Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಭಾರತ ಟಿ20 ತಂಡಕ್ಕೆ ಮರಳು ನಾನು ಸಿದ್ಧ ಎಂದ ಕೊಹ್ಲಿ; ಆದರೊಂದು ಷರತ್ತು..!

Virat Kohli's T20 Retirement U-Turn: ವಿರಾಟ್ ಕೊಹ್ಲಿ ಕಳೆದ ವರ್ಷವಷ್ಟೇ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ನಮಗೆಲ್ಲ ಗೊತ್ತೇ ಇದೆ. ಆದರೆ ಇತ್ತೀಚೆಗೆ ಅವರು ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಫೈನಲ್ ತಲುಪಿದರೆ ಮಾತ್ರ ಆಡುವುದಾಗಿ ಹೇಳಿದ್ದಾರೆ. ನಿವೃತ್ತಿಯ ನಂತರದ ಯೋಜನೆಗಳ ಬಗ್ಗೆ ಮಾತನಾಡಿದ ಕೊಹ್ಲಿ, ದೇಶ ಸುತ್ತಾಡುವ ಆಸೆ ಇದೆ ಎಂದಿದ್ದಾರೆ.

Virat Kohli: ಭಾರತ ಟಿ20 ತಂಡಕ್ಕೆ ಮರಳು ನಾನು ಸಿದ್ಧ ಎಂದ ಕೊಹ್ಲಿ; ಆದರೊಂದು ಷರತ್ತು..!
Virat Kohli
Follow us
ಪೃಥ್ವಿಶಂಕರ
|

Updated on:Mar 15, 2025 | 8:35 PM

2024 ರ ಟಿ20 ವಿಶ್ವಕಪ್ (T20 World Cup) ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಭಾರತದ ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ (Virat Kohli) ಸಿಡಿಸಿದ 76 ರನ್​ಗಳ ಪ್ರಮುಖ ಪಾತ್ರವಹಿಸಿದ್ದವು. ಆದಾಗ್ಯೂ ತಂಡವನ್ನು ಚಾಂಪಿಯನ್ ಮಾಡಿದ್ದ ಬಳಿಕ ಆಘಾತಕ್ಕಾರಿ ಹೇಳಿಕೆ ನೀಡಿದ್ದ ವಿರಾಟ್ ಕೊಹ್ಲಿ, ಈ ಮಾದರಿಯಲ್ಲೇ ಇದೇ ನನ್ನ ಕೊನೆಯ ಪಂದ್ಯವಾಗಿತ್ತು ಎಂದಿದ್ದರು. ಅಂದರೆ ನಾನು ಟಿ20 ಮಾದರಿಗೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಆದಾಗ್ಯೂ ಕೊಹ್ಲಿಯ ಈ ನಿರ್ಧಾರವನ್ನು ಕೆಲವರು ಸ್ವಾಗತಿಸಿದ್ದರೆ, ಇನ್ನು ಕೆಲವರು, 2027 ರ ಒಲಿಂಪಿಕ್ಸ್‌ ನಡೆಯುವವರೆಗಾದರೂ ಕೊಹ್ಲಿ ಟಿ20 ತಂಡದಲ್ಲಿರಬೇಕಿತ್ತು ಎಂದಿದ್ದರು. ಇದೀಗ ಅದೇ ಟಿ20 ಮಾದರಿಗೆ ಮರಳುವ ಬಗ್ಗೆ ಕೊಹ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಷರತ್ತು ಹಾಕಿದ ಕೊಹ್ಲಿ

ವಾಸ್ತವವಾಗಿ, ವಿರಾಟ್ ಕೊಹ್ಲಿ 2025 ರ ಐಪಿಎಲ್​ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇಂದು ಸೇರಿಕೊಂಡಿದ್ದಾರೆ. ಅವರು ಬಂದ ಕೂಡಲೇ ಫ್ರಾಂಚೈಸಿ ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಹ್ಲಿಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸುವ ಮತ್ತು ಅದನ್ನು ಆಡುವ ಬಗ್ಗೆ ಪ್ರಶ್ನೆ ಕೇಳಲಾಯಿತು.

ಇದನ್ನೂ ಓದಿ
Image
‘ಹಿಂದೆ ಏನೇ ನಡೆದರೂ ಅದರಲ್ಲಿ ನನಗೆ ತೃಪ್ತಿ ಇದೆ’; ಕೊಹ್ಲಿ
Image
ಬರೋಬ್ಬರಿ 17084 ಕಿ.ಮೀ ಪ್ರಯಾಣ..! ಆರ್​ಸಿಬಿಗೆ ಯಾಕೀ ಶಿಕ್ಷೆ?
Image
ಕಿಂಗ್ ಆಗಮನದಿಂದ ರೆಡ್ ಆರ್ಮಿಯಲ್ಲಿ ಸಂಚಲನ; ವಿಡಿಯೋ ಹರಿಬಿಟ್ಟ ಆರ್​ಸಿಬಿ
Image
ಯೋ- ಯೋ ಟೆಸ್ಟ್​ನಲ್ಲಿ ನಿತೀಶ್ ಬೆಸ್ಟ್; ಐಪಿಎಲ್​ಗೆ ಫಿಟ್

ಇದಕ್ಕೆ ಪ್ರತಿಕ್ರಿಯೆಯಾಗಿ ಟಿ20ಯಿಂದ ನಿವೃತ್ತಿ ಹಿಂತೆಗೆದುಕೊಳ್ಳುವ ಬಗ್ಗೆ ಮಾತನಾಡಿದ ಬಗ್ಗೆ ಮಾತನಾಡಿದ ಕೊಹ್ಲಿ, ‘ನಾನು ಒಲಿಂಪಿಕ್ಸ್​ನಲ್ಲಿ ಆಡುವ ಸಲುವಾಗಿ ಟಿ20 ನಿವೃತ್ತಿ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿದರು. ಆದಾಗ್ಯೂ ಈ ಸಮಯದಲ್ಲಿ ತಮಾಷೆಯ ಉತ್ತರ ನೀಡಿದ ಕೊಹ್ಲಿ, ‘ಒಂದು ವೇಳೆ ಟೀಂ ಇಂಡಿಯಾ ಫೈನಲ್ ತಲುಪಿದರೆ, ನಾವು ಚಿನ್ನದ ಪದಕಕ್ಕಾಗಿ ಪಂದ್ಯವನ್ನು ಆಡುತ್ತಿದ್ದರೆ, ನಾನು ಆ ಒಂದು ಪಂದ್ಯದಲ್ಲಿ ಮತ್ತೆ ತಂಡದ ಪರವಾಗಿ ಆಡಿ, ಪದಕ ತೆಗೆದುಕೊಂಡು ಮನೆಗೆ ಹಿಂತಿರುಗುತ್ತೇನೆ. ಒಲಿಂಪಿಕ್ ಪದಕ ಗೆದ್ದರೆ ತುಂಬಾ ಸಂತೋಷವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ‘ನಾನು ಮತ್ತೆ ಆಡದೇ ಇರಬಹುದು’; ಐಪಿಎಲ್ ಆರಂಭಕ್ಕೂ ಮುನ್ನ ಆಘಾತಕಾರಿ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

ನಿವೃತ್ತಿ ನಂತರದ ಬದುಕಿನ ಬಗ್ಗೆ ಕೊಹ್ಲಿ ಹೇಳಿದ್ದೇನು?

ಇದೇ ವೇಳೆ ಕೊಹ್ಲಿ ಬಳಿ ನಿವೃತ್ತಿಯ ನಂತರದ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಕೊಹ್ಲಿ, ‘ನಿವೃತ್ತಿಯ ನಂತರ ಏನು ಮಾಡಬೇಕು ಎಂಬುದನ್ನು ಸದ್ಯಕ್ಕೆ ಯೋಚಿಸಿಲ್ಲ. ಆದರೆ ಸಾಧ್ಯವಾದಷ್ಟು ನಾನು ದೇಶ ಸುತ್ತಲು ಚಿಂತಿಸಿದ್ದೇನೆ. ಇದೇ ಪ್ರಶ್ನೆಯನ್ನು ನಾನು ನನ್ನ ತಂಡದ ಆಟಗಾರನಿಗೆ ಕೇಳಿದ್ದೆ, ಅವನೂ ಕೂಡ ಇದೇ ಉತ್ತರವನ್ನು ನೀಡಿದ್ದ. ಹೀಗಾಗಿ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಿವೃತ್ತಿಯ ನಂತರ ನಾನು ಏನು ಮಾಡುತ್ತೇನೆಂದು ನನಗೆ ತಿಳಿದಿಲ್ಲ. ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:34 pm, Sat, 15 March 25