50 ಲಕ್ಷ ಕೋಟಿ ರೂ ಗಾತ್ರದ ಬಜೆಟ್; ಸರ್ಕಾರಕ್ಕೆ ಸಿಗುವ ತೆರಿಗೆ, ಸಾಲಗಳು ಎಷ್ಟು, ಸರ್ಕಾರ ಮಾಡುವ ವೆಚ್ಚ ಯಾವುದಕ್ಕೆ? ಇಲ್ಲಿದೆ ಡೀಟೇಲ್ಸ್
Union Budget 2025: ನಿರ್ಮಲಾ ಸೀತಾರಾಮನ್ ಅವರು 50,65,345 ಕೋಟಿ ರೂ ಬೃಹತ್ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ವಿವಿಧ ತೆರಿಗೆಗಳಿಂದ 28 ಲಕ್ಷ ಕೋಟಿ ರೂಗೂ ಅಧಿಕ ಹಣ, ಸಾಲಗಳಿಂದ 16 ಲಕ್ಷ ಕೋಟಿ ರೂಗೂ ಅಧಿಕ ಹಣ ಪಡೆಯುತ್ತದೆ. ಆಡಳಿತ ನಿರ್ವಹಣೆ, ಸಾಲಕ್ಕೆ ಬಡ್ಡಿ, ಸಂಬಳ, ಯೋಜನೆಗಳಿಗೆ ಅನುದಾನ ಇತ್ಯಾದಿಗಳಿಗೆ ಸರ್ಕಾರ ಈ ಹಣವನ್ನು ವೆಚ್ಚ ಮಾಡುತ್ತದೆ.

ನವದೆಹಲಿ, ಫೆಬ್ರುವರಿ 1: ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್ನಲ್ಲಿ ಕೆಲ ದೊಡ್ಡ ಅಚ್ಚರಿಗಳನ್ನು ನೀಡಿದ್ದಾರೆ. ಈ ಬಾರಿ ಅವರ ಬಜೆಟ್ ಗಾತ್ರ 50 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದೆ. 50,65,345 ಕೋಟಿ ರೂ ಗಾತ್ರದ ಬಜೆಟ್ ನೀಡಿದ್ದಾರೆ. ತೆರಿಗೆಗಳು, ಸಾಲಗಳು ಇತ್ಯಾದಿ ಮೂಲಗಳಿಂದ ಸರ್ಕಾರ ಇಷ್ಟು ಹಣ ಕಲೆಹಾಕಿದೆ. ತೆರಿಗೆ ಮೂಲಗಳಿಂದಲೇ ಸರ್ಕಾರಕ್ಕೆ ಅರ್ಧಕ್ಕಿಂತ ಹೆಚ್ಚು ಆದಾಯ ಸಿಗುತ್ತದೆ.
ಸರ್ಕಾರ ಹಣ ಹೇಗೆ ಹೊಂದಿಸುತ್ತದೆ?
- ತೆರಿಗೆಗಳಿಂದ: 28.37 ಲಕ್ಷ ಕೋಟಿ ರೂ
- ಠೇವಣಿ, ಬಾಂಡ್ ಇತ್ಯಾದಿ ಸಾಲಗಳಿಂದ: 16.45 ಲಕ್ಷ ಕೋಟಿ ರೂ
- ತೆರಿಗೆಯೇತರ ಆದಾಯ: 5.83 ಲಕ್ಷ ಕೋಟಿ ರೂ
- ಒಟ್ಟು ಆದಾಯ: 50.65 ಲಕ್ಷ ಕೋಟಿ ರೂ
ಇಲ್ಲಿ ತೆರಿಗೆ ವಿಚಾರಕ್ಕೆ ಬಂದರೆ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳು ಒಳಗೊಂಡಿವೆ. ಅಬಕಾರಿ ಸುಂಕ, ಜಿಎಸ್ಟಿ, ಆಮದು ತೆರಿಗೆ ಇತ್ಯಾದಿಯವರು ಪರೋಕ್ಷ ತೆರಿಗೆಗೆ ಬರುತ್ತವೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿಯವು ನೇರ ತೆರಿಗೆಗೆ ಸೇರುತ್ತದೆ. ಇವೆಲ್ಲವೂ ಸೇರಿ ಒಟ್ಟು 42.70 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹ ಆಗುತ್ತದೆ. ರಾಜ್ಯಗಳಿಗೆ ಹಂಚಿಕೆ ಮಾಡಿದ್ದನ್ನು ಕಳೆದರೆ 28.37 ಲಕ್ಷ ಕೋಟಿ ರೂ ನಿವ್ವಳ ತೆರಿಗೆ ಉಳಿಯುತ್ತದೆ.
ಇದನ್ನೂ ಓದಿ: Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್ಲ್ಲಿ ಯಾವುದು ಅಗ್ಗ- ಯಾವುದು ದುಬಾರಿ?, ಇಲ್ಲಿದೆ ಪೂರ್ಣ ಪಟ್ಟಿ
ತೆರಿಗೆ ಸಂಗ್ರಹ ಎಷ್ಟೆಷ್ಟು?
- ಆದಾಯ ತೆರಿಗೆ: 14.38 ಲಕ್ಷ ಕೋಟಿ ರೂ
- ಕಾರ್ಪೊರೇಶನ್ ಟ್ಯಾಕ್ಸ್: 10.82 ಲಕ್ಷ ಕೋಟಿ ರೂ
- ಜಿಎಸ್ಟಿ: 11.78 ಲಕ್ಷ ಕೋಟಿ ರೂ
- ಅಬಕಾರಿ ಸುಂಕ: 3.17 ಲಕ್ಷ ಕೋಟಿ ರೂ
- ಆಮದು ಸುಂಕ: 2.40 ಲಕ್ಷ ಕೋಟಿ ರೂ
- ಕೇಂದ್ರಾಡಳಿತ ಪ್ರದೇಶಗಳಿಂದ ತೆರಿಗೆ: 10 ಸಾವಿರ ಕೋಟಿ ರೂ
- ಇತರೆ: ಐದು ಸಾವಿರ ಕೋಟಿ ರೂ
ಇದರಲ್ಲಿ 14.22 ಲಕ್ಷ ಕೋಟಿ ರೂ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ 28.37 ಲಕ್ಷ ಕೋಟಿ ರೂ ತೆರಿಗೆ ಆದಾಯ ಸರ್ಕಾರದ ಬಳಿ ಉಳಿಯುತ್ತದೆ.
ಸರ್ಕಾರಕ್ಕೆ ಸಾಲಗಳಿಂದ ಬರುವ ಹಣ
- ಮಾರುಕಟ್ಟೆ ಸಾಲಗಳು: 11.54 ಲಕ್ಷ ಕೋಟಿ ರೂ
- ಸ್ಮಾಲ್ ಫೈನಾನ್ಸ್ ಸ್ಕೀಮ್ ಇತ್ಯಾದಿ ಯೋಜನೆಗಳಿಂದ: 4.16 ಲಕ್ಷ ಕೋಟಿ ರೂ
- ಎನ್ಡಿಸಿಆರ್: 76,000 ಕೋಟಿ ರೂ
ತೆರಿಗೆಯೇತರ ಆದಾಯ
- ಬಡ್ಡಿಗಳಿಂದ: 48,000 ಕೋಟಿ ರೂ
- ಡಿವಿಡೆಂಡ್ ಇತ್ಯಾದಿ ಲಾಭಾಂಶಗಳು: 3.25 ಲಕ್ಷ ಕೋಟಿ ರೂ
- ಇತರೆ: 2.10 ಲಕ್ಷ ಕೋಟಿ ರೂ
ಸರ್ಕಾರ ಯಾವ್ಯಾವುದಕ್ಕೆ ವೆಚ್ಚ ಮಾಡುತ್ತದೆ?
- ವಿವಿಧ ಯೋಜನೆಗಳಿಗೆ: 21.64 ಲಕ್ಷ ಕೋಟಿ ರೂ
- ಸಂಬಳ, ಹಾಗೂ ಆಡಳಿತ ನಿರ್ವಹಣೆ: 29.01 ಲಕ್ಷ ಕೋಟಿ ರೂ
ಇಲ್ಲಿ ಸಾಲಕ್ಕೆ ಕಟ್ಟುವ ಬಡ್ಡಿಯೇ 12.76 ಲಕ್ಷ ಕೋಟಿ ರೂ ಇದೆ. ಕೇಂದ್ರ ಸರ್ಕಾರಿ ನೌಕರಿಗೆ ಸಂಬಳ ಹಾಗೂ ಪಿಂಚಣಿಯ ಮೊತ್ತವೇ ನಾಲ್ಕು ಲಕ್ಷ ಕೋಟಿ ರೂಗಿಂತಲೂ ಅಧಿಕ ಇದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Sat, 1 February 25