AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು

Pune Woman lost Rs 99 lakh to scammers: ದುಷ್ಕರ್ಮಿಗಳ ನಕಲಿ ದಾಖಲೆಗಳ ಸುಳಿಗೆ ಸಿಲುಕಿದ ಪುಣೆಯ ಮಹಿಳೆಯೊಬ್ಬರು 99 ಲಕ್ಷ ರೂ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. 62 ವರ್ಷದ ನಿವೃತ್ತ ಐಎಎಸ್ ಅಧಿಕಾರಿಯಾದ ಈ ಮಹಿಳೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ಅರೆಸ್ಟ್ ವಾರಂಟ್, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಖದೀಮರು ಮಹಿಳೆಯ ಬ್ಯಾಂಕ್ ಅಕೌಂಟ್​ಗಳಿಂದ ಎಲ್ಲಾ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2025 | 2:04 PM

Share

ಪುಣೆ, ನವೆಂಬರ್ 12: ಇವತ್ತು ಎಲ್ಲವೂ ಆನ್​ಲೈನ್ ಆಗಿರುವುದರಿಂದ ಸೈಬರ್ ಅಪರಾಧಿಗಳಿಗೆ (cyber criminals) ಹಣ ದೋಚಲು ಒಳ್ಳೆಯ ಮಾರ್ಗಗಳು ಸಿಕ್ಕಿವೆ. ಇತ್ತೀಚೆಗೆ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಪುಣೆಯ ಮಹಿಳೆಯೊಬ್ಬರು (woman) ಇಂಥದ್ದೇ ಪ್ರಕರಣದಲ್ಲಿ 99 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ. ನಕಲಿ ಸರ್ಕಾರಿ ದಾಖಲೆಗಳನ್ನು (forged documents) ಸೃಷ್ಟಿಸಿ 62 ವರ್ಷದ ಮಹಿಳೆಯೊಬ್ಬಳನ್ನು ಹೆದರಿಸಿ ಆನ್​ಲೈನ್​ನಲ್ಲೇ ಹಣ ಲಪಟಾಯಿಸಲಾಗಿದೆ. ವಂಚನೆಗೊಳಗಾದ 62 ವರ್ಷದ ಮಹಿಳೆಯು ಪುಣೆಯ ಕೊತ್ರುಡ್ (Kothrud) ಎಂಬಲ್ಲಿನ ನಿವಾಸಿಯಾಗಿದ್ದು, ನಿವೃತ್ತ ಎಲ್​ಐಸಿ ಅಧಿಕಾರಿಯೂ ಹೌದು.

ಅಕ್ಟೋಬರ್ ಕೊನೆಯ ವಾರದಲ್ಲಿ ಈ ವಂಚನೆ ನಡೆದಿದೆ. ಸೈಬರ್ ಸಿಟಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡಾಟಾ ಪ್ರೊಟೆಕ್ಷನ್ ಏಜೆನ್ಸಿ ಕಡೆಯವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪುಣೆಯ ಮಹಿಳೆಯನ್ನು ಸಂಪರ್ಕಿಸುತ್ತಾನೆ. ಆಕೆಯ ಆಧಾರ್ ಜೋಡಿತ ಮೊಬೈಲ್ ನಂಬರ್ ಅನ್ನು ಅಕ್ರಮ ವಹಿವಾಟುಗಳಿಗೆ ದುರ್ಬಳಕೆ ಮಾಡಲಾಗಿದೆ ಎಂದು ಹೇಳುತ್ತಾನೆ.

ಇದನ್ನೂ ಓದಿ: ಟ್ರೈನ್​ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ

ನಂತರ ಆ ಮಹಿಳೆಗೆ ಫೋನ್​ನಲ್ಲೇ ಪೊಲೀಸ್ ಅಧಿಕಾರಿ ಎನ್ನಲಾದ ಜಾರ್ಜ್ ಮ್ಯಾಥ್ಯೂ ಅವರನ್ನು ಪರಿಚಯಿಸಲಾಗುತ್ತದೆ. ಆ ನಕಲಿ ಪೊಲೀಸ್ ಅಧಿಕಾರಿಯು, ಮಹಿಳೆಯಿಂದ ಅಕ್ರಮ ಹಣ ವರ್ಗಾವಣೆ ಕೃತ್ಯ ಆಗಿದೆ ಎಂದು ಆರೋಪಿಸಿ, ಆಕೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸುತ್ತಾನೆ.

ನಿರ್ಮಲಾ ಸೀತಾರಾಮನ್ ನಕಲಿ ಹಸ್ತಾಕ್ಷರ ಇರುವ ದಾಖಲೆ

ವಂಚಕರು ಮಹಿಳೆ ವಿರುದ್ಧ ಒಂದು ನಕಲಿ ಅರೆಸ್ಟ್ ವಾರಂಟ್ ದಾಖಲೆ ಸೃಷ್ಟಿಸಿ ಅದನ್ನು ಮೊಬೈಲ್ ನಂಬರ್​ಗೆ ಕಳುಹಿಸಿದ್ದಾರೆ. ಆ ದಾಖಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ನಕಲಿ ಹಸ್ತಾಕ್ಷರ ಇರುತ್ತದೆ. ಸರ್ಕಾರ ಅಧಿಕೃತ ಮುದ್ರೆ ರೀತಿಯ ಸೀಲ್ ಹಾಕಲಾಗಿರುತ್ತದೆ.

ಮಹಿಳೆಗೆ ವಯಸ್ಸಾಗಿರುವುದರಿಂದ ಆಕೆಯನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುವುದು. ದೂರದಿಂದಲೇ ಆಕೆಯ ಮೇಲೆ ನಿಗಾ ಇರಿಸಲಾಗುವುದು ಎಂದು ಹೇಳುವ ದುಷ್ಕರ್ಮಿಗಳು, ಮಹಿಳೆಯ ಎಲ್ಲಾ ಬ್ಯಾಂಕು ಅಕೌಂಟ್​ಗಳಲ್ಲಿರುವ ಹಣದ ಪರಿಶೀಲನೆ ಆಗಬೇಕಿರುವುದರಿಂದ, ಅದನ್ನು ಆರ್​ಬಿಐ ಅಕೌಂಟ್​ಗಳಿಗೆ ವರ್ಗಾಯಿಸಬೇಕೆಂದು ತಿಳಿಸುತ್ತಾರೆ. ಇವರ ಮಾತನನ್ನು ನಂಬಿ ಆ ಮಹಿಳೆ ತನ್ನಲ್ಲಿರುವ 99 ಲಕ್ಷ ರೂ ಹಣವನ್ನು ದುಷ್ಕರ್ಮಿಗಳು ತಿಳಿಸುವ ವಿವಿಧ ಬ್ಯಾಂಕ್ ಅಕೌಂಟ್​ಗಳಿಗೆ ವರ್ಗಾವಣೆ ಮಾಡುತ್ತಾರೆ.

ಇದನ್ನೂ ಓದಿ: ಪಾಕಿಸ್ತಾನದ ಸಿಪೆಕ್​ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?

ಈ ವಂಚಕರು ನಕಲಿ ಅರೆಸ್ಟ್ ವಾರಂಟ್ ಮಾತ್ರವಲ್ಲ, ಜಾರಿ ನಿರ್ದೇಶನಾಲಯ ಮತ್ತಿತರ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಿಳೆಗೆ ಕಳುಹಿಸಿ ಹೆದರಿಸುವ ಕೆಲಸ ಮಾಡುತ್ತಾರೆ. ಮಹಿಳೆಯಿಂದ 99 ಲಕ್ಷ ರೂ ಹಣ ಬಂದ ಬಳಿಕ ದುಷ್ಕರ್ಮಿಗಳು ತಮ್ಮ ಸಂಪರ್ಕ ನಂಬರ್​ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಆಗ ಮಹಿಳೆಗೆ ಅನುಮಾನ ಬರುತ್ತದೆ. ಪುಣೆ ಸೈಬರ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಬ್ಯಾಂಕ್ ಅಕೌಂಟ್ ಮತ್ತು ಫೋನ್ ನಂಬರ್​​ಗಳನ್ನು ಟ್ರೇಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ