AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 17084 ಕಿ.ಮೀ..! ಆರ್​ಸಿಬಿಗೆ ಪ್ರಯಾಣವೇ ಪ್ರಯಾಸ; ಯಾವ ತಂಡದ್ದು ಅತಿ ಕಡಿಮೆ ಪ್ರಯಾಣ?

IPL 2025 Travel: 2025ರ ಐಪಿಎಲ್‌ನಲ್ಲಿ ಯಾವ ತಂಡಗಳು ಎಷ್ಟು ಪ್ರಯಾಣ ಮಾಡಲಿದೆ ಎಂಬ ವಿವರ ಹೊರಬಿದ್ದಿದೆ. ಈ ಪೈಕಿ ಆರ್‌ಸಿಬಿ ಅತಿ ಹೆಚ್ಚು (17084 ಕಿಮೀ) ಮತ್ತು ಸನ್‌ರೈಸರ್ಸ್ ಹೈದರಾಬಾದ್ ಅತಿ ಕಡಿಮೆ (8536 ಕಿಮೀ) ಪ್ರಯಾಣಿಸಲಿವೆ. ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಕೂಡ ದೀರ್ಘ ಪ್ರಯಾಣವನ್ನು ಮಾಡಬೇಕಾಗಿದೆ. ಈ ಅಸಮ ಪ್ರಯಾಣದ ಪರಿಣಾಮ ತಂಡಗಳ ಅಭ್ಯಾಸ ಮತ್ತು ಆಟದ ಮೇಲೆ ಆಗಲಿದೆ.

IPL 2025: 17084 ಕಿ.ಮೀ..! ಆರ್​ಸಿಬಿಗೆ ಪ್ರಯಾಣವೇ ಪ್ರಯಾಸ; ಯಾವ ತಂಡದ್ದು ಅತಿ ಕಡಿಮೆ ಪ್ರಯಾಣ?
Rcb
ಪೃಥ್ವಿಶಂಕರ
|

Updated on:Mar 15, 2025 | 5:26 PM

Share

2025 ರ ಐಪಿಎಲ್ (IPL 2025) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಮಿಲಿಯನ್ ಡಾಲರ್ ಲೀಗ್‌ನಲ್ಲಿ 10 ತಂಡಗಳು ಒಟ್ಟು 74 ಪಂದ್ಯಗಳನ್ನು ಆಡಲಿವೆ. ಅದರಲ್ಲಿ ಪ್ರತಿ ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದ್ದು, ಈ ಪೈಕಿ 7 ಪಂದ್ಯಗಳನ್ನು ತನ್ನ ತವರು ಮೈದಾನದಲ್ಲಿ ಆಡಲಿವೆ. ಉಳಿದಂತೆ 7 ಪಂದ್ಯಗಳಿಗೆ ಇತರ ತಂಡಗಳ ತವರು ನೆಲಕ್ಕೆ ಪ್ರಯಾಣ ಬೆಳೆಸಬೇಕಿದೆ. ಈ ಪ್ರಯಾಣದ ನಡುವೆ ತಂಡಗಳಿಗೆ ಅಭ್ಯಾಸ ನಡೆಸಲು ಹಾಗೂ ವಿಶ್ರಾಂತಿ ಪಡೆಯಲು ಸಮಯಾವಕಾಶವಿದ್ದರೂ, ಕೆಲವು ತಂಡಗಳು ಮಾತ್ರ ಸಾಕಷ್ಟು ಪ್ರಯಾಣ ಮಾಡಬೇಕಾಗಿ ಬಂದಿದ್ದು, ಕೆಲವು ತಂಡಗಳಿಗೆ ಅತಿ ಕಡಿಮೆ ಪ್ರಯಾಣದ ಭಾಗ್ಯ ಸಿಕ್ಕಿದೆ. ಹೀಗೆ ಅತಿ ಹೆಚ್ಚು ಪ್ರಯಾಸದ ಪ್ರಯಾಣದ ಭಾಗ್ಯ ಪಡೆದಿರುವ ನತದೃಷ್ಟ ತಂಡಗಳಲ್ಲಿ ಆರ್​ಸಿಬಿಗೆ ಮೊದಲ ಸ್ಥಾನವಿದೆ. ಆರ್​​ಸಿಬಿ (RCB) ಒಂದೇ ಕೇವಲ 7 ಪಂದ್ಯಗಳನ್ನು ಆಡಲು 17 ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣ ಮಾಡಬೇಕಾಗಿದೆ.

ಯಾವ ತಂಡದ ಪ್ರಯಾಣ ಎಷ್ಟೆಷ್ಟು?

ಐಪಿಎಲ್ 2025 ರಲ್ಲಿ ಅತ್ಯಂತ ದಣಿದ ವೇಳಾಪಟ್ಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನದ್ದಾಗಿದೆ. ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 17084 ಕಿಲೋಮೀಟರ್ ಕ್ರಮಿಸಲಿದೆ. ಇದರಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ನಡುವೆ 1500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಸತತ ಎಂಟು ಪ್ರಯಾಣಗಳು ಸೇರಿವೆ. ಹೀಗಾಗಿ ಆರ್‌ಸಿಬಿ ಆಟಗಾರರಿಗೆ ಧಣಿವಾರಿಸಿಕೊಳ್ಳಲು ಅತ್ಯಂತ ಕಡಿಮೆ ಸಮಯ ಸಿಗಲಿದೆ. ಇದು ತಂಡದ ಅಭ್ಯಾಸಕ್ಕೆ ಹೊಡೆತ ನೀಡುವುದಂತೂ ಖಚಿತ. ಆರ್‌ಸಿಬಿ ನಂತರ, ಅಧಿಕ ಪ್ರಯಾಣ ಮಾಡುವ ತಂಡಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಸಿಎಸ್‌ಕೆ ತಂಡ ಒಟ್ಟು 16184 ಕಿಲೋಮೀಟರ್ ದೂರ ಕ್ರಮಿಸಲಿದೆ.

ಪಂಜಾಬ್-ಕೆಕೆಆರ್​ಗೆ ನಂತರದ ಸ್ಥಾನ

ಪಂಜಾಬ್‌ ತಂಡಕ್ಕೆ 2 ತವರು ಮೈದಾನಗಳಿವೆ. ಮೊಹಾಲಿ ಹೊರತಾಗಿ, ಧರ್ಮಶಾಲಾದಲ್ಲಿಯೂ ಪಂಜಾಬ್ ತನ್ನ ತವರು ಪಂದ್ಯಗಳನ್ನು ಆಡಲಿದೆ. ಅಂತಹ ಪರಿಸ್ಥಿತಿಯಲ್ಲಿ ಪಂಜಾಬ್ ತಂಡ ಕೂಡ ಸಾಕಷ್ಟು ಪ್ರಯಾಣ ಮಾಡಬೇಕಾಗುತ್ತದೆ. ಒಟ್ಟಾರೆ ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ 14341 ಕಿಲೋಮೀಟರ್ ಪ್ರಯಾಣಿಸಲಿದೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ 13537 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ.

ಇದನ್ನೂ ಓದಿ
Image
ಕಿಂಗ್ ಆಗಮನದಿಂದ ರೆಡ್ ಆರ್ಮಿಯಲ್ಲಿ ಸಂಚಲನ; ವಿಡಿಯೋ ಹರಿಬಿಟ್ಟ ಆರ್​ಸಿಬಿ
Image
ಐಪಿಎಲ್‌ನಲ್ಲಿ ಅಧಿಕ ಬಾರಿ ಸೊನ್ನೆಗೆ ಔಟಾದ ಟಾಪ್ 5 ಬ್ಯಾಟರ್​ಗಳಿವರು
Image
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
Image
ಡೆಲ್ಲಿ ವಿರುದ್ಧ ಗೆದ್ದ ಗುಜರಾತ್; ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆ

ರಾಜಸ್ಥಾನ್ ರಾಯಲ್ಸ್ ತಂಡವು ಜೈಪುರ ಮತ್ತು ಗುವಾಹಟಿಯನ್ನು ತಮ್ಮ ತವರು ಮೈದಾನವನ್ನಾಗಿ ಮಾಡಿಕೊಂಡಿರುವುದರಿಂದ ಈ ಬಾರಿ ಈ ತಂಡ ಒಟ್ಟು 12730 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್ ಕೂಡ 12702 ಕಿ.ಮೀ ದೂರವನ್ನು ಕ್ರಮಿಸಲಿದೆ. ಇವುಗಳಲ್ಲದೆ, ಗುಜರಾತ್ ಟೈಟಾನ್ಸ್ ಕೂಡ 10405 ಕಿ.ಮೀ ಕ್ರಮಿಸಲಿದ್ದು, ಲಕ್ನೋ ಸೂಪರ್ ಜೈಂಟ್ಸ್ ಕೂಡ 9747 ಕಿ.ಮೀ ದೂರ ಪ್ರಯಾಣ ಬೆಳೆಸಬೇಕಿದೆ.

ಇದನ್ನೂ ಓದಿ: IPL 2025: ಆರ್​ಸಿಬಿ ಕ್ಯಾಂಪ್ ಸೇರಿಕೊಂಡ ಕೊಹ್ಲಿ; ಕಿಂಗ್ ರಾಯಲ್ ಎಂಟ್ರಿ ಹೇಗಿತ್ತು? ವಿಡಿಯೋ ನೋಡಿ

ಈ 2 ತಂಡಗಳಿಗೆ ಜಾಕ್​ಪಾಟ್

ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಎರಡು ತವರು ಮೈದಾನಗಳನ್ನು ಹೊಂದಿದೆ. ದೆಹಲಿಯ ಹೊರತಾಗಿ, ಈ ತಂಡ ವಿಶಾಖಪಟ್ಟಣದಲ್ಲಿ ತಮ್ಮ ತವರು ಪಂದ್ಯಗಳನ್ನು ಸಹ ಆಡಲಿದೆ. ಆದರೆ ಇದರ ಹೊರತಾಗಿಯೂ ಡೆಲ್ಲಿ ತಂಡ ಕೇವಲ 9270 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಅತಿ ಹೆಚ್ಚು ಕಡಿಮೆ ಪ್ರಯಾಣ ಮಾಡುವ ಅವಕಾಶ ಪಡೆದುಕೊಂಡಿದ್ದು, ಲೀಗ್ ಹಂತದಲ್ಲಿ ಕೇವಲ 8536 ಕಿ.ಮೀ ದೂರವನ್ನು ಕ್ರಮಿಸಬೇಕಾಗಿದೆ, ಇದು ಇತರ ತಂಡಗಳಿಗೆ ಹೋಲಿಸಿದರೆ ಅತಿ ಕನಿಷ್ಠವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Sat, 15 March 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್