AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಂತರ ರೂ ಆದಾಯವಿರುವ ದೇಗುಲದಲ್ಲಿ ಅಭಿವೃದ್ಧಿ ಶೂನ್ಯ: ರಾಜ್ಯದ ಶ್ರೀಮಂತ ದೇಗುಲಕ್ಕೆ ಇದೆಂಥಾ ಸ್ಥಿತಿ?

ಕೋಟ್ಯಂತರ ರೂ ಆದಾಯವಿರುವ ದೇಗುಲದಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ನಿತ್ಯ ಭೇಟಿ ನೀಡುವ ಲಕ್ಷಾಂತರ ಭಕ್ತರು ಪರದಾಡುವಂತಾಗಿದೆ. ಇನ್ನು ಹದಿನಾರು ವರ್ಷ ಕಳೆದರೂ ಮಾಸ್ಟರ್ ಪ್ಲ್ಯಾನ್​​ ಪೂರ್ಣಗೊಂಡಿಲ್ಲ. ಹೀಗಾಗಿ ರಾಜ್ಯದ ಶ್ರೀಮಂತ ದೇಗುಲಕ್ಕೆ ಇದೆಂಥಾ ಸ್ಥಿತಿ ಎನ್ನುವಂತಾಗಿದೆ.

ಕೋಟ್ಯಂತರ ರೂ ಆದಾಯವಿರುವ ದೇಗುಲದಲ್ಲಿ ಅಭಿವೃದ್ಧಿ ಶೂನ್ಯ: ರಾಜ್ಯದ ಶ್ರೀಮಂತ ದೇಗುಲಕ್ಕೆ ಇದೆಂಥಾ ಸ್ಥಿತಿ?
ಕುಕ್ಕೆ ಸುಬ್ರಹ್ಮಣ್ಯImage Credit source: tv9 kannada
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Mar 17, 2026 | 9:40 PM

Share

ಮಂಗಳೂರು, ಮಾರ್ಚ್​​ 17: ಕುಕ್ಕೆ ಸುಬ್ರಹ್ಮಣ್ಯ‌ ದೇವಸ್ಥಾನ (Kukke Shree Subrahmanya Temple) ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದು. ಕೋಟ್ಯಂತರ ರೂ ಆದಾಯ ತಂದು ಕೊಡುವ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾತ್ರ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ ಎಂಬುದು‌ ದಶಕಗಳ‌ ಆರೋಪ.‌ ಸಂಪತ್ತು ಇದ್ದರೂ ಇಚ್ಛಾಶಕ್ತಿ, ಕ್ರಿಯಾಶಕ್ತಿ‌ ಇಲ್ಲದ ಪರಿಣಾಮ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವಂತಾಗಿದೆ.

ಭಕ್ತರ ಆರೋಪವೇನು?

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪ್ರಸಿದ್ಧ ನಾಗ ಕ್ಷೇತ್ರ ಅಂತಾನೆ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿರುವ ಈ ದೇವಸ್ಥಾನಕ್ಕೆ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಆದರೆ ಇತಿಹಾಸ ಪ್ರಸಿದ್ಧವಾಗಿರುವ ಈ ದೇವಸ್ಥಾನದಲ್ಲಿ ವ್ಯವಸ್ಥೆಗಳು ಮಾತ್ರ ಇನ್ನು ಇತಿಹಾಸ ಕಾಲದ್ದೆ ಇದೆ ಎಂಬುದು ಭಕ್ತರ ಆರೋಪ.

ಇದನ್ನೂ ಓದಿ: ಕುಕ್ಕೆ ಹಾಗೂ ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್ ನೀಡಿದ ಸಿದ್ದರಾಮಯ್ಯ

ದೇವಳದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ಯೋಜನೆ ಜಾರಿಗೊಳಿಸಿ 17 ವರ್ಷವಾದರೂ ಇನ್ನು ಕೂಡ ಪೂರ್ಣವಾಗಿಲ್ಲ ಎಂಬದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟು 604 ಕೋಟಿ ರೂ ಕಾಮಗಾರಿಯಲ್ಲಿ ಈಗಾಗಲೇ ಎರಡು ಹಂತವನ್ನೂ ಪೂರ್ಣಗೊಳಿಸಿದ್ದು, ಈಗ ಮೂರನೇ ಹಂತದ ಕಾಮಗಾರಿಗಳ ಯೋಜನೆ, ಅಂದಾಜುಪಟ್ಟಿ ಸಿದ್ದಗೊಳಿಸಿ ಪಿಡಬ್ಲ್ಯುಡಿ ಇಲಾಖೆಯಿಂದ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿದ್ದರು ಸಹ ಇನ್ನು ಸಹ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ 600 ಕೋಟಿ ರೂ ಎಫ್​​ಡಿ ಇದ್ದರೂ, ವಾರ್ಷಿಕ 150 ಕೋಟಿಗೂ ಹೆಚ್ಚು ಆದಾಯವಿದ್ದರು ಸಹ ಈ ಹಣವನ್ನು ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕೆಂದರೆ ಸರ್ಕಾರದ, ಹಣಕಾಸು ಇಲಾಖೆಯ‌ ಅನುಮೋದನೆ ಕಡ್ಡಾಯವಾಗಿದೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಇಲ್ಲದೆ, ಅವೈಜ್ಞಾನಿಕ ತೀರ್ಮಾನಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪವಿದೆ.

ಏನೆಲ್ಲಾ ನಿರ್ಮಾಣವಾಗಬೇಕು?

ದೇವಳದಲ್ಲಿ ಸರ್ಪ ಸಂಸ್ಕಾರ ಸೇವೆ ಬಹಳಷ್ಟು ಪ್ರಸಿದ್ಧಿ ಪಡೆದಿದ್ದು ಪ್ರಸ್ತುತ ದಿನವೊಂದಕ್ಕೆ 175 ಭಕ್ತರಿಗೆ ಮಾತ್ರ ಸೇವೆ ನಡೆಸಲು ಅವಕಾಶವಿದ್ದು, ಎರಡು ತಿಂಗಳ ಕಾಲ ಬುಕ್ಕಿಂಗ್​ಗೆ ಕಾಯಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಸರ್ಪ ಸಂಸ್ಕಾರ ಯಾಗಶಾಲೆಯ ನಿರ್ಮಾಣವಾಗಬೇಕಿದೆ. ಒಂದು ಸಾವಿರ ಮಂದಿ ಆಶ್ಲೇಷ ಬಲಿ ಪೂಜೆ ಸಲ್ಲಿಸಲು ಪೂಜಾ ಮಂದಿರವೂ ನಿರ್ಮಾಣವಾಗಬೇಕಿದೆ. ಸದ್ಯ 25 ವರ್ಷ ಹಿಂದಿನ ಭೋಜನಶಾಲೆಯಿದ್ದು ಇನ್ನು ಮುಂದೆ ಏಕಕಾಲದಲ್ಲಿ ಐದು ಸಾವಿರ ಮಂದಿ ಕೂತು ಊಟ ಮಾಡುವ ಭೋಜನ ಶಾಲೆ ನಿರ್ಮಾಣವಾಗಬೇಕಿದೆ.

ಇದನ್ನೂ ಓದಿ: ಕರ್ನಾಟಕದ ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ: ದಕ್ಷಿಣ ಕನ್ನಡದ ಈ ದೇಗುಲ ಫಸ್ಟ್​

ಸದ್ಯ ದೇವಳದಲ್ಲಿ ವಸತಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಸೀಸನ್ ಸಮಯದಲ್ಲಿ ಭಕ್ತರು ರಥಬೀದಿಯಲ್ಲೆ ಮಲಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ 604 ಕೋಟಿ ರೂ ಗಳ‌ ಮಾಸ್ಟರ್ ಪ್ಲ್ಯಾನ್​ನಲ್ಲಿ ಪಾರಂಪರಿಕ ರಥಬೀದಿ, 800 ಕೊಠಡಿಗಳ ವಸತಿಗೃಹ, ಶೌಚಾಲಯ, ಗೆಸ್ಟ್ ಹೌಸ್, ಸುತ್ತು ಪೌಳಿ‌ ದುರಸ್ತಿ ಸೇರಿದಂತೆ ಅನೇಕ‌ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಸದ್ಯ ಈ ಬಾರಿಯ ಬಜೆಟ್​ನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ರಚಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಿದ್ದು, ಇನ್ನಾದರೂ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳು ಆಗುತ್ತಾ ಅಂತಾ ಕಾದು ನೋಡಬೇಕಾಗಿದೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಜ್ ಬಿ. ಶೆಟ್ಟಿಗೆ ಕೇಳಿ ರಿಷಬ್ ಫೋನ್ ನಂಬರ್ ತಗೊಂಡೆ: ಟೊವಿನೋ ಥಾಮಸ್
ರಾಜ್ ಬಿ. ಶೆಟ್ಟಿಗೆ ಕೇಳಿ ರಿಷಬ್ ಫೋನ್ ನಂಬರ್ ತಗೊಂಡೆ: ಟೊವಿನೋ ಥಾಮಸ್
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು