AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session: ಸದನದಲ್ಲಿ ಶಿವಲಿಂಗೇಗೌಡ ಮತ್ತು ಖಾದರ್ ನಡುವೆ ವಾಗ್ವಾದ, ಶಾಸಕನಿಗೆ ಬೇಸರ, ಸ್ಪೀಕರ್​ಗೆ ಅಸಮಾಧಾನ!

Karnataka Budget Session: ಸದನದಲ್ಲಿ ಶಿವಲಿಂಗೇಗೌಡ ಮತ್ತು ಖಾದರ್ ನಡುವೆ ವಾಗ್ವಾದ, ಶಾಸಕನಿಗೆ ಬೇಸರ, ಸ್ಪೀಕರ್​ಗೆ ಅಸಮಾಧಾನ!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 13, 2025 | 1:54 PM

Share

ಶಿವಲಿಂಗೇಗೌಡರ ಮಾತಿಗೆ ಬೇಸರದಿಂದ ಪ್ರತಿಕ್ರಿಯಿಸುವ ಸ್ಪೀಕರ್ ಖಾದರ್, ಅವರು ಈಗ ಸದನಕ್ಕೆ ಬಂದಿದ್ದಾರೆ, ಹಾಗಾಗಿ ತಮ್ಮ ಉಪಸ್ಥಿತಿಯನ್ನು ಪ್ರದರ್ಶಿಸಲು ಪ್ರಶ್ನೆ ಕೇಳುತ್ತಿದ್ದಾರೆ ಎಂದು ಸದನಕ್ಕೆ ಹೇಳಿ ಪ್ರಶ್ನೆ ಕೇಳೋದಿದ್ದರೆ ಕೇಳಿ ಅನ್ನುತ್ತಾರೆ. ಸ್ಪೀಕರ್ ಮಾತಿಂದ ಮತ್ತಷ್ಟು ಅಸಮಾಧಾನಗೊಳ್ಳುವ ಶಿವಲಿಂಗೇಗೌಡ ಇನ್ನೆನು ಕೇಳೋದು, ನಮ್ಮ ಪ್ರಶ್ನೆಗಳೆಲ್ಲ ಹೊಂಟೋದವು ಎನ್ನುತ್ತಾರೆ!

ಬೆಂಗಳೂರು, 13 ಮಾರ್ಚ್: ನಾವು ಯಾವಾಗಲೂ ಹೇಳುವಂತೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಒಬ್ಬ ಉತ್ತಮ ಸಂಸದೀಯ ಪಟು (good Parliamentarian). ಆವರು ಮಾತಾಡಲು ನಿಂತರೆ ಎಲ್ಲರೂ ತಲೆದೂಗುತ್ತಾರೆ. ಸದನದಲ್ಲಿ ಇವತ್ತು ಸಭಾಧ್ಯಕ್ಷ ಯುಟಿ ಖಾದರ್ ಅವರು ಶೂನ್ಯವೇಳೆಯ ಘೋಷಣೆ ಮಾಡಿದಾಗ ಅಸಮಾಧಾನಗೊಳ್ಳುವ ಶಿವಲಿಂಗೇಗೌಡ ಎದ್ದುನಿಂತು, ಅಧ್ಯಕ್ಷರೇ, ಇದೇನು ಬಜೆಟ್ ಸೆಷನ್ನಾ? ಪ್ರಶ್ನೋತ್ತರ ವೇಳೆಯಾ ಅಥವಾ ಗಮನ ಸೆಳೆಯುವ ಸೂಚನೆಗಳ ಸಮಯವಾ? ಬಜೆಟ್ ಸೆಷನ್ನಾದರೆ ಬಜೆಟ್​ಗೆ ಸಂಬಂಧಿಸಿದ ಚರ್ಚೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಏ ಪಾಂಚಾಲಿ! ಕುರುಕ್ಷೇತ್ರ ನಾಟಕದ ಭೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.