10 ಸಾವಿರ ಮೆಡಿಕಲ್ ಸೀಟ್, 5 ಐಐಟಿಗಳಲ್ಲಿ 6500 ಹೊಸ ಸೀಟುಗಳು; ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕಿದ್ದೇನು?
ಮುಂದಿನ ಹಣಕಾಸು ವರ್ಷದಲ್ಲಿ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ 10,000 ಹೊಸ ಸೀಟುಗಳನ್ನು ಸರ್ಕಾರ ಸೇರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದರು. ಒಟ್ಟಾರೆಯಾಗಿ, ಐದು ವರ್ಷಗಳಲ್ಲಿ 75,000 ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸಲಾಗುವುದು. ಇದಲ್ಲದೆ, 2014ರ ನಂತರ ಸ್ಥಾಪಿಸಲಾದ 5 ಐಐಟಿಗಳಲ್ಲಿ 6,500 ಹೆಚ್ಚುವರಿ ಸೀಟುಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇಂದು 8ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ವರ್ಷದ ವೇಳೆಗೆ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ 10,000 ಹೆಚ್ಚುವರಿ ಸೀಟುಗಳನ್ನು ಸೇರಿಸಲಾಗುವುದು ಮತ್ತು ಮುಂದಿನ 5 ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸಲಾಗುವುದು ಎಂದು ಘೋಷಿಸಿದರು. 2025-26ರ ಬಜೆಟ್ ಮಂಡಿಸಿದ ಅವರು, 2024ರ ನಂತರ ಪ್ರಾರಂಭವಾದ 5 ಐಐಟಿಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಮೂಲಸೌಕರ್ಯಗಳನ್ನು ರಚಿಸಲಿದೆ ಎಂದು ಅವರು ಘೋಷಿಸಿದರು.
ವೈದ್ಯಕೀಯ ಶಿಕ್ಷಣದ ಸಾಮರ್ಥ್ಯವನ್ನು ವಿಸ್ತರಿಸುವ ಬಗ್ಗೆ ಹೇಳುವುದಾದರೆ, ಸರ್ಕಾರವು 10 ವರ್ಷಗಳಲ್ಲಿ ಸುಮಾರು 1.1 ಲಕ್ಷ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೇರಿಸಿದೆ. ಇದು ಶೇ. 130ರಷ್ಟು ಹೆಚ್ಚಳವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Finance Minister @nsitharaman Ji is presenting the Union Budget in Parliament. https://t.co/3CYGZzC7iO
— Narendra Modi (@narendramodi) February 1, 2025
ಅದೇ ರೀತಿ, 23 ಐಐಟಿಗಳು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ದಾಖಲಿಸಿವೆ. 2014ರಲ್ಲಿ 65,000ರಿಂದ 1.35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದು ಶೇಕಡಾ 100 ರಷ್ಟು ಜಿಗಿತವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಐಐಟಿ ಮತ್ತು ಐಐಎಸ್ಸಿಯಲ್ಲಿ ತಂತ್ರಜ್ಞಾನ ಸಂಶೋಧನೆಗಾಗಿ 10,000 ಫೆಲೋಶಿಪ್‌ಗಳನ್ನು ನೀಡಲಾಗುವುದು. ಐಐಟಿ ಪಾಟ್ನಾದಲ್ಲಿ ಕ್ಯಾಂಪಸ್ ಮತ್ತು ಹಾಸ್ಟೆಲ್ ವಿಸ್ತರಣೆಯನ್ನು ಸಹ ಮಾಡಲಾಗುವುದು. ನಿರ್ಮಲಾ ಸೀತಾರಾಮನ್ ಐಐಟಿ ಮತ್ತು ಐಐಎಸ್ಸಿಗಾಗಿ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಯೋಜನೆಯನ್ನು ಸಹ ಘೋಷಿಸಿದ್ದಾರೆ.
ಇದನ್ನೂ ಓದಿ: Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್ಲ್ಲಿ ಯಾವುದು ಅಗ್ಗ- ಯಾವುದು ದುಬಾರಿ?, ಇಲ್ಲಿದೆ ಪೂರ್ಣ ಪಟ್ಟಿ
ಶಿಕ್ಷಣದಲ್ಲಿ AI ಹೆಚ್ಚಾಗಿ ಪಾತ್ರದ ಬಗ್ಗೆ ಗಮನಹರಿಸಿದ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಗೆ ಅನುಗುಣವಾಗಿ ಸರ್ಕಾರವು 50,000 ಅಟಲ್ ಲ್ಯಾಬ್‌ಗಳನ್ನು, ಶಿಕ್ಷಣದಲ್ಲಿ AI ಗಾಗಿ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದು ಹೇಳಿದರು. ಸರ್ಕಾರವು ಸರ್ಕಾರಿ ಮಾಧ್ಯಮಿಕ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು (ATL) ಸ್ಥಾಪಿಸಲಿದೆ ಎಂದು ಘೋಷಿಸಿದರು.
ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲಾಗುವುದು. ಶಾಲೆಗಳು ಮತ್ತು ಉನ್ನತ ಶಿಕ್ಷಣಕ್ಕಾಗಿ ಭಾರತೀಯ ಭಾಷಾ ಪುಸ್ತಕಗಳ ಡಿಜಿಟಲ್ ರೂಪವನ್ನು ಒದಗಿಸಲು ಸರ್ಕಾರ ‘ಭಾರತೀಯ ಭಾಷಾ ಪುಷ್ಟಕ್’ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Sat, 1 February 25