AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಸಿಎಸ್​ಕೆ ಹೆಸರನ್ನು ಕೇಳುತ್ತಿದ್ದಂತೆ ಕೈಯಲ್ಲಿದ್ದ ಗ್ಲಾಸ್ ಪುಡಿಗಟ್ಟಿದ ರೋಹಿತ್; ವಿಡಿಯೋ

Rohit Sharma's Furious Reaction: ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಭಾರಿ ನಿರೀಕ್ಷೆ ಇದೆ. ಮುಂಬೈನ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಸಿಎಸ್ಕೆ ಪಂದ್ಯದ ಬಗ್ಗೆ ಕೇಳಿ ಕೋಪದಿಂದ ಜ್ಯೂಸ್ ಗ್ಲಾಸ್ ಒಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡೂ ತಂಡಗಳು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈ ಪಂದ್ಯಕ್ಕೆ ಭಾರಿ ಕುತೂಹಲವಿದೆ.

IPL 2025: ಸಿಎಸ್​ಕೆ ಹೆಸರನ್ನು ಕೇಳುತ್ತಿದ್ದಂತೆ ಕೈಯಲ್ಲಿದ್ದ ಗ್ಲಾಸ್ ಪುಡಿಗಟ್ಟಿದ ರೋಹಿತ್; ವಿಡಿಯೋ
Rohit Sharma
ಪೃಥ್ವಿಶಂಕರ
|

Updated on:Mar 16, 2025 | 7:13 PM

Share

18ನೇ ಆವೃತ್ತಿಯ ಐಪಿಎಲ್​ಗಾಗಿ (IPL 2025) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ಪಂದ್ಯಾವಳಿಯ ಮೊದಲೆರಡು ದಿನಗಳಲ್ಲೇ 4 ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ದಿನ ಆರ್​ಸಿಬಿ ಹಾಗೂ ಕೆಕೆಆರ್​ ಕಣಕ್ಕಿಳಿಯುತ್ತಿದ್ದು, ಎರಡನೇ ದಿನದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ಎದುರುಬದುರಾಗಲಿವೆ. ಈ ಎರಡೂ ತಂಡಗಳು ಇದುವರೆಗೆ ತಲಾ 5 ಬಾರಿ ಪ್ರಶಸ್ತಿ ಗೆದ್ದಿರುವ ಕಾರಣ ಈ ಉಭಯ ತಂಡಗಳ ಕಾಳಗಕ್ಕೆ ಸಾಕಷ್ಟು ಕ್ರೇಜ್ ಇದೆ. ಮಾರ್ಚ್ 23 ರಂದು ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು, ಆದರೆ ಈ ಪಂದ್ಯಕ್ಕೂ ಮುನ್ನ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma), ಸಿಎಸ್‌ಕೆ ಹೆಸರು ಕೇಳಿದ ತಕ್ಷಣವೇ ಉಗ್ರರೂಪ ತಾಳಿದ್ದಾರೆ. ತನ್ನ ಮುಂದೆ ಇಟ್ಟಿದ್ದ ಜ್ಯೂಸ್ ಗ್ಲಾಸ್ ಅನ್ನು ಕೈನಿಂದಲೇ ಪುಡಿಮಾಡಿದ್ದಾರೆ.

ಸಿಎಸ್‌ಕೆ ಹೆಸರು ಕೇಳುತ್ತಿದ್ದಂತೆ ರೋಹಿತ್ ವ್ಯಾಘ್ರ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೆಟ್ ಆಗಿದೆ. ಇದರ ಜೊತೆಗೆ ಈ ಪಂದ್ಯದ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪ್ರಸಾರಕರು ಪ್ರಚಾರದ ವೀಡಿಯೊವನ್ನು ಮಾಡಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಂದು ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದಾರೆ. ಈ ಸಮಯದಲ್ಲಿ ರೋಹಿತ್, ‘ನಮ್ಮ ಮೊದಲ ಪಂದ್ಯ ಯಾವಾಗ?’ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಪಾಂಡ್ಯ ‘ಭಾನುವಾರ, ಸಿಎಸ್‌ಕೆ ವಿರುದ್ಧ’ ಎಂದು ಉತ್ತರಿಸುತ್ತಾರೆ. ಇದನ್ನು ಕೇಳಿದ ಕೂಡಲೇ ಕೋಪಗೊಂಡ ರೋಹಿತ್ ಮೇಜಿನ ಮೇಲೆ ಇಟ್ಟಿದ್ದ ಜ್ಯೂಸ್ ಗ್ಲಾಸ್ ಅನ್ನು ತಮ್ಮ ಕೈಯಿಂದ ಒತ್ತಿ ಒಡೆದು ಹಾಕಿದ್ದಾರೆ. ನಂತರ ಪಾಂಡ್ಯ ನಗುತ್ತಾ ಮಾಣಿಗೆ ಅದನ್ನು ಸ್ವಚ್ಛಗೊಳಿಸಲು ಹೇಳುತ್ತಾರೆ.

ಇದನ್ನೂ ಓದಿ
Image
ಸುಳ್ಳು ವರದಿ ಕೊಡಿ; NCA ಅಧಿಕಾರಿಗಳ ಹಿಂದೆ ಬಿದ್ದ ಲಕ್ನೋ
Image
ಒಬ್ಬಂಟಿಯಾಗಿ ಕುಳಿತು ಅಳಬೇಕ; ಬಿಸಿಸಿಐ ವಿರುದ್ಧ ಕೊಹ್ಲಿ ಗರಂ
Image
ತವರಿನ ಅಭಿಮಾನಿಗಳಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದ ಸಿಎಸ್​ಕೆ
Image
‘ಹೀಗಾದ್ರೆ ಮಾತ್ರ ನಾನು ಟಿ20 ತಂಡಕ್ಕೆ ಮರಳುತ್ತೇನೆ’; ವಿರಾಟ್ ಕೊಹ್ಲಿ

ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಮಾರ್ಚ್ 23 ರಂದು ಚೆನ್ನೈನ ತವರು ಮೈದಾನವಾದ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಏಪ್ರಿಲ್ 20 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: IPL 2025: ‘ಅನ್​ಫಿಟ್ ಎಂದು ಬಿಡಿ’; ಮಯಾಂಕ್​ನನ್ನು ಐಪಿಎಲ್​ನಿಂದ ಹೊರಗಿಡಲು ಲಕ್ನೋ ಕುತಂತ್ರ

ದಾಖಲೆ ಹೇಗಿದೆ?

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಬಲಿಷ್ಠ ತಂಡಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡೂ ತಂಡಗಳು ಸ್ಥಿರ ಪ್ರದರ್ಶನಕ್ಕೆ ಹೆಸರುವಾಸಿಯಾಗಿವೆ. ಮುಂಬೈ ಮತ್ತು ಚೆನ್ನೈ ನಡುವೆ ಯಾವಾಗಲೂ ರೋಮಾಂಚಕಾರಿ ಪಂದ್ಯ ನಡೆದೇ ಇರುತ್ತದೆ. ವಾಸ್ತವವಾಗಿ, ಕಳೆದ 17 ಐಪಿಎಲ್ ಸೀಸನ್‌ಗಳಲ್ಲಿ, ಉಭಯ ತಂಡಗಳ ನಡುವೆ 37 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ 20 ಪಂದ್ಯಗಳನ್ನು ಗೆದ್ದಿದ್ದರೆ ಚೆನ್ನೈ ತಂಡ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಪ್ರಸ್ತುತ ಅಂಕಿಅಂಶಗಳನ್ನು ನೋಡಿದರೆ, ಮುಂಬೈ ಈ ಪೈಪೋಟಿಯಲ್ಲಿ ಮೇಲುಗೈ ಸಾಧಿಸಿದೆಯಾದರೂ, ಚೆನ್ನೈ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Sun, 16 March 25