AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಬೃಹತ್ ಗುರಿ ಬೆನ್ನಟ್ಟಲಾಗದೆ ಸೋತ ಟೀಂ ಇಂಡಿಯಾ; ಇಂಗ್ಲೆಂಡ್​ಗೆ ಸರಣಿ

England Beats India 2-1 in ODI Series at Lord's: ಇಂಗ್ಲೆಂಡ್ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾರತವನ್ನು 27 ರನ್‌ಗಳಿಂದ ಸೋಲಿಸಿ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಬೆನ್ ಡಕೆಟ್ ಶತಕ ಮತ್ತು ಸ್ಯಾಮ್ ಕರನ್ ಪ್ರದರ್ಶನ ಇಂಗ್ಲೆಂಡ್‌ಗೆ ಜಯ ತಂದಿತು. ರೋಹಿತ್ ಶರ್ಮಾ ಶತಕ ವೃಥಾ ಆಯಿತು. 2018ರ ನಂತರ ಇಂಗ್ಲೆಂಡ್‌ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದಿರುವುದು ಇದೇ ಮೊದಲು.

IND vs ENG: ಬೃಹತ್ ಗುರಿ ಬೆನ್ನಟ್ಟಲಾಗದೆ ಸೋತ ಟೀಂ ಇಂಡಿಯಾ; ಇಂಗ್ಲೆಂಡ್​ಗೆ ಸರಣಿ
Ind Vs Eng
ಪೃಥ್ವಿಶಂಕರ
|

Updated on:Jul 20, 2026 | 12:14 AM

Share

ಲಾರ್ಡ್ಸ್‌ ( Lord’s) ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಇಂಗ್ಲೆಂಡ್‌ 27 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇಂಗ್ಲೆಂಡ್‌ ಟಿ20 ಸರಣಿ ಜೊತೆಗೆ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಬೆನ್ ಡಕೆಟ್ ಅವರ ಶತಕ ಸೇರಿದಂತೆ ಸ್ಫೋಟಕ ಬ್ಯಾಟಿಂಗ್ ಮತ್ತು ಸ್ಯಾಮ್ ಕರನ್ ಅವರ ಅದ್ಭುತ ಸ್ಪೆಲ್‌ ಇಂಗ್ಲೆಂಡ್ ಗೆಲುವಿಗೆ ಕಾರಣವಾಯಿತು. ರೋಹಿತ್ ಶರ್ಮಾ ( Rohit Sharma) ಅವರ ಐತಿಹಾಸಿಕ ಶತಕ ಕೂಡ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ, 2018 ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್, ಭಾರತದ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಬೆನ್ ಡಕೆಟ್

ಇಂಗ್ಲೆಂಡ್ ಪರ ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ಉತ್ತಮ ಆರಂಭ ನೀಡಿದರು . ಈ ಜೋಡಿ ಮೊದಲ ವಿಕೆಟ್‌ಗೆ 192 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಜಾಕೋಬ್ ಬೆಥೆಲ್ 93 ಎಸೆತಗಳಲ್ಲಿ 91 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ನಂತರ ಜೊತೆಯಾದ ಬೆನ್ ಡಕೆಟ್ ಮತ್ತು ಜೋ ರೂಟ್ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಈ ಜೋಡಿ 80 ಎಸೆತಗಳಲ್ಲಿ 101 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು.

ಕೊನೆಯಲ್ಲಿ ಅಬ್ಬರಿಸಿದ ಬಟ್ಲರ್

ಈ ಸಮಯದಲ್ಲಿ, ಬೆನ್ ಡಕೆಟ್ ಶತಕ ಕೂಡ ಪೂರೈಸಿದರು. ಅಂತಿಮವಾಗಿ ಡಕೆಟ್ 135 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್‌ಗಳೊಂದಿಗೆ 141 ರನ್‌ಗಳಿಸಿ ಔಟಾದರು. ಜೋ ರೂಟ್ ಒಂದು ಕಡೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಅರ್ಧಶತಕವನ್ನೂ ಸಿಡಿಸಿದರು. ಆದರೆ ನಾಯಕ ಹ್ಯಾರಿ ಬ್ರೂಕ್ 12 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಬಟ್ಲರ್ 13 ಎಸೆತಗಳಲ್ಲಿ 41 ರನ್ ಬಾರಿಸಿ ಇಂಗ್ಲೆಂಡ್‌ ತಂಡವನ್ನು ದಾಖಲೆಯ ಮೊತ್ತಕ್ಕೆ ಕೊಂಡೊಯ್ದರು.

ಭಾರತಕ್ಕೆ ಉತ್ತಮ ಆರಂಭ

ಇಂಗ್ಲೆಂಡ್ ನೀಡಿದ 388 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ನಾಯಕ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭವನ್ನು ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 147 ರನ್‌ಗಳ ಪಾಲುದಾರಿಕೆಯನ್ನು ನೀಡಿತು. ಶುಭಮನ್ ಗಿಲ್ 77 ರನ್‌ಗಳಿಗೆ ಔಟಾದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 86 ಎಸೆತಗಳಲ್ಲಿ 113 ರನ್‌ಗಳ ಪಾಲುದಾರಿಕೆಯನ್ನು ನೀಡಿತು. ಈ ಜೋಡಿ ಇರುವವರೆಗೂ, ಭಾರತದ ಗೆಲುವಿನ ಭರವಸೆ ಇತ್ತು. ಆದಾರೆ ಈ ಜೋಡಿ ಮುರಿದುಬಿದ್ದ ಬಳಿಕ ಸೋಲಿನ ಚಿತ್ರಕಥೆ ಬರೆಯಲು ಪ್ರಾರಂಭಿಸಿತು. ರೋಹಿತ್ ಶರ್ಮಾ 110 ಎಸೆತಗಳಲ್ಲಿ 138 ರನ್‌ಗಳಿಗೆ ಔಟಾದರು.

IND vs ENG: ಲಾರ್ಡ್ಸ್‌ನಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ರೋಹಿತ್

ರೋಹಿತ್, ಕೊಹ್ಲಿ ಹೋರಾಟ ವ್ಯರ್ಥ

ರೋಹಿತ್ ಶರ್ಮಾ ವಿಕೆಟ್ ನಂತರ ಮೈದಾನಕ್ಕೆ ಬಂದ ಇಶಾನ್ ಕಿಶನ್ ಕೂಡ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಅವರು 12 ಎಸೆತಗಳಲ್ಲಿ 14 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಉಪನಾಯಕ ಶ್ರೇಯಸ್ ಅಯ್ಯರ್ ಪಂದ್ಯವನ್ನು ಮುಗಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಮೂರು ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟಾದರು. ಆದ್ದರಿಂದ ತ್ವರಿತ ರನ್ ಗಳಿಸುವ ಹೊರೆ ವಿರಾಟ್ ಕೊಹ್ಲಿಯ ಮೇಲೆ ಮಾತ್ರ ಬಿತ್ತು. ಅವರು 60 ಎಸೆತಗಳಲ್ಲಿ 74 ರನ್ ಗಳಿಸಿದರು. ಆದರೆ ದೊಡ್ಡ ಹೊಡೆತ ಹೊಡೆಯುವ ಪ್ರಯತ್ನದಲ್ಲಿ ಔಟಾದರು. ಏಕೆಂದರೆ ರನ್‌ಗಳು ಮತ್ತು ಎಸೆತಗಳ ನಡುವೆ ಅಗಾಧ ವ್ಯತ್ಯಾಸವಿತ್ತು. ಆದ್ದರಿಂದ ಅವರಿಗೆ ರಿಸ್ಕ್ ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಕೆಎಲ್ ರಾಹುಲ್ 8 ಎಸೆತಗಳಲ್ಲಿ 12 ರನ್‌ಗಳಿಗೆ ಔಟಾಗುತ್ತಿದ್ದಂತೆ ತಂಡದ ಸೋಲು ಖಚಿತವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:03 am, Mon, 20 July 26

Follow Us
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು
ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ: ಬ್ರಹ್ಮಾಂಡ ಗುರೂಜಿ
ಚೆನ್ನಮ್ಮ ದೇವೇಗೌಡರ ಮನೆಯ ಮಹಾಲಕ್ಷ್ಮೀ: ಬ್ರಹ್ಮಾಂಡ ಗುರೂಜಿ