AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC

IRCTC

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಭಾರತೀಯ ರೈಲ್ವೆಗೆ ಟಿಕೆಟ್, ಅಡುಗೆ ಮತ್ತು ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುವ ಭಾರತೀಯ ಸಾರ್ವಜನಿಕ ವಲಯದ ಉದ್ಯಮವಾಗಿದೆ. IRCTCಯ ಗುರಿಯು ಆನ್‌ಲೈನ್ ಟಿಕೆಟಿಂಗ್ ಅನ್ನು ನಿರ್ವಹಿಸುವುದು, ಅಡುಗೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಭಾರತೀಯ ರೈಲ್ವೆಯಲ್ಲಿ ಪ್ರವಾಸೋದ್ಯಮ ಕಾರ್ಯಾಚರಣೆಗಳನ್ನು ನಿರ್ವಹಿಸುವುದು. IRCTC ಅನ್ನು 27 ಸೆಪ್ಟೆಂಬರ್ 1999 ರಂದು ಸ್ಥಾಪಿಸಲಾಯಿತು. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಬಜೆಟ್ ಮತ್ತು ಡೀಲಕ್ಸ್ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸುತ್ತದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಬಜೆಟ್ ಮತ್ತು ಡೀಲಕ್ಸ್ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸುತ್ತದೆ. ಭಾರತದಾದ್ಯಂತ ಪ್ರಮುಖ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ತೋರಿಸಲು ನೀಡಲಾದ ಜನಪ್ರಿಯ ಪ್ರವಾಸೋದ್ಯಮ ಪ್ಯಾಕೇಜ್ ‘ಭಾರತ ದರ್ಶನ’.

ಇನ್ನೂ ಹೆಚ್ಚು ಓದಿ

ಅಮೃತ್​​ ಯೋಜನೆಯಡಿ ನವೀಕೃತಗೊಂಡ ಕರ್ನಾಟಕದ 4 ರೈಲ್ವೇ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಮೋದಿ

ಪ್ರಧಾನಿ ಮೋದಿ ಅವರು ಅಮೃತ ಭಾರತ್‌ ಯೋಜನೆಯಡಿ ನವೀಕೃತಗೊಂಡ ದೇಶದ 75 ರೈಲ್ವೇ ನಿಲ್ದಾಣಗಳನ್ನು ಉದ್ಘಾಟಿಸಿದ್ದು, ಇದರಲ್ಲಿ ಕರ್ನಾಟಕದ ಬಾದಾಮಿ, ಅಳ್ನಾವರ, ಕೊಪ್ಪಳ ಹಾಗೂ ಬಂಟ್ವಾಳ ನಿಲ್ದಾಣಗಳು ಕೂಡ ಸೇರಿವೆ. ಸ್ಥಳೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿ ನಿಲ್ದಾಣಗಳ ಕಟ್ಟದ ವಿನ್ಯಾಸ ಮಾಡಲಾಗಿದ್ದು, ವಿಶ್ವ ದರ್ಜೆಯ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಇವು ಹೊಂದಿವೆ. ಜೊತೆಗೆ ಡಿಜಿಟಲ್​​ ಸ್ಪರ್ಶ ಪಡೆದಿವೆ.

Hydrogen Train Launch Live: ಹರಿಯಾಣದಲ್ಲಿ ದೇಶದ ಮೊದಲ ‘ಹೈಡ್ರೋಜನ್ ರೈಲಿ’ಗೆ ಪಿಎಂ ಮೋದಿ ಇಂದು ಚಾಲನೆ, ನೇರ ಪ್ರಸಾರI

ಭಾರತದ ಇಂಧನ ಮತ್ತು ರೈಲ್ವೆ ವಲಯದಲ್ಲಿ ಇಂದು ಹೊಸ ಕ್ರಾಂತಿ ಸೃಷ್ಟಿಯಾಗುತ್ತಿದೆ. ಹರಿಯಾಣ, ಚಂಡೀಗಢ ಮತ್ತು ಪಂಜಾಬ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸಲಿರುವ ಭಾರತದ ಮೊದಲ 'ಹೈಡ್ರೋಜನ್ ಚಾಲಿತ ರೈಲಿ'ಗೆ ಹಸಿರು ನಿಶಾನೆ ತೋರಲಿದ್ದಾರೆ.

ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ

Indian Railways launch Beta version of new IRCTC website: ಭಾರತೀಯ ರೈಲ್ವೇಸ್ ಇಲಾಖೆಯು ಸುಧಾರಿತ ಐಆರ್​ಸಿಟಿಸಿ ವೆಬ್​ಸೈಟ್ ರೂಪಿಸಿದೆ. ಇವತ್ತು ಜುಲೈ 16ರಂದು ಹೊಸ ವೆಬ್​ಸೈಟ್​ನ ಬೀಟಾ ಆವೃತ್ತಿ ಬಿಡುಗಡೆ ಆಗುತ್ತಿದೆ. ಹಳೆಯ ವೆಬ್​ಸೈಟ್​ನಲ್ಲಿ ಇದ್ದ ಮಂದಗತಿ, ಕ್ಯಾಪ್ಚಾ ರಗಳೆ ಇತ್ಯಾದಿ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಹೊಸ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಬಹಳ ಸರಳಗೊಂಡಿದೆ.

ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?

Indian Railways digital ticket rules: ಯಾರೋ ಬುಕ್ ಮಾಡಿದ ಟಿಕೆಟ್​ನ ಸ್ಕ್ರೀನ್​ಶಾಟ್ ಇಟ್ಟುಕೊಂಡು ರೈಲಿನಲ್ಲಿ ಪ್ರಯಾಣಿಸಲು ಆಗುವುದಿಲ್ಲ. ಭಾರತೀಯ ರೈಲ್ವೆ ಇಲಾಖೆ ಡಿಜಿಟಲ್ ಟಿಕೆಟ್ ನಿಯಮಗಳನ್ನು ಪರಿಷ್ಕರಿಸಿದೆ. ನಿಮ್ಮದೇ ನಂಬರ್​ನಲ್ಲಿ ಬುಕ್ ಮಾಡಿದ ಟಿಕೆಟ್ ಆಗಿರಬೇಕು, ಅಥವಾ ಟಿಕೆಟ್ ಬುಕ್ ಮಾಡಿದವರೂ ಜೊತೆಯಲ್ಲಿ ಪ್ರಯಾಣಿಸುತ್ತಿರಬೇಕು.

ರೈಲ್ವೆ ಟಿಕೆಟ್ ಬುಕಿಂಗ್ ಅಲರ್ಟ್: ಆಧಾರ್ ದೃಢೀಕೃತ ಬಳಕೆದಾರರಿಗೆ ನಿಯಮ ಬದಲಾವಣೆ

IRCTC rules change for Aadhaar authenticated users: ಐಆರ್​ಸಿಟಿಸಿಯ ಆಧಾರ್ ದೃಢೀಕೃತ ಬಳಕೆದಾರರಿಗೆ ಟಿಕೆಟ್ ಬುಕಿಂಗ್​ನನಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತದೆ. ಅಡ್ವಾನ್ಸ್ ರಿಸರ್ವೇಶನ್ ಪೀರಿಯಡ್ ಆರಂಭವಾದ ಮೊದಲ ದಿನ ಸಂಪೂರ್ಣವಾಗಿ ಆಧಾರ್ ದೃಢೀಕೃತ ಬಳಕೆದಾರರಿಗೆ ಮೀಸಲಾಗಿರುತ್ತದೆ. ಆ ದಿನ ಏಜೆಂಟ್ ಆಗಲೀ ಬೇರೆಯವರಾಗಲೀ ಯಾರೂ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ.

IRCTC Child Ticket Rules: ಟ್ರೈನ್​ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ

Indian Child Ticket Policy: ಟ್ರೈನುಗಳಲ್ಲಿ 5 ವರ್ಷದೊಳಗಿನ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಇದೆ. 5ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಟಿಕೆಟ್ ಮಾತ್ರ ಇದೆ. 12 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಪೂರ್ಣ ದರದ ಟಿಕೆಟ್ ನೀಡಲಾಗುತ್ತದೆ. ಮಕ್ಕಳಿಗೆ ಟಿಕೆಟ್​ನಲ್ಲಿ ವಿನಾಯಿತಿ ಮತ್ತು ರಿಯಾಯಿತಿ ಇದ್ದರೂ ಕೆಲ ನಿರ್ಬಂಧಗಳು ಅನ್ವಯ ಆಗುತ್ತವೆ. ಅವನ್ನು ಈ ಲೇಖನದಲ್ಲಿ ತಿಳಿಯಿರಿ.

Fact Check: ಒಬ್ಬರ ಐಡಿಯಿಂದ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಲು ಆಗಲ್ಲವಾ? ವೈರಲ್ ಪೋಸ್ಟ್​ಗೆ ಐಆರ್​ಸಿಟಿಸಿ ಸ್ಪಷ್ಟನೆ

IRCTC clarification on train ticket restriction rumours: ಐಆರ್​ಸಿಟಿಸಿ ಪ್ಲಾಟ್​ಫಾರ್ಮ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಲಾಗಿನ್ ಆಗಬೇಕು. ಒಬ್ಬರ ಲಾಗಿನ್​ನಲ್ಲಿ ಬೇರೆಯರಿಗೆ ಟಿಕೆಟ್ ಬುಕ್ ಮಾಡುವಂತಿಲ್ಲ. ಮಾಡಿದರೆ ಜೈಲು ಶಿಕ್ಷೆ ಕಾದಿದೆ ಎನ್ನುವಂತಹ ಪೋಸ್ಟ್​ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಐಆರ್​ಸಿಟಿಸಿ ಸ್ಪಂದಿಸಿದ್ದು, ಈ ವೈರಲ್ ಪೋಸ್ಟ್​ನಲ್ಲಿರುವ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಕಡೆಯಿಂದ ಅಯೋಧ್ಯೆಗೆ 11 ವಿಶೇಷ ರೈಲು

ದರ, ಮಾರ್ಗಗಳು ಮತ್ತು ವೇಳಾಪಟ್ಟಿಯ ವಿವರಗಳನ್ನು ರೂಪಿಸಲಾಗುತ್ತಿದೆ. ಆ ಕುರಿತ ಹೆಚ್ಚಿನ ವಿವರ ಶೀಘ್ರದಲ್ಲೇ ದೊರೆಯಲಿದೆ ಎಂದು ಮೂಲಗಳು ಹೇಳಿವೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಒಂದು ತಿಂಗಳ ಒಳಗಾಗಿ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದೆ.

ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ: ಎಸಿ ಕ್ಲಾಸ್​​​ನಲ್ಲಿ ಪ್ರಯಾಣಿಸುವ RAC ಪ್ರಯಾಣಿಕರಿಗೆ ಸಂಪೂರ್ಣ ಬೆಡ್ ರೋಲ್ ಕಿಟ್

Railway Department: ಇನ್ನು ಮುಂದೆ ಆರ್​​​​ಎಸಿ ಪ್ರಯಾಣಿಕರಿಗೂ ಪ್ರತ್ಯೇಕ ಬೆಡ್ ರೋಲ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೈಲ್ವೆ ಮಂಡಳಿಯಿಂದ ಎಲ್ಲಾ ವಲಯ ರೈಲ್ವೆ ಮತ್ತು IRCTC ಅಧಿಕಾರಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ. ಎಸಿ ಕ್ಲಾಸ್‌ನಲ್ಲಿ (ಎಸಿ ಚೇರ್ ಕಾರ್ ಹೊರತುಪಡಿಸಿ) ಪ್ರಯಾಣಿಸುವ ಆರ್‌ಎಸಿ ಪ್ರಯಾಣಿಕರಿಗೆ ಹೊದಿಕೆ, ಬೆಡ್ ಶೀಟ್ ಮತ್ತು ಟವೆಲ್, ದಿಂಬು ಸೇರಿದಂತೆ ಸಂಪೂರ್ಣ ಬೆಡ್ ರೋಲ್ ಕಿಟ್ ನೀಡಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.