Literature: ನೆರೆನಾಡ ನುಡಿಯೊಳಗಾಡಿ; ತಮಿಳಿನ ಖ್ಯಾತ ಲೇಖಕಿ ಶಿವಶಂಕರಿ ಚಂದ್ರಶೇಖರನ್ ಅವರ ಕಥೆ ‘ಒಂದು ಮಾತು’

Translated Stories : ಇಂದಿನಿಂದ ಶುರುವಾದ ಈ ಹೊಸ ಅಂಕಣ ‘ನೆರೆನಾಡ ನುಡಿಯೊಳಗಾಡಿ’. ಪ್ರತೀ ಶುಕ್ರವಾರ ಪ್ರಕಟವಾಗಲಿರುವ ಈ ಅಂಕಣದಲ್ಲಿ ಬೇರೆಬೇರೆ ಭಾಷೆಯ ಕಥೆಗಳನ್ನು ಕನ್ನಡದ ವಿವಿಧ ಲೇಖಕರ ಮೂಲಕ ಓದುತ್ತೀರಿ. ತಮಿಳಿನ ಖ್ಯಾತ ಲೇಖಕಿ ಶಿವಶಂಕರಿ ಚಂದ್ರಶೇಖರನ್ ಅವರ ಕಥೆಯನ್ನು ಡಾ. ಮಲರ್ ವಿಳಿ ಅನುವಾದಿಸಿದ್ದು ನಿಮ್ಮ ಓದಿಗಿಲ್ಲಿದೆ.

Literature: ನೆರೆನಾಡ ನುಡಿಯೊಳಗಾಡಿ; ತಮಿಳಿನ ಖ್ಯಾತ ಲೇಖಕಿ ಶಿವಶಂಕರಿ ಚಂದ್ರಶೇಖರನ್ ಅವರ ಕಥೆ ‘ಒಂದು ಮಾತು’
ಅನುವಾದಕಿ ಡಾ. ಮಲರ್ ವಿಳಿ, ತಮಿಳಿನ ಲೇಖಕಿ ಶಿವಶಂಕರಿ ಚಂದ್ರಶೇಖರನ್
Follow us
ಶ್ರೀದೇವಿ ಕಳಸದ
|

Updated on:Feb 12, 2022 | 10:49 AM

ನೆರೆನಾಡ ನುಡಿಯೊಳಗಾಡಿ: NereNaada Nudiyolagaadi; ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೊಡುಗೆ ಸಲ್ಲಿಸಿರುವ ತಮಿಳಿನ ಪ್ರಸಿದ್ಧ ಲೇಖಕಿ ಶಿವಶಂಕರಿ ಚಂದ್ರಶೇಖರನ್ (Sivasankari Chandrasekaran) ಹುಟ್ಟಿದ್ದು 14.10.1942ರಲ್ಲಿ. 18 ಭಾರತೀಯ ಭಾಷೆಗಳಲ್ಲಿ ‘ಸಾಹಿತ್ಯದ ಮೂಲಕ ಭಾರತೀಯ ಬೆಸುಗೆʼ ಎಂಬ ಶೀರ್ಷಿಕೆಯಡಿ ನಾಲ್ಕು ಸಂಪುಟಗಳನ್ನು ಹೊರತಂದಿದ್ದಾರೆ. ಇವರ ಅನೇಕ ಕೃತಿಗಳು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ ಮತ್ತು ಸಾಹಿತ್ತ್ಯಿಕ ಸಂಶೋಧನೆಗಳಿಗೆ ಆಕರ ಗ್ರಂಥಗಳೂ ಆಗಿವೆ. ಇವರು ಅಮೆರಿಕಾದ ಅಯೋವಾ ರಾಜ್ಯದಲ್ಲಿ ನಡೆದ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕಸ್ತೂರಿ  ಶ್ರೀನಿವಾಸನ್ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ತು ಪ್ರಶಸ್ತಿ, ರಾಜಾ ಸರ್‌ ಅಣ್ಣಾಮಲೈ ಚೆಟ್ಟಿಯಾರ್‌ ಪ್ರಶಸ್ತಿ, ಕಲ್ಕತ್ತಾದ ರಾಷ್ಟ್ರೀಯ ಹಿಂದಿ ಅಕಾಡೆಮಿಯ ಪ್ರೇಮಚಂದ್  ರಾಷ್ಟ್ರೀಯ  ಸಾಹಿತ್ಯ ಸಮ್ಮಾನ್‌ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ AGNI- Awakened Group for National Integration ನಿರ್ದೇಶಕರಾಗಿದ್ದಾರೆ. Archives of U.S. Library of Congress ಗಾಗಿ ತಮ್ಮ ಕಥೆಗಳನ್ನು ಸ್ವತಃ ವಾಚಿಸಿದ ನಾಲ್ಕು ತಮಿಳು ಸಾಹಿತಿಗಳಲ್ಲಿ ಇವರೂ ಒಬ್ಬರು. ಈಗಿಲ್ಲಿ 1984ರಲ್ಲಿ ಇವರು ಬರೆದ ಕಥೆ ಒಂದು ಮಾತು’ ಓದಬಹುದು. ಅನುವಾದ: ಡಾ. ಮಲರ್ ವಿಳಿ ಕೆ. (Dr. Malarvili K.), ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಬೆಂಗಳೂರು 

(ಭಾಗ 1)   

*

ಕಿವಿಗೆ ಬಿದ್ದ ಮಾತುಗಳನ್ನು ನಂಬಲಾರದ ರೀತಿಯಲ್ಲಿ ವೇದಗಿರಿ ಎಚ್ಚರಗೊಂಡರು

“ಆಟ ಆಡ್ಬೇಡಿ ರಂಗನಾಥನ್”

“ಇದರಲ್ಲಿ ಆಟವಾಡೋದೇನು ಬಂತು ಸಾರ್? ಸತ್ಯವಾಗಿಯೂ ನಿಮ್ಮ ಅಳಿಯ ಕಳುಹಿಸಿದ್ದರಿಂದಲೇ ನಾನು ಇಲ್ಲಿಗೆ ಬಂದೆ”.

ವೇದಗಿರಿ ಶರವೇಗದಲ್ಲಿ ಬಂದತಹ ಆತಂಕವನ್ನು ನಿಯಂತ್ರಿಸಿಕೊಂಡರು. ಎದುರಿಗೆ ಕುಳಿತಿದ್ದವರನ್ನು ಸಂಶಯದಿಂದ ದಿಟ್ಟಿಸಿದರು.

“ಏನ್ರಿ! ಏನು ಹೇಳಿ ಕಳುಹಿಸಿದರೂಂತಾ ಹೇಳ್ತಿದ್ದೀರಾ?” ರಂಗನಾಥನ್ ಮುಗುಳ್ನಕ್ಕನು.

ನಿಮ್ಮ ಮಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ಅವರು ಸಿದ್ಧರಿದ್ದಾರಂತೆ ಅದನ್ನು ಹೇಳಿಬನ್ನಿ ಎಂದರು.

ಅರ್ಧ ನಿಮಿಷ ಹಿಂಜರಿದು ಮತ್ತೆ “ತಮಾಷೆ ಮಾಡ್ಬೇಡಿ ಎಂದು ವೇದಗಿರಿ ಬೇಡುವ ಹಾಗೆ… “ಏನ್ಸಾರ್ ಮತ್ತೆ ಮತ್ತೆ ಅದನ್ನೇ ಹೇಳುತ್ತಾ? ಸರಿಬಿಡಿ ನಾನು ಹೋಗಿ ಸುಂದರ ಬಳಿ “ನಿನ್ನ ಮಾವ ನಂಬೋದಿಲ್ಲಾಂತಾರಪ್ಪಾ’’ ಎಂದು ಹೇಳಲೇನು?’’

ಇದನ್ನೂ ಓದಿ :Simpi Linganna Birth Anniversary: ಉಪ್ಪು ಮಾರಿ, ಬಟ್ಟೆ ನೇಯ್ದು ‘ವಾಗ್ವಿಲಾಸ’ ವಾಚನಾಲಯ ತೆರೆದ ಸಿಂಪಿ ಲಿಂಗಣ್ಣ

NereNaada Nudiyolagaadi Column Dr Malar Vizhi translated the Tamil Story of Sivasankari Chandrasekaran

ಶಿವಶಂಕರಿಯವರು ಇಂದಿರಾಗಾಂಧಿಯವರನ್ನು ಭೇಟಿಯಾದ ಸಂದರ್ಭ

ಏಳಲು ಪ್ರಯತ್ನಿಸಿದವನನ್ನು, ಅವಸರವಾಗಿ ವೇದಗಿರಿ ತಡೆದು ನಿಲ್ಲಿಸಿದರು.

“ಏನಪ್ಪಾ ಇದಕ್ಕೆಲ್ಲಾ ಕೋಪಿಸಿಕೊಂಡರೆ ಹೇಗೆ? ಮೂರು ವರ್ಷದಿಂದ ಈ ಮಾತು ಕಿವಿಗೆ ಯಾವಾಗ ಬೀಳುತ್ತೋ ಅಂತ ತಪಸ್ಸು ಮಾಡ್ತಿದ್ದೆನಲ್ವಾ? ಅದಕ್ಕೇ ಸ್ವಲ್ಪ ಚಕಿತಗೊಂಡೆ. ನಿಜವಾಗಿಯೂ ಅಳಿಯ, ಸೆಲ್ವಿಯೊಡನೆ ಮತ್ತೆ ಸೇರಿ ಬಾಳಲು ಒಪ್ಪಿದ್ರಾ? ಹೇಳಿ… ನನ್ನ ಕಿವಿಗೆ ಹಿತವಾಗುವಂತೆ ನಾಲ್ಕು ಸಲ ಹೇಳಿ…’’

“ಸುಂದರ ನನ್ನನ್ನು ಕಳುಹಿಸದೇ ಇದ್ದ ಪಕ್ಷದಲ್ಲಿ ನನಗೆ ನಿಮ್ಮ ಹತ್ರ ಏನು ಕೆಲಸವಿತ್ತು ಸಾರ್?’’

ನಿನ್ನೆ ರಾತ್ರಿ ಅವನೇ ನನ್ನ ಬಳಿ, ‘ನೀ ಬೆಳಗ್ಗೆ ಎದ್ದ ಕೂಡಲೇ ಕಾರ್ ತೆಗೆದುಕೊಂಡು ಊರಿಗೆ ಹೋಗಿ ನನ್ನ ಮಾವನ ಹತ್ತಿರ ಸೆಲ್ವಿಯೊಂದಿಗೆ ಸೇರಿ ಬಾಳಲು ನನ್ನ ಒಪ್ಪಿಗೆ ಇದೆ’ ಅಂತ ಹೇಳಿ ಎಂದನು. ಸಾರ್…  ಹೊಸ್ತಿಲಾಚೆ ನಿಂತಿರುವುದು ನಿಮ್ಮ ಅಳಿಯನ ಗಾಡಿ ತಾನೇ?’’

ಕಿಟಕಿಯ ಮೂಲಕ ಬೀದಿಯನ್ನು ವೀಕ್ಷಿಸಿದಾಗ ತಾನು ಮದುವೆ ಉಡುಗೊರೆಯಾಗಿ ನೀಡಿದ ಕಪ್ಪು ಫಿಯೆಟ್ ಕಾರ್ ಚೆಂದವಾಗಿ ನಿಂತಿರುವುದನ್ನು ಕಂಡು, ರಂಗನಾಥನ್ ಹೇಳುತ್ತಿರುವುದು ಸತ್ಯ ಎಂಬ ನಂಬಿಕೆ ಒಳಗೆ ನುಸುಳಿ ಸಂತಸ ಚಿಮ್ಮಿತು.

ಕೊನೆಯಲ್ಲಿ ಮುರುಗದೇವ ಕಣ್ಣನ್ನು ತೆರೆದನೇ? ಬಂಗಾರದ ಪ್ರತಿಮೆಯಂಥ ಹೆಂಡತಿಯನ್ನು ಬಿಟ್ಟು ಬಿಟ್ಟು… ನಾಟ್ಯಾಂಗನೆಯ ಹಿಂದೆ ಓಡಿದ ಅಳಿಯ ಮೋಹದ ಬಲೆಗೆ ಸಿಕ್ಕವನು ಈಗ ಹೊರ ಬಂದಿದ್ದಾನೆಯೇ?

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಪ್ರತಿಕ್ರಿಯೆಗಾಗಿ : tv9kannadadigital@gmail.com

*

ಇದನ್ನೂ ಓದಿ : Simpi Linganna’s Birth Anniversary : ಸಬಲೆಯಾಗಿರುವ ಆಕೆಗೆ ಬಿರುದು ಹಣೆಗಿಟ್ಟು ಬಿಗಿಯುವುದು ಬೇಡ ಗುರುಗಳೇ

Published On - 12:54 pm, Fri, 11 February 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ