Union Budget 2025: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ: ಪ್ರಲ್ಹಾದ ಜೋಶಿ, ಸಚಿವ
Union Budget 2025: ಎಂಎಸ್ಎಂಇ ಗಳ ಕ್ರೆಡಿಟ್ ವ್ಯಾಪ್ತಿಯನ್ನು ಹೆಚ್ಚು ಮಾಡಿರುವುದು ಅವುಗಳ ಸ್ಕೋಪ್ ಹೆಚ್ಚಿಸಲಿದೆ ಎಂದ ಸಚಿವ ಪ್ರಲ್ಹಾದ್ ಜೋಶಿ, ಸ್ಟಾರ್ಟ್ ಅಪ್ ಕಂಪನಿಗಳಿಗೆ ಫಂಡ್ ಆಫ್ ಫಂಡ್ಸ್ ಅಂತ ₹ 10,000 ಕೋಟಿಯನ್ನು ತೆಗೆದಿರಿಸಿರುವುದು ಯುವಕರಿಗೆ ಹೆಚ್ಚು ಪ್ರಯೋಜನವಾಗಲಿದೆ, ಮತ್ತು ಫುಡ್ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡುವವರಿಗೆ ಆರೋಗ್ಯ ವಿಮೆಯ ಸವಲತ್ತು ವಿಸ್ತರಿಸಿರುವುದು ಅಭಿನಂದನೀಯ ಎಂದರು.
ದೆಹಲಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ನಡೆಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ 2025 ಅನ್ನು ಶ್ಲಾಘಿಸಿದರು. ನಿರ್ಮಲಾ ಸೀತಾರಾಮನ್ ಅವರು ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ, ಸತತವಾಗಿ 8 ಬಜೆಟ್ ಗಳನ್ನು ಮಂಡಿಸಿದ ಪ್ರಥಮ ಹಣಕಾಸು ಸಚಿವರೆಂಬ ಖ್ಯಾತಿ ಅವರದ್ದು ಎಂದು ಜೋಶಿ ಹೇಳಿದರು. ವಾರ್ಷಿಕ ಆದಾಯ ₹ 12 ಲಕ್ಷ ಇರುವವರನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸದಿರುವುದು ಬಜೆಟ್ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದ ಜೋಶಿ, ರೈತರು, ಕೂಲಿ ಕಾರ್ಮಿಕರು, ಸಣ್ಣ ಉದ್ದಿಮೆದಾರರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮುಂತಾದ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ ಬಜೆಟ್ ಅನ್ನು ಸಚಿವೆ ಮಂಡಿಸಿದ್ದಾರೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Union Budget 2025: ಬಜೆಟ್ ಪ್ರಕಾರ ಗ್ರಾಹಕರಿಗೆ ಯಾವುದು ದುಬಾರಿಯಾಗಲಿದೆ?