Literature: ನೆರೆನಾಡ ನುಡಿಯೊಳಗಾಡಿ; ಇಂದಿನ ಪೀಳಿಗೆಗೆ ಕೇವಲ ಸ್ವಾತಂತ್ರ್ಯ ಬೇಕೆಂದು ನಾವು ಹೇಳುವುದು ತಪ್ಪಲ್ಲವೆ?

Vijaya Brahmankar’s Marathi Short Story : ಆ ಯುವತಿ, ಅವಳ ತಾಯಿ ಇಬ್ಬರನ್ನು ಅರಿಯುವಲ್ಲಿ ನಾ ಎಡವಿದೆ. ನಿಜ ಹೇಳಬೇಕೆಂದರೆ ಆ ತಾಯಿ-ಮಗಳು ಇಬ್ಬರೂ ಎಂಥ ಸಹನೆಯಿಂದ ನಡೆದುಕೊಂಡರು! ನಾನೇ ಒಂದಿಷ್ಟು ನಿಷ್ಠುರವಾಗಿ ನಡೆದುಕೊಂಡೆನೇ? ಆದರೂ ಮಾನಸಿ ಅದನ್ನು ಗಮನಕ್ಕೇ ತರಲಿಲ್ಲ.

Literature: ನೆರೆನಾಡ ನುಡಿಯೊಳಗಾಡಿ; ಇಂದಿನ ಪೀಳಿಗೆಗೆ ಕೇವಲ ಸ್ವಾತಂತ್ರ್ಯ ಬೇಕೆಂದು ನಾವು ಹೇಳುವುದು ತಪ್ಪಲ್ಲವೆ?
ಮರಾಠಿ ಲೇಖಕಿ ವಿಜಯಾ ಬ್ರಾಹ್ಮಣಕರ ಮತ್ತು ಅನುವಾದಕಿ ಮಾಲತಿ ಮುದಕವಿ
Follow us
ಶ್ರೀದೇವಿ ಕಳಸದ
|

Updated on: Apr 08, 2022 | 4:00 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅವ್ವನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದು, ಅವಳನ್ನು ಸುಖವಾಗಿರಿಸುವ ಪ್ರಯತ್ನವನ್ನು ಮಾಡುವುದು. ಅವಳ ಸುತ್ತ ಸುಖವನ್ನೇ ರಾಶಿ ಹಾಕುತ್ತೇನೆ. ನಾನು ಬಿತ್ತಿದುದು ಬೆಳೆಯಲಾರದು. ಆದರೂ ಇದೊಂದು ನಿಷ್ಫಲ ಯತ್ನವೇ. ನನ್ನ ಅವ್ವನನ್ನು ಸಂತೋಷಪಡಿಸುವುದು. ಈ ಸಂತಸ, ಈ ಆನಂದವು ನನ್ನ ಕಡೆಯಿಂದ ನನ್ನ ಅವ್ವನಿಗೆ ಒಂದು ಕಾಣಿಕೆ. ಕೊನೆಯ ಕಾಣಿಕೆ… ಹೀಗೆ ಯೋಚಿಸುತ್ತ ಮಾನಸಿ ತನ್ನ ಒದ್ದೆಯಾದ ಕಣ್ಣುಗಳನ್ನು ಕರ್ಚೀಫಿನಿಂದ ಒರೆಸಿಕೊಂಡಿದ್ದಳು. “ಅಜ್ಜೀ, ಅಜ್ಜೀ.. ಏನಾಗೇದ ನಿಮಗ?” ನಂದಾತಾಯಿ ಅಜ್ಜಿಯ ಪಕ್ಕದಲ್ಲಿ ಕೂಡ್ರುತ್ತ ಕೇಳಿದ್ದರು. “ಏನೂ ಇಲ್ಲಾ..” ಎನ್ನುವ ಅರ್ಥದಲ್ಲಿ ಅಜ್ಜಿಯು ಗೋಣು ಅಲ್ಲಾಡಿಸಿದ್ದರು. ದೇವರೆ, ನನ್ನ ಮನುವನ್ನು ಸುಖಿಯಾಗಿರಿಸು..” ಅಜ್ಜಿಯು ಮನದಲ್ಲಿಯೇ ಎಂದುಕೊಂಡಿದ್ದರು. “ಅಜ್ಜೀ..” “ಏನೋ ಆಗೇದ.. ಅದಕ್ಕೇ ನನ್ನನ್ನು ಇಲ್ಲಿ ಒಬ್ಬಾಕಿನ್ನ ಬಿಟ್ಟು ಹೋಗ್ಯಾರ ಅವ್ರು. ನನ್ನ ಮಗಳು ಹೀಂಗ ನನ್ನ ಒಬ್ಬಾಕಿನ್ನ ಬಿಡೋಕೇ ಅಲ್ಲಾ.. ಅಕೀ ಭಾಳ ಗುಣವಂತಿ..” ಇಷ್ಟು ಹೇಳುವಷ್ಟರಲ್ಲಿಯೇ ಅಜ್ಜಿಗೆ ಗಂಟಲು ಉಬ್ಬಿ ಬಂದಿತ್ತು.

ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ

(ಭಾಗ 9)

ಅವರು ಒಂದು ಕ್ಷಣ ಸುಮ್ಮನಾಗಿದ್ದರು. ನಂತರ, “ನಂದಾತಾಯಿ, ನನ್ನ ಮನೂ ಹಾಡು ಭಾಳ ಛಂದ ಹಾಡತಾಳ. ಆದರ ಇತ್ತಿತ್ತಲಾಗ ಹಾಡುವ ಉಮೇದಿಯೇ ಅಕಿಯೊಳಗ ಇಲ್ಲಧಂಗಾಗೇದ. ನಾವು ಇದ್ದೆವಲ್ಲಾ ಅಲ್ಲಿ ಇಕಿ ಭಜನಾಮಂಡಳ ನಡಸತಾಳ. ಅಕೀಗೆ ಉತ್ತಮ ಶಿಕ್ಷಕಿ ಅಂತ ಅವಾರ್ಡೂ ಸಿಕ್ಕದ. ನಂದಾತಾಯೀ, ಇಂಥಾ ಮಗಳು ಹುಟ್ಟೋದೂ ಭಾಗ್ಯ ಅಂತನ ಹೇಳಬೇಕು. ಭಾಳ ಜನರಿಗೆ ಅಕೀ ಪ್ರೀತಿಪಾತ್ರ ಆಗ್ಯಾಳ. ಇದೇ ಅಕೀ ಶ್ರೀಮಂತಿಕೀ.. ನಮ್ಮ ಮಾನಸೀ ಸೈತ ಅಗದೀ ಛೊಲೋ ಹುಡುಗಿ. ಅತ್ತಿ ಮನಿ-ತವರಮನಿ ಎಲ್ಲಾ ಕಡೇನೂ ಅಕೀ ಅಗದೀ ಅಚ್ಛಾದಕಿ. ಅತ್ತಿಯಂತೂ ಅಕಿನ್ನ ತನ್ನ ಮಗಳಂತನ ತಿಳದಾರ. ಇಕೀ ಸೈತ ಅವರನ ಅಗದಿ ತನ್ನವರಂಗನ ಪ್ರೀತಿ ಮಾಡತಾಳ. ನಮಗೂ ಸಮಾಧಾನ. ಆದರ ಇತ್ತೀಚೆಗೆ ನಮ್ಮ ಮನೂ ಯಾಕೋ ಒಣಗಲಿಕ್ಕತ್ತ್ಯಾಳ. ಯಾಕೋ ಗೊತ್ತಿಲ್ಲಾ.”

ನಂದಾತಾಯಿ ಅಜ್ಜಿಯ ಕೈಯನ್ನು ತಮ್ಮ ಕೈಯಲ್ಲಿ ತೆಗೆದುಕೊಂಡಿದ್ದರು. ಇಬ್ಬರೂ ಮೌನವಾಗಿ ಕುಳಿತಿದ್ದರು ಉತ್ತರವಿಲ್ಲದ ಪ್ರಶ್ನೆಗಳ ಗೊಂದಲದಲ್ಲಿ.. ನಂತರ ನಂದಾತಾಯಿ, “ನಡೀರಿ ಅಜ್ಜಿ.. ಒಳಗ ನಡೀರಿ.. ಬಿಸಲು ಏರಲಿಕ್ಕತ್ತೇದ..” ಎಂದಿದ್ದರು.

“ಬಿಸಿಲೇನು? ನೆರಳೇನು? ಎಲ್ಲಾ ಒಂದೇ..” “ಅಜ್ಜೀ, ಏಳ್ರಿ ನೋಡೋಣ..” ಎಂದು ಹೇಳುತ್ತ ನಂದಾತಾಯಿ ಅಜ್ಜಿಯ ಕೈ ಹಿಡಿದು ಎಬ್ಬಿಸಿಕೊಂಡು ಒಳಗೆ ಹೋಗಿದ್ದರು. ಅವರು ಅಜ್ಜಿಯ ಹತ್ತಿರದಲ್ಲಿ ಕುಳಿತಿದ್ದರು. ಕುಡಿಯಲು ಲೋಟದಲ್ಲಿ ನೀರನ್ನು ಕೊಟ್ಟಿದ್ದರು.

ಅಜ್ಜಿಯ ಕೈಯನ್ನು ತಮ್ಮ ಕೈಯಲ್ಲಿ ಎತ್ತಿಕೊಳ್ಳುತ್ತ ಅಜ್ಜಿಯನ್ನು ಸಮಾಧಾನಿಸಿದ್ದರು. ಅಜ್ಜಿಗೆ ಅವರ ಈ ಅಂತಃಕರಣದಿಂದಾಗಿ ಒಳಗಿನ ದುಃಖವು ಉಮ್ಮಳಿಸಿ ಬಂದಿತ್ತು. ಕಣ್ಣುಗಳಲ್ಲಿ ನೀರು ಉಕ್ಕಿ ಹರಿದಿತ್ತು. ಒಳಗೆ ಹಿಡಿದಿಟ್ಟುಕೊಂಡ ದುಃಖವು ಕಟ್ಟು ಒಡೆದಂತೆ ಹರಿದುಬಂದಿತ್ತು. ಅಜ್ಜಿ ಬಿಕ್ಕಳಿಸಿದ್ದರು. ನಂದಾತಾಯಿ ಏನನ್ನೂ ಮಾತಾಡದೆ ಸುಮ್ಮನೆ ಅವರ ಬೆನ್ನು ನೇವರಿಸುತ್ತಲಿದ್ದರು. ಮಾತಾಡಲು ಶಬ್ದಗಳಾದರೂ ಏನಿದ್ದವು? ಅಲ್ಲದೆ ತಿಳಿಹೇಳಲು ಅರ್ಥವಿಲ್ಲದ ಶಬ್ದಗಳ ಹರಕತ್ತಾದರೂ ಏನಿತ್ತು?

ನಂದಾತಾಯಿಯ ಮನಸ್ಸಿನಲ್ಲಿ, “ನಾನು ಎಷ್ಟು ತಪ್ಪಾಗಿ ಅರ್ಥೈಸಿಕೊಂಡಿದ್ದೆ? ಮಾನಸಿಯಾದರೂ ಎಂಥ ಒಳ್ಳೆಯ ಮನಸ್ಸಿನ ಹುಡುಗಿ! ಎಷ್ಟು ತಿಳಿವಳಿಕೆಯುಳ್ಳವಳು! ಅಜ್ಜಿಯನ್ನು ಮೊದಲು ಮಾಡಿ ನಾಲ್ಕು ಪೀಳಿಗೆಗಳನ್ನು ಒಂದೇ ದಾರದಲ್ಲಿ ಪೋಣಿಸಿ ಇಟ್ಟುಕೊಂಡಿದ್ದಾಳೆ ಅವಳು! ಇವರೆಲ್ಲರ ಬಂಧನ ಎಷ್ಟು ಗಟ್ಟಿಮುಟ್ಟಾದದ್ದು.. ಒಬ್ಬರನ್ನೊಬ್ಬರು ಅರಿತುಕೊಂಡಿದ್ದಾರೆ. ಒಬ್ಬರನ್ನೊಬ್ಬರು ತಿಳಿದುಕೊಂಡಿದ್ದಾರೆ. ಕೇವಲ ಒಳಗಿಂದೊಳಗೇ ಒಬ್ಬರಿನ್ನೊಬ್ಬರನ್ನು ಅರ್ಥ ಮಾಡಿಕೊಂಡಿದ್ದಾರೆ. ಸುಶಿಕ್ಷಿತ ಮಕ್ಕಳಿಗೆ ಈ ಕಾಲದಲ್ಲಿ ವಯಸ್ಸಾದವರು ಬೇಡವಾಗಿರುತ್ತಾರೆ ಎಂದು ನಾವು ಹೇಳುತ್ತೇವೆ. ಆದರೆ ಈ ಮಾನಸಿ ಅವರೆಲ್ಲರಿಗಿಂತಲೂ ಎಷ್ಟು ವಿಭಿನ್ನವಾಗಿದ್ದಾಳೆ!

ಭಾಗ 7 : Literature: ನೆರೆನಾಡ ನುಡಿಯೊಳಗಾಡಿ; ಈಗ ದೇವರು, ದೇವರಮನಿಯೊಳಗ ಕೂತಾನ ವಿಷಣ್ಣತೆಯ ಸಂಕೇತದಂಗ

ನಾನು ಇಷ್ಟೆಲ್ಲ ಜನರ ನಡುವೆ ಇದ್ದೇನೆ.. ಪ್ರತಿ ದಿನವೂ ಹೊಸ ಹೊಸ ಜನರು ನನಗೆ ಭೆಟ್ಟಿಯಾಗುತ್ತಾರೆ. ಆದರೂ ನನಗೇ ಮನುಷ್ಟರ ಬಗ್ಗೆ ಅರಿವು ಇಲ್ಲವಾಯಿತೇ? ಜನರ ಮನಸ್ಸನ್ನು ಓದಲು ನನಗೆ ಬಾರದಾಯಿತೇ? ಅವರ ಕಣ್ಣುಗಳಲ್ಲಿಯ ಭಾವನೆಯೇ ನನಗೆ ಅರಿವಾಗಲಿಲ್ಲವೇ? ವೃದ್ಧರ ಹಾಗೂ ಬೇರೆ ಯಾರದೇ ಅಂತರಂಗದಲ್ಲಿ ನನಗೆ ಇಣಿಕುವುದು ಬಾರದೇ? ಅವರ ಒಳಗೆ ಇಳಿಯದ ಹೊರತು ಅವರ ಅಂತರಂಗದ ಆಳ ಅರಿವಾದೀತೆ? ಹಾಗೆಯೇ ಯಾರ ಬಗ್ಗೆಯೂ ಏನೂ ಹೇಳಲು ಆಗದು. ವೃದ್ಧರನ್ನು ನಾನು ಅರಿತುಕೊಳ್ಳುತ್ತೇನೆ. ಅವರ ತೊಂದರೆಗಳನ್ನು ಅರಿತುಕೊಳ್ಳುತ್ತೇನೆ. ಅವರನ್ನು ನನ್ನವರೆಂದು ತಿಳಿಯುತ್ತೇನೆ. ಅವರ ದುಃಖಗಳನ್ನು ದೂರ ಮಾಡುವ ಪ್ರಯತ್ನ ಮಾಡುತ್ತೇನೆ. ಆದರೆ ಮಾನಸಿಯ ಅಂತರಂಗವೇಕೆ ನನಗೆ ಅರಿವಾಗಲಿಲ್ಲ?

ಈ ಯುವಪೀಳಿಗೆಯನ್ನು ನೋಡುವ ನಮ್ಮ ದೃಷ್ಟಿಕೋನವು ಪೂರ್ವಗ್ರಹಪೀಡಿತವಾಗಿದೆಯೇ? ತಪ್ಪಿದೆನೇ? ಹೌದು.. ನನ್ನದು ತಪ್ಪೇ. ತಪ್ಪಿದೆ ನಾನು. ಈ ಕುಟುಂಬದ ಬಗ್ಗೆ ನನ್ನ ಗ್ರಹಿಕೆ ತಪ್ಪಿತು. ಆ ಯುವತಿ, ಅವಳ ತಾಯಿ ಇಬ್ಬರನ್ನು ಅರಿಯುವಲ್ಲಿ ನಾನು ಎಡವಿದೆ. ನಿಜ ಹೇಳಬೇಕೆಂದರೆ ಆ ತಾಯಿ-ಮಗಳು ಇಬ್ಬರೂ ಎಂಥ ಸಹನೆಯಿಂದ ನಡೆದುಕೊಂಡರು! ನಾನೇ ಒಂದಿಷ್ಟು ನಿಷ್ಠುರವಾಗಿ ನಡೆದುಕೊಂಡೆನೇ? ಆದರೂ ಮಾನಸಿ ಅದನ್ನು ಗಮನಕ್ಕೇ ತರಲಿಲ್ಲ. ಇಂದಿನ ಪೀಳಿಗೆಗೆ ಕೇವಲ ಸ್ವಾತಂತ್ರ್ಯ ಬೇಕೆಂದು ನಾವು ಹೇಳುತ್ತೇವೆ. ಆದರೆ ಅವರ ಹತ್ತಿರವೂ, ಅತ್ಯಂತ ಚಿಕ್ಕ ವಯಸ್ಸಿನ ಮಾನಸಿಯಂಥವರಲ್ಲಿಯೂ ಎಷ್ಟು ಸಹನೆ ಇರುತ್ತದೆ! ಜವಾಬ್ದಾರಿಯನ್ನು ಅರಿತಂಥ ಯುವಜನರೂ ಇದ್ದಾರೆ!

ಅಜ್ಜಿಯ ಮನಸ್ಸಿನಲ್ಲಿ ಅನೇಕ ನೆನಪುಗಳ ಸರಮಾಲೆ. ಕುತ್ತಿಗೆಯಲ್ಲಿ ಸಿಕ್ಕಿಕೊಂಡಂಥ ಬಿಕ್ಕಳಿಕೆ.. ಇದನ್ನೆಲ್ಲ ನೋಡಿದ ನಂದಾತಾಯಿಯು ಅಜ್ಜಿಯನ್ನು ತಮ್ಮ ಅಪ್ಪುಗೆಯಲ್ಲಿ ತೆಗೆದುಕೊಂಡು ಅವರ ಬೆನ್ನಮೇಲೆ ಕೈಯಾಡಿಸಿದರು. ಒದ್ದೆಯಾದಂಥ ಧ್ವನಿಯಲ್ಲಿ ನಂದಾತಾಯಿ ಅಜ್ಜಿಗೆ, “ಅಜ್ಜೀ, ನನ್ನನ್ನೇ ನಿಮ್ಮ ಮಗಳೆಂದು ತಿಳೀರಿ..” ಎಂದಿದ್ದರು. ಅಜ್ಜಿಯು ನಂದಾತಾಯಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು, ಆಧಾರಕ್ಕೆಂಬಂತೆ. ರಕ್ತಸಂಬಂಧವಿಲ್ಲದಿದ್ದರೂ ಇಂಥ ತಾಯಿ-ಮಕ್ಕಳ ಪ್ರೀತಿಯ ಋಣಾನುಬಂಧದ ಒಂದು ಗಂಟು ಅವರಿಬ್ಬರ ಮಧ್ಯ ಏರ್ಪಟ್ಟಿತ್ತು.

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ