AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Child Ticket Rules: ಟ್ರೈನ್​ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ

Indian Child Ticket Policy: ಟ್ರೈನುಗಳಲ್ಲಿ 5 ವರ್ಷದೊಳಗಿನ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಇದೆ. 5ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಟಿಕೆಟ್ ಮಾತ್ರ ಇದೆ. 12 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಪೂರ್ಣ ದರದ ಟಿಕೆಟ್ ನೀಡಲಾಗುತ್ತದೆ. ಮಕ್ಕಳಿಗೆ ಟಿಕೆಟ್​ನಲ್ಲಿ ವಿನಾಯಿತಿ ಮತ್ತು ರಿಯಾಯಿತಿ ಇದ್ದರೂ ಕೆಲ ನಿರ್ಬಂಧಗಳು ಅನ್ವಯ ಆಗುತ್ತವೆ. ಅವನ್ನು ಈ ಲೇಖನದಲ್ಲಿ ತಿಳಿಯಿರಿ.

IRCTC Child Ticket Rules: ಟ್ರೈನ್​ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ
ಟ್ರೈನ್​ನಲ್ಲಿ ಮಕ್ಕಳ ಪ್ರಯಾಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2025 | 12:49 PM

Share

ಜನಸಾಮಾನ್ಯರು ದೂರ ಪ್ರಯಾಣಕ್ಕೆ ಅತಿಹೆಚ್ಚಾಗಿ ಬಳಸುವ ಸಾರಿಗೆ ಮಾಧ್ಯಮ ಎಂದರೆ ಟ್ರೈನುಗಳು. ಭಾರತೀಯ ರೈಲ್ವೇಸ್ (Indian Railways) ದೇಶಾದ್ಯಂತ ಬಹುತೇಕ ಎಲ್ಲೆಡೆ ರೈಲ್ವೆ ನೆಟ್ವರ್ಕ್ ಹೊಂದಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಲು ಟ್ರೈನುಗಳಲ್ಲಿ ಅತಿಕಡಿಮೆ ವೆಚ್ಚ ಆಗುತ್ತದೆ. ಟಿಕೆಟ್ ದರ ಬಹಳ ಕಡಿಮೆ ಇದೆ. ಮಕ್ಕಳಿಗೆ ಟಿಕೆಟ್ ದರದಲ್ಲಿ ವಿನಾಯಿತಿ ಮತ್ತು ರಿಯಾಯಿತಿಗಳಿವೆ. ಆದರೆ, ಹಾಗೆಯೇ ಕೆಲ ನಿಬಂಧನೆಗಳೂ ಇವೆ. ಮಕ್ಕಳಿಗೆ ಟಿಕೆಟ್ ಉಚಿತ ಎಂದು ಹೋಗುವ ಮುನ್ನ ಈ ನಿಬಂಧನೆಗಳನ್ನು ತಿಳಿಯುವುದು ಉತ್ತಮ.

ಭಾರತೀಯ ರೈಲ್ವೇಸ್​ನ ಮಕ್ಕಳ ಟಿಕೆಟ್ ನೀತಿ…

ಭಾರತೀಯ ರೈಲ್ವೇಸ್​ನ ಟಿಕೆಟ್ ನೀತಿ ಪ್ರಕಾರ ಐದು ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಟಿಕೆಟ್ ಖರೀದಿಸಬೇಕೆನ್ನುವ ಕಡ್ಡಾಯ ಇಲ್ಲ. ಇವರಿಗೆ ಪ್ರಯಾಣ ಉಚಿತವಾಗಿ ಮಾಡುವ ಅವಕಾಶ ಕೊಡಲಾಗಿದೆ. 5-12 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಬೆಲೆಗೆ ಪ್ರಯಾಣಿಸುವ ಅವಕಾಶ ಇದೆ. ಆದರೆ, ಇಲ್ಲಿ ಷರತ್ತುಗಳಿವೆ.

ಇದನ್ನೂ ಓದಿ: ಪಾಕಿಸ್ತಾನದ ಸಿಪೆಕ್​ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?

ಉಚಿತ ಟಿಕೆಟ್​ನಲ್ಲಿ ಪ್ರಯಾಣಿಸಲು ಏನು ಷರತ್ತು?

ಐದು ವರ್ಷದೊಳಗಿನ ವಯಸ್ಸಿನ ಮಕ್ಕಳಿಗೆ ಟಿಕೆಟ್ ಉಚಿತ. ಆದರೆ, ಪ್ರತ್ಯೇಕ ಸೀಟು ಸಿಗಲ್ಲ. ಜೊತೆಯಲ್ಲಿರುವ ದೊಡ್ಡವರೊಂದಿಗೆ ಸೀಟು ಹಂಚಿಕೊಳ್ಳಬೇಕಾಗುತ್ತದೆ. ಪ್ರತ್ಯೇಕ ಸೀಟು ಅಥವಾ ಬರ್ತ್ ಬೇಕೆಂದರೆ ಪೂರ್ಣ ಬೆಲೆಯ ಟಿಕೆಟ್ ಖರೀದಿಸಬೇಕಾಗುತ್ತದೆ.

5ರಿಂದ 12 ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಅರ್ಧ ಬೆಲೆಗೆ ಟಿಕೆಟ್ ಸಿಗುತ್ತದಾದರೂ, ಅವರಿಗೆ ಪ್ರತ್ಯೇಕ ಸೀಟನ್ನು ಕೊಡಲಾಗುವುದಿಲ್ಲ. ಪ್ರತ್ಯೇಕ ಸೀಟು ಬೇಕೆಂದರೆ ಪೂರ್ಣ ಬೆಲೆಗೆ ಟಿಕೆಟ್ ಖರೀದಿಸಬೇಕಾಗುತ್ತದೆ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು

ಹೀಗಾಗಿ, ಟ್ರೈನ್​ನಲ್ಲಿ ನೀವು ಆರಾಮವಾಗಿ ಕುಟುಂಬ ಸಮೇತ ಪ್ರಯಾಣಿಸುವುದಿದ್ದರೆ ಮಕ್ಕಳಿಗೂ ಪೂರ್ಣ ದರದ ಟಿಕೆಟ್ ಖರೀದಿಸುವುದು ಉತ್ತಮ. ಅದರಲ್ಲೂ ದೀರ್ಘ ಪ್ರಯಾಣ ಇದ್ದರೆ. ಒಂದು ವೇಳೆ, ಮಗು ನಡೆದಾಡದಷ್ಟು ಚಿಕ್ಕದಿದ್ದರೆ ಅದು ದೊಡ್ಡವರ ಸುಪರ್ದಿಯಲ್ಲೇ ಇರಬೇಕಾಗುತ್ತದೆ. ಅದಕ್ಕೆ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಪ್ರತ್ಯೇಕವಾಗಿ ಸೀಟು ಬೇಕೆನಿಸಿದಾಗ ಮಾತ್ರ ಮಕ್ಕಳಿಗೂ ಟಿಕೆಟ್ ತೆಗೆದುಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ