Women
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ | ಇದು ಭಾರತದಲ್ಲಿ ಮಹಿಳೆಯರಿಗೆ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ನೀಡಲಾಗುವ ಗೌರವ. ಕಾನೂನು ಕೂಡ ಮಹಿಳೆಯರಿಗೆ ಆಸರೆಯಾಗಿದೆ. ಆದರೆ, ವಾಸ್ತವದಲ್ಲಿ ಪುರುಷಪ್ರಧಾನವಾಗಿರುವ ಈ ಸಮಾಜದಲ್ಲಿ ಮಹಿಳೆಯರಿಗೆ ಸಮಸ್ಯೆಗಳ ಮಹಾಪೂರವೇ ಇದೆ. ಅದರ ನಡುವೆಯೂ ನಾರಿಯರು ಬದಲಾಗುತ್ತಿದ್ದಾರೆ. ಸ್ವತಂತ್ರರಾಗುತ್ತಿದ್ದಾರೆ, ಸ್ವತಂತ್ರ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ದೈಹಿಕವಾಗಿ ಬಿಟ್ಟರೆ ಇವತ್ತು ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದು ಬಾರಿ ಬಾರಿ ಋಜುವಾತಾಗುತ್ತಿದೆ. ಆಕೆ ಅಡುಗೆ ಮನೆಗೆ ಈಗ ಸೀಮಿತವಾಗಿಲ್ಲ. ಬಹಳ್ಟು ಮಹಿಳಾ ಉದ್ದಿಮೆದಾರರು ಹೊರಹೊಮ್ಮುತ್ತಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಗೆ ಮಹಿಳೆಯರೂ ಪಾಲ್ಗೊಳ್ಳುವುದು ಇವತ್ತಿನ ದಿನದ ಬಹಳ ಅಗತ್ಯತೆ ಆಗಿದೆ.