Youth

Youth

Youth

24 ವರ್ಷದೊಳಗಿನ ಯುವಕರಿಗೆ ತಿಂಗಳಿಗೆ 5,000 ರೂ ಸಿಗುವ ಇಂಟರ್ನ್​ಶಿಪ್ ಸ್ಕೀಮ್; ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಯೋಜನೆ ಬಜೆಟ್​ನಲ್ಲಿ ಘೋಷಣೆ

Union Budget, Internship scheme: ಶಿಕ್ಷಣ ಮುಗಿಸಿದ ಯುವಕರಿಗೆ ದೇಶದ ಅಗ್ರಗಣ್ಯ ಕಂಪನಿಗಳಲ್ಲಿ ತರಬೇತಿ ಕೊಡಿಸಲು ಸರ್ಕಾರ ಇಂಟರ್ನ್​ಶಿಪ್ ಸ್ಕೀಮ್ ಅನ್ನು ಘೋಷಿಸಿದೆ. 21 ವರ್ಷದಿಂದ 24 ವರ್ಷದೊಳಗಿನ ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಪ್ರಾಯೋಗಿಕ ಕೆಲಸದ ಅನುಭವ ಸಿಗಲು ಅವಕಾಶ ಇದೆ. 12 ತಿಂಗಳ ಅವಧಿಯ ಈ ಇಂಟರ್ನ್​ಶಿಪ್ ಯೋಜನೆಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ 5,000 ರೂ ಭತ್ಯೆ ಸಿಗುತ್ತದೆ. ಹೆಚ್ಚಿನ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.

Union budget 2024: ಮುದ್ರಾ ಯೋಜನೆ ಅಡಿ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಸಣ್ಣ ಉದ್ದಿಮೆದಾರರಿಗೆ ಅನುಕೂಲ

MUDRA yojana funds: ಇಂದು ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್​ನಲ್ಲಿ ಮುದ್ರಾ ಯೋಜನೆಗೆ ಒತ್ತು ಕೊಡಲಾಗಿದೆ. ಎಂಎಸ್​ಎಂಇ ವಲಯಕ್ಕೆ ಉತ್ತೇಜನ ಕೊಡುವ ಈ ಸಾಲ ಯೋಜನೆಗೆ ಮೀಸಲಿರಿಸಿದ ಹಣವನ್ನು ಹೆಚ್ಚಿಸಲಾಗಿದೆ. ಯೋಜನೆ ಅಡಿ ಸಿಗುವ ಸಾಲದ ಮಿತಿಯನ್ನು 10 ಲಕ್ಷ ರೂನಿಂದ 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಸಾಕಣೆ ಇತ್ಯಾದಿ ಸಣ್ಣ ಪುಟ್ಟ ಉದ್ದಿಮೆಗಳಿಗೆ ಇದರಿಂದ ಬಹಳಷ್ಟು ಉಪಯೋಗವಾಗಲಿದೆ.

2023-24ರ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಸ್ಥಿತಿ ಬಗ್ಗೆ ಏನು ಚಿತ್ರಣ ಇದೆ? ಇಲ್ಲಿದೆ ವರದಿ ಹೈಲೈಟ್ಸ್

Economic Survey 2024 highlights: ಜುಲೈ 22ರಂದು ಮಂಡನೆಯಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ದೇಶದ ಆರ್ಥಿಕತೆಯ ಚಿತ್ರಣವನ್ನು ಅಂದಾಜು ಮಾಡಲಾಗಿದೆ. ಭಾರತದ ಆರ್ಥಿಕತೆಯ ಪ್ರಸಕ್ತ ಓಟವನ್ನು ಚೀನಾ 1980ರಿಂದ ಮಾಡಿದ ಸಾಧನೆಗೆ ಹೋಲಿಕೆ ಮಾಡಲಾಗಿದೆ. 2030ರವರೆಗೂ ಪ್ರತೀ ವರ್ಷ 78 ಲಕ್ಷ ಉದ್ಯೋಗಗಳ ಸೃಷ್ಟಿಯಾಗುವ ಅಗತ್ಯ ಇದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

Budget 2024: ಯುವಕರ ಬಾಳಿಗೆ ಭರವಸೆಯ ಬೆಳಕು ನೀಡಲು ಬಜೆಟ್​ನಲ್ಲಿ ನಿರೀಕ್ಷೆಗಳೇನು?

Youth expectations from Union Budget: ಜುಲೈ 23ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಲ್ಲಿ ಯುವಜನರ ಶಕ್ತಿ ಸಂಚಯಕ್ಕೆ ಪೂರಕವಾಗುವ ಯೋಜನೆಗಳ ನಿರೀಕ್ಷೆ ಇದೆ. ಯುವಶಕ್ತಿ ಪೂರ್ಣವಾಗಿ ಬಳಸಲು ಉದ್ಯೋಗಸೃಷ್ಟಿ ಸಾವಶ್ಯಕ ಇರಬೇಕು. ಬಜೆಟ್​ನಲ್ಲಿ ಉದ್ಯೋಗಸೃಷ್ಟಿಸಬಲ್ಲ ಕ್ಷೇತ್ರಗಳಿಗೆ ಒತ್ತು ಕೊಡಬಹುದಾ? ನವೋದ್ಯಮಗಳಿಗೆ ಉತ್ತೇಜನ ನೀಡುವ ಸ್ಟಾರ್ಟಪ್ ಸೀಡ್ ಫಂಡ್ ಸ್ಕೀಮ್​ಗಳಿಗೆ ಹೆಚ್ಚು ಹಣ ವಿನಿಯೋಗ ಸೇರಿದಂತೆ ಹಲವು ಕ್ರಮಗಳನ್ನು ನಿರೀಕ್ಷಿಸಲಾಗಿದೆ.

ತೆರಿಗೆ ಭಯೋತ್ಪಾದನೆ, ಅಧಿಕ ಆದಾಯ ತೆರಿಗೆ, ಕಡಿಮೆ ವೇತನ ಸಮಸ್ಯೆ ಎತ್ತಿಹಿಡಿದ ಮೋಹನ್​ದಾಸ್ ಪೈ

Mohandas Pai speaks: ತೆರಿಗೆ ಭಯೋತ್ಪಾದನೆ, ದುಬಾರಿ ಆದಾಯ ತೆರಿಗೆ ಮತ್ತು ಹೆಚ್ಚಿನ ಉದ್ಯೋಗಗಳಲ್ಲಿ ಕಡಿಮೆ ವೇತನ ಇತ್ಯಾದಿ ಸಮಸ್ಯೆಗಳ ಬಗ್ಗೆ ಮೋಹನ್ ದಾಸ್ ಪೈ ಮಾತನಾಡಿದ್ದಾರೆ. ಮಧ್ಯಮವರ್ಗದ ಜನರು ಅಸಮಾಧಾನಗೊಂಡಿದ್ದಾರೆ. ಅತಿಹೆಚ್ಚು ತೆರಿಗೆ ಕಟ್ಟುತ್ತಿರುವ ಅವರಿಗೆ ಟ್ಯಾಕ್ಸ್ ಡಿಡಕ್ಷನ್ ಇಲ್ಲ. ಈ ಬಜೆಟ್​ನಲ್ಲಿ ಒಂದಷ್ಟು ತೆರಿಗೆ ರಿಯಾಯಿತಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಎಂದು ಮಾಜಿ ಇನ್ಫೋಸಿಸ್ ಸಿಎಫ್​ಒ ಆದ ಅವರು ಹೇಳಿದ್ದಾರೆ.

ಮಿಲಿಟರಿ ಸೇವೆಯ ಅಗ್ನಿಪಥ್ ಸ್ಕೀಮ್ ನಿಲ್ಲಿಸುವ ಯೋಚನೆ ಸರ್ಕಾರಕ್ಕಿಲ್ಲ; ಬಜೆಟ್​ನಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ

Union Budget 2024: ಅಗ್ನಿಪಥ್ ಯೋಜನೆಯನ್ನು ಕೈಬಿಡಿ ಎನ್ನುವ ವಿಪಕ್ಷಗಳ ಕೂಗಿಗೆ ಸರ್ಕಾರ ಬಗ್ಗುವ ಸಾಧ್ಯತೆ ಇಲ್ಲ. ವರದಿ ಪ್ರಕಾರ ಮುಂಬರುವ ಬಜೆಟ್​ನಲ್ಲಿ ಅಗ್ನಿಪಥ್ ಸ್ಕೀಮ್​ನಲ್ಲಿ ತುಸು ಮಾರ್ಪಾಡು ತರಬಹುದು ಎನ್ನಲಾಗಿದೆ. 17.5 ವರ್ಷದಿಂದ 21 ವರ್ಷದೊಳಗಿನ ವಯಸ್ಸಿನ ಯುವಕರು ಮತ್ತು ಯುವತಿಯರನ್ನು ನಾಲ್ಕು ವರ್ಷ ಕಾಲ ಮಿಲಿಟರಿ ಸೇವೆಗೆ ಸೇರಿಸಿಕೊಳ್ಳುವುದು ಅಗ್ನಿಪಥ್ ಯೋಜನೆ.

ಯುವಜನರಿಗೆ 25,000 ರೂ ಟ್ಯಾಕ್ಸ್ ಡಿಡಕ್ಷನ್ ಕೊಟ್ಟು ರಿಟೈರ್ಮೆಂಟ್ ಹೂಡಿಕೆಗೆ ಉತ್ತೇಜಿಸಿ: ಮನವಿ

Union budget 2024 expectations: ಬಹಳಷ್ಟು ಜನರು ನಿವೃತ್ತರಾಗುವವರೆಗೂ ಮುಂದಿನ ಜೀವನದ ಅಂದಾಜು ಮಾಡಿರುವುದಿಲ್ಲ. ಎಷ್ಟು ಹಣ ಉಳಿಸಿಡಬೇಕೆಂಬ ಅರಿವೂ ಇರುವುದಿಲ್ಲ. ರಿಟೈರ್ಮೆಂಟ್ ಪ್ಲಾನಿಂಗ್ ಎಂಬುದು ಒಬ್ಬ ವ್ಯಕ್ತಿ ವೃತ್ತಿ ಜೀವನದ ಆರಂಭದಿಂದಲೇ ಯೋಜಿಸಬೇಕಾದ ಸಂಗತಿ. ತೆರಿಗೆ ರಿಯಾಯಿತಿ ಮೂಲಕ ಯುವಕರನ್ನು ಈ ನಿಟ್ಟಿನಲ್ಲಿ ಉತ್ತೇಜಿಸಬಹುದು ಎನ್ನುವ ಸಲಹೆ ಕೇಳಿಬರುತ್ತಿದೆ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್