Union Budget 2025: ವಿಕ್ಸಿತ್ ಭಾರತ್ ಮಿಶನ್ ಅನ್ನು ಒಬ್ಬ ಸಾಮಾನ್ಯ ನಾಗರಿಕ ಮುನ್ನಡೆಸಲು ನೆರವಾಗುವ ಬಜೆಟ್ ಇದಾಗಿದೆ: ಪ್ರಧಾನಿ ನರೇಂದ್ರ ಮೋದಿ
Union Budget 2025: ಆತ್ಮನಿರ್ಭರ ಭಾರತ ನಿರ್ಮಾಣದೆಡೆ ದಾಪುಗಾಲಿಡಲು ಪೂರಕವಾಗಿರುವ ಈ ಸಾಲಿನ ಬಜೆಟ್ ನಲ್ಲಿ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್, ಹಡಗು ನಿರ್ಮಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಎರಡು ಕ್ಷೇತ್ರಗಳಿಗೆ ಇನ್ಫ್ರಾಸ್ಟ್ರಕ್ಚರ್ ದರ್ಜೆ ನೀಡುವ ಮೂಲಕ ಉದ್ಯೋಗದ ವಿಪುಲ ಅವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರದ 140 ಕೋಟಿ ಜನರ ಉಳಿತಾಯ, ಹೂಡಿಕೆ, ಬಳಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಒಬ್ಬ ಸಾಮಾನ್ಯ ನಾಗರಿಕ ವಿಕ್ಸಿತ್ ಭಾರತ್ ಮಿಶನ್ ಅನ್ನು ಮುನ್ನಡೆಸುವ ಬಜೆಟ್ ಮಂಡಿಸಿರುವುದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಭಾರತವು ವಿಕಾಸಯಾತ್ರೆಯ ಮಹತ್ವಪೂರ್ಣ ಘಟ್ಟದಲ್ಲಿರುವಾಗ ನಿರ್ಮಲಾ ಸೀತಾರಾಮನ್ ಅವರು ಒಂದು ಅರ್ಥಪೂರ್ಣ ಬಜೆಟ್ ಮಂಡಿಸಿದ್ದು ಇದು ಸಮಸ್ತ ಭಾರತೀಯರ ಕನಸುಗಳನ್ನು ಸಾಕಾರಗೊಳಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಯುವಕರಿಗಾಗಿಯೇ ತಮ್ಮ ಸರ್ಕಾರ ಹಲವಾರು ಕ್ಷೇತ್ರಗಳನ್ನು ಆರಂಭಿಸಿದೆ ಮತ್ತು ದೇಶದ ಎಲ್ಲ ನಾಗರಿಕರು ರಾಷ್ಟ್ರದ ವಿಕಾಸಯಾತ್ರೆಯಲ್ಲಿ ಪಾಲುದಾರರಾಗಲು ಅವಕಾಶ ಕಲ್ಪಿಸುವ ಜನಸಾಮಾನ್ಯನ ಬಜೆಟ್ ಇದಾಗಿದೆ ಎಂದು ಪ್ರಧಾನಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Union Budget 2025: ಪ್ರವಾಸೋದ್ಯಮಕ್ಕೆ ಒತ್ತು, ಭಾರತದ ಪ್ರಮುಖ 50 ಪ್ರವಾಸಿ ತಾಣಗಳ ಅಭಿವೃದ್ಧಿ: ನಿರ್ಮಲಾ ಸೀತಾರಾಮನ್

ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ

ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ

ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್ ಅಧ್ಯಕ್ಷ

ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
