Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋ- ಯೋ ಟೆಸ್ಟ್​ನಲ್ಲಿ ಕಿಂಗ್ ಕೊಹ್ಲಿಯನ್ನೇ ಮೀರಿಸಿದ ನಿತೀಶ್ ರೆಡ್ಡಿ; ಐಪಿಎಲ್​ಗೆ ಫಿಟ್

Nitish Kumar Reddy's IPL 2025 Return: ಐಪಿಎಲ್ 2025 ರ ಸೀಸನ್ನಿಗೆ ಎಲ್ಲಾ ತಂಡಗಳು ತೀವ್ರ ಸಿದ್ಧತೆ ನಡೆಸುತ್ತಿವೆ. ಗಾಯದಿಂದ ಬಳಲುತ್ತಿದ್ದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಚೇತರಿಸಿಕೊಂಡಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಲು ಸಜ್ಜಾಗಿದ್ದಾರೆ. ಅವರು ಯೋ-ಯೋ ಪರೀಕ್ಷೆಯಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸಿ 18.1 ಅಂಕಗಳನ್ನು ಗಳಿಸಿದ್ದಾರೆ. ಜನವರಿಯಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಅವರು ಮಾರ್ಚ್ 23 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದ್ದಾರೆ.

ಪೃಥ್ವಿಶಂಕರ
|

Updated on: Mar 15, 2025 | 3:39 PM

 2025ರ ಐಪಿಎಲ್​ಗಾಗಿ ಎಲ್ಲಾ ತಂಡಗಳ ಸಿದ್ಧತೆಗಳು ತೀವ್ರಗೊಂಡಿವೆ. ಗಾಯಗೊಂಡ ಆಟಗಾರರನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಆಟಗಾರರು 18 ನೇ ಸೀಸನ್‌ಗಾಗಿ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ಏತನ್ಮಧ್ಯೆ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಯುವ ಸ್ಟಾರ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರ ಫಿಟ್ನೆಸ್ ಬಗ್ಗೆ ದೊಡ್ಡ ಅಪ್ಡೇಟ್ ಬಂದಿದೆ.

1 / 6
ವಾಸ್ತವವಾಗಿ  ನಿತೀಶ್ ರೆಡ್ಡಿ ಸ್ವಲ್ಪ ಸಮಯದಿಂದ ಪಾರ್ಶ್ವ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಕಳೆದ ಜನವರಿಯಿಂದ ಕ್ರಿಕೆಟ್​​ನಿಂದ ದೂರ ಉಳಿದಿದ್ದು ನಿತೀಶ್ ಇದೀಗ ಪೂರ್ಣ ಫಿಟ್ ಆಗಿದ್ದು, ಶೀಘ್ರದಲ್ಲೇ ಐಪಿಎಲ್‌ಗಾಗಿ ತಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಆಟಗಾರ ಯೋ-ಯೋ ಪರೀಕ್ಷೆಯಲ್ಲಿ ಕಿಂಗ್ ಕೊಹ್ಲಿಯನ್ನು ಮೀರಿಸಿ ಉತ್ತಮ ಅಂಕ ಕಲೆಹಾಕಿದ್ದಾರೆ.

2 / 6
ಭಾರತದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸೈಡ್ ಸ್ಟ್ರೈನ್ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ತಂಡ ಸನ್‌ರೈಸರ್ಸ್ ಹೈದರಾಬಾದ್ ಸೇರಲು ಸಜ್ಜಾಗಿದ್ದಾರೆ. ನಿತೀಶ್ ರೆಡ್ಡಿ ಭಾರತದ ಶ್ರೇಷ್ಠತಾ ಕೇಂದ್ರದಲ್ಲಿರುವ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಯೋ-ಯೋ ಪರೀಕ್ಷೆ ಸೇರಿದಂತೆ ಎಲ್ಲಾ ಫಿಟ್ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಅವರಿಗೆ ಆಡಲು ಅನುಮತಿ ನೀಡಲಾಗಿದೆ.

3 / 6
ಗಾಯದ ಕಾರಣದಿಂದಾಗಿ ನಿತೀಶ್ ಜನವರಿಯಿಂದ ಯಾವುದೇ ಪಂದ್ಯಗಳನ್ನು ಆಡಿಲ್ಲ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್ನೆಸ್ ಮೇಲೆ ಕೆಲಸ ಮಾಡುತ್ತಿದ್ದ ನಿತೀಶ್ ರೆಡ್ಡಿ ಯೋ-ಯೋ ಪರೀಕ್ಷೆಯಲ್ಲಿ 18.1 ಅಂಕಗಳನ್ನು ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಸಹ ಹಿಂದಿಕ್ಕಿದ್ದಾರೆ.

4 / 6
ವಿರಾಟ್ ಕೊಹ್ಲಿ 2023 ರಲ್ಲಿ ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ಯೋ-ಯೋ ಸ್ಕೋರ್ ಅನ್ನು ಹಂಚಿಕೊಂಡಿದ್ದರು. ಇದರಲ್ಲಿ ವಿರಾಟ್ 17.2 ಅಂಕಗಳನ್ನು ಕಲೆಹಾಕಿರುವುದಾಗಿ ಹೇಳಿಕೊಂಡಿದ್ದರು. ಇದೀಗ ನಿತೀಶ್ 18.1 ಅಂಕ ಸಂಪಾಧಿಸುವ ಮೂಲಕ ಫಿಟ್ನೆಸ್ ಮಾಸ್ಟರ್ ವಿರಾಟ್ ಕೊಹ್ಲಿಯನ್ನು ಮೀರಿಸಿದ್ದಾರೆ.

5 / 6
ಕಳೆದ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ನಿತೀಶ್​ಗೆ ಟೀಂ ಇಂಡಿಯಾದ ಕದ ತೆರೆದಿತ್ತು. ಮೊದಲು ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ಅವರು. ಆ ಬಳಿಕ ಕಾಂಗೂರಗಳ ನಾಡಲ್ಲಿ ಟೆಸ್ಟ್ ಮಾದರಿಗೂ ಪದಾರ್ಪಣೆ ಮಾಡಿದ್ದರು. ಅಲ್ಲದೆ  ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಇದೀಗ ನಿತೀಶ್ ಶೀಘ್ರದಲ್ಲೇ ಸನ್‌ರೈಸರ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮಾರ್ಚ್ 23 ರಂದು ಹೈದರಾಬಾದ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯವನ್ನು ಆಡಲಿದ್ದಾರೆ.

6 / 6
Follow us