ಶಾಲೆಗಳಲ್ಲಿ 50,000 ಹೊಸ ಅಟಲ್ ಟಿಂಕರಿಂಗ್ ಲ್ಯಾಬ್ಗಳ ಸ್ಥಾಪನೆ; ಮಕ್ಕಳಲ್ಲಿ ಪ್ರಯೋಗಶೀಲತೆ ಬೆಳೆಸಲು ಪ್ರಯತ್ನ
Atal Tinkering Labs: ಈ ಬಾರಿಯ ಬಜೆಟ್ನಲ್ಲಿ ಯುವಕರಲ್ಲಿ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲೇ ಪ್ರಯೋಗಶೀಲ ಮನೋಭಾವಕ್ಕೆ ಉತ್ತೇಜಿಸಲು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಯೂ ಒಂದು. ಈಗಾಗಲೇ ಎಂಟು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಎಟಿಎಲ್ಗಳಿವೆ. ಈಗ ಮತ್ತಷ್ಟು 50,000 ಲ್ಯಾಬ್ಗಳ ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.

ನವದೆಹಲಿ, ಫೆಬ್ರುವರಿ 1: ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವಂತೆ, ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಬೆಳೆಯುವ ಮನೋಭಾವ ದೊಡ್ಡವರಾದ ಮೇಲೂ ಇರುತ್ತದೆ ಎನ್ನುತ್ತಾರೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಪ್ರಯೋಗಶೀಲತೆಯ ಮನೋಭಾವ ತುಂಬುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಮಹತ್ವ ಕೊಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ಗಳಿಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ 8,706 ಅಟಲ್ ಟಿಂಕರಿಂಗ್ ಲ್ಯಾಬ್ಗಳು ದೇಶದ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಣೆ ಆಗುತ್ತಿವೆ. ಮುಂದಿನ 5 ವರ್ಷದಲ್ಲಿ ಮತ್ತಷ್ಟು 50,000 ಎಟಿಎಲ್ಗಳನ್ನು ಸ್ಥಾಪಿಸುವ ಗುರಿ ಇದೆ. ಈ ವಿಚಾರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಈ 50,000 ಅಟಲ್ ಟಿಂಕರಿಂಗ್ ಲ್ಯಾಬ್ಗಳು ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲೇ ಸ್ಥಾಪನೆಯಾಗುವ ಸಾಧ್ಯತೆ ಇದೆ. ಸ್ಟೆಮ್ ಎಂದು ಕರೆಯಲಾಗುವ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ಶಿಕ್ಷಣದಲ್ಲಿ ಮಕ್ಕಳ ಆಸಕ್ತಿ ಮೂಡಿಸಲು ಈ ಪ್ರಯೋಗಾಲಯಗಳ ಪ್ರಯೋಗ ಮಾಡಲಾಗುತ್ತಿದೆ.
ಇದನ್ನೂ ಓದಿ: Tax Rebate: ಗೊಂದಲ ಬೇಡ… ಟ್ಯಾಕ್ಸ್ ರಿಬೇಟ್ ಹೇಗೆ ಕೆಲಸ ಮಾಡುತ್ತೆ ನೋಡಿ… ಸ್ಲ್ಯಾಬ್ ದರಗಳು ಹೇಗೆ ಅನ್ವಯ ಆಗುತ್ತೆ ನೋಡಿ…
ಅಟಲ್ ಇನ್ನೋವೇಶನ್ ಮಿಷನ್ ಅಡಿ ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಸ್ಥಾಪಿಸಲಾಗುತ್ತಿದೆ. ಮೇಲೆ ಹೇಳಿದ ಸ್ಟೆಮ್ ವಿಷಯಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಯೋಚಿಸಲು ಮತ್ತು ಪರಿಹಾರ ಕಂಡು ಹಿಡಿಯಲು ಉತ್ತೇಜಿಸಲಾಗುತ್ತದೆ. ಪುಸ್ತಕದಲ್ಲಿ ಥಿಯರಿ ರೂಪದಲ್ಲಿ ಓದಿದ ವಿಚಾರಗಳನ್ನು ಪ್ರಾಯೋಗಿಕವಾಗಿ ನೋಡುವ ಅವಕಾಶ ಮಕ್ಕಳಿಗೆ ಸಿಗುತ್ತದೆ.
ಎಲೆಕ್ಟ್ರಾನಿಕ್ಸ್, 3ಡಿ ಪ್ರಿಂಟಿಂಗ್, ರೋಬೋಟಿಕ್ಸ್ ಇತ್ಯಾದಿ ವಿವಿಧ ಉತ್ಪನ್ನಗಳ ಡಿಐವೈ ಕಿಟ್ಗಳು ಈ ಲ್ಯಾಬ್ನಲ್ಲಿ ಇರುತ್ತವೆ. ಈ ಕಿಟ್ಗಳನ್ನು ಬಳಸಿ ಮಕ್ಕಳು ರೋಬೋ ಇತ್ಯಾದಿ ತಾವೇ ಒಂದು ಉತ್ಪನ್ನವನ್ನು ತಯಾರಿಸಬಹುದು.
ಕೋಡಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿಯ ಪರಿಕರಗಳು ಈ ಎಟಿಎಲ್ನಲ್ಲಿ ಇರುತ್ತವೆ. ಉನ್ನತ ಶಿಕ್ಷಣ ಮತ್ತು ಉದ್ಯಮ ವಲಯದಿಂದ ಪರಿಣಿತರು ಈ ಲ್ಯಾಬ್ಗಳಲ್ಲಿ ಮೆಂಟರ್ಶಿಪ್ ಪ್ರೋಗ್ರಾಮ್ಗಳನ್ನು ನಡೆಸಿಕೊಡುತ್ತಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನೇನು ಸಿಗುತ್ತೆ: ಮಾಹಿತಿ ಕೊಟ್ಟ ಬಿಜೆಪಿಗರು
ಅಟಲ್ ಇನ್ನೋವೇಶನ್ ಮಿಷನ್ ದೂರಗಾಮಿ ದೃಷ್ಟಿಯಿಂದ ಮಾಡಲಾಗುತ್ತಿರುವ ಯೋಜನೆಯಾಗಿದ್ದು, ಹಲವು ಆಯಾಮಗಳಲ್ಲಿ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಲು ಸಹಾಯ ಮಾಡಿಕೊಡುತ್ತದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Sat, 1 February 25