AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ‘ಅನ್​ಫಿಟ್ ಎಂದು ಬಿಡಿ’; ಮಯಾಂಕ್​ನನ್ನು ಐಪಿಎಲ್​ನಿಂದ ಹೊರಗಿಡಲು ಲಕ್ನೋ ಕುತಂತ್ರ

Lucknow Super Giants' Controversial Request: ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೂವರು ಪ್ರಮುಖ ವೇಗಿಗಳು ಗಾಯದಿಂದ ಬಳಲುತ್ತಿದ್ದಾರೆ. ಐಪಿಎಲ್ 2025 ಆರಂಭಕ್ಕೆ ಕಡಿಮೆ ಸಮಯ ಉಳಿದಿರುವಾಗ, ಲಕ್ನೋ ತಂಡವು NCAಗೆ ಅವರ ಗಾಯದ ಬಗ್ಗೆ ಸುಳ್ಳು ವರದಿ ನೀಡುವಂತೆ ವಿನಂತಿಸಿದೆ. ಈ ವಿಚಿತ್ರ ಬೇಡಿಕೆಯಿಂದ NCA ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದಾರೆ. ಈ ಕ್ರಮದಿಂದ ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಲಕ್ನೋ ತಂಡದ ಯೋಜನೆಯಾಗಿದೆ.

IPL 2025: ‘ಅನ್​ಫಿಟ್ ಎಂದು ಬಿಡಿ’; ಮಯಾಂಕ್​ನನ್ನು ಐಪಿಎಲ್​ನಿಂದ ಹೊರಗಿಡಲು ಲಕ್ನೋ ಕುತಂತ್ರ
Mayank Yadav
ಪೃಥ್ವಿಶಂಕರ
|

Updated on:Mar 16, 2025 | 6:45 PM

Share

2025 ರ ಐಪಿಎಲ್ (IPL 2025) ಆರಂಭವಾಗಲು ಈಗ 1 ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಆದರೆ ಇನ್ನೂ ಲಕ್ನೋ ಸೂಪರ್ ಜೈಂಟ್ಸ್‌ನ 3 ಪ್ರಮುಖ ವೇಗಿಗಳಾದ ಮೊಹ್ಸಿನ್ ಖಾನ್, ಆವೇಶ್ ಖಾನ್ ಮತ್ತು ಮಯಾಂಕ್ ಯಾದವ್ (Mayank Yadav) ಅವರಿಗೆ ಟೂರ್ನಮೆಂಟ್‌ನಲ್ಲಿ ಆಡಲು NCA ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇದರಿಂದ ಲಕ್ನೋ ತಂಡಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಹೀಗಾಗಿ ಇದೀಗ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬೌಲರ್​ಗಳನ್ನು ಇಡೀ ಟೂರ್ನಿಯಿಂದಲೇ ಹೊರಗಿಟ್ಟು, ಮತ್ತೊಬ್ಬ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಲೆಕ್ಕಾಚಾರ ಹಾಕಿಕೊಂಡರುವ ಲಕ್ನೋ ಫ್ರಾಂಚೈಸಿ, NCA ಅಧಿಕಾರಿಗಳ ಬಳಿ, ತನ್ನ ತಂಡದ ಗಾಯಗೊಂಡ ವೇಗಿಗಳ ಸುಳ್ಳು ವರದಿ ನೀಡಿ ಎಂದು ಕೇಳಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

NCA ಅಧಿಕಾರಿಗಳೇ ಶಾಕ್

ವರದಿಯ ಪ್ರಕಾರ, ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಲಕ್ನೋ ತಂಡದ ಪ್ರಮುಖ ವೇಗದ ಬೌಲರ್ ಮಾಯಾಂಕ್ ಯಾದವ್ ಅನ್​ಫಿಟ್ ಎಂಬ ಸುಳ್ಳು ವರದಿ ನೀಡಿ ಎಂದು NCA ಅಧಿಕಾರಿಗಳ ಬಳಿ ಲಕ್ನೋ ಫ್ರಾಂಚೈಸಿ ಬೇಡಿಕೆ ಇಟ್ಟಿದೆ ಎಂದು ಬಿಸಿಸಿಐ ಮೂಲವೊಂದು ಬಹಿರಂಗಪಡಿಸಿದೆ. ‘ಐಪಿಎಲ್ ತಂಡವೊಂದು ಇಂತಹ ವಿಚಿತ್ರ ಬೇಡಿಕೆಯನ್ನು ಇಡುತ್ತಿರುವುದು ಇದೇ ಮೊದಲು’. ಲಕ್ನೋ ಫ್ರಾಂಚೈಸಿಯ ಈ ವಿನಂತಿಯನ್ನು ಕೇಳಿ ಎನ್‌ಸಿಎ ಅಧಿಕಾರಿಗಳು ಕೂಡ ಆಶ್ಚರ್ಯಚಕಿತರಾಗಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ, ಐಪಿಎಲ್ ನಿಯಮಗಳ ಪ್ರಕಾರ, ಯಾವುದೇ ಫ್ರಾಂಚೈಸಿ ಯಾವುದೇ ಆಟಗಾರನನ್ನು ಕೈಬಿಡದ ಹೊರತು ಅವರ ಬದಲಿ ಆಟಗಾರನನ್ನು ತಂಡಕ್ಕೆ ಹೊಸದಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಲಕ್ನೋ NCA ಮುಂದೆ ಇಂತಹ ಬೇಡಿಕೆಯನ್ನು ಇಟ್ಟಿದೆ.

ಮೊದಲಾರ್ಧಕ್ಕೆ ಮಯಾಂಕ್ ಡೌಟ್

ಮಾಯಾಂಕ್ ಯಾದವ್ 2024 ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಈ 3 ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ಆದರೆ, ಕೊನೆಯ ಪಂದ್ಯದಲ್ಲಿ ಗಾಯಗೊಂಡ ಅವರು ಅಂದಿನಿಂದ ಕ್ರಿಕೆಟ್‌ನಿಂದ ದೂರವಿದ್ದು, ಎನ್‌ಸಿಎಯಲ್ಲಿ ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಆದಾಗ್ಯೂ ಅವರ ಚೇತರಿಕೆಯ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಕ್ರಿಕ್‌ಬಜ್ ವರದಿಯ ಪ್ರಕಾರ, ಅವರು ಐಪಿಎಲ್‌ನ ಮೊದಲಾರ್ಧದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಮಯಾಂಕ್ ಮೊದಲಾರ್ಧದ ಐಪಿಎಲ್​ಗೆ ಗೈರಾದರೆ ಇದು ಲಕ್ನೋ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಏಕೆಂದರೆ ಮಯಾಂಕ್, ಲಕ್ನೋ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಹೀಗಾಗಿಯೇ ಅವರನ್ನು 11 ಕೋಟಿ ರೂ.ಗಳಿಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಲಕ್ನೋ ತಂಡವು ಮಾರ್ಚ್ 24 ರಂದು ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಮಾಯಾಂಕ್ ಹೊರತುಪಡಿಸಿ, ಈ ಪಂದ್ಯಕ್ಕೂ ಮುನ್ನ ಮೊಹ್ಸಿನ್ ಮತ್ತು ಆವೇಶ್ ಕೂಡ ಫಿಟ್ ಆಗದಿದ್ದರೆ, ಲಕ್ನೋದಲ್ಲಿ ಆಕಾಶ್ ದೀಪ್ ಮತ್ತು ಶಮರ್ ಜೋಸೆಫ್ ಮಾತ್ರ ವೇಗದ ಬೌಲರ್‌ಗಳಾಗಿ ಉಳಿಯುತ್ತಾರೆ. ಇಂತಹ ಸಂದರ್ಭದಲ್ಲಿ ಲಕ್ನೋ ತಂಡಕ್ಕೆ ಬೌಲರ್​ಗಳ ಅವಶ್ಯಕತೆ ಇದೆ. ಹೀಗಾಗಿ NCA ಅನ್​ಫಿಟ್ ಎಂಬ ವರದಿ ನೀಡಿದರೆ, ಮಯಾಂಕ್​ರನ್ನು ಇಡೀ ಟೂರ್ನಿಯಿಂದ ಹೊರಗಿಟ್ಟು, ಅವರ ಸ್ಥಾನದಲ್ಲಿ ಮತ್ತೊಬ್ಬ ವೇಗಿಯನ್ನು ತಂಡಕ್ಕೆ ಕರೆತರುವುದು ಲಕ್ನೋ ಫ್ರಾಂಚೈಸಿಯ ಇಂಗಿತವಾಗಿದೆ.

ಇದನ್ನೂ ಓದಿ: IPL 2025: ಉಚಿತ ಬಸ್, ಮೆಟ್ರೋ ಸೌಲಭ್ಯ; ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ನೀಡಿದ ಸಿಎಸ್​ಕೆ

ಲಕ್ನೋ ತಂಡ: ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಾಯಾಂಕ್ ಯಾದವ್, ಮೊಹ್ಸಿನ್ ಖಾನ್, ಆಯುಷ್ ಬದೋನಿ, ರಿಷಭ್ ಪಂತ್, ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ಆವೇಶ್ ಖಾನ್, ಅಬ್ದುಲ್ ಸಮದ್, ಆರ್ಯನ್ ಜುಯಾಲ್, ಆಕಾಶ್ ದೀಪ್, ಶಹಬಾಜ್ ಅಹ್ಮದ್, ಎಂ. ಸಿದ್ಧಾರ್ಥ್, ಆಕಾಶ್ ಸಿಂಗ್, ದಿಗ್ವೇಶ್ ಸಿಂಗ್, ಹಿಮ್ಮತ್ ಸಿಂಗ್, ಆರ್ಯನ್ ಜುಯಾಲ್, ಶಮರ್ ಜೋಸೆಫ್, ಯುವರಾಜ್ ಚೌಧರಿ, ಪ್ರಿನ್ಸ್ ಯಾದವ್, ಮ್ಯಾಥ್ಯೂ ಬ್ರೀಟ್ಜ್ಕೆ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Sun, 16 March 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ