AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಎಷ್ಟು ವೇತನ ಇದ್ದರೆ ಎಷ್ಟು ಟ್ಯಾಕ್ಸ್? ಈಗೆಷ್ಟು ತೆರಿಗೆ ವಿನಾಯಿತಿ ಸಿಕ್ತು? ಇಲ್ಲಿದೆ ವಿವರ

ಮಧ್ಯಮ ವರ್ಗದವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025 ರ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದ್ದಾರೆ. ವೇತನ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ ಹೆಚ್ಚಿಸುವ ಮೂಲಕ ದೊಡ್ಡ ಉಡುಗೊರೆ ನೀಡಿದ್ದಾರೆ. ಈಗ ದೇಶದಲ್ಲಿ 12 ಲಕ್ಷ ರೂ.ವರೆಗಿನ ವೇತನಕ್ಕೆ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ಅಲ್ಲದೆ, 75,000 ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಲಾಭವೂ ಸಿಗಲಿದೆ. ಹೊಸ ತೆರಿಗೆ ವ್ಯವಸ್ಥೆಯಿಂದ ವೇತನ ವರ್ಗಕ್ಕೆ ಎಷ್ಟು ಪ್ರಯೋಜನವಾಗಲಿದೆ ಎಂಬ ಹಣಕಾಸು ಲೆಕ್ಕಾಚಾರ ಇಲ್ಲಿದೆ.

ನಿಮಗೆ ಎಷ್ಟು ವೇತನ ಇದ್ದರೆ ಎಷ್ಟು ಟ್ಯಾಕ್ಸ್? ಈಗೆಷ್ಟು ತೆರಿಗೆ ವಿನಾಯಿತಿ ಸಿಕ್ತು? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on:Feb 01, 2025 | 4:55 PM

Share

ನವದೆಹಲಿ, ಫೆಬ್ರವರಿ 1: ಮಧ್ಯಮ ವರ್ಗದವರು, ವೇತನ ವರ್ಗದವರು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿಜವಾಗಿಸಿದ್ದಾರೆ. 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶವನ್ನು ಅವರು 2025ರ ಬಜೆಟ್​​ನಲ್ಲಿ ಒದಗಿಸಿಕೊಟ್ಟಿದ್ದಾರೆ.

ಇಷ್ಟೇ ಅಲ್ಲದೆ, ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ ಹೊಸ ಕಾನೂನು ರೂಪಿಸುವ ಘೋಷಣೆಯನ್ನೂ ಮಾಡಿದ್ದಾರೆ. ಮುಂದಿನ ವಾರ ಹೊಸ ಮಸೂದೆ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೀಗ 12 ಲಕ್ಷ ರೂಪಾಯಿ ವರೆಗಿನ ಆದಾಯವನ್ನು ಈಗ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವುದರಿಂದ ಎಷ್ಟು ವೇತನ ಇದ್ದವರಿಗೆ ಎಷ್ಟು ತೆರಿಗೆ ವಿನಾಯಿತಿ ದೊರೆಯಲಿದೆ, ದುಡ್ಡು ಉಳಿಯಲಿದೆ ಎಂಬ ವಿವರ ಇಲ್ಲಿದೆ.

ನಿಮಗೆ ಇಷ್ಟು ವೇತನ ಇದ್ದರೆ ತೆರಿಗೆ ಇಲ್ಲ!

ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ ವಾರ್ಷಿಕ 12 ಲಕ್ಷ ರೂಪಾಯಿ ವರೆಗೆ ಆದಾಯ ಇದ್ದರೆ ತೆರಿಗೆ ವಿನಾಯಿತಿ ಪಡೆಯಬಹುದು. ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ 8 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ 30,000 ರೂ. ಉಳಿತಾಯವಾಗಲಿದೆ ಎಂದು ಬಜೆಟ್​​​ನಲ್ಲಿ ತಿಳಿಸಲಾಗಿದೆ. 9 ಲಕ್ಷ ರೂಪಾಯಿ ಆದಾಯ ಇರುವವರಿಗೆ 40,000 ರೂ. ಮತ್ತು 10 ಲಕ್ಷ ರೂ. ಆದಾಯ ಇರುವವರಿಗೆ 50,000 ರೂಪಾಯಿ ಉಳಿತಾಯವಾಗಲಿದೆ

ಇದನ್ನೂ ಓದಿ: ಆದಾಯ ತೆರಿಗೆಗೆ ಹೊಸ ಕಾನೂನು, ಮುಂದಿನ ವಾರ ಮಸೂದೆ ಮಂಡನೆ; ನಿರ್ಮಲಾ ಸೀತಾರಾಮನ್ ಘೋಷಣೆ

ತೆರಿಗೆ ಪಾವತಿಯಲ್ಲಿ ಎಷ್ಟು ಉಳಿತಾಯವಾಯ್ತು? ಇಲ್ಲಿದೆ ಲೆಕ್ಕಾಚಾರ

ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ, 11 ಲಕ್ಷ ರೂಪಾಯಿ ಆದಾಯ ಇದ್ದವರಿಗೆ 65,000 ರೂ. ಉಳಿತಾಯವಾಗಲಿದೆ. 12 ಲಕ್ಷ ರೂ. ಆದಾಯ ಇದ್ದರೆ 80,000 ರೂ. ಉಳಿತಾಯವಾಗಲಿದೆ. 16 ಲಕ್ಷ ರೂ. ಆದಾಯ ಇದ್ದರೆ 50,000 ರೂ. ಉಳಿತಾಯವಾಗಲಿದೆ. 20 ಲಕ್ಷ ರೂ. ಆದಾಯ ಇದ್ದರೆ 50,000 ರೂ. ಉಳಿತಾಯವಾಗಲಿದೆ.

ಆದಾಯ ಉಳಿತಾಯ
8 ಲಕ್ಷ ರೂ. ವರೆಗೆ 30,000 ರೂ.
9 ಲಕ್ಷ ರೂ. 40,000 ರೂ.
10 ಲಕ್ಷ ರೂ. 50,000 ರೂ.
11 ಲಕ್ಷ ರೂ. 65,000 ರೂ.
12 ಲಕ್ಷ ರೂ. 80,000 ರೂ.
16 ಲಕ್ಷ ರೂ. 50,000 ರೂ.
20 ಲಕ್ಷ ರೂ. 90,000 ರೂ.
24 ಲಕ್ಷ ರೂ. 1.10 ಲಕ್ಷ ರೂ.
50 ಲಕ್ಷ ರೂ. 1.10 ಲಕ್ಷ ರೂ.

ಹೊಸ ಆದಾಯ ತೆರಿಗೆ ವ್ಯವಸ್ಥೆಯ ಪ್ರಕಾರ, 24 ಲಕ್ಷ ರೂ. ಆದಾಯ ಇದ್ದರೆ 1.10 ಲಕ್ಷ ರೂ. ತೆರಿಗೆ ಉಳಿತಾಯವಾಗಲಿದೆ. 50 ಲಕ್ಷ ರೂ. ಆದಾಯ ಇದ್ದರೆ 1.10 ಲಕ್ಷ ರೂ. ತೆರಿಗೆ ಉಳಿತಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ತಿಳಿಸಿದ್ದಾರೆ.

ಬಜೆಟ್ ಸಂಬಂಧಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Sat, 1 February 25

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ