Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ. 65.3ರಷ್ಟು ಕಾರ್ಮಿಕರಿಗೆ ಕೌಶಲ್ಯ ತರಬೇತಿ ಸಿಕ್ಕಿಲ್ಲ: ದೇಶದ ಉದ್ಯೋಗ ಕ್ಷೇತ್ರದ ಮುಂದಿರುವ ಸವಾಲು ಎತ್ತಿತೋರಿಸಿದ ಆರ್ಥಿಕ ಸಮೀಕ್ಷೆ

Pre-budget Economic survey report: ಭಾರತದಲ್ಲಿ ಶೇ. 65.3ರಷ್ಟು ಮಂದಿ ಕೆಲಸಗಾರರಿಗೆ ಅವಶ್ಯಕ ಕೌಶಲ್ಯಗಳ ತರಬೇತಿ ಸಿಕ್ಕಿಲ್ಲ ಎಂದು 2024-25ರ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ. ಅರ್ಧಕ್ಕಿಂತ ಹೆಚ್ಚು ಪದವೀಧರರು ಕಡಿಮೆ ಕೌಶಲ್ಯ ಬೇಡುವ ಕೆಲಸಗಳಲ್ಲಿ ತೊಡಗಿದ್ದಾರೆ. ಶೇ. 36ರಷ್ಟು ಪೋಸ್ಟ್ ಗ್ರಾಜುಯೇಟ್​ಗಳೂ ಕೂಡ ತಮಗೆ ಹೊಂದಿಕೆಯಾಗದ ಕೆಲಸಗಳನ್ನು ಮಾಡುತ್ತಿರುವುದು ಕಂಡು ಬಂದಿದೆ.

ಶೇ. 65.3ರಷ್ಟು ಕಾರ್ಮಿಕರಿಗೆ ಕೌಶಲ್ಯ ತರಬೇತಿ ಸಿಕ್ಕಿಲ್ಲ: ದೇಶದ ಉದ್ಯೋಗ ಕ್ಷೇತ್ರದ ಮುಂದಿರುವ ಸವಾಲು ಎತ್ತಿತೋರಿಸಿದ ಆರ್ಥಿಕ ಸಮೀಕ್ಷೆ
ಕೌಶಲ್ಯಾಭಿವೃದ್ದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2025 | 4:44 PM

ನವದೆಹಲಿ, ಜನವರಿ 31: ದೇಶದಲ್ಲಿ ಕೌಶಲ್ಯಾಭಿವೃದ್ದಿ ತೀವ್ರಗೊಳಿಸಲು ಸರ್ಕಾರ ಮಾಡುತ್ತಿರುವ ಹಲವು ಪ್ರಯತ್ನಗಳನ್ನು ಆರ್ಥಿಕ ಸಮೀಕ್ಷೆ ಮೆಚ್ಚಿಕೊಂಡಿದೆ. ಆದರೆ, ಈ ವಿಚಾರದಲ್ಲಿ ಇನ್ನೂ ಕೂಡ ಬಹಳಷ್ಟು ದೊಡ್ಡ ಸವಾಲು ಕಣ್ಮುಂದಿರುವುದನ್ನು ಅದು ಎತ್ತಿ ತೋರಿಸಿದೆ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ತಯಾರಾಗಿರುವ 2024-25ರ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಇದರಲ್ಲಿ ಉದ್ಯೋಗಸೃಷ್ಟಿಗೆ ಸರ್ಕಾರ ತೆಗೆದುಕೊಂಡಿರುವ ಹಲವು ಪ್ರಯತ್ನಗಳನ್ನು ಶ್ಲಾಘಿಸಲಾಗಿದೆ. ಆದರೆ, ಕೆಲಸಗಾರರಲ್ಲಿ ಅಗತ್ಯ ಕೌಶಲ್ಯಗಳ ಕೊರತೆ ಇರುವುದನ್ನೂ ಅದು ಗಮನಿಸಿದೆ.

ಆರ್ಥಿಕ ಸಮೀಕ್ಷೆಯ ವರದಿ ಪ್ರಕಾರ ಶೇ. 65.3ರಷ್ಟು ಕಾರ್ಮಿಕರಿಗೆ ಯಾವುದೇ ಅಧಿಕೃತ ಕೌಶಲ್ಯ ತರಬೇತಿ ಇಲ್ಲ. ಇದರಿಂದ ಅವರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ. ಇನ್ನು, ಶೇ. 53ರಷ್ಟು ಪದವೀಧರರು, ಮತ್ತು ಶೇ. 36ರಷ್ಟು ಸ್ನಾತಕೋತ್ತರ ಪದವೀಧರರು ಕಡಿಮೆ ಕೌಶಲ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ದೇಶದ ವಾಸ್ತವ ಉದ್ಯೋಗ ಚಿತ್ರಣವನ್ನು ಈ ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: 2023ರ ಬಜೆಟ್​ನಲ್ಲಿ ಆರಂಭಗೊಂಡಿದ್ದ ಈ ಮಹಿಳಾ ಸ್ಕೀಮ್ ಮಾರ್ಚ್ 31ಕ್ಕೆ ಅಂತ್ಯ; ಈ ಬಜೆಟ್​ನಲ್ಲಿ ವಿಸ್ತರಣೆಯಾಗುತ್ತಾ?

ಕೌಶಲ್ಯಾಭಿವೃದ್ಧಿ ಯೋಜನೆಗಳು ಮಹಿಳೆಯರನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ. ಮಕ್ಕಳ ಪಾಲನೆ, ಸಾಂಪ್ರದಾಯಿಕ ಕಟ್ಟುಪಾಡು ಇತ್ಯಾದಿ ಕಾರಣದಿಂದ ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಬರುವುದು ಮತ್ತು ಅಗತ್ಯ ಕೌಶಲ್ಯಗಳನ್ನು ಕಲಿಯುವುದು ಕಷ್ಟವಾಗಿದೆ ಎಂಬ ಸಂಗತಿಗಳನ್ನು ಎತ್ತಿ ತೋರಿಸಿರುವ ಈ ಆರ್ಥಿಕ ಸಮೀಕ್ಷೆಯು, ಹೆಚ್ಚು ಮಹಿಳಾ ಕೇಂದ್ರಿತ ಕೌಶಲ್ಯ ತರಬೇತಿ ಯೋಜನೆಗಳನ್ನು ಜಾರಿಗೊಳಿಸಬೇಕು, ಮತ್ತು ಉದ್ಯೋಗಸ್ಥಳದಲ್ಲಿ ಮಹಿಳೆಯರಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದೆ.

ಸರ್ಕಾರದ ಪ್ರಯತ್ನಗಳನ್ನು ಮೆಚ್ಚಿದ ಸಮೀಕ್ಷೆ…

ಉದ್ಯೋಗಸೃಷ್ಟಿಗೆ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುವುದನ್ನು ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಮೊದಲ ಬಾರಿಗೆ ಉದ್ಯೋಗ ಸೇರುವ ಯುವಕರಿಗೆ ಒಂದು ತಿಂಗಳ ಸಂಬಳವನ್ನು ಉಚಿತವಾಗಿ ನೀಡುವ ಯೋಜನೆ; ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಇಪಿಎಫ್​ಒ ಕೊಡುಗೆಗಳಿಗೆ ಸಬ್ಸಿಡಿ ನೀಡುವುದು; ಹೆಚ್ಚುವರಿ ನೇಮಕಾತಿ ಮಾಡುವ ಸಂಸ್ಥೆಗಳಿಗೆ ತಿಂಗಳಿಗೆ 3 ಸಾವಿರ ರೂ ಪರಿಹಾರವನ್ನು ಎರಡು ವರ್ಷ ಕಾಲ ನೀಡುವುದು ಹೀಗೆ ವಿವಿಧ ಸ್ಕೀಮ್​ಗಳು ಉದ್ಯೋಗಸೃಷ್ಟಿಗೆ ಸಹಾಯವಾಗಿವೆ ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಆರ್ಥಿಕ ಸಮೀಕ್ಷೆ ಮಂಡನೆ; ಶೇ. 6.8ರವರೆಗೆ ಜಿಡಿಪಿ ಹೆಚ್ಚಳ ನಿರೀಕ್ಷೆ; ಉದ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲು ಸಲಹೆ

ಪಿಎಂ ಇಂಟರ್ನ್​ಶಿಪ್ ಸ್ಕೀಮ್, ಐಟಿಐ ಉನ್ನತೀಕರಣ ಯೋಜನೆ, ಕಾರ್ಮಿಕ ಕಾನೂನುಗಳ ಸುಧಾರಣೆ ಇತ್ಯಾದಿಗಳಿಂದ ಭಾರತದಲ್ಲಿ ಉದ್ಯೋಗಸೃಷ್ಟಿಗೆ ಪೂರಕವಾದ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ಈ ಸಮೀಕ್ಷೆ ವಿಶ್ವಾಸ ವ್ಯಕ್ತಪಡಿಸಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್