AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2023ರ ಬಜೆಟ್​ನಲ್ಲಿ ಆರಂಭಗೊಂಡಿದ್ದ ಈ ಮಹಿಳಾ ಸ್ಕೀಮ್ ಮಾರ್ಚ್ 31ಕ್ಕೆ ಅಂತ್ಯ; ಈ ಬಜೆಟ್​ನಲ್ಲಿ ವಿಸ್ತರಣೆಯಾಗುತ್ತಾ?

Mahila Samman Savings Certificate scheme: 2023ರ ಬಜೆಟ್​ನಲ್ಲಿ ಆರಂಭವಾಗಿದ್ದ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ ಅನ್ನು ಈ ಬಜೆಟ್​ನಲ್ಲಿ ವಿಸ್ತರಣೆ ಮಾಡುವ ನಿರೀಕ್ಷೆ ಇದೆ. ಸದ್ಯಕ್ಕೆ ಅದು 2025ರ ಮಾರ್ಚ್ 31ರವರೆಗೆ ಮಾತ್ರ ಲಭ್ಯ ಇದೆ. ಈ ಠೇವಣಿ ಸ್ಕೀಮ್ ಅನ್ನು ಮತ್ತಷ್ಟು ಕಾಲ ಆಫರ್​ನಲ್ಲಿ ಇಡಬೇಕೆಂಬ ಬೇಡಿಕೆ ಇದೆ. ಒಂದು ಸಾವಿರ ರೂನಿಂದ ಎರಡು ಲಕ್ಷ ರೂವರೆಗೆ ಎರಡು ವರ್ಷಕ್ಕೆ ಠೇವಣಿ ಇಡುವ ಸ್ಕೀಮ್ ಇದಾಗಿದೆ.

2023ರ ಬಜೆಟ್​ನಲ್ಲಿ ಆರಂಭಗೊಂಡಿದ್ದ ಈ ಮಹಿಳಾ ಸ್ಕೀಮ್ ಮಾರ್ಚ್ 31ಕ್ಕೆ ಅಂತ್ಯ; ಈ ಬಜೆಟ್​ನಲ್ಲಿ ವಿಸ್ತರಣೆಯಾಗುತ್ತಾ?
ಮಹಿಳೆಯರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2025 | 3:42 PM

Share

ನವದೆಹಲಿ, ಜನವರಿ 31: ಕಳೆದ ಬಾರಿಯ ಬಜೆಟ್​ನಲ್ಲಿ (2024-25) ಹಣಕಾಸು ಸಚಿವರು ಪ್ರಸ್ತಾಪಿಸಿದ ನಾಲ್ಕು ಮುಖ್ಯ ವರ್ಗಗಳಲ್ಲಿ ಮಹಿಳೆಯರದ್ದು ಒಂದು. ಸರ್ಕಾರವು ದೇಶದ ಉದ್ಯೋಗ ಕ್ಷೇತ್ರಕ್ಕೆ ಮಹಿಳೆಯರ ಸಂಖ್ಯೆ ಹೆಚ್ಚಿಸಲು ಮತ್ತು ಮಹಿಳೆಯರನ್ನು ಹೆಚ್ಚೆಚ್ಚು ಸ್ವಾವಲಂಬಿಗಳನ್ನಾಗಿ ಮಾಡುವ ಕಾರ್ಯಗಳಲ್ಲಿ ಒಲವು ಹೊಂದಿದೆ. ಅಂತೆಯೇ, ನಿರ್ಮಲಾ ಸೀತಾರಾಮನ್ ಅವರ ಈ ಬಾರಿಯ ಬಜೆಟ್​ನಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳತ್ತ ಹಲವರ ಚಿತ್ತ ನೆಟ್ಟಿದೆ. ಇದರಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯೂ ಇದೆ.

ಕುತೂಹಲ ಎಂದರೆ, 2023-24ರ ಬಜೆಟ್​ನಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ ಅನ್ನು ಸರ್ಕಾರ ಆರಂಭಿಸಿತು. ಇದು 2025ರ ಮಾರ್ಚ್ 31ರವರೆಗೆ ಮಾತ್ರ ಲಭ್ಯ ಇದೆ. ಹೆಚ್ಚು ಬಡ್ಡಿ ಆದಾಯ ತರುವ ಈ ಸ್ಕೀಮ್​ನಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇದನ್ನು ನಾಳೆಯ ಬಜೆಟ್​ನಲ್ಲಿ ವಿಸ್ತರಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Household expenditure: ಭಾರತದಲ್ಲಿ ಒಂದು ಮನೆಯ ತಿಂಗಳ ಸರಾಸರಿ ವೆಚ್ಚ 5,662 ರೂ; 2023-24ರ ಎಚ್​ಸಿಎಎಸ್ ಸಮೀಕ್ಷೆ ವರದಿ

ಏನಿದು ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್?

ಈ ಎಂಎಸ್​ಎಸ್​ಸಿ ಯೋಜನೆ ಎಲ್ಲಾ ವಯೋಮಾನದ ಸ್ತ್ರೀಯರಿಗೆ ಲಭ್ಯ ಇದೆ. ಇದು ಫಿಕ್ಸೆಡ್ ಡೆಪಾಸಿಟ್ ರೀತಿಯ ಠೇವಣಿ ಯೋಜನೆ. ಕನಿಷ್ಠ ಹೂಡಿಕೆ 1,000 ರೂ ಇದ್ದರೆ, ಗರಿಷ್ಠ ಹೂಡಿಕೆ 2,00,000 ರೂ ಇದೆ.

ಎರಡು ವರ್ಷದ ಠೇವಣಿ ಅವಧಿ ಇರುತ್ತದೆ. ವಾರ್ಷಿಕ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಪ್ರತೀ ಕ್ವಾರ್ಟರ್​ನಂತೆ ಚಕ್ರಬಡ್ಡಿ ಜಮೆ ಆಗುತ್ತಾ ಹೋಗುತ್ತದೆ. ಮೆಚ್ಯೂರಿಟಿಗೆ ಮುನ್ನ ಯಾರಿಗಾದರೂ ತುರ್ತು ಅಗತ್ಯ ಇದ್ದರೆ ಶೇ. 40ರಷ್ಟು ಠೇವಣಿ ಹಣವನ್ನು ಹಿಂಪಡೆಯಲು ಅವಕಾಶ ಇರುತ್ತದೆ. ದಂಡ ವಿಧಿಸಲಾಗುವುದಿಲ್ಲ.

ಎಲ್ಲಿ ಈ ಎಂಎಸ್​ಎಸ್​ಸಿ ಅಕೌಂಟ್ ತೆರೆಯಬಹುದು?

ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ ಅಡಿ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು ಹಾಗು ಅಂಚೆ ಕಚೇರಿಗಳಲ್ಲಿ ಅಕೌಂಟ್ ತೆರೆಯಬಹುದು. ಸದ್ಯಕ್ಕೆ 2025ರ ಮಾರ್ಚ್ 31ರವರೆಗೆ ಮಾತ್ರ ಈ ಸ್ಕೀಮ್ ಲಭ್ಯ ಇದೆ. ಬಜೆಟ್​ನಲ್ಲಿ ಇದನ್ನು ಮತ್ತಷ್ಟು ಅವಧಿ ಮುಂದುವರಿಸಲಾಗುತ್ತದಾ ಎಂದು ಕಾದುನೋಡಬೇಕಷ್ಟೇ.

ಇದನ್ನೂ ಓದಿ: ಮಹಿಳೆಯರಿಗೆ ಉತ್ಸಾಹ ಹೆಚ್ಚಿಸಿದ ಕೇಂದ್ರ ಯೋಜನೆಗಳು; 2025ರ ಬಜೆಟ್​ನಲ್ಲಿ ಮತ್ತಷ್ಟು ಪುಷ್ಟಿ ಸಾಧ್ಯತೆ

ಮಹಿಳೆಯರು ಮಾತ್ರವೇ ಈ ಅಕೌಂಟ್ ತೆರೆಯಬಹುದು. ಬಾಲಕಿಯ ಹೆಸರಿನಲ್ಲಿ ಪೋಷಕರು ಅಕೌಂಟ್ ಓಪನ್ ಮಾಡಬಹುದು. ಒಬ್ಬ ವ್ಯಕ್ತಿ ಎಷ್ಟು ಅಕೌಂಟ್ ಬೇಕಾದರೂ ತೆರೆಯಬಹುದು. ಆದರೆ, ಒಂದು ಅಕೌಂಟ್​ನಿಂದ ಮತ್ತೊಂದು ಅಕೌಂಟ್​ಗೆ ಕನಿಷ್ಠ 3 ತಿಂಗಳ ಅಂತರ ಇರಬೇಕು. ಇವತ್ತು ನೀವು ಎಂಎಸ್​ಎಸ್​ಸಿ ಅಡಿಯಲ್ಲಿ ಅಕೌಂಟ್ ತೆರೆದರೆ, ಮತ್ತೊಂದನ್ನು ತೆರೆಯಲು ಮೂರು ತಿಂಗಳು ಕಾಯಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ