AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Rankings: ಏಕದಿನ, ಟೆಸ್ಟ್, ಟಿ20 ಮಾದರಿಯಲ್ಲೂ ಭಾರತೀಯರದ್ದೇ ಪಾರುಪತ್ಯ

ICC Rankings: ಐಸಿಸಿ ಇತ್ತೀಚಿನ ಕ್ರಿಕೆಟ್ ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಟೆಸ್ಟ್ ಬೌಲರ್​ಗಳಲ್ಲಿ ಜಸ್ಪ್ರೀತ್ ಬುಮ್ರಾ, ಏಕದಿನ ಬ್ಯಾಟ್ಸ್‌ಮನ್​ಗಳಲ್ಲಿ ಶುಭ್​ಮನ್ ಗಿಲ್ ಮತ್ತು ಟಿ20 ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ ಅಗ್ರಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಟೆಸ್ಟ್ ಆಲ್‌ರೌಂಡರ್ ಪಟ್ಟಿಯಲ್ಲಿ ಮುಂದಿದ್ದಾರೆ. ಈ ಮೂಲಕ ಮೂರು ಮಾದರಿಗಳಲ್ಲಿ ಭಾರತೀಯ ಆಟಗಾರರ ಪ್ರಾಬಲ್ಯ ಎದ್ದು ಕಾಣುತ್ತಿದ್ದು, ರೋಹಿತ್, ಕೋಹ್ಲಿ, ಯಶಸ್ವಿ ಜೈಸ್ವಾಲ್ ಕೂಡ ಪ್ರಮುಖ ಸ್ಥಾನಗಳಲ್ಲಿದ್ದಾರೆ.

ಪೃಥ್ವಿಶಂಕರ
|

Updated on: Aug 12, 2026 | 10:01 PM

Share
ಐಸಿಸಿ ಇಂದು ಮೂರು ಮಾದರಿಯ ಕ್ರಿಕೆಟ್​ನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಈ ಮೂರು ಮಾದರಿಗಳಲ್ಲಿ ಒಂದಿಲ್ಲೊಂದು ವಿಭಾಗದಲ್ಲಿ ಭಾರತೀಯರೇ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್ ಬೌಲರ್​ಗಳಲ್ಲಿ ಪಟ್ಟಿಯಲ್ಲಿ ಬುಮ್ರಾ ಅಗ್ರಸ್ಥಾನದಲ್ಲಿದ್ದರೆ, ಏಕದಿನ ಬ್ಯಾಟ್ಸ್‌ಮನ್​ಗಳ ಪಟ್ಟಿಯಲ್ಲಿ ಶುಭ್​ಮನ್ ಗಿಲ್ ಪಾರುಪತ್ಯ ಮುಂದುವರೆಸಿದ್ದಾರೆ. ಹಾಗೆಯೇ ಟಿ20 ಯಲ್ಲಿ ಇಶಾನ್ ಕಿಶನ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ರವೀಂದ್ರ ಜಡೇಜಾ ಟೆಸ್ಟ್ ಆಲ್‌ರೌಂಡರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ(PC-PTI).

1 / 5
ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದರೆ, ಬಾಬರ್ ಆಝಂ ಈಗ ಐದು ಸ್ಥಾನಗಳ ಜಿಗಿತ ಕಂಡಿದ್ದು, 15 ರಿಂದ 10 ನೇ ಸ್ಥಾನಕ್ಕೆ ಏರಿದ್ದಾರೆ. ಉಳಿದಂತೆ ಶುಭ್​ಮನ್ ಗಿಲ್ 7 ನೇ ಸ್ಥಾನದಲ್ಲಿ ಮತ್ತು ಯಶಸ್ವಿ ಜೈಸ್ವಾಲ್ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 9 ನೇ ಸ್ಥಾನದಲ್ಲಿದ್ದಾರೆ. ಆದರೆ ರಿಷಭ್ ಪಂತ್ 13 ನೇ ಸ್ಥಾನದಿಂದ 14 ನೇ ಸ್ಥಾನಕ್ಕೆ ಕುಸಿದಿದ್ದಾರೆ(PC-PTI).

2 / 5
ಏಕದಿನ ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಶುಭ್​ಮನ್ ಗಿಲ್ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ ಒಂದು ಸ್ಥಾನ ಬಡ್ತಿ ಪಡೆದು ಏಳನೇ ಸ್ಥಾನ, ಶಾಯ್ ಹೋಪ್ ಎಂಟನೇ ಸ್ಥಾನ ಮತ್ತು ಚರಿತ್ ಅಸಲಂಕಾ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಒಂದು ಸ್ಥಾನ ಕುಸಿದು 13 ರಿಂದ 14ನೇ ಸ್ಥಾನಕ್ಕೆ ಕುಸಿದಿದ್ದಾರೆ(PC-PTI).

3 / 5
ಹಾಗೆಯೇ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ, ಇಶಾನ್ ಕಿಶನ್ ನಂ. 1, ಅಭಿಷೇಕ್ ಶರ್ಮಾ ನಂ. 3 ಮತ್ತು ತಿಲಕ್ ವರ್ಮಾ ನಂ. 6 ಸ್ಥಾನದಲ್ಲಿದ್ದಾರೆ. ಹದಿನೈದು ವರ್ಷದ ವೈಭವ್ ಸೂರ್ಯವಂಶಿ ಕೂಡ 48 ನೇ ಸ್ಥಾನ ಪಡೆದು ಅಗ್ರ 50 ರಲ್ಲಿ ಮುಂದುವರೆದಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 24 ನೇ ಸ್ಥಾನದಲ್ಲಿದ್ದರೆ, ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ನಂ. 19 ನೇ ಸ್ಥಾನದಲ್ಲಿದ್ದಾರೆ(PC-PTI).

4 / 5
ಇನ್ನು ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದರೆ, ಕುಲ್ದೀಪ್ ಯಾದವ್ 14 ನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ 15 ನೇ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 16 ನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಭಾರತೀಯರು ಯಾರೂ ಇಲ್ಲ , ಕುಲ್ದೀಪ್ ಯಾದವ್ 11 ನೇ ಸ್ಥಾನದಲ್ಲಿದ್ದಾರೆ. ಟಿ20 ಬೌಲರ್​ಗಳ ಪಟ್ಟಿಯಲ್ಲಿ ವರುಣ್ ಚಕ್ರವರ್ತಿ 9 ನೇ ಸ್ಥಾನದಲ್ಲಿದ್ದಾರೆ(PC-PTI).

5 / 5
Follow Us