AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರಕ್ಕೆ ಗಿಫ್ಟ್ ನೀಡಿ, ಆಂಧ್ರವನ್ನು ಹೀನಾಯವಾಗಿ ನಿರ್ಲಕ್ಷ್ಯಿಸಿದ್ದೇಕೆ?; ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಬಜೆಟ್​ನಲ್ಲಿ ಮಧ್ಯಮವರ್ಗಗಳಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಹಾಗೇ, ಈ ವರ್ಷ ಚುನಾವಣೆಯನ್ನು ಎದುರಿಸಲಿರುವ ಬಿಹಾರಕ್ಕೆ ಈ ಬಾರಿ ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ಸಿಕ್ಕಿದೆ. ಆದರೆ, ಬಿಜೆಪಿಯ ಮಿತ್ರಪಕ್ಷವಾಗಿರುವ ಟಿಡಿಪಿ ಅಧಿಕಾರದಲ್ಲಿರುವ ಆಂಧ್ರಪ್ರದೇಶದಲ್ಲೂ ಚುನಾವಣೆ ನಡೆಯುತ್ತಿದ್ದರೂ ಆಂಧ್ರಕ್ಕೆ ಬಜೆಟ್​ನಲ್ಲಿ ಯಾವುದೇ ವಿಶೇಷ ಆದ್ಯತೆ ನೀಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಬಿಜೆಪಿಯನ್ನು ಲೇವಡಿ ಮಾಡಿದೆ.

ಬಿಹಾರಕ್ಕೆ ಗಿಫ್ಟ್ ನೀಡಿ, ಆಂಧ್ರವನ್ನು ಹೀನಾಯವಾಗಿ ನಿರ್ಲಕ್ಷ್ಯಿಸಿದ್ದೇಕೆ?; ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
Jairam Ramesh
ಸುಷ್ಮಾ ಚಕ್ರೆ
|

Updated on: Feb 01, 2025 | 4:59 PM

Share

ಹೈದರಾಬಾದ್: ಇಂದಿನ ಬಜೆಟ್​ನಲ್ಲಿ ಎನ್​ಡಿಎ ಬಣದಲ್ಲಿರುವ ಜೆಡಿಯು ಪಕ್ಷದ ನಿತೀಶ್ ಕುಮಾರ್ ಅಧಿಕಾರದಲ್ಲಿರುವ ಬಿಹಾರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ಈ ವರ್ಷದ ಅಂತ್ಯದಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತನ್ನ ಮಿತ್ರಪಕ್ಷವಾದ ಜೆಡಿಯುಗೆ ಬೆಂಬಲ ನೀಡಲು ಎನ್​ಡಿಎ ಬಿಹಾರಕ್ಕೆ ಬಜೆಟ್​ನಲ್ಲಿ ದೊಡ್ಡ ಗಿಫ್ಟ್​ಗಳನ್ನು ನೀಡಿದೆ. ಆದರೆ, ಇದರ ಜೊತೆಗೆ ಈ ವರ್ಷಾಂತ್ಯದಲ್ಲಿ ಆಂಧ್ರಪ್ರದೇಶದಲ್ಲೂ ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗಿದ್ದರೂ ತಮ್ಮ ಎನ್​ಡಿಎ ಬಣದ ಪಕ್ಷವಾದ ಆಂಧ್ರದ ಈಗಿನ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಯಾವುದೇ ಯೋಜನೆಯನ್ನು ಆಂಧ್ರಕ್ಕೆ ಘೋಷಿಸಿಲ್ಲ.

ಚುನಾವಣೆ ಹೊಸ್ತಿಲಲ್ಲಿರುವ ಬಿಹಾರಕ್ಕೆ ಬಜೆಟ್​ನಲ್ಲಿ ಆದ್ಯತೆ ನೀಡಿ, ಆಂಧ್ರಪ್ರದೇಶವನ್ನು ಹೀನಾಯವಾಗಿ ಕಡೆಗಣಿಸಿದ್ದಕ್ಕೆ ಬಿಜೆಪಿಗೆ ಕಾಂಗ್ರೆಸ್ ಲೇವಡಿ ಮಾಡಿದೆ. ಬಿಹಾರಕ್ಕೆ “ಒಳ್ಳೆಯ” ಗಿಫ್ಟ್ ಸಿಕ್ಕಿತು. ಆದರೆ 2025ರ ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶವನ್ನು “ತೀವ್ರವಾಗಿ ನಿರ್ಲಕ್ಷಿಸಲಾಗಿದೆ” ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಇಂದು ಮಧ್ಯಾಹ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ 77 ನಿಮಿಷಗಳ ಬಜೆಟ್ ಭಾಷಣದ ನಂತರ ಹೇಳಿದ್ದಾರೆ.

ಇದನ್ನೂ ಓದಿ: 10 ಸಾವಿರ ಮೆಡಿಕಲ್ ಸೀಟ್, 5 ಐಐಟಿಗಳಲ್ಲಿ 6500 ಹೊಸ ಸೀಟುಗಳು; ಬಜೆಟ್​ನಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕಿದ್ದೇನು?

ಬಿಹಾರದ ಆಡಳಿತಾರೂಢ ಜನತಾದಳ (ಯುನೈಟೆಡ್) ಮತ್ತು ಆಂಧ್ರದಲ್ಲಿ ಅಧಿಕಾರದಲ್ಲಿರುವ ತೆಲುಗು ದೇಶಂ ಪಕ್ಷವು ಪ್ರಮುಖ ಸದಸ್ಯರಾಗಿರುವ ಬಿಜೆಪಿ ನೇತೃತ್ವದ ಎನ್​ಡಿಎಯನ್ನು ಟೀಕಿಸಿದ ಜೈರಾಮ್ ರಮೇಶ್, ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣದಿಂದ ಬಿಹಾರಕ್ಕೆ ಬಂಪರ್ ಗಿಫ್ಟ್ ಸಿಕ್ಕಿರುವುದು ಸಹಜ. ಆದರೆ, ಎನ್‌ಡಿಎಯ ಇನ್ನೊಂದು ಆಧಾರಸ್ತಂಭವಾದ ಆಂಧ್ರಪ್ರದೇಶವನ್ನು ಏಕೆ ಇಷ್ಟು ಕ್ರೂರವಾಗಿ ನಿರ್ಲಕ್ಷಿಸಲಾಗಿದೆ?” ಎಂದು ಜೈರಾಮ್ ರಮೇಶ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಹಾರದ ಮಿಥಿಲಾ ಪ್ರದೇಶದಲ್ಲಿ 50000 ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯಲ್ಲಿ ಕೃಷಿ ಮಾಡಲು ಸಹಾಯ ಮಾಡುವ ಮೂಲಕ ರೈತರಿಗೆ ಪ್ರಯೋಜನವನ್ನು ನೀಡುವ ಪಶ್ಚಿಮ ಕೋಸಿ ಕಾಲುವೆ ERM ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹಾಗೇ, ಅವರು ಬಿಹಾರದಲ್ಲಿ ಗ್ರೀನ್​ಹೌಸ್ ವಿಮಾನ ನಿಲ್ದಾಣಗಳು, ಬಿಹ್ತಾದಲ್ಲಿ ಬ್ರೌನ್‌ಫೀಲ್ಡ್ ವಿಮಾನ ನಿಲ್ದಾಣ, ಪಾಟ್ನಾ ವಿಮಾನ ನಿಲ್ದಾಣದ ವಿಸ್ತರಣೆಯನ್ನು ಸಹ ಘೋಷಿಸಿದರು.

ಇದನ್ನೂ ಓದಿ: Budget Highlights: ಚುನಾವಣಾ ಹೊಸ್ತಿಲಲ್ಲಿರುವ ಬಿಹಾರಕ್ಕೆ ಬಜೆಟ್​ನಲ್ಲಿ ಬಂಪರ್ ಕೊಡುಗೆ

ಪೂರ್ವ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಚಟುವಟಿಕೆಗಳಿಗೆ ಬಲವಾದ ಪ್ರೋತ್ಸಾಹ ನೀಡಲು ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆಯೂ ಹಣಕಾಸು ಸಚಿವೆ ನಿರ್ಮಲಾ ಪ್ರಸ್ತಾಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ