24 ವರ್ಷದೊಳಗಿನ ಯುವಕರಿಗೆ ತಿಂಗಳಿಗೆ 5,000 ರೂ ಸಿಗುವ ಇಂಟರ್ನ್​ಶಿಪ್ ಸ್ಕೀಮ್; ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಯೋಜನೆ ಬಜೆಟ್​ನಲ್ಲಿ ಘೋಷಣೆ

Union Budget, Internship scheme: ಶಿಕ್ಷಣ ಮುಗಿಸಿದ ಯುವಕರಿಗೆ ದೇಶದ ಅಗ್ರಗಣ್ಯ ಕಂಪನಿಗಳಲ್ಲಿ ತರಬೇತಿ ಕೊಡಿಸಲು ಸರ್ಕಾರ ಇಂಟರ್ನ್​ಶಿಪ್ ಸ್ಕೀಮ್ ಅನ್ನು ಘೋಷಿಸಿದೆ. 21 ವರ್ಷದಿಂದ 24 ವರ್ಷದೊಳಗಿನ ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಪ್ರಾಯೋಗಿಕ ಕೆಲಸದ ಅನುಭವ ಸಿಗಲು ಅವಕಾಶ ಇದೆ. 12 ತಿಂಗಳ ಅವಧಿಯ ಈ ಇಂಟರ್ನ್​ಶಿಪ್ ಯೋಜನೆಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ 5,000 ರೂ ಭತ್ಯೆ ಸಿಗುತ್ತದೆ. ಹೆಚ್ಚಿನ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.

24 ವರ್ಷದೊಳಗಿನ ಯುವಕರಿಗೆ ತಿಂಗಳಿಗೆ 5,000 ರೂ ಸಿಗುವ ಇಂಟರ್ನ್​ಶಿಪ್ ಸ್ಕೀಮ್; ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಯೋಜನೆ ಬಜೆಟ್​ನಲ್ಲಿ ಘೋಷಣೆ
ಇಂಟರ್ನ್​ಶಿಪ್
Follow us
|

Updated on:Jul 24, 2024 | 6:21 PM

ನವದೆಹಲಿ, ಜುಲೈ 24: ಬಜೆಟ್​ನಲ್ಲಿ ಸರ್ಕಾರ ಇಂಟರ್ನ್​ಶಿಪ್ ಯೋಜನೆಯನ್ನು ಪ್ರಕಟಿಸಿದೆ. ಒಂದು ವರ್ಷದ ಈ ಸ್ಕೀಮ್​ನಲ್ಲಿ 21ರಿಂದ 24 ವರ್ಷದ ವಯೋಮಾನದ ಯುವಕರಿಗೆ ತಿಂಗಳಿಗೆ 5,000 ರೂ ಪ್ರೋತ್ಸಾಹ ಧನವನ್ನು ಸರ್ಕಾರವೇ ನೀಡುತ್ತದೆ. ಈ ಸ್ಕೀಮ್ ಮೂಲಕ 5 ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಕೌಶಲ್ಯ ವೃದ್ಧಿಸುವ ಅವಕಾಶ ಕಲ್ಪಿಸುವುದು ಸರ್ಕಾರದ ಹೆಗ್ಗುರಿಯಾಗಿದೆ. ಭಾರತದ ಆರ್ಥಿಕತೆ ಬಹಳ ವೇಗವಾಗಿ ಬೆಳೆಯುತ್ತಿರುವುದರಿಂದ ಕೌಶಲ್ಯವಂತ ಕೆಲಸಗಾರರು ಅಥವಾ ಉದ್ಯೋಗಿಗಳು ಅವಶ್ಯಕತೆ ಬಹಳ ಇದೆ. ಈ ಕಾರಣಕ್ಕೆ ಯುವ ಸಮುದಾಯಕ್ಕೆ ವರ್ಕ್ ಸ್ಕಿಲ್ ತರಲು ಈ ಇಂಟರ್ನ್​ಶಿಪ್ ಸ್ಕೀಮ್ ಸಹಾಯವಾಗುವ ನಿರೀಕ್ಷೆ ಇದೆ.

ಇಂಟರ್ನ್​ಶಿಪ್ ಯೋಜನೆಗೆ ಯಾರು ಅರ್ಜಿ ಹಾಕಬಹುದು?

ಸರ್ಕಾರ ಟಾಪ್ 500 ಕಂಪನಿಗಳನ್ನು ಈ ಇಂಟರ್ನ್​ಶಿಪ್ ಯೋಜನೆಗೆ ಬಳಸಿಕೊಳ್ಳಲಿದೆ. ಓದು ಮುಗಿಸಿರುವ ಮತ್ತು ಇನ್ನೂ ಎಲ್ಲಿಯೂ ಕೆಲಸಕ್ಕೆ ಸೇರದ 21 ವರ್ಷದಿಂದ 24 ವರ್ಷ ವಯೋಮಾನದ ಯುವಕ ಮತ್ತು ಯುವತಿಯರು ಈ ಪ್ರೋಗ್ರಾಮ್​ಗೆ ಅರ್ಹರಿರುತ್ತಾರೆ. ಈ ಅಭ್ಯರ್ಥಿಗಳ ಕುಟುಂಬದ ಇತರ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿರುವಂತಿಲ್ಲ, ಸರ್ಕಾರಿ ಉದ್ಯೋಗಿಯಾಗಿರುವಂತಿಲ್ಲ. ಅಭ್ಯರ್ಥಿಗಳು ಐಐಟಿ ಅಥವಾ ಐಐಎಂ ಅಥವಾ ಸಿಎ, ಸಿಎಂಎ, ಐಐಸ್​ಇಆರ್ ಇತ್ಯಾದಿ ಸಂಸ್ಥೆಗಳಲ್ಲಿ ವೃತ್ತಿಪರ ಶಿಕ್ಷಣ ಪಡೆದಿರುವಂತಿಲ್ಲ. ಒಟ್ಟಾರೆ, ಬಡವರು ಮತ್ತು ಉದ್ಯೋಗ ಗಿಟ್ಟಿಸುವ ಸಾಧ್ಯತೆ ಕಡಿಮೆ ಇರುವಂತಹ ಅಭ್ಯರ್ಥಿಗಳನ್ನು ಆಯ್ದುಕೊಂಡು ಅವರಿಗೆ ಕೌಶಲ್ಯ ವೃದ್ಧಿಸುವುದು ಸರ್ಕಾರದ ಗುರಿ ಇದ್ದಂತಿದೆ.

ಇದನ್ನೂ ಓದಿ: ಹೊಸ ವಾತ್ಸಲ್ಯ ಎನ್​ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ

ಸರ್ಕಾರದಿಂದ ಮಾಸಿಕವಾಗಿ 5,000 ರೂ

12 ತಿಂಗಳ ಅವಧಿಯ ಈ ಇಂಟರ್ನ್​ಶಿಪ್ ಅಥವಾ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗೆ ತಿಂಗಳಿಗೆ 5,000 ರೂ ಭತ್ಯೆ ಸಿಗುತ್ತದೆ. ಒಂದು ವರ್ಷದಲ್ಲಿ ಒಟ್ಟಾರೆ 66,000 ರೂ ಭತ್ಯೆಯು ಒಬ್ಬರಿಗೆ ಸಿಗುತ್ತದೆ. ಇದರಲ್ಲಿ ಸರ್ಕಾರ ಮಾಸಿಕ ಭತ್ಯೆಯಾಗಿ ಒಟ್ಟು 54,000 ರೂ ಒದಗಿಸುತ್ತದೆ. ಅನಿರೀಕ್ಷಿತ ವೆಚ್ಚಗಳಿಗೆಂದು 6,000 ರೂ ನೀಡುತ್ತದೆ. ಕಂಪನಿಗಳೂ ಕೂಡ ಒಬ್ಬ ಇಂಟರ್ನ್​ಗೆ ತರಬೇತಿ ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ 6,000 ರೂ ಕೊಡಬೇಕಾಗುತ್ತದೆ. ಅಲ್ಲಿಗೆ ಇಂಟರ್ನ್​ಶಿಪ್ ಮಾಡುವ ಯುವಕನೊಬ್ಬನಿಗೆ ಉಚಿತವಾಗಿ ತರಬೇತಿ ಸಿಗುವುದರ ಜೊತೆಗೆ ಒಟ್ಟಾರೆ 66,000 ರೂ ಪ್ರೋತ್ಸಾಹ ಧನ ಕೂಡ ಲಭಿಸುತ್ತದೆ.

ಕಂಪನಿಗಳು ಈ ತರಬೇತಿ ವೆಚ್ಚಗಳಿಗೆ ತಮ್ಮ ಸಿಎಸ್​ಆರ್ ಫಂಡ್​​ಗಳನ್ನು ಬಳಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ಅಪ್ರೆಂಟಿಸ್ ಕಾಯ್ದೆ ಪ್ರಕಾರ ಕಂಪನಿಗಳಲ್ಲಿ ಶೇ. 2.5ರಷ್ಟು ಇಂಟರ್ನ್ಸ್ ಇರಬೇಕು

1961ರ ಅಪ್ರೆಂಟಿಸಸ್ ಕಾಯ್ದೆ ಪ್ರಕಾರ ಸಂಸ್ಥೆಗಳಲ್ಲಿರುವ ಒಟ್ಟಾರೆ ಉದ್ಯೋಗಿಗಳಲ್ಲಿ ಶೇ. 2.5ರಷ್ಟು ಮಂದಿ ಇಂಟರ್ನ್​ಶಿಪ್​ನವರಿರಬೇಕು ಎಂದಿದೆ. ಈ ನಿಯಮವನ್ನು ಸರ್ಕಾರ ಬಿಗಿಗೊಳಿಸಬಹುದು.

ಇದನ್ನೂ ಓದಿ: ಕ್ಯಾಪಿಟಲ್ ಗೇನ್ ಟ್ಯಾಕ್ಸ್ ದರ ಬದಲಾವಣೆ; ಇಂಡೆಕ್ಸೇಶನ್ ಬೆನಿಫಿಟ್ ಇವುಗಳ ಬಗ್ಗೆ ನೀವು ತಿಳಿಯಬೇಕಾದ್ದು

ಬಜೆಟ್​ನಲ್ಲಿ ಘೋಷಣೆ ಆಗಿರುವ ಇಂಟರ್ನ್​ಶಿಪ್ ಯೋಜನೆಗೆ ಆನ್ಲೈನ್ ಪೋರ್ಟಲ್​ವೊಂದನ್ನು ಸದ್ಯದಲ್ಲೆ ಹೊರತರುವ ನಿರೀಕ್ಷೆ ಇದೆ. ಈ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲಿರುವ ಪಟ್ಟಿಯಿಂದ ಕಂಪನಿಗಳೇ ಇಂಟರ್ನ್​ಶಿಪ್​ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.

ಈ ಕಂಪನಿಗಳು ಇತರ ರೆಗ್ಯುಲರ್ ಉದ್ಯೋಗಿಗಳಿಗೆ ನೀಡಲಾಗುವ ಕೆಲಸದ ಅವಕಾಶಗಳನ್ನು ಇಂಟರ್ನ್​ಶಿಪ್​ನವರಿಗೂ ಕೊಡಬೇಕು ಎನ್ನುತ್ತಿದೆ ಸರ್ಕಾರ. ಅವರಿಗೆ ಪ್ರಾಕ್ಟಿಕಲ್ ಕೆಲಸದ ಅನುಭವ ಸಿಗಬೇಕು ಎನ್ನುವುದು ಉದ್ದೇಶ. ಈ ಸ್ಕೀಮ್ ಸುಮಾರು 1 ಕೋಟಿ ಯುವಕ ಮತ್ತು ಯುವತಿಯರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Wed, 24 July 24

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್