Union Budget 2025: ಬಜೆಟ್ ಪ್ರಕಾರ ಗ್ರಾಹಕರಿಗೆ ಯಾವುದು ದುಬಾರಿಯಾಗಲಿದೆ?

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್ ಮಂಡಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೋದಿ 3.0 ಸರ್ಕಾರದ ಎರಡನೇ ಪೂರ್ಣ ಬಜೆಟ್ ಇದಾಗಿದೆ. ಈ ವರ್ಷದ ಬಜೆಟ್ ಕೃಷಿ, ಉತ್ಪಾದನೆ, ಉದ್ಯೋಗ, ಎಂಎಸ್‌ಎಂಇಗಳು, ಗ್ರಾಮೀಣ ಪ್ರದೇಶಗಳ ಉನ್ನತಿ, ನಾವೀನ್ಯತೆ ಸೇರಿದಂತೆ 10 ವಿಶಾಲ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಬಾರಿಯ ಬಜೆಟ್​ನ ಅನುಸಾರ ಯಾವೆಲ್ಲ ವಸ್ತುಗಳು, ಸೌಲಭ್ಯಗಳು ದುಬಾರಿಯಾಗಲಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Union Budget 2025: ಬಜೆಟ್ ಪ್ರಕಾರ ಗ್ರಾಹಕರಿಗೆ ಯಾವುದು ದುಬಾರಿಯಾಗಲಿದೆ?
Flat Panel Display
Follow us
ಸುಷ್ಮಾ ಚಕ್ರೆ
|

Updated on:Feb 01, 2025 | 1:23 PM

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೋದಿ 3.0 ಸರ್ಕಾರದ 2ನೇ ಪೂರ್ಣ ಬಜೆಟ್ ಇದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-2026ರ ಆರ್ಥಿಕ ವರ್ಷಕ್ಕೆ ತಮ್ಮ ಸತತ 8ನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಈ ಬಜೆಟ್ ಮಂಡನೆ ಬಳಿಕ ಗ್ರಾಹಕರಿಗೆ ದುಬಾರಿಯಾಗಲಿರುವ ವಸ್ತುಗಳು ಇಲ್ಲಿವೆ.

ಯಾವುದು ದುಬಾರಿ?:

– ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ

– ಕೈಯಲ್ಲಿ ಹೆಣೆದ ಬಟ್ಟೆಗಳು

– ತಂತ್ರಜ್ಞಾನ ಕ್ಷೇತ್ರದ ಸರಕುಗಳು

– ಮೊಬೈಲ್ ರೀಚಾರ್ಜ್ ಮತ್ತು ಇಂಟರ್ನೆಟ್ ಸೇವೆಗಳು

-ವಿಮಾನ ಟಿಕೆಟ್​ ದರ

-ಹೈಟೆಕ್​ ಎಲೆಕ್ಟ್ರಾನಿಕ್ಸ್

– ಆಮದು ಕಾರುಗಳು

-ತಂಬಾಕು ಮತ್ತು ಸಿಗರೇಟ್

ಇದನ್ನೂ ಓದಿ: Budget 2025: ಎಂಎಸ್​ಎಂಇಗಳಿಗೆ ಕ್ರೆಡಿಟ್ ವ್ಯಾಪ್ತಿ ಹೆಚ್ಚಳ; ಬಜೆಟ್​ನಲ್ಲಿ ಘೋಷಣೆ

ಯಾವುದು ಅಗ್ಗ?:

– ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳು.

– ಕೋಬಾಲ್ಟ್ ಉತ್ಪನ್ನಗಳು

– ಎಲ್‌ಇಡಿ ಟಿವಿ

– ಎಲೆಕ್ಟ್ರಿಕ್ ವಾಹನಗಳು

– ಕರಕುಶಲ ವಸ್ತುಗಳು.

– ಸ್ವದೇಶಿ ಬಟ್ಟೆಗಳು

– ಚರ್ಮದ ಶೂ, ಬೆಲ್ಟ್

– ಫ್ರೋಜನ್ ಫಿಶ್

– ಮೊಬೈಲ್

– ಚರ್ಮದ ಉತ್ಪನ್ನಗಳು

ನಿರ್ಮಲಾ ಸೀತಾರಾಮನ್ ಸತತ ಎಂಟು ಬಾರಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಏಕೈಕ ಹಣಕಾಸು ಸಚಿವೆ ಎಂಬ ಸಾಧನೆಯನ್ನು ದಾಖಲಿಸಿದ್ದಾರೆ. ಜುಲೈ 2019ರಲ್ಲಿ ತಮ್ಮ ಮೊದಲ ಬಜೆಟ್ ಮಂಡನೆಯಲ್ಲಿ ಹಳೆಯ ಸಂಪ್ರದಾಯವನ್ನು ತೊರೆದು ಸಾಂಪ್ರದಾಯಿಕ ‘ಬಹಿ ಖಾತಾ’ವನ್ನು ಆರಿಸಿಕೊಂಡ ಭಾರತದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಕೂಡ ಕಳೆದ ವರ್ಷ ಮಾಡಿದಂತೆ ಟ್ಯಾಬ್ಲೆಟ್ ಮೂಲಕ ಕೇಂದ್ರ ಬಜೆಟ್ 2025 ಅನ್ನು ಕಾಗದರಹಿತವಾಗಿ ಮಂಡಿಸಿದ್ದಾರೆ.

ಇದನ್ನೂ ಓದಿ: Income Tax: ಬಜೆಟ್​ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ

2014ರಿಂದ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಇದು ಸತತ 14ನೇ ಬಜೆಟ್ ಆಗಿದೆ. ಇದರಲ್ಲಿ 2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಮಂಡಿಸಲಾದ 2 ಮಧ್ಯಂತರ ಬಜೆಟ್ ಕೂಡ ಸೇರಿವೆ.

ಇಂದು ಮಂಡನೆಯಾದ 2025-26ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಮಹಿಳಾ ಉದ್ಯಮಿಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ 2 ಕೋಟಿ ರೂ.ಗಳನ್ನು ನೀಡುವ ಯೋಜನೆಯನ್ನು ಘೋಷಿಸಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಪ್ರಾರಂಭವಾಯಿತು. ಈ ಅಧಿವೇಶನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗ ಜನವರಿ 31ರಿಂದ ಫೆಬ್ರವರಿ 13 ರವರೆಗೆ ನಡೆಯುತ್ತದೆ. ಎರಡನೆಯದು ಮಾರ್ಚ್ 10ರಂದು ಪ್ರಾರಂಭವಾಗಿ ಏಪ್ರಿಲ್ 4ರಂದು ಕೊನೆಗೊಳ್ಳುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Sat, 1 February 25

ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ