Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ

Anton Chekhov‘s Story: A Slander ; “ನನಗೆ ಸ್ಟರ್ಜಿಯನ್ ಮೀನು ತೋರಿಸು ಮಾರ್ಫಾ” ಕೈಗೆ ಕೈ ಉಜ್ಜಿಕೊಳ್ಳುತ್ತಾ, ನಾಲಿಗೆಯಿಂದ ತುಟಿ ಸವರ‍್ಕೋತಾ ಅಹಿನೀವ್ ಹೇಳತೊಡಗಿದರು. “ಆಹಾ! ಎಂಥ ಪರಿಮಳ, ಮಾಡಿದ್ನೆಲ್ಲಾ ನಾನೇ ತಿಂದುಬಿಡ್ತಿದ್ದೆ, ಬಾ..ಬಾ..ಇಲ್ಲಿ.. ನಂಗೆ ಸ್ಟರ್ಜಿಯನ್ ತೋರಿಸು ಬೇಗ! ಬೇಗ!” ಅವಸರಿಸಿದರು.

Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ
ಆ್ಯಂಟನ್ ಚೆಕಾವ್ ಮತ್ತು ನಾಗರೇಖಾ ಗಾಂವಕರ್
Follow us
ಶ್ರೀದೇವಿ ಕಳಸದ
|

Updated on:Feb 18, 2022 | 10:08 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: 19ನೇ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಪೂರ್ವಾರ್ಧದಲ್ಲಿ ತನ್ನ ವಿಶಿಷ್ಟ ಬರವಣಿಗೆಯ ಶೈಲಿಯಿಂದ ಗುರುತಿಸಿಕೊಂಡ ರಶಿಯನ್ ಲೇಖಕ ಆ್ಯಂಟನ್ ಚೆಕಾವ್ (Anton Chekhov) ಬರೆದ ಕಥೆಗಳು ಇಂದಿಗೂ ಅತಿ ಪ್ರಸ್ತುತ. ಬಹುಮುಖ್ಯವಾಗಿ ಮನುಷ್ಯ ಸ್ವಭಾವದ ಸಂಕೀರ್ಣತೆ, ದಿನನಿತ್ಯದ ಬದುಕಿನ ಆಗುಹೋಗುಗಳಲ್ಲಿ ಅಡಗಿರುವ ಸರಳ ಸಂಗತಿಗಳಲ್ಲಿಯ ಸೂಕ್ಷ್ಮ ವಿಚಾರಗಳು, ಜೊತೆಜೊತೆಗೆ ದುಃಖಾಂತದ ಕಥಾ ಹೂರಣದಲ್ಲಿಯೇ ನುಸುಳುವ ನವಿರಾದ ಹಾಸ್ಯವನ್ನು ಉಣಬಡಿಸುವ ನಿರೂಪಣಾ ವಿಧಾನಗಳು ಅವರನ್ನು ಜಗತ್ತಿನ ಅತಿ ಶ್ರೇಷ್ಠ ಕಥೆಗಾರರ ಪಂಕ್ತಿಯಲ್ಲಿ ನಿಲ್ಲಿಸಿವೆ.  ಬರಹಗಾರರಾಗಲಿ, ಕಲಾವಿದರಾಗಲಿ ಜಗತ್ತಿನ ಧೋರಣೆ, ಲೋಪಗಳನ್ನು ಪ್ರಶ್ನಿಸಬೇಕೇ ಹೊರತು ಅವುಗಳಿಗೆ  ಸಮರ್ಥನೆ ನೀಡಬಾರದು ಮತ್ತು ವಿಶಿಷ್ಟ ನಿಲುವು, ಸಿದ್ಧಾಂತಗಳಿಗೆ ಉತ್ತರವನ್ನಾಗಲಿ, ಸಮಜಾಯಿಷಿಯನ್ನಾಗಲಿ  ಕೊಡಬಾರದು ಎನ್ನುವುದು ಇವರ ನಿಲುವಾಗಿತ್ತು. *

ಕಥೆ: ಅಪನಿಂದೆ (A Slander) | ಮೂಲ : ಆ್ಯಂಟನ್ ಚೆಕಾವ್ | ಕನ್ನಡಕ್ಕೆ : ಪ್ರೊ. ನಾಗರೇಖಾ ಗಾಂವಕರ

(ಭಾಗ 1)

ಲೇಖಕರಾದ ಸರ್ಜ ಕ್ಯಾಪಿಟೊನಿಚ್ ಅಹಿನಿವ್‌ ತಮ್ಮ ಮಗಳನ್ನು ಇತಿಹಾಸ ಮತ್ತು ಭೂಗೋಳ ಕಲಿಸೋ ಶಿಕ್ಷಕರೊಬ್ಬರಿಗೆ ವಿವಾಹ ಮಾಡಿಕೊಡುವವರಿದ್ದರು. ಮದುವೆಯ ಎಲ್ಲ ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ವೈಭವದಿಂದ ನಡೆದಿದ್ದವು. ಡ್ರಾಯಿಂಗ್ ರೂಮಿನಲ್ಲಿ ಹಾಡು, ನೃತ್ಯ ಇನ್ನಿತರ ಆಟೋಟಗಳು ನಡೆಯುತ್ತಿದ್ದವು . ಕ್ಲಬ್ಬುಗಳಿಂದ ಬಾಡಿಗೆಗೆ ಕರೆತಂದಿದ್ದ ವೇಯ್ಟರ್​ಗಳು, ಕಪ್ಪುಬಣ್ಣದ ಸ್ವಾಲೋಟೈಲ್ಸ್  ಹಾಗೂ ಕೊಳೆಕೊಳೆಯಾದ ಬಿಳಿಬಣ್ಣದ ಟೈ ತೊಟ್ಟು ಕೋಣೆಯಿಂದ ಕೋಣೆಗೆ ಎಡತಾಕುತ್ತಲೇ ಇದ್ದರು. ಸಿಕ್ಕಾಪಟ್ಟೆ ಗದ್ದಲ. ಜೋರಾದ ಮಾತುಕತೆ. ಒಂದು ಸೋಫಾದ ಮೇಲೆ ಗಣಿತ ಶಿಕ್ಷಕರು, ಫ್ರೆಂಚ್ ಕಲಿಸುವ ಶಿಕ್ಷಕರು ಹಾಗೂ ಟ್ಯಾಕ್ಸ್​ ಆಫೀಸಿನ ಜ್ಯೂನಿಯರ ತೆರಿಗೆ ಅಧಿಕಾರಿ ಈ ಮೂವರು ಅಕ್ಕಪಕ್ಕ ಕೂತು ಜೋರಾಗಿ ಮಾತುಕತೆಯಲ್ಲಿ ಮುಳುಗಿದ್ದರು. ಬಂದ ಅತಿಥಿಗಳ ಎದುರು ಜನರನ್ನು ಜೀವಂತವಾಗಿ ಹೂಳಲ್ಪಟ್ಟ ಪ್ರಕರಣಗಳ ಬಗ್ಗೆ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವೈಭವೀಕರಿಸುತ್ತಾ, ಒಬ್ಬರ ಮಾತಿನ ನಡುವೆ ಇನ್ನೊಬ್ಬರು ಮಧ್ಯ ಪ್ರವೇಶಿಸುತ್ತಾ ವಿವರಿಸುತ್ತಿದ್ದರು. ಹಾಗೆ ನೋಡಿದರೆ ಅಧ್ಯಾತ್ಮದಲ್ಲಿ ಅವರಿಗಾರಿಗೂ ನಂಬಿಕೆ ಇರಲಿಲ್ಲ. ಆದರೆ ಈ ಜಗತ್ತಿನಲ್ಲಿ ಮನುಷ್ಯನ ಮನಸ್ಸಿನ ಹೊರತಾಗಿ ಇನ್ನೋ ಎಷ್ಟೋ ಬೇರೆ ಬೇರೆ ವಿಚಾರಗಳು ಸಂಗತಿಗಳು ಕೂಡಾ ಬಹಳಾನೇ ಇವೆ ಎಂಬುದು ಅವರೆಲ್ಲರಿಗೂ ಗೊತ್ತಿದ್ದದ್ದೆ ಆಗಿತ್ತು. ಮುಂದಿನ ಕೋಣೆಯಲ್ಲಿ ಸಾಹಿತ್ಯದ ಅಧ್ಯಾಪಕರೊಬ್ಬರು ಕಾವಲುಗಾರನಾದವನು ಯಾವ ಸನ್ನಿವೇಶ, ಸಂದರ್ಭದಲ್ಲಿ ದಾರಿಹೋಕರ ಮೇಲೆ ಹರಿಹಾಯಬಹುದು ಎಂಬ ಸಂಗತಿಯನ್ನ ವಿವರಿಸ್ತಿದ್ದರು. ಆ ವಿಷಯಗಳೆಲ್ಲಾ ಎಲ್ಲರೂ ಒಪ್ಪಿಕೊಳ್ಳುವ ಹಾಗೆಯೇ ಇದ್ದವು. ಅಲ್ಲಿಗೆ ಬರುವ ವ್ಯಕ್ತಿಗಳನ್ನು ಕಿಟಿಕಿಯಿಂದಲೇ ಗಮನಿಸಿ ಅವರವರ ಸಾಮಾಜಿಕ ಸ್ಥಾನಮಾನಗಳಿಂದ ಅಳೆಯಲಾಗುತ್ತಿತ್ತು.

ಇದನ್ನೂ ಓದಿ : ನಾಗರೇಖಾ ಕವಿತೆಗಳು ; Poetry; ಅವಿತ ಕವಿತೆ : ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ ಕವಿತೆ ಹುಟ್ಟುತ್ತದೆ

ಸರಿ ಸುಮಾರು ನಡುರಾತ್ರಿಯ ಹೊತ್ತು. ರಾತ್ರಿಯೂಟದ ತಯಾರಿ ಹೇಗಿದೆ ಅಂತಾ ಒಮ್ಮೆ ನೋಡಿ ಬರೋಣ ಅಂತಾ ಮನೆ ಯಜಮಾನ ಅಹಿನಿವ್ ಅಡುಗೆ ಕೋಣೆಗೆ ಹೋದರು. ಅಡುಗೆಕೋಣೆಯ ನೆಲದಿಂದ ಹಿಡಿದು ಛಾವಣಿಯವರೆಗೂ ಬಾತು, ಹಂಸಗಳಿಂದ ಮಾಡಿದ ಖಾದ್ಯಗಳು ಅಷ್ಟೇ ಅಲ್ಲ ಇನ್ನೂ ಅನೇಕ ಖಾದ್ಯಗಳ ಸುವಾಸನೆಯಿಂದ ತುಂಬಿಹೋಗಿತ್ತು. ಎರಡು ಮೇಜಿನ ಮೇಲೆ ಬೇರೆ ಬೇರೆ ತಿನಿಸುಗಳು, ಪಾನೀಯಗಳು, ಸಣ್ಣಪುಟ್ಟ ಖಾದ್ಯಗಳು ಎಲ್ಲಾನೂ ಬಹಳ ಚಂದಾಗಿ ಜೋಡಿಸಿಟ್ಟಿದ್ರು. ಅಡುಗೆ ಕೆಲಸದವಳು ಕೆಂಪುಮುಖದ ಮಾರ್ಫಾ. ತನ್ನ ಬ್ಯಾರೆಲ್‌ನಂತೆ ಕಾಣುವ ದೇಹಕ್ಕೆ ಸುತ್ತಲೂ ಬೆಲ್ಟ್ ಕಟ್ಟಿಕೊಂಡು ಟೇಬಲ್ಲಿನ ಮೇಲೆ ಗಡಿಬಿಡಿಯಿಂದ ಏನೇನೋ ರೆಡಿ ಮಾಡ್ತಿದ್ಲು.

“ನನಗೆ ಸ್ಟರ್ಜಿಯನ್ ಮೀನು ತೋರಿಸು ಮಾರ್ಫಾ” ಕೈಗೆ ಕೈ ಉಜ್ಜಿಕೊಳ್ಳುತ್ತಾ, ನಾಲಿಗೆಯಿಂದ ತುಟಿ ಸವರ‍್ಕೋತಾ ಅಹಿನೀವ್ ಹೇಳತೊಡಗಿದರು. “ಆಹಾ! ಎಂಥ ಪರಿಮಳ, ಮಾಡಿದ್ನೆಲ್ಲಾ ನಾನೇ ತಿಂದುಬಿಡ್ತಿದ್ದೆ, ಬಾ..ಬಾ..ಇಲ್ಲಿ.. ನಂಗೆ ಸ್ಟರ್ಜಿಯನ್ ತೋರಿಸು ಬೇಗ! ಬೇಗ!” ಅವಸರಿಸಿದರು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

*

ಆ್ಯಂಟನ್ ಚೆಕಾವ್ : 1860ರ ಜನವರಿ 29ರಲ್ಲಿ ರಶಿಯಾದ ಟಗನರೋಗ್ ಎಂಬಲ್ಲಿ ಜನಿಸಿದ ಚೆಕಾವ್​ನ ಬಾಲ್ಯ ಸಂಕಷ್ಟಗಳಿಂದ ಕೂಡಿತ್ತು. ದಿನಸಿ ಅಂಗಡಿ ನಡೆಸುತ್ತಿದ್ದ ತಂದೆ ಪಾವೆಲ್ ಆರ್ಥಿಕ ಸಮಸ್ಯೆಯಿಂದ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದರೂ, ಚೆಕಾವ್​ಗೆ ವೈದ್ಯಕೀಯ ವಿದ್ಯಾಭ್ಯಾಸ ಮಾಡಿಸಿದರು. ಓದಿನ ಜೊತೆಗೆ ಫ್ರೀಲಾನ್ಸ್​ ಬರವಣಿಗೆ ರೂಢಿಸಿಕೊಂಡ ಚೆಕಾವ್​, ದೊರೆತ ಸಂಭಾವನೆಯನ್ನು ತಮ್ಮ ಓದಿಗೂ, ಕುಟುಂಬಕ್ಕೂ ವಿನಿಯೋಗಿಸಿದರು. ಓದುಬರಹವನ್ನು ಪ್ರೀತಿಸುತ್ತಿದ್ದ ಅವರು, ‘ವೈದ್ಯ ವೃತ್ತಿ ನನ್ನ ಕಾನೂನುಬದ್ಧ ಪತ್ನಿ, ಸಾಹಿತ್ಯ ನನ್ನ ಉಪಪತ್ನಿ’ ಎಂದು ತಮಾಷೆ ಮಾಡುತ್ತಿದ್ದರಂತೆ. ಸುಮಾರು 201 ಕಥೆಗಳನ್ನು ಕಥಾಲೋಕಕ್ಕೆ ನೀಡಿದ ಅದ್ವಿತೀಯ ಕಥೆಗಾರ, ನಾಟಕಕಾರರೂ ಆಗಿದ್ದ ಇವರು ಬದುಕಿದ್ದು ಕೇವಲ 44 ವರ್ಷಗಳು ಮಾತ್ರ! 1904ರಲ್ಲಿ ಕ್ಷಯರೋಗ ಪೀಡಿತರಾಗಿ ಮರಣ ಹೊಂದಿದರು.

*

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ತಮಿಳಿನ ಖ್ಯಾತ ಲೇಖಕಿ ಶಿವಶಂಕರಿ ಚಂದ್ರಶೇಖರನ್ ಅವರ ಕಥೆ ‘ಒಂದು ಮಾತು’

Published On - 9:41 am, Fri, 18 February 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ