ರೈಲ್ವೆ ಟಿಕೆಟ್ ಬುಕಿಂಗ್ ಅಲರ್ಟ್: ಆಧಾರ್ ದೃಢೀಕೃತ ಬಳಕೆದಾರರಿಗೆ ನಿಯಮ ಬದಲಾವಣೆ
IRCTC rules change for Aadhaar authenticated users: ಐಆರ್ಸಿಟಿಸಿಯ ಆಧಾರ್ ದೃಢೀಕೃತ ಬಳಕೆದಾರರಿಗೆ ಟಿಕೆಟ್ ಬುಕಿಂಗ್ನನಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತದೆ. ಅಡ್ವಾನ್ಸ್ ರಿಸರ್ವೇಶನ್ ಪೀರಿಯಡ್ ಆರಂಭವಾದ ಮೊದಲ ದಿನ ಸಂಪೂರ್ಣವಾಗಿ ಆಧಾರ್ ದೃಢೀಕೃತ ಬಳಕೆದಾರರಿಗೆ ಮೀಸಲಾಗಿರುತ್ತದೆ. ಆ ದಿನ ಏಜೆಂಟ್ ಆಗಲೀ ಬೇರೆಯವರಾಗಲೀ ಯಾರೂ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ.

ನವದೆಹಲಿ, ಜನವರಿ 12: ಐಆರ್ಸಿಟಿಸಿಯ ಆಧಾರ್ ದೃಢೀಕೃತ ಬಳಕೆದಾರರು ಟ್ರೈನ್ ಟಿಕೆಟ್ ಬುಕ್ ಮಾಡುವ ನಿಯಮಗಳಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಜನರಲ್ ರಿಸರ್ವ್ ಟಿಕೆಟ್ ಬುಕಿಂಗ್ ಹಾಗು ಅಡ್ವಾನ್ ರಿಸರ್ವೇಶನ್ ಪೀರಿಯಡ್ (ಎಆರ್ಪಿ) ಸಂಬಂಧಿಸಿದ ನಿಯಮಗಳಲ್ಲಿ ಈ ಬದಲಾವಣೆಗಳಿವೆ. ಇದರಲ್ಲಿ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಆಧಾರ್ ದೃಢೀಕೃತ ಬಳಕೆದಾರರಿಗೆ ಆದ್ಯತೆ ಕೊಡುವ (ಸ್ಪೆಷಲ್ ವಿಂಡೋ) ಒಂದು ವ್ಯವಸ್ಥೆಯೂ ಇದೆ.
ಈ ಹಿಂದೆ ಇದ್ದ ನಿಯಮಗಳ ಪ್ರಕಾರ, ಆಧಾರ್ ದೃಢೀಕೃತ ಬಳಕೆದಾರರು ರಿಸರ್ವ್ಡ್ ಟಿಕೆಟ್ ಬುಕಿಂಗ್ ಆರಂಭಗೊಂಡ ಮೊದಲ ದಿನ ಬೆಳಗ್ಗೆ 8ರಿಂದ ಸಂಜೆ 4ರವವರೆಗೆ ಮಾತ್ರ ಟ್ರೈನ್ ಟಿಕೆಟ್ ಬುಕ್ ಮಾಡಲು ಅವಕಾಶ ಹೊಂದಿರುತ್ತಾರೆ. ಇವತ್ತಿನಿಂದ (ಜನವರಿ 12) ಎಆರ್ಪಿಯ ಮೊದಲ ದಿನವನ್ನು ಸಂಪೂರ್ಣ ಆಧಾರ್ ದೃಢೀಕೃತ ಬಳಕೆದಾರರಿಗೆ ಮೀಸಲಿರಿಸಲಾಗಿದೆ. ಅಂದರೆ, ಇವರು ಮಾತ್ರವೇ ಅಂದು ಟ್ರೈನ್ ಟಿಕೆಟ್ ಬುಕಿಂಗ್ ಮಾಡಬಹುದು.
ಇದನ್ನೂ ಓದಿ: ಪಿಎಸ್ಎಲ್ವಿ ರಾಕೆಟ್ ವೈಫಲ್ಯ; ನಾಶಗೊಂಡ ಸೆಟಿಲೈಟ್ಗಳ ನಷ್ಟ ಯಾರು ಭರಿಸೋದು?
ತತ್ಕಾಲ್ ಟಿಕೆಟ್ ಬುಕಿಂಗ್
ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ನೀವು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ದೃಢೀಕರಣ ಬೇಕು. ಆಧಾರ್ ಒಟಿಪಿ ಮೂಲಕ ದೃಢೀಕರಣ ಪಡೆದರೆ ಮಾತ್ರ ತತ್ಕಾಲ್ ಟಿಕೆಟ್ ಬುಕಿಂಗ್ ಸಾಧ್ಯ. ಇದು 2025ರ ಜುಲೈನಿಂದ ಜಾರಿಗೆ ಬಂದಿರುವ ನಿಯಮ.
ಅಡ್ವಾನ್ಸ್ ರಿಸರ್ವೇಶನ್
ನೀವು ಟ್ರೈನ್ ಹೊರಡುವ ದಿನಕ್ಕೆ 60 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ಕೊಡಲಾಗಿದೆ. ಅಂದರೆ ಅಡ್ವಾನ್ಸ್ ರಿಸರ್ವೇಶನ್ 60 ದಿನಗಳಷ್ಟು ಇದೆ.
ಇದನ್ನೂ ಓದಿ: ರೆಸ್ಟೋರೆಂಟ್ಗಿಂತ ಜೊಮಾಟೋದಲ್ಲಿ ಭಾರೀ ರೇಟ್; ಆನ್ಲೈನ್ನಲ್ಲಿ ಡಿಬೇಟ್; ಕರ್ಮ ಫುಡ್ ಆ್ಯಪ್ನದ್ದೋ, ಹೋಟೆಲ್ನದ್ದೋ?
ಟ್ರೈನ್ ಪ್ರಯಾಣ ದರ ಹೆಚ್ಚಳ
2025ರ ಡಿಸೆಂಬರ್ 26ರಂದು ರೈಲ್ವೇಸ್ ತನ್ನ ಪ್ರಯಾಣ ಸೇವೆಯ ದರಗಳನ್ನು ಹೆಚ್ಚಿಸಿದೆ. 216ರಿಂದ 750 ಕಿಮೀ ಅಂತರಕ್ಕೆ 5 ರೂ ಟಿಕೆಟ್ ಬೆಲೆ ಏರಿಕೆ ಮಾಡಲಾಗಿದೆ. 751 ಕಿಮೀಯಿಂದ 1,250 ಕಿಮೀವರೆಗಿನ ಅಂತರಕ್ಕೆ 10 ರೂ; 1,251 ಕಿಮೀಯಿಂದ 1,750 ಕಿಮೀವರೆಗಿನ ಅಂತರಕ್ಕೆ 15 ರೂ; 1,751 ಕಿಮೀಯಿಂದ 2,250 ಕಿಮೀವರೆಗಿನ ಅಂತರಕ್ಕೆ 20 ರೂನಷ್ಟು ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ. ಸ್ಲೀಪರ್ ಕ್ಲಾಸ್ ಮತ್ತು ಫಸ್ಟ್ ಕ್ಲಾಸ್ ಆರ್ಡಿನರಿ ಟಿಕೆಟ್ನಲ್ಲಿ ಪ್ರತೀ ಕಿಮೀಗೆ ಒಂದು ಪೈಸೆ ಬೆಲೆ ಏರಿಕೆ ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




