Simpi Linganna Birth Anniversary: ಉಪ್ಪು ಮಾರಿ, ಬಟ್ಟೆ ನೇಯ್ದು ‘ವಾಗ್ವಿಲಾಸ’ ವಾಚನಾಲಯ ತೆರೆದ ಸಿಂಪಿ ಲಿಂಗಣ್ಣ

Aurobindo Ashram; ಬಾಲ್ಯದ ಗೆಳೆಯರಾದ ಮಧುರಚೆನ್ನರ ಒಡನಾಟದಿಂದ ಸಿಂಪಿ ಲಿಂಗಣ್ಣನವರಲ್ಲಿಯೂ ಅಧ್ಯಾತ್ಮದ ಒಲವು ಮೂಡಿತು. ಆಧ್ಯಾತ್ಮದಲ್ಲಿ ಸಿಂಪಿಯವರು ತಮ್ಮ ಒಡನಾಡಿ ಗೆಳೆಯರಾದ ಮಧುರಚೆನ್ನರಿಂದ ಪ್ರೇರಿತರಾಗಿ ಅರವಿಂದರ ಆಶ್ರಮಕ್ಕೆ ಸಂದರ್ಶನವಿತ್ತು ‘ಪೂರ್ಣಯೋಗ’ ಪಥದಲ್ಲಿ ಸಾಮರಸ್ಯ ಪಡೆದರು.

Simpi Linganna Birth Anniversary: ಉಪ್ಪು ಮಾರಿ, ಬಟ್ಟೆ ನೇಯ್ದು ‘ವಾಗ್ವಿಲಾಸ’ ವಾಚನಾಲಯ ತೆರೆದ ಸಿಂಪಿ ಲಿಂಗಣ್ಣ
ಸಿಂಪಿ ಲಿಂಗಣ್ಣ
Follow us
| Updated By: ಶ್ರೀದೇವಿ ಕಳಸದ

Updated on:Feb 10, 2022 | 2:46 PM

ಸಿಂಪಿ ಲಿಂಗಣ್ಣ | Simpi Linganna : ಜಾನಪದ ರತ್ನ ಸಿಂಪಿ ಲಿಂಗಣ್ಣನವರು 1905ರ ಫೆಬ್ರವರಿ 10ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮ. ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. ಅಪ್ಪ ಅಮ್ಮ ಇಬ್ಬರೂ ಲಿಂಗಣ್ಣ ಐದು ವರ್ಷದವರಿರುವಾಗಲೇ ನಿಧನರಾಗಿ ಅಣ್ಣ ಸೀರೆ ನೇಯ್ದು ಮಾರುವ ಕೆಲಸ ಕೈಗೊಂಡರೆ, ಲಿಂಗಣ್ಣ ಬಿಡುವಿನ ವೇಳೆಯಲ್ಲಿ ಉಪ್ಪು ಮಾರಿ ಸ್ವತಃ ಅಡುಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಂತರ ಅಣ್ಣ ಈರಣ್ಣ, ‘ಗುರಮ್ಮ’ ಎಂಬಾಕೆಯನ್ನು ಮದುವೆಯಾದಾಗ ಲಿಂಗಣ್ಣನವರಿಗೆ ಅಡುಗೆ ತಾಪತ್ರಯದಿಂದ ವಿಮುಕ್ತಿ ದೊರೆಯಿತು. ಈ ಅತ್ತಿಗೆ ‘ಗುರಮ್ಮ’ ಹೇಳುತ್ತಿದ್ದ ಗರತಿ ಹಾಡುಗಳು ಲಿಂಗಣ್ಣನವರಿಗೆ ಜನಪದ ಸಾಹಿತ್ಯದ ಹುಚ್ಚು ಹಿಡಿಸಿತು. 

ತಿರು ಶ್ರೀಧರ, ಲೇಖಕರು

ಭಾಗ – 1

ಚಿಕ್ಕಂದಿನಲ್ಲೇ ಲಿಂಗಣ್ಣನವರ ಮನೆಯಲ್ಲಿ ಬಾಡಿಗೆಗಿದ್ದ ಮಧುರಚೆನ್ನರು ಲಿಂಗಣ್ಣನವರಿಗೆ ಪರಮಾಪ್ತರಾದರು. 1922ರಲ್ಲಿ ಲಿಂಗಣ್ಣ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಪಾಸಾದರೂ ಮುಂದೆ ಓದಲು ಹಣವಿಲ್ಲದೆ, ಅಣ್ಣನ ಜೊತೆಯಲ್ಲಿ ಸೀರೆ ನೇಯುವ ಕಾಯಕಕ್ಕೆ ತೊಡಗಿದರು. ಓದುವ ಹವ್ಯಾಸ ಬತ್ತಲಿಲ್ಲ. ಗೆಳೆಯರ ಜೊತೆ ಸೇರಿ ‘ವಾಗ್ವಿಲಾಸ’ ಎಂಬ ವಾಚನಾಲಯ ತೆರೆದರು. ಊರಿನ ಜನರಿಂದ 800 ಗ್ರಂಥಗಳನ್ನು ಸಂಗ್ರಹಿಸಿ ಜನರಿಗೆ ಓದುವ ಹವ್ಯಾಸ ಹಚ್ಚಿದರು. ಹಲಸಂಗಿ ಮಲ್ಲಪ್ಪ ಮತ್ತು ಸಿಂಪಿ ಲಿಂಗಣ್ಣ ಜೊತೆಗೂಡಿ ‘ಹಲಸಂಗಿ’ ಗೆಳೆಯರ ಬಳಗ ನಿರ್ಮಿಸಿದರು. ಮುಂದೆ ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆಯಲು ಧಾರವಾಡಕ್ಕೆ ಹೋದಾಗ ಶಂಭಾ, ಬೇಂದ್ರೆ, ಆಲೂರರ ಪರಿಚಯ ಮಾಡಿಕೊಂಡರು.

ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸುಮಾರು 35 ವರ್ಷ ಸೇವೆ ಸಲ್ಲಿಸಿದರು. ಸದಾ ಚಿಂತನಶೀಲರು, ಕ್ರಿಯಾಶೀಲ ವ್ಯಕ್ತಿತ್ವ. ವೈಚಾರಿಕ ಮನೋಧರ್ಮದವರು. ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಹಳ್ಳಿಗರಾಗಿ ಜನರೊಂದಿಗೆ ಹೊಂದಿಕೊಂಡು ಮಕ್ಕಳಿಗೆ ಜ್ಞಾನ ನೀಡಿದರು. ಶಾಲೆಗಳಲ್ಲಿ ನಾಡಹಬ್ಬ, ಗಣೇಶೋತ್ಸವಗಳನ್ನು ಆಚರಿಸಿ ಪ್ರಸಿದ್ಧ ಸಾಹಿತಿಗಳಿಂದ ಭಾಷಣ ಮಾಡಿಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದರು. ‘ಕಮತಿಗ’ ವಾರಪತ್ರಿಕೆ ಹೊರಡಿಸಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿದರು. ರಾಷ್ತ್ರೀಯ ಲಾವಣಿ ರಚಿಸಿ, ಹಾಡಿಸಿ, ಸ್ವಾತಂತ್ರ ಚಳುವಳಿಗೆ ಕುಮ್ಮಕ್ಕು ನೀಡಿದರೆಂದು ಬೇರೆ ಊರಿಗೆ ವರ್ಗವಾದರು. ಅಸ್ಪೃಶ್ಯತೆಯನ್ನು ಎತ್ತಿ ತೋರಿಸುವ ‘ಮರೆ ಮುಚ್ಚಕ’ ನಾಟಕ ರಚಿಸಿ, ಆಡಿಸಿ, ಸಮಾಜದ ಬಹಿಷ್ಕಾರಕ್ಕೆ ಒಳಗಾದರು. ಯಾವ ಊರಿಗೆ ವರ್ಗವಾಗಿ ಹೋದರೂ ಸಿಂಪಿ ಲಿಂಗಣ್ಣನವರು ತಮ್ಮ ಕೆಲಸವನ್ನು ನಿಲ್ಲಿಸಿದವರಲ್ಲ. ಓದುವುದು ಓದಿಸುವುದು, ಬರೆಯುವುದು, ಆಡಿಸುವುದು, ಅವರ ನಿತ್ಯಕರ್ಮದಲ್ಲಿ ಒಂದಾಗಿತ್ತು. ಶುಭ್ರ ಖಾದಿಧೋತರ, ಖಾದಿಶರ್ಟು, ಮೇಲೊಂದು ಕೋಟು, ತಲೆಯಮೇಲೆ ಗಾಂಧೀ ಟೋಪಿ ಇವು ಅವರ ಪರಿಶುದ್ಧಜೀವನವನ್ನೇ ಪ್ರತಿಬಿಂಬಿಸುತ್ತಿದ್ದವು.

ಇದನ್ನೂ ಓದಿ : S.V.Parameshwar Bhat Birth Anniversary: ‘ಬಡಕವಿಯ ಮನೆಗೆ ನುಗ್ಗಿದ ಕಳ್ಳ ತಾನೇ ಐದು ರೂಪಾಯಿ ಇಟ್ಟು ಹೋಗಿದ್ದ’

ಬಾಲ್ಯದ ಗೆಳೆಯರಾದ ಮಧುರಚೆನ್ನರ ಒಡನಾಟದಿಂದ ಸಿಂಪಿ ಲಿಂಗಣ್ಣನವರಲ್ಲಿಯೂ ಅಧ್ಯಾತ್ಮದ ಒಲವು ಮೂಡಿತು. ಆಧ್ಯಾತ್ಮದಲ್ಲಿ ಸಿಂಪಿಯವರು ತಮ್ಮ ಒಡನಾಡಿ ಗೆಳೆಯರಾದ ಮಧುರಚೆನ್ನರಿಂದ ಪ್ರೇರಿತರಾಗಿ ಅರವಿಂದರ ಆಶ್ರಮಕ್ಕೆ ಸಂದರ್ಶನವಿತ್ತು ‘ಪೂರ್ಣಯೋಗ’ ಪಥದಲ್ಲಿ ಸಾಮರಸ್ಯ ಪಡೆದರು. ಶ್ರೀ ಮಾತಾ ಅರವಿಂದರ ಪರಮಭಕ್ತರಾಗಿ ದಿವ್ಯಜೀವನ ಸಾಗಿಸಿದರು. ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಲಿಂಗಣ್ಣನವರು 1922ರಲ್ಲಿ ‘ಸಾವಿನ ಸಮಸ್ಯೆ’ ಎಂಬ ಏಕಾಂಕ ನಾಟಕ ಬರೆದು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದರು. ಜನಪದ ಸಾಹಿತ್ಯ, ಕಾವ್ಯ, ಪ್ರಬಂಧಗಳು, ಜೀವನ ಚರಿತ್ರೆ, ಸಣ್ಣಕಥೆ, ಕಾದಂಬರಿ, ಏಕಾಂಕ ನಾಟಕ, ಮಕ್ಕಳ ಹಾಗೂ ನವ್ಯ ಸಾಕ್ಷರ ಸಾಹಿತ್ಯ, ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯ ಹೀಗೆ ವಿಭಿನ್ನ ನೆಲೆಗಳ ಸಾಹಿತ್ಯದಲ್ಲಿ ಒಂದು ನೂರಕ್ಕೂ ಹೆಚ್ಚಿನ ಕೃತಿಗಳನ್ನು ಲಿಂಗಣ್ಣನವರು ನೀಡಿದ್ದಾರೆ. ಸಿಂಪಿಯವರು ಹಳ್ಳಿಯ ಬಾಳಿನ ಮುತ್ತುರತ್ನಗಳಿಂದ ಜನಪದ ಸಾಹಿತ್ಯದ ಹಾಡು, ಕಥೆ, ಗಾದೆ, ಒಗಟು, ನುಡಿಗಟ್ಟುಗಳನ್ನೂ ಅಪಾರವಾಗಿ ಸಂಗ್ರಹಿಸಿ, ಸಂಪಾದಿಸಿ ಕೊಟ್ಟುದಲ್ಲದೆ, ಆಯಾ ಸಂಗ್ರಹಗಳಿಗೆ ವಿಚಾರಾತ್ಮಕ, ವಿಶ್ಲೇಷಣಾತ್ಮಕ ಪ್ರಸ್ತಾವನೆಗಳನ್ನು ಬರೆದಿರುವರಲ್ಲದೆ ಅನೇಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಅವರು ಬರೆದ ಗದ್ಯ ಕೃತಿಗಳು ಆಧುನಿಕ ಗದ್ಯ ಸಾಹಿತ್ಯದಲ್ಲಿ ಮಹತ್ವದ್ದಾಗಿವೆ.

(ಮುಂದಿನ ಭಾಗವನ್ನು ನಿರೀಕ್ಷಿಸಿ)

ಇದನ್ನೂ ಓದಿ : H.R. Leelavathi: ‘ಥೂ, ಇವಳಿಗೆ ನಾಚಿಕೆ ಇಲ್ಲ ಮಾನ ಮರ್ಯಾದೆ ಇಲ್ಲ’ ಹೊರಗಿನವರು ಆಗ ಹೀಗೆಲ್ಲಾ ಪ್ರೋತ್ಸಾಹಿಸಿದರು

Published On - 2:31 pm, Thu, 10 February 22

ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ