾದ ಅಭಿವ್ಯಕ್ತಿಯಲ್ಲಿದೆ. ಅವರ ಕಾವ್ಯಾತ್ಮ ಸತ್ಯದ ಮೂಲದಲ್ಲಿ ವಾಸ್ತವ ಸತ್ಯ ಗಟ್ಟಿಯಾಗಿ ನೆಲೆಯೂರಿ ನಿಂತಿದೆ. ಅದರಿಂದ ಜನರು ಚಡಪಡಿಸಿ ಪ್ರಕ್ಷುಬ್ಧಗೊಂಡರೂ ಆ ವಾಸ್ತವ ಸತ್ಯವನ್ನು ಯಾರಿಂದಲೂ ನಿರಾಕರಣೆ ಮಾಡುವುದು ಸಾಧ್ಯವಾಗಲಾರದು’ ಎಂದಿದ್ದರು ಪತ್ರಕರ್ತ ಯದುನಾಥ ಥತ್ತೆ. ಪ್ರಸ್ತುತ ಕಥೆ ‘ಬಾಬುಖಾನನ ಗ್ರಾಮೊಫೋನು’ ಪ್ರಕಟಗೊಂಡಿದ್ದು 1966ರಲ್ಲಿ. ಇದನ್ನು ಅನುವಾದಿಸಿದವರು ಕನ್ನಡದ ಖ್ಯಾತ ಅನುವಾದಕ ಚಂದ್ರಕಾಂತ ಪೋಕಳೆ. ಈತನಕ 115 ಮರಾಠಿ ಕೃತಿಗಳನ್ನು ಕೊಟ್ಟ ಇವರೀಗ ‘ದೇವಸಂಪಿಗೆ’ ಅನುವಾದಿತ ಕಥಾ ಸಂಕಲನದ ತಯಾರಿಯಲ್ಲಿದ್ದಾರೆ.

ಕಥೆ : ಬಾಬುಖಾನನ ಗ್ರಾಮೊಫೋನು | ಮರಾಠಿ : ಹಮೀದ ದಳವಾಯಿ | ಕನ್ನಡಕ್ಕೆ : ಚಂದ್ರಕಾಂತ ಪೋಕಳೆ

(ಭಾಗ 1)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ: ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಅನುವಾದಿಸಿದ ಸಿಂಗರ್​ನ ‘ಮಳ್ಳ ಗಿಂಪೆಲ್’ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಬಾಬುಖಾನನ ಅಪ್ಪ ಮುಂಬೈನಿಂದ ಅವನಿಗೆ ಗ್ರಾಮೊಫೋನ್ ಕಳಿಸಿದ್ದು ಕೇಳಿ ಊರಮಂದಿಗೆಲ್ಲ ಬೆರಗಾಯಿತು. ಈ ಹುಡುಗನಿಗೆ ಗ್ರಾಮೋಫೋನ್ ಯಾಕೆ ಕಳಿಸಬೇಕಿತ್ತು. ಇನ್ನೇನು ಹಗಲು ರಾತ್ರಿ ಗ್ರಾಮೋಫೋನ್ ಕೇಳತಾ ಕೂತು ಕೊಳ್ಳುತ್ತಾನೆ ಅಷ್ಟೇ… ಎಂದರು ಜನರು.

ಆದರೆ ನಾವು ಹುಡುಗರಿಗೆ ಮಾತ್ರ ಬಾಬುಖಾನರ ಬಳಿಗೆ ಫೋನು ಬಂದಿರುವದು ಖುಷಿಯನ್ನು ತಂದಿತ್ತು. ಈ ಮೊದಲು ನಾವು ಫೋನ್ ಬಗ್ಗೆ ಬರೇ ಕೇಳಿದ್ದೆವು. ಅದೆಲ್ಲ ಅದ್ಭುತವಾಗಿತ್ತು. ಗ್ರಾಮೋಫೋನಿನಲ್ಲಿ ನಾಯಿ ಅಡಗಿ ಕೂತು ಹಾಡುತ್ತದೆ ಎಂದು ನಮ್ಮ ಓರಗೆಯ ಒಬ್ಬ ಹುಡುಗ ಹೇಳಿದ. ಗ್ರಾಮೋಫೋನಿನ ಎದುರಿಗೆ ನಾಯಿ ಕೂತಿರುವದನ್ನು ಅವನು ಪತ್ರಿಕೆಯಲ್ಲಿ ಎಲ್ಲೋ ನೋಡಿದ್ದನಂತೆ. ಆ ನಾಯಿಯನ್ನು ಅವನು ನಮಗೆ ತೋರಿಸಿ, ‘ಇದೇ ಆ ನಾಯಿ ನೋಡು!’ ಎಂದ.

ಆರಂಭದ ಕೆಲದಿನ ನಮಗೆ ಗ್ರಾಮೋಫೋನಿನ ದರುಶನವಾಗಲಿಲ್ಲ. ಏಕೆಂದರೆ ಬಾಬುಖಾನ ಅದನ್ನು ರಾತ್ರಿ ಶುರು ಮಾಡುತ್ತಿದ್ದ. ಹೀಗಾಗಿ ನಮಗೆ ಅದರ ಧ್ವನಿ ಮಾತ್ರ ಕೇಳಿ ಬರುತ್ತಿತ್ತು. ಜೋರಾದ ಧ್ವನಿ, ರಮಜಾನ ತಿಂಗಳಲ್ಲಿ ನಸುಕಿಗೆ ಎಬ್ಬಿಸಲು ಬರುವ ಫಕೀರನ ಧ್ವನಿಯಂತೆ.

ರಾತ್ರಿ ಆ ಧ್ವನಿ ನನ್ನ ಕಿವಿಗೆ ಬಿದ್ದದ್ದೇ ತಡ, ಹಾಡುವ ಆ ನಾಯಿಯ ಚಿತ್ರ ನನ್ನ ಮನದೊಳಗೆ ಮೂಡುತ್ತಿತ್ತು. ನನ್ನ ಪ್ರಕಾರ, ಗ್ರಾಮೋಫೋನಿನಲ್ಲಿ ಅಡಗಿ ಕುಳಿತ ಆ ನಾಯಿಯು ಗಂಡಸರ, ಹೆಂಗಸರ ಮತ್ತು ಮಕ್ಕಳ-ಹೀಗೆ ವಿವಿಧ ಸ್ವರದಲ್ಲಿ ಅದು ಹಾಡುತ್ತಿತ್ತು. ಹೀಗೆ ಹಲವು ಧ್ವನಿಗಳನ್ನು ಅನುಕರಣೆ ಮಾಡುವ ನಾಯಿಯನ್ನು ನೋಡಬೇಕೆಂಬ ತೀವ್ರ ಕುತೂಹಲ ನಮ್ಮ ಮನದಲ್ಲಿ ಮೂಡಿತು. ಒಂದು ದಿನ ಬಾಬುಖಾನನಿಗೆ ಸಂಜೆಯ ಹೊತ್ತಿಗೆ ಗ್ರಾಮೋಫೋನು ಹಚ್ಚಬೇಕೆಂಬ ಲಹರಿ ಬಂತು. ಗ್ರಾಮೋಫೋನಿನ ಆ ಧ್ವನಿ ಕಿವಿಗೆ ಬಿದ್ದಿದ್ದೇ ತಡ ನಾವು ಮಕ್ಕಳೆಲ್ಲರೂ ಅವನ ಮನೆಯತ್ತ ಧಾವಿಸಿದೆವು.

ಬಾಬುಖಾನನು ಗ್ರಾಮೋಫೋನನ್ನು ತನ್ನ ಪಡಸಾಲೆಯ ಒಂದು ಟೇಬಲ್ ಮೇಲೆ ಇರಿಸಿದ್ದ. ಅದರ ಧ್ವನಿವರ್ಧಕವನ್ನು ಅಂಗಳದ ಕಡೆಗೆ ಹೊರಳಿಸಿದ್ದ. ನಾವು ಬಂದಿರುವುದನ್ನು ಕಂಡ ಬಾಬುಖಾನ ಹೊರಬಂದು ಹೇಳಿದ- ‘ಯಾರೂ ಒಳಗೆ ಬರಬೇಡಿ. ದೂರ ನಿಂತುಕೊಂಡೇ ಕೇಳಿ.’ ನಮಗೆ ಅಂಗಳದಲ್ಲಿರುವ ಒಂದು ಬೆಂಚಿನ ಮೇಲೆ ಕೂತಿರುವಂತೆ ತಿಳಿಸಿದ. ನಾವೆಲ್ಲ ಬೆಂಚಿನ ಮೇಲೆ ಕೂತು ಹಾಡು ಕೇಳಲಾರಂಭಿಸಿದೆವು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಇಂದಿನ ಪೀಳಿಗೆಗೆ ಕೇವಲ ಸ್ವಾತಂತ್ರ್ಯ ಬೇಕೆಂದು ನಾವು ಹೇಳುವುದು ತಪ್ಪಲ್ಲವೆ?

ಆವತ್ತಿನಿಂದ ಬಾಬುಖಾನ ಹಗಲಿನಲ್ಲೂ ಗ್ರಾಮೋಫೋನ್ ಶುರು ಮಾಡಲಾರಂಭಿಸಿದ. ನಾವೂ ಓಡಿ ಹೋಗಿ ಬೆಂಚಿನ ಮೇಲೆ ಕೂರಲಾರಂಭಿಸಿದೆವು. ಬೆಂಚಿನ ಮೇಲೆ ಎದ್ದು ನಿಂತು ನಾಯಿ ಏನಾದರೂ ಕಾಣುವದೇ ಎಂದು ನೋಡಲು ಪ್ರಯತ್ನಿಸಿದೆವು. ಆದರೆ ಆ ನಾಯಿ ಮಾತ್ರ ನಮಗೆಂದೂ ಕಾಣಲಿಲ್ಲ. ಆ ನಾಯಿ ನಡುವೆಯೆ ತೇಕು ಹತ್ತಿ ಹಾಡು ನಿಲ್ಲಿಸುತ್ತಿತ್ತು. ಆಗ ಬಾಬುಖಾನ ಒಳಗೆ ಹೋಗಿ ಮತ್ತೆ ನಾಯಿ ಹಾಡುವಂತೆ ಮಾಡಿ, ಮರಳಿ ಪಡಸಾಲೆಯ ಬಾಗಿಲಿಗೆ ಬಂದು ನಿಲ್ಲುತ್ತಿದ್ದ. ನಮ್ಮ ಪಹರೇ ಕಾಯುತ್ತಿರುವಂತೆ ಅನಿಸುತ್ತಿತ್ತು. ನಾವು ಅವನ ಗ್ರಾಮೋಫೋನಿನ ನಾಯಿಯನ್ನು ಅಪಹರಣ ಮಾಡಲು ಬಂದಿರುವೆವೇನೊ, ಎಂದವನು ಭಾವಿಸುತ್ತಿದ್ದ.

ಅವನನ್ನು ಪಕ್ಕಕ್ಕೆ ಸರಿಸಿ ಒಳಗೆ ನುಗ್ಗುವ ಧೈರ್ಯ ನಮ್ಮಲ್ಲಿರಲಿಲ್ಲ. ನಾವು ಅವನಿಗೆ ಹೆದರುತ್ತಿದ್ದೆವು. ಆದರೆ ನಾವು ಹೆದರುವ ರೀತಿಯಲ್ಲಿ ಅವನೇನೂ ವರ್ತಿಸುತ್ತಿರಲಿಲ್ಲ. ಹಾಗವನು ಸಣಕಲು ಮನುಷ್ಯ. ಊರಮಂದಿ ಅವನನ್ನು ಹೆದರ ಪುಕ್ಕಾ ಎಂದೇ ಕರೆಯುತ್ತಿದ್ದರು. ಅಪಹಾಸ್ಯದಲ್ಲಿ ಮಾಡುತ್ತಿರುವದು ನಮಗೆಲ್ಲ ಗೊತ್ತಿರುವ ವಿಷಯ.

ಬಾಬುಖಾನ ಏನೂ ಕೆಲಸ ಮಾಡುತ್ತಿರಲಿಲ್ಲ. ಅವನ ಅಪ್ಪ ಮುಂಬೈಯಲ್ಲಿ ನೌಕರಿ ಮಾಡುತ್ತಿದ್ದ. ಅಮ್ಮ ಮತ್ತು ಅವನು ಮನೆಯಲ್ಲೇ ಇರುತ್ತಿದ್ದರು. ಮಳೆಗಾಲದಲ್ಲಿ ಅಪ್ಪ ಮನೆಗೆ ಬರುತ್ತಿದ್ದ. ದೀಪಾವಳಿಯ ಸುಮಾರಿಗೆ ಮತ್ತೆ ಮರಳಿ ಮುಂಬೈಗೆ ಹೋಗುತ್ತಿದ್ದ. ಬಾಬುಖಾನ್ ಒಮ್ಮೆ ಅವನೊಂದಿಗೆ ಮುಂಬೈಗೆ ಹೋಗಿದ್ದ. ಆದರೆ ಹೆಚ್ಚು ದಿನ ಅಲ್ಲಿರಲಿಲ್ಲ. ಹಡಗಿನಲ್ಲಿ ಪ್ರಯಾಣ ಮಾಡಿದ್ದರಿಂದ ವಾಂತಿ ಮಾಡಿ ಮಾಡಿ ಹೈರಾಣಾಗಿದ್ದ. ಇದರಿಂದ ಅವನಿಗೆ ಹಡಗು ಮತ್ತು ಮುಂಬೈ ಎಂದರೆ ಒಂದು ರೀತಿಯ ಭಯ ಶುರುವಾಗಿತ್ತು.

ಅವನ ಅಮ್ಮ ಗೇಣಿದಾರರಿಂದ ಭತ್ತ ವಸೂಲಿ ಮಾಡುತ್ತಿದ್ದಳು. ಅಪ್ಪ ಮುಂಬೈಯಿಂದ ಹಣ ಕಳಿಸುತ್ತಿದ್ದ. ಒಮ್ಮೆ ಅವನು ಹಣದ ಜೊತೆಗೆ ಗ್ರಾಮೋಫೋನೂ ಸಹ ಕಳಿಸಿದ. ಬಾಬುಖಾನ ಎಲ್ಲ ಕೆಲಸ ಬಿಟ್ಟು ಗ್ರಾಮೋಫೋನಿನ ಬೆನ್ನು ಹತ್ತಿದ.

ಈ ಲಕ್ಷ್ಯಹೋಗದೆ ಬರೇ ‘ಕಾಲೂ ಕವ್ವಾಲ್’ ಕೇಳುವದೇ ಮೋಜೆನಿಸುತ್ತಿತ್ತು. ನಾವು ಅದನ್ನು ಆಲಿಸಲು ಕಿವಿ ನಿಮಿರಿಸಿ, ಉಸಿರು ಬಿಗಿ ಹಿಡಿದು ಕೂತಿರುತ್ತಿದ್ದೆವು. ತಟ್ಟೆಯ ಮೇಲೆ ತಿರುಗುವ ಮೇಲೆ-ಕೆಳಗೆ ಅಲುಗಾಡುವ ಸೌಂಡ್ ಬಾಕ್ಸ್ ಮೇಲೆಯೇ ನಮ್ಮ ನೋಟ ಕೀಲಿಸಿರುತ್ತಿತ್ತು. ನಾವು ‘ಕಾಲೂ ಕವ್ವಾಲ್’ ಎಂದಾಕ್ಷಣ ಏನೋ ವಿಜಯ್ ಸಂಪಾದಿಸಿದವರಂತೆ ಚಪ್ಪಾಳೆ ತಟ್ಟುತ್ತಿದ್ದೆವು. ಆಗ ಬಾಬುಖಾನ ಸಿಟ್ಟಿಗೆದ್ದು, ‘ಸೈತಾನರೆ! ಸುಮ್ಮನೆ ಕೂತು ಕೇಳಿರೋ!’ ಎಂದು ಬೆದರಿಸುತ್ತಿದ್ದ. ‘ಕಾಲೂ ಕವ್ವಾಲ’ನ ಬಗೆಗೆ ಅವನಿಗೇನೂ ಖೇದವೆನಿಸುತ್ತಿರಲಿಲ್ಲ. ಅವನು ಸರ್ರನೆ ಒಳಗೆ ಹೋಗಿ ಬೇರೊಂದು ತಟ್ಟೆಯನ್ನು ತಂದು ಹಚ್ಚುತ್ತಿದ್ದ, ಆ ತಟ್ಟೆಯಿಂದ ಹೊರ ಬೀಳುವ ಕವ್ವಾಲಿ ಕೇಳುವದರಲ್ಲಿ ಮಗ್ನನಾಗುತ್ತಿದ್ದ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ

ಬಾಬುಖಾನನ ಬಳಿಯಿರುವ ಎಲ್ಲ ರೆಕಾರ್ಡ್ ತಟ್ಟೆಗಳು ಹಾಡು ಹೇಳುತ್ತಿರಲಿಲ್ಲ. ಕೆಲವು ತಟ್ಟೆಗಳಲ್ಲಿ ಸಂವಾದ ಇರುತ್ತಿತ್ತು. ಅದರಲ್ಲಿ ಮಾತ್ರ ‘ಕಾಲೂ ಕವ್ವಾಲ್’ ಕೇಳಿ ಬರುತ್ತಿರಲಿಲ್ಲ. ಒಂದು ತಟ್ಟೆಯಲ್ಲಿ ಹೂವಾಡಗಿತ್ತಿಯ ಸ್ವಗತವಿರುತ್ತಿತ್ತು. ‘ಹೂವು ಕೊಂಡುಕೊಳ್ಳಿ-ಹೂವು’ ಎಂದು ಅವಳು ಮಾರುತ್ತ ಸಾಗುವ ಮಾತು. ಯಾರೋ ಗಿರಾಕಿ ನಡುವೆ. ಹೂವಿನ ಬೆಲೆ ಏನು? ಎಂಬ ಪ್ರಶ್ನೆ ಕೇಳಿ ಬರುತ್ತಿತ್ತು. ಬಳಿಕ ಅವರ ಸಂಭಾಷಣೆ ಮುಂದುವರಿಯುವದು, ನಡುವೆಯೇ ಅವಳ ಹಾಡು, ಮತ್ತೆ ಗಿರಾಕಿಯ ಮಾತು. ಹೀಗೆ ಕೊನೆಯವರೆಗೂ ಸಾಗುತ್ತಿತ್ತು.

ಆದರೆ ಬಾಬುಖಾನ ಮಾತ್ರ ಒಂದು ತಟ್ಟೆಯ ಹಾಡನ್ನು ತುಂಬ ಆಸಕ್ತಿಯಿಂದ ಕೇಳುತ್ತಿದ್ದ. ಆ ತಟ್ಟೆಯಿಂದ ‘ತಮನ್ನಾ-ಎ- ಮದಿನಾ’ ಎಂಬ ಸ್ವರ ಕೇಳಿ ಬರುತ್ತಿತ್ತು. ಆ ಹಾಡುಕೇಳಿ ಬಾಬುಖಾನ ಗದ್ಗದಿತನಾಗುತ್ತಿದ್ದ. ತಲೆಯಾಡಿಸುತ್ತಿದ್ದ. ಮದಿನಾಕ್ಕೇ ಹೋಗಿ ತಲುಪಿದವನಂತೆ ಮಾಡುತ್ತಿದ್ದ. ಕರಬಲದ ರಣರಂಗದಲ್ಲಿ ವಿಹರಿಸುತ್ತಿದ್ದ. ಕಾಬಾ ಮೈದಾನದಲ್ಲಿ ನಮಾಜ ಮಾಡುವವರಂತೆ ನಮ್ರನಾಗುತ್ತಿದ್ದ. ತಟ್ಟೆ ಮುಗಿದು ‘ಕಾಲೂ ಕವ್ವಾಲ್’ ಎಂಬ ಕೂಗು ಕೇಳಿ ಬೆಚ್ಚಿ ಎಚ್ಚರಗೊಳ್ಳುತ್ತಿದ್ದ, ಧಾವಿಸಿ ಒಳಗೆ ಹೋಗಿ ಮತ್ತೆ ಅದೇ ಹಾಡನ್ನು ಮರಳಿ ಶುರು ಮಾಡುತ್ತಿದ್ದ. ತಟ್ಟೆ ತಿರುಗುತ್ತ ಮತ್ತೆ ‘ತಮನ್ನಾ-ಎ- ಮದಿನಾ’ ಶುರುವಾಗುತ್ತಿತ್ತು. ಆ ನಾದಬ್ರಹ್ಮದಿಂದ ಅವನು ತಲೆದೂಗುತ್ತಿದ್ದ.

(ಮೊದಲ ಭಾಗ ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಎಲ್ಲಾ ಭಾಗ ಮತ್ತು ಅಂಕಣದ ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:26 am, Fri, 20 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ