Literature: ನೆರೆನಾಡ ನುಡಿಯೊಳಗಾಡಿ; ಈಗ ದೇವರು, ದೇವರಮನಿಯೊಳಗ ಕೂತಾನ ವಿಷಣ್ಣತೆಯ ಸಂಕೇತದಂಗ

Vijaya Brahmankar’s Marathi Short Story : "ಪರಿಸ್ಥಿತಿ ಹಂಗ ಮಾಡಸತದರಿ ಮನಿಶ್ಯಾಗ... ಅವ್ವಾ-ಅಜ್ಜಿ ಅಂದ್ರ ನನ್ನ ಜೀವನದಾಗಿನ ಗೋಡೆ ಇದ್ದಂಗರಿ. ನಾನು ಕಾಂಕ್ರೀಟ ಆಗದೇ ಇದ್ದರ ಆ ಗೋಡೆ ಬಿದ್ದು ಹೋಗತಾವಲ್ಲೇನ್ರಿ? ಅದಕ್ಕೇ ನಾ ಸಂಬಂಧಗಳ ಗಿಲಾಯಿ ಮಾಡಕೋತನ ಇರತೇನಿ ಆಗಾಗ್ಗೆ."

Literature: ನೆರೆನಾಡ ನುಡಿಯೊಳಗಾಡಿ; ಈಗ ದೇವರು, ದೇವರಮನಿಯೊಳಗ ಕೂತಾನ ವಿಷಣ್ಣತೆಯ ಸಂಕೇತದಂಗ
ಮರಾಠಿ ಲೇಖಕಿ ವಿಜಯಾ ಬ್ರಾಹ್ಮಣಕರ ಮತ್ತು ಅನುವಾದಕಿ ಮಾಲತಿ ಮುದಕವಿ
Follow us
ಶ್ರೀದೇವಿ ಕಳಸದ
|

Updated on:Apr 08, 2022 | 3:05 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಈ ಮಾನಸಿ ಹೇಳಲಿಕ್ಕತ್ತಾಳಂತ ನಾನು ಅವ್ವನ್ನ ಇಲ್ಲೆ ಬಿಟ್ಟ ಹೊಂಟೇನಿ. ಇಲ್ಲಾಂದ್ರ ಅವ್ವನ್ನ ಇಲ್ಲೆ ಬಿಡೋ ಇಚ್ಛಾ ಒಂಚೂರೂ ಇದ್ದಿದ್ದಿಲ್ಲಾ ನನಗ. ಕೂಸಿನ್ನ ಸಂಭಾಳಿಸಲಿಕ್ಕೆ ಹೋಗೋದು ಒಂದು ಖುಶಿಯ ಸಂಗತೀನ ಖರೆ. ಆದರ ನನ್ನ ಸ್ವಂತದ್ದ ಆರೋಗ್ಯದ ಸಲುವಾಗಿ ಅವ್ವನ್ನ ಹಿಂಗ ಬಿಟ್ಟು ಹೊಗೋದಕ್ಕ ನನ್ನ ಮನಸ್ಸು ಯಾಕೋ ಒಪ್ಪಲಿಕ್ಕತ್ತಿಲ್ಲಾ. ಅದೂ ನಮ್ಮ ಅವ್ವನ್ನ ಬಿಟ್ಟು ದೂರ ಹೋಗೋದು ಅಂದ್ರ.. ಹಂಗೂ ಇನ್ನ ಅಕಿನ್ನ ಬಿಟ್ಟು ಭಾಳ ದೂರ ಹೋಗೋದನ ಅದ. ದೂರ.. ದೃಷ್ಟಿಗೂ ನಿಲುಕಲಾರದಷ್ಟು.. ನಾನು ನಾಳಿನ ಬೆಳಗು ಕಾಣತೇನೋ ಇಲ್ಲೋ ಅಂತ ಪ್ರತಿ ದಿನಾನೂ ಮಲಗೋವಾಗ ಅನಸತದ. ಇಂದಿನ ಮೊಗ್ಗು ನಾಳಿಗೆ ಅರಳೋದನ್ನ ನೋಡೋ ಭಾಗ್ಯಾನರೆ ಅದನೋ ಇಲ್ಲೋ ನನಗ.. ನನ್ನ ನಂತರ ನಮ್ಮ ಅವ್ವಗ ಯಾರು? ನಮ್ಮ ಮಾನಸೀಗಂತೂ ತವರಮನೀನ ಇಲ್ಲಧಂಗಾಗತದ.. ಆದರ ನಮ್ಮ ಮಾನಸಿ ಭಾಳ ಧೈರ್ಯಾದಕಿ ಇದ್ದಾಳ. ಎಲ್ಲಾನೂ ಅಗದೀ ವ್ಯವಸ್ಥಿತ ನೋಡಿಕೋತಾಳ.

ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ

(ಭಾಗ 7)

ಬೆಂಗಳೂರಿಗೆ ಹೋಗೋಕಿಂತಾ ಮೊದಲ ಒಂದು ಮಹತ್ವದ ಕೆಲಸಾ ಮಾಡೋದದ. ಮೃತ್ಯುಪತ್ರ ಮಾಡಬೇಕು. ಏನೇನದ ಎಲ್ಲಾನೂ ಮಾನಸಿ ಹೆಸರಿಗೆ ಮಾಡಬೇಕು. ಇನ್ನ ಸಮಯಾ ಭಾಳ ಕಡಿಮಿ ಅದ. ಯಾಕಂದ್ರ ನನಗ ಯಾವ ಕ್ಷಣದಾಗ ಮೃತ್ಯು ಬರತದೋ ಗೊತ್ತಿಲ್ಲಾ. ನಂಗಂತೂ ಎಲ್ಲಾದರ ಮ್ಯಾಲಿನ ವಿಶ್ವಾಸನ ಹೋಗಿಬಿಟ್ಟಂಗ ಆಗೇದ. ಇವರು ಹೋದಾಗಿಂದನ ನಾನು ದೇವರಿಗೆ ಕೈಜೋಡಿಸೋದು ಬಿಟ್ಟಬಿಟ್ಟೇನಿ. ಈಗ ದೇವರು ದೇವರ ಮನಿಯೊಳಗ ಕೂತಾನ ಒಂದು ವಿಷಣ್ಣತೆಯ ಸಂಕೇತದಂಗ.

ಮಕರಂದ ಆಣಿ ಹಾಕ್ಯಾನ. ಅದರಾಗೂ ಕೂಸಿಂದಂತ, ನಾ ಹೊಂಟೇನಿ. ಹಂಗೂ ನನಗ ಗೊತ್ತನ ಅದ, ನನ್ನ ಮ್ಯಾಲೆ ಇನ್ನ ಔಷಧದ ಉಪಯೋಗಾ ಏನೂ ಆಗಂಗಿಲ್ಲಂತ. ಸುಮ್ಮನ ರೊಕ್ಕ ಹಾಳು. ಡಾಕ್ಟರು ಹಂಗ ಎಲ್ಲಾರಿಗೂ ಆಶಾ ಹುಟ್ಟೂವಂಗ ಹೇಳತಾರ. ಮಾನಸೀನೂ ‘ಅವ್ವಾ, ಕಾಳಜಿ ಮಾಡಬ್ಯಾಡಾ.. ಇದರಿಂದ ನೀ ಪಾರಾಗತೀ..’ ಅಂತ ಹೇಳತಾಳ. ನನಗ ಗೊತ್ತದ, ಇದರಿಂದ ಪಾರಾಗೋದು ಸಾಧ್ಯನ ಇಲ್ಲಾ ಅಂತ. ನೋಡತೇನಲಾ ಮಂದೀ ಇದರಿಂದಾಗಿ ಕಷ್ಟಪಡೋದು.. ನೋಡನೋಡತನ ಎದ್ದು ದೂರ ಹೋಗತಾರನ್ನೋದನ್ನ.

ಮಾನಸಿಯ ಸುಖೀ ಸಂಸಾರ ನೋಡೋದಿತ್ತು. ಮಾಣಿಕ ದೊಡ್ಡವಾಗೋದನ್ನ ಕಾಣೋದಿತ್ತು. ಅಷ್ಟೇ ಅಲ್ಲಾ, ಈಗ ಸಧ್ಯಾ ನನಗ ಅವನ ಬಾಲಲೀಲಾ ನೋಡಿ ಖುಶಿಪಡೋ ಮನಸಿತ್ತು. ಮಾಣಿಕನ ರೂಪದಾಗ ನನ್ನ ಜೀವನದಾಗ ಎಷ್ಟು ಆನಂದ ಬಂದದ. ಆ ಆನಂದಕ್ಕ ದೃಷ್ಟಿ ಆಗಬಾರದಂತ ಈ ನೋವು ಕೊಟ್ಟಾನೇನು ದೇವರು ನನಗ? ಜೀವಾ ಒಳಗಿಂದೊಳಗೇ ನಡುಗತದ.. ನನ್ನ ಈ ನೋವು ಚಿಂದಿಚಿಂದಿ ಮಾಡಲಿಕ್ಕತ್ತೇದ. ಏನು ಮಾಡಬೇಕಂತನ ತಿಳೀಧಂಗಾಗೇದ.

ಅವಳು ತನ್ನೊಳಗೆ ತಾನೇ ‘ಈಗ ನಾನು ಏನು ಮಾಡಲು ಸಾಧ್ಯವಿದೆ? ಬಂದದ್ದನ್ನು ಎದುರಿಸಲೇಬೇಕು. ಹಿಂಗನ ಜೀವನಾ ಸಾಗಿಸಿಕೋತ ಇರೋದು.. ಯಾವಾಗ ಕರೀ ಬರತದ ಆವಾಗ ಹೊರಡೋದು! ಆದರ ಈ ನಮ್ಮ ಮಂದೀ ಜೋಡೀ ಹೆಣಕೊಂಡ ಕರುಳ ಸಂಬಂಧಾ ಬಿಟ್ಟು ಹೆಂಗ ಹೋಗೋದು ಅನ್ನೋದನೇ ಭಾಳ ಕಷ್ಟದ ಸಂಗತಿ.’ ಎಂದುಕೊಳ್ಳುತ್ತಿದ್ದಂತೆ ಅವಳ ಕಣ್ಣುಗಳಿಂದ ಪಳಕ್ಕನೆ ನೀರು ಅವಳ ಗಲ್ಲದ ಮೇಲೆ ಉದುರಿದ್ದವು. ಮನಸ್ವಿನಿಯತ್ತ ಗಮನವಿರಿಸಿಕೊಂಡೇ ಕುಳಿತಿದ್ದ ಮೀರಾ ಅಜ್ಜಿ ಮನಸ್ವಿನಿಯ ಬೆನ್ನ ಮೇಲೆ ಕೈಯಿರಿಸಿದ್ದರು. ಅವಳ ಬೆನ್ನ ಮೇಲೆ ಕೈಯಾಡಿಸುತ್ತ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅವ್ವನ ಸ್ಪರ್ಶದಿಂದಾಗಿ ಅವಳು ಗಲಿಬಿಲಿಗೊಂಡಿದ್ದಳು. ಅವ್ವನ ಮಡಿಲಲ್ಲಿ ತಲೆಯಿರಿಸಿ ತನ್ನೊಳಗಿನ ಎಲ್ಲಾ ತಲ್ಲಣಗಳನ್ನೂ ಹೊರಗೆ ಹಾಕಬೇಕು ಎಂದು ಆಕೆಗೆ ಎನ್ನಿಸಿತ್ತು. ಆದರೆ ಮನುಷ್ಯನ ದೊಡ್ಡಸ್ತಿಕೆ ಅದಕ್ಕೆ ಅವಕಾಶ ಕೊಡುವುದಿಲ್ಲವಲ್ಲವೆ? ಅವಳು ಬಾಯಿ ತುದಿಯ ವರೆಗೂ ಬಂದಂಥ ಎಲ್ಲವನ್ನೂ ಸುಮ್ಮನೆ ನುಂಗಿಕೊಂಡಳು. ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದಳು, ಜತೆಗೇ ಉಕ್ಕಿ ಬರುತ್ತಿದ್ದಂಥ ಕಣ್ಣೀರನ್ನೂ ಕೂಡ. ಈ ಕಣ್ಣೀರೇ ಅಲ್ಲವೇ ನಿಸ್ಸಂಶಯವಾಗಿ ಮೋಸ ಮಾಡುವುದು, ಆ ಕ್ಷಣವು ದುಃಖದ್ದೇ ಇರಲಿ ಅಥವಾ ಸಂತಸದ್ದೇ ಇರಲಿ!

ಭಾಗ 5 : Literature: ನೆರೆನಾಡ ನುಡಿಯೊಳಗಾಡಿ; ‘ಮಾವಶೀ, ನಮ್ಮನ್ನ ತಪ್ಪು ತಿಳಕೋಬ್ಯಾಡ್ರಿ, ಇದ್ದ ಸಂಗತಿ ಅಂದ್ರ’

“ಏ ಮಾನಸೀ..” ನಂದಾತಾಯಿ ಅವಳನ್ನು ಕೂಗಿದ್ದರು. “ಹಾಂ.. ಹೇಳ್ರಿ ಮಾವಶಿ..” “ಎಲ್ಲಿ ಕಳೆದುಹೋಗೀ ನೀನು? ಏನು ಚಿಂತೀ ಮಾಡಲಿಕ್ಕತ್ತೀ? ಮಾನಸೀ, ನನಗ ನಿನ್ನ ಬಗ್ಗೆ ಭಾಳ ಮೆಚ್ಚಿಗೆಯಾಗತದ ನೋಡು..” “ಯಾಕ್ರೀ ಮಾವಶೀ?” “ನೀ ಅಗದೀ ಕಾಂಕ್ರೀಟ ಇದ್ದಂಗಿದ್ದೀ ನೋಡು..” “ಪರಿಸ್ಥಿತಿ ಹಂಗ ಮಾಡಸತದರಿ ಮನಿಶ್ಯಾಗ.. ಅವ್ವಾ ಮತ್ತು ಅಜ್ಜಿ ಅಂದ್ರ ನನ್ನ ಜೀವನದಾಗಿನ ಗೋಡೆ ಇದ್ದಂಗರಿ. ನಾನು ಕಾಂಕ್ರೀಟ ಆಗದೇದ್ದರ ಆ ಗೋಡೆ ಬಿದ್ದು ಹೋಗತಾವಲ್ಲೇನ್ರಿ? ಅದಕ್ಕೇ ನಾನು ಸಂಬಂಧಗಳ ಗಿಲಾಯಿ ಮಾಡಕೋತನ ಇರತೇನಿ ಆಗಾಗ್ಗೆ..” “ಖರೆ ಅದ.. ನಾವು ನಮ್ಮ ಕೆಲಸಾ ಮಾಡಿಕೋತನ ಇರಬೇಕು..”

“”ಹೌದು ಮಾವಶೀ.. ನಡೆಸಿಕೊಂಡು ಹೋಗೋದನ.. ಆದರೆ ನಾವು ನಮ್ಮ ಈ ನಡಿಗೀ ಎಷ್ಟೇ ಸರಳ ನಡೆಸಿದರೂ ಈ ದೈವಾ ಅನ್ನೋದೇನದಲಾ ಅದು ನಮಗಿಂತಾ ಒಂದು ಹೆಜ್ಜಿ ಮುಂದನ ಇರತದ ನಮ್ಮನ್ನ ಸೋಲಿಸಲಿಕ್ಕೆ. ಮೊನ್ನೆ ಮೊನ್ನಿನ್ನೂ ಅಪ್ಪನ್ನ ಕಳಿಸಿದ್ದೆ.. ಈಗ ನೋಡಿದ್ರ ಅವ್ವ ತಯಾರ ಆದ್ಲು. ಮಾವಶೀ, ನನಗ ಒಂದು ಮಾತು ತಿಳೀವಲ್ದು.. ಎಲ್ಲಾರೂ ಅಂತಾರ ಜೀವನಾ ಸುಂದರ ಅದ.. ಜೀವಿಸುವ ರೀತಿ ಅದಕ್ಕಿಂತ ಛಂದ. ಜೀವನದ ಪ್ರತಿಯೊಂದು ಕ್ಷಣಾನೂ ಸಂತೋಷದಿಂದ ಶೃಂಗರಿಸಿಬೇಕು ಅಂತೆಲ್ಲಾ.. ಆದರ ಜೀವನದಾಗ ದುಃಖಗಳೇ ಎಲ್ಲೆಲ್ಲೂ ಗೊಂಚಲು ಗೊಂಚಲಾಗಿ ತೂಗಿಬಿದ್ದಿರುವಾಗ ಅವರು ಜೀವನದ ಪ್ರತಿಯೊಂದೂ ಕ್ಷಣವನ್ನು ಸಂತೋಷದಿಂದ ಹೆಂಗ ಶೃಂಗರಿಸಬೇಕು?”

“ಸರಿಯಾಗೇ ಹೇಳಿದಿ ನೀನು. ಆದರ ಸಂತೋಷದ ಕ್ಷಣಗಳನ್ನು ಹುಡುಕಬೇಕಾಗತದ. ಈಗ ಮಾಣಿಕನ ಆಗಮನ ನಿಮ್ಮೆಲ್ಲರ ಜಿವನದ ಆನಂದದ ಕ್ಷಣಾ ಹೌದಲ್ಲೋ?”

“ಖರೆರಿ. ಆದರ ಆ ಕ್ಷಣಾನ ಸಂತೋಷದಿಂದ ಶೃಂಗರಿಸಲಿಕ್ಕೆ ಸಮಯವಾದರೂ ಸಿಗಬೇಕಲ್ಲ? ಈ ಜೀವನದ ಸಿಕ್ಕುಗಳನ್ನ ಬಿಡಿಸಿ ಬಿಡಿಸಿ ಬೇಸತ್ತುಹೋಗೇದ ಮಾವಶೀ ಈ ಜೀವಾ. ಆದರೂ ನಾ ಭಾರೀ ಹಟಮಾರಿ. ಪರಿಸ್ಥಿತಿ ಏನದ ಅದನ್ನೇ ಮರಿತೇನಿ. ನಾಳಿಗೆ ಏನಾದರೂ ಕೆಟ್ಟ ಆಗೋದದ ಅಂತ ಚಿಂತೀ ಮಾಡಿ ಇವೊತ್ತಿನ ದಿನಾ ಯಾಕ ಹಾಳು ಮಾಡಿಕೋಬೇಕು? ಈಗ ಹೋಗೋಮುಂದ ಹೊರಗೇ ಊಟಾ ಮಾಡತೇವಿ. ಇದರಿಂದ ಅವ್ವಗೂ ಒಂದಿಷ್ಟು ಚೇಂಜು.. ಆಮ್ಯಾಲ ಅಕಿನ್ನ ಸೀರೀ ಅಂಗಡೀಗೆ ಕರಕೊಂಡ ಹೋಗತೇನಿ.. ಸಂತೋಷದ ಕ್ಷಣಗಳನ್ನ ಹೆಂಗ ಬೇಕೋ ಹಂಗ ಸುರಿಯೋದದ ನನಗ.. ನಮ್ಮ ಅವ್ವನ ಬೊಗಸಿಯೊಳಗ. ಸಾವಂತೂ ಬರೋದೇ ಅದ. ಆದರ ಅದು ಸಮಾಧಾನದಿಂದ ಬರಲಿ ಅಂತ. ಹೋಗೋ ಕ್ಷಣದಾಗ ನನ್ನ ಜೀವನದಾಗ ಇದೊಂದು ಆಶಾ ಉಳೀತು ಅಂತನಸೋದು ಬ್ಯಾಡಾ…. ನಾ ಇನ್ನ ಹೋಗಿಬರತೇನಿ ಮಾವಶಿ..”

ಮಾನಸಿ ಎದ್ದು ನಿಂತಿದ್ದಳು. ಮಲಗಿದ್ದ ಮಗುವನ್ನು ಹೆಗಲ ಮೇಲೆ ಹಾಕಿಕೊಂಡಿದ್ದಳು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಭಾಗ 6 : Literature: ನೆರೆನಾಡ ನುಡಿಯೊಳಗಾಡಿ; ‘ನನ್ನ ಅಜ್ಜಿ ನಮ್ಮ ಅವ್ವನ ಖಾಸ ಅವ್ವ ಅಲ್ಲಾ, ಮಲತಾಯಿ‘

ಈ ಕಥೆಯ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 1:27 pm, Fri, 8 April 22

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ