Union budget 2025: ಮಧ್ಯಮ ವರ್ಗದ ಕುಟುಂಬಗಳು ಹೆಚ್ಚು ಖುಷಿಪಡುವ ಬಜೆಟ್ ಅನ್ನು ಆರ್ಥಿಕ ಸಚಿವೆ ಮಂಡಿಸಿದ್ದಾರೆ: ಆರ್ ಅಶೋಕ

Union budget 2025: ಮಧ್ಯಮ ವರ್ಗದ ಕುಟುಂಬಗಳು ಹೆಚ್ಚು ಖುಷಿಪಡುವ ಬಜೆಟ್ ಅನ್ನು ಆರ್ಥಿಕ ಸಚಿವೆ ಮಂಡಿಸಿದ್ದಾರೆ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 01, 2025 | 5:41 PM

Union budget 2025: ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳಲ್ಲಿ ಆರಂಭಿಸುತ್ತಿರುವುದು ಶ್ಲಾಘನೀಯ ಎಂದ ಅಶೋಕ ಇದರಿಂದ ಬಡವರಿಗೆ ಬಹಳ ಅನುಕೂಲವಾಗಲಿದೆ ಎಂದರು. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ 10,000 ಮೆಡಿಕಲ್ ಸೀಟಗಳನ್ನು ಹೆಚ್ಚಿಸುತ್ತಿರುವುದು ಮತ್ತು 36 ಜೀವ ರಕ್ಷಕ ಔಷಧಿಗಳ ಮೇಲೆ ಕಸ್ಟಮ್ಸ್ ಡ್ಯೂಟಿ ರದ್ದು ಮಾಡಿರುವುದು ಉತ್ತಮ ಕ್ರಮ ಎಂದು ಅಶೋಕ ಹೇಳಿದರು.

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವಾರು ತೆರಿಗೆ ವಿನಾಯಿತಿಗಳನ್ನು ಘೋಷಿಸುವ ಮೂಲಕ ಜನಪರ ಬಜೆಟ್-2025 ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು. ಯಾವುದೇ ತೆರಿಗೆಯನ್ನು ಹೆಚ್ಚಿಸದೆ ಅವರು ರೂ. 12 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ ಅಂದರೆ ತಿಂಗಳಿಗೆ ₹ 1 ಲಕ್ಷ ಸಂಬಳ ಪಡೆಯುವವರು ತೆರಿಗೆ ಕಟ್ಟಬೇಕಿಲ್ಲ ಎಂದು ಅಶೋಕ ಹೇಳಿದರು. ರಾಜ್ಯ ಸರ್ಕಾರ ಕೇವಲ ವೋಟು ಗಿಟ್ಟಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೂ ತೆರಿಗೆ ಹೆಚ್ಚಿಸಲ್ಲ ಅಂತ ಹೇಳಿ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲದರ ಮೇಲೆ ತೆರಿಗೆ ಹೆಚ್ಚು ಮಾಡಿದೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Union Budget 2025: ವಿಕ್ಸಿತ್ ಭಾರತ್ ಮಿಶನ್ ಅನ್ನು ಒಬ್ಬ ಸಾಮಾನ್ಯ ನಾಗರಿಕ ಮುನ್ನಡೆಸಲು ನೆರವಾಗುವ ಬಜೆಟ್ ಇದಾಗಿದೆ: ಪ್ರಧಾನಿ ನರೇಂದ್ರ ಮೋದಿ