Income Tax: ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ
Income tax new slab rates announced: 2025ರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಧ್ಯಮವರ್ಗದವರಿಗೆ ರಿಲೀಫ್ ನೀಡಿದ್ದಾರೆ. 12 ಲಕ್ಷ ರೂ ಒಳಗಿನ ವಾರ್ಷಿಕ ಆದಾಯ ಪಡೆಯುತ್ತಿರುವವರು ಆದಾಯ ತೆರಿಗೆ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ನಾಲ್ಕು ಲಕ್ಷ ರೂವರೆಗಿನ ಆದಾಯಕ್ಕೆ ವಿನಾಯಿತಿ ನೀಡಲಾಗಿದೆ. 24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಗರಿಷ್ಠ ಶೇ. 30ರಷ್ಟು ತೆರಿಗೆ ಹಾಕಲಾಗುತ್ತದೆ.

ನವದೆಹಲಿ, ಫೆಬ್ರುವರಿ 1: ನಿರೀಕ್ಷೆಯಂತೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್ನಲ್ಲಿ (Union Budget 2025) ಮಧ್ಯಮವರ್ಗದವರ ಬಹುಬೇಡಿಕೆಯನ್ನು ನೆರವೇರಿಸಿದ್ದಾರೆ. ಆದಾಯ ತೆರಿಗೆಯ ಹೊರೆಯನ್ನು ಇಳಿಸಿದ್ದಾರೆ. ಅದರಂತೆ 12 ಲಕ್ಷ ರೂವರೆಗಿನ ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. 4 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಹೊಸ ಟ್ಯಾಕ್ಸ್ ಸ್ಲಾಬ್ ದರಗಳು
- 0-4 ಲಕ್ಷ ರೂ: ತೆರಿಗೆ ಇಲ್ಲ
- 4-8 ಲಕ್ಷ ರೂ: ಶೇ. 5 ತೆರಿಗೆ
- 8-12 ಲಕ್ಷ ರೂ: ಶೇ. 10 ತೆರಿಗೆ
- 12-16 ಲಕ್ಷ ರೂ: ಶೇ. 15 ತೆರಿಗೆ
- 16-20 ಲಕ್ಷ ರೂ: ಶೇ. 20 ತೆರಿಗೆ
- 20-24 ಲಕ್ಷ ರೂ: ಶೇ. 25 ತೆರಿಗೆ
- 24 ಲಕ್ಷ ರೂ ಮೇಲ್ಪಟ್ಟು: ಶೇ. 30 ತೆರಿಗೆ
ಇದನ್ನೂ ಓದಿ: Budget PDF Download: ಕೇಂದ್ರ ಬಜೆಟ್ 2025: ಪಿಡಿಎಫ್ ಪ್ರತಿ ಡೌನ್ಲೋಡ್ ಮಾಡಿ
ಇಲ್ಲಿ ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ನೀಡಲಾಗುತ್ತದೆ. ಇದನ್ನು ಈ ಬಾರಿ ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ನೀಡಲಾಗುತ್ತಿತ್ತು. ಈಗ ಈ ಪ್ರಕಾರ 12 ಲಕ್ಷ ರುವರೆಗಿನ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಆದಾಯದಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಅಂದರೆ, ಠೇವಣಿಗಳಿಂದ ವರ್ಷಕ್ಕೆ ಸಿಗುವ 1 ಲಕ್ಷ ರೂವರೆಗಿನ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ವಿನಾಯಿತಿ ಸಿಗುತ್ತದೆ.
ಬಾಡಿಗೆಗಳಿಂದ ಬರುವ ಆದಾಯಕ್ಕೆ ವಾರ್ಷಿಕ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂನಿಂದ 6 ಲಕ್ಷ ರೂಗೆ ಏರಿಸಲಾಗಿದೆ.
ಬಜೆಟ್ ಹೈಲೈಟ್ಸ್ಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Sat, 1 February 25