Budget Highlights: ಚುನಾವಣಾ ಹೊಸ್ತಿಲಲ್ಲಿರುವ ಬಿಹಾರಕ್ಕೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಮಧ್ಯಮವರ್ಗದ ಜನರಿಗೆ ಹಲವು ಯೋಜನೆಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ ಈ ಬಾರಿ ಚುನಾವಣೆ ಎದುರಿಸಲಿರುವ ಬಿಹಾರ ರಾಜ್ಯಕ್ಕೂ ಬಂಪರ್ ಕೊಡುಗೆ ನೀಡಿದೆ. ಚುನಾವಣಾ ವರ್ಷವಾದ ಈ ಬಾರಿ ನಿರ್ಮಲಾ ಸೀತಾರಾಮನ್ ಅವರ 2025ರ ಬಜೆಟ್‌ನಲ್ಲಿ ಬಿಹಾರಕ್ಕೆ ಸಿಕ್ಕಿದ್ದೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ: ಈ ವರ್ಷ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಲವು ಕೊಡುಗೆಗಳನ್ನು ನೀಡಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಅಧಿಕಾರ ಹಂಚಿಕೊಳ್ಳಲಿರುವ ಬಿಜೆಪಿ ಬಿಹಾರಕ್ಕೆ ಮಹತ್ವದ ಕೊಡುಗೆ ನೀಡಿದೆ. ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಅಂಕಕ್ಕಿಂತ ಕಡಿಮೆ ಮತಗಳನ್ನು ಪಡೆದ ನಂತರ ಜೆಡಿಯು ಬಿಜೆಪಿಗೆ ನೀಡಿದ ಬೆಂಬಲ ನಿರ್ಣಾಯಕವಾಗಿತ್ತು. ಜೆಡಿಯು ಬೆಂಬಲದಿಂದ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ರಚನೆ ಸಾಧ್ಯವಾಯಿತು.
ತಮ್ಮ 8ನೇ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಈ ಮಂಡಳಿಯು ಮಖಾನಾ ರೈತರಿಗೆ ಕೇಂದ್ರದ ವಿವಿಧ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಕ್ರಮವು ಉತ್ತರ ಬಿಹಾರದ ರೈತರಿಗೆ ಸಹಾಯ ಮಾಡುತ್ತದೆ. ನಾಗರಿಕ ವಿಮಾನಯಾನ ಅಭಿಯಾನದ ಭಾಗವಾಗಿ ಬಿಹಾರವು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಹೊಂದಲು ಸಜ್ಜಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಮಿಥಿಲಾಂಚಲ್ ಪ್ರದೇಶದಲ್ಲಿ ಕಾಲುವೆ ಯೋಜನೆಯನ್ನು ಸಹ ಘೋಷಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಪಾಟ್ನಾದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: Union Budget 2025: ಬಜೆಟ್ ಪ್ರಕಾರ ಗ್ರಾಹಕರಿಗೆ ಯಾವುದು ದುಬಾರಿಯಾಗಲಿದೆ?
ಹಲವಾರು ಅಡೆತಡೆಗಳ ನಡುವೆಯೂ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ನಿತೀಶ್ ಕುಮಾರ್, ಮತ್ತೊಂದು ಚುನಾವಣಾ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗಳಿಸಿದ್ದ ನಿತೀಶ್ ಕುಮಾರ್ ಅವರ ಜೆಡಿಯು, ಬಿಜೆಪಿ ಬಹುಮತವನ್ನು ಪಡೆಯುವಲ್ಲಿ ವಿಫಲವಾದಾಗ ಬೆಂಬಲ ನೀಡಿ, ಕೇಂದ್ರದಲ್ಲಿ ಸರ್ಕಾರ ರಚಿಸಲು ಸಹಾಯ ಮಾಡಿತ್ತು.
Budget 2025 FM says,
1️⃣Greenfield airports will be facilitated in Bihar
2️⃣expansion Patna airport & Brownfield airport in Bihta.
3️⃣Financial support will be provided for Western Kosi Canal ERM project in Mithilanchal region of Bihar…”pic.twitter.com/iXURiXi1IS
— narne kumar06 (@narne_kumar06) February 1, 2025
ಬಿಹಾರದ ಮಿಥಿಲಾ ಪ್ರದೇಶದಲ್ಲಿ 50000 ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯಲ್ಲಿ ಕೃಷಿ ಮಾಡಲು ಸಹಾಯ ಮಾಡುವ ಮೂಲಕ ರೈತರಿಗೆ ಪ್ರಯೋಜನವನ್ನು ನೀಡುವ ಪಶ್ಚಿಮ ಕೋಸಿ ಕಾಲುವೆ ERM ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹಾಗೇ, ಅವರು ಬಿಹಾರದಲ್ಲಿ ಗ್ರೀನ್ಹೌಸ್ ವಿಮಾನ ನಿಲ್ದಾಣಗಳು, ಬಿಹ್ತಾದಲ್ಲಿ ಬ್ರೌನ್‌ಫೀಲ್ಡ್ ವಿಮಾನ ನಿಲ್ದಾಣ, ಪಾಟ್ನಾ ವಿಮಾನ ನಿಲ್ದಾಣದ ವಿಸ್ತರಣೆಯನ್ನು ಸಹ ಘೋಷಿಸಿದರು.
ಪೂರ್ವ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಚಟುವಟಿಕೆಗಳಿಗೆ ಬಲವಾದ ಪ್ರೋತ್ಸಾಹ ನೀಡಲು ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆಯೂ ಹಣಕಾಸು ಸಚಿವೆ ನಿರ್ಮಲಾ ಪ್ರಸ್ತಾಪಿಸಿದ್ದಾರೆ.
ಬಜೆಟ್‌ಗೂ ಮುನ್ನ, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ನಿರ್ಮಲಾ ಸೀತಾರಾಮನ್ ಅವರಿಗೆ 32 ಪುಟಗಳ ಜ್ಞಾಪಕ ಪತ್ರವನ್ನು ಸಲ್ಲಿಸಿ, ಉತ್ತರ ಬಿಹಾರದಲ್ಲಿ ಪ್ರವಾಹ ನಿರ್ವಹಣೆ, ದರ್ಭಂಗಾ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು, ರಾಜಗೀರ್ ಮತ್ತು ಭಾಗಲ್ಪುರದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು 13,000 ಕೋಟಿ ರೂ. ಕೇಂದ್ರೀಯ ನೆರವು ಕೋರಿದ್ದರು. ಈ ಮನವಿಯಲ್ಲಿ ರಕ್ಸೌಲ್ ವಿಮಾನ ನಿಲ್ದಾಣಕ್ಕೆ ಹಣ, 10 ಹೊಸ ಕೇಂದ್ರೀಯ ವಿದ್ಯಾಲಯಗಳ ನಿರ್ಮಾಣ, ಹೆಚ್ಚುವರಿ ಸಾಲಕ್ಕಾಗಿ ಒಟ್ಟು ರಾಜ್ಯ ದೇಶೀಯ ಉತ್ಪನ್ನದಲ್ಲಿ ಶೇ. 1ರಷ್ಟು ವಿನಾಯಿತಿ ಮತ್ತು ಹೈ-ಸ್ಪೀಡ್ ಕಾರಿಡಾರ್‌ಗಳೊಂದಿಗೆ ಸಣ್ಣ ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗೆ ಅನುಮೋದನೆ ಕೂಡ ಸೇರಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ