IPL 2025: ಆರ್‌ಸಿಬಿ ಅಭ್ಯಾಸದ ಮೊದಲ ವಿಡಿಯೋ ರಿಲೀಸ್; ಯಾರೆಲ್ಲ ಹಾಜರಿದ್ರು? ವಿಡಿಯೋ ನೋಡಿ
RCB Starts IPL 2025 Prep; 2025ರ ಐಪಿಎಲ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಮಾರ್ಚ್ 22ರಂದು ನಡೆಯುವ ಈ ಪಂದ್ಯಕ್ಕಾಗಿ ಆರ್‌ಸಿಬಿ ತಯಾರಿ ಆರಂಭಿಸಿದೆ. ತಂಡದ ಅಭ್ಯಾಸದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಫ್ರಾಂಚೈಸಿ ಹಂಚಿಕೊಂಡಿದೆ. ಆದರೆ, ಚಾಂಪಿಯನ್ಸ್ ಟ್ರೋಫಿ ಮುಗಿಸಿ ಬಂದಿರುವ ವಿರಾಟ್ ಕೊಹ್ಲಿ ಇನ್ನೂ ತಂಡ ಸೇರಿಲ್ಲ. ರಜತ್ ಪಾಟಿದಾರ್ ನೇತೃತ್ವದಲ್ಲಿ ತಂಡ ಅಭ್ಯಾಸ ಮಾಡುತ್ತಿದೆ.
2025 ರ ಐಪಿಎಲ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಮಾರ್ಚ್ 22 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಈಗಾಗಲೇ ತಯಾರಿ ಆರಂಭಿಸಿವೆ. ಅದರ ಭಾಗವಾಗಿ ಈಗಾಗಲೇ ಸಮರಾಭ್ಯಾಸ ಶುರು ಮಾಡಿರುವ ಆರ್‌ಸಿಬಿ ತನ್ನ ಮೊದಲ ಅಭ್ಯಾಸದ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ನಾಯಕ ರಜತ್ ಪಾಟಿದಾರ್ ಜೊತೆಗೆ, ತಂಡದ ಭಾಗಶಃ ಆಟಗಾರರು ಅಭ್ಯಾಸದಲ್ಲಿ ನಿರತರಾಗಿರುವುದನ್ನು ಕಾಣಬಹುದಾಗಿದೆ. ಆದರೆ, ಈಗ ತಾನೇ ಚಾಂಪಿಯನ್ಸ್ ಟ್ರೋಫಿ ಆಡಿ ಮುಗಿಸಿ ಭಾರತಕ್ಕೆ ಬಂದಿರುವ ವಿರಾಟ್ ಕೊಹ್ಲಿ ಮಾತ್ರ ಇದುವರೆಗೆ ತಂಡವನ್ನು ಸೇರಿಕೊಂಡಿಲ್ಲ.

