Union Budget 2026: ಜನವರಿ 28ರಿಂದ ಸಂಸತ್ ಅಧಿವೇಶನ ಆರಂಭ; ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್ ಮಂಡನೆ
Union Budget Session 2026: ಈ ವರ್ಷದ ಸಂಸತ್ ಬಜೆಟ್ ಅಧಿವೇಶನ ಜನವರಿ 28ರಿಂದ ಆರಂಭವಾಗಲಿದೆ. 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾಗುವುದು. ಇದಕ್ಕೂ ಮೊದಲು, ಆರ್ಥಿಕ ಸಮೀಕ್ಷೆಯ ವರದಿಯನ್ನು ಜನವರಿ 29ರಂದು ಬಿಡುಗಡೆ ಮಾಡಲಾಗುತ್ತದೆ. ಈ ಅಧಿವೇಶನದಲ್ಲಿ ಬಜೆಟ್ ಚರ್ಚೆಗಳು, ಸಬ್ಸಿಡಿ ಬೇಡಿಕೆಗಳು ಮತ್ತು ಪ್ರಮುಖ ಆರ್ಥಿಕ ನೀತಿಗಳ ಕುರಿತು ವಿವರವಾದ ಚರ್ಚೆಗಳು ನಡೆಯಲಿವೆ. ಸಾರ್ವಜನಿಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ತೆರಿಗೆದಾರರು ಎಲ್ಲರೂ ಈ ಬಜೆಟ್ ಬಗ್ಗೆ ಬಹಳ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
- Sushma Chakre
- Updated on: Jan 9, 2026
- 9:10 pm
ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್ನಲ್ಲಿ ಘೋಷಣೆ, ಏ. 1ರಿಂದ ಜಾರಿ
New Income Tax law come into effect from 2026 April 1st: 1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯನ್ನು ರದ್ದುಗೊಳಿಸಿ ಹೊಸ ಆದಾಯ ತೆರಿಗೆ ಕಾಯ್ದೆ ರೂಪಿಸಲಾಗಿದೆ. ಮುಂಬರುವ ಬಜೆಟ್ನಲ್ಲಿ ಇದನ್ನು ಘೋಷಿಸಲಾಗುತ್ತಿದ್ದು, ಏಪ್ರಿಲ್ 1ರಂದು ಜಾರಿಗೆ ತರಲಾಗುತ್ತದೆ. ಈ ಕಾಯ್ದೆಗೆ ಸಂಸತ್ತಿನ ಅನುಮೋದನೆ ಇದೆ. ಹೊಸ ಕಾಯ್ದೆಯಲ್ಲಿ ನಿಯಮಗಳು ಸರಳಗೊಂಡಿವೆ.
- Vijaya Sarathy SN
- Updated on: Jan 7, 2026
- 5:45 pm
Railway stocks: ಬಜೆಟ್ಗೆ ಮುಂಚೆ ರೈಲ್ವೆ ಕ್ಷೇತ್ರದ ಯಾವ ಷೇರುಗಳನ್ನು ಖರೀದಿಸಬಹುದು?
Railway stocks to Buy Ahead of Budget 2026: ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದ್ದು, ಈ ಬಾರಿ ರೈಲ್ವೆ ಕ್ಷೇತ್ರದ ಮತ್ತಷ್ಟು ಬಲವರ್ಧನೆಗೆ ಗಮನ ಹರಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ಇಲಾಖೆಯ ರೈಲು ಪ್ರಯಾಣ ದರವನ್ನು ಏರಿಸಿದೆ. ಇದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಬಜೆಟ್ನಲ್ಲಿ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಬರುವ ನಿರೀಕ್ಷೆ ಇದೆ. ಹೀಗಾಗಿ, ರೈಲ್ವೆ ಸ್ಟಾಕ್ಗಳಿಗೆ ಬೇಡಿಕೆ ಹೆಚ್ಚಿದೆ.
- Vijaya Sarathy SN
- Updated on: Jan 6, 2026
- 1:17 pm
ಫೆಬ್ರುವರಿ 1, ಭಾನುವಾರ; ಅಂದೇ ಕೇಂದ್ರ ಬಜೆಟ್ ಮಂಡನೆ ಆಗುತ್ತಾ?
Union Budget 2026-27 to be presented on Feb 1st, Sunday: ಬಜೆಟ್ ಮಂಡನೆಯ ದಿನವಾದ ಫೆಬ್ರುವರಿ 1, ಸಮೀಪಿಸುತ್ತಿದೆ. ಅಂದು ವಾರಾಂತ್ಯ, ಅದರಲ್ಲೂ ಭಾನುವಾರವಾದ್ದರಿಂದ ಬೇರೆ ದಿನ ಬಜೆಟ್ ಮಂಡಿಸಬಹುದಾ ಎನ್ನುವ ಪ್ರಶ್ನೆ ಎದ್ದಿದೆ. ಆದರೆ, ಭಾನುವಾರವಾಗಲೀ, ಯಾವುದೇ ದಿನವಾಗಲೀ ಬಜೆಟ್ ಮಂಡನೆಯ ದಿನ ಬದಲಾಗುವುದಿಲ್ಲ ಎಂದು ಮೂಲಗಳು ಹೇಳುತ್ತಿವೆ. ಫೆಬ್ರುವರಿ 1, ಭಾನುವಾರದಂದೇ 2026-27ರ ಬಜೆಟ್ ಮಂಡನೆ ಆಗಲಿದೆ.
- Vijaya Sarathy SN
- Updated on: Jan 2, 2026
- 6:22 pm