ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ಬೆಂಗಳೂರಿನಿಂದ ಸ್ಥಳಕ್ಕೆ ಬಂದ ವಾಸ್ತು ತಜ್ಞ ಹೇಳಿದ್ದಿಷ್ಟು
ಟಿವಿ9 ಜೊತೆ ಮಾತನಾಡಿರುವ ಖ್ಯಾತ ವಾಸ್ತು ತಜ್ಞ ಹರಿಪ್ರಸಾದ್, ದೇವೇಗೌಡರ ಕುಟುಂಬ ದೇವರು, ವಾಸ್ತು ಬಿಟ್ಟು ಏನನ್ನೂ ಮಾಡಲ್ಲ. ಇಂತಹ ದೈವ ಭಕ್ತರು ಎಲ್ಲೂ ಸಿಗಲ್ಲ. ಎಲ್ಲಿ ಅಂತಿಮ ಸಂಸ್ಕಾರ ಎಂದು ಸ್ಥಳ ನಿಗದಿ ಆಗಿದೆ. ಆದರೆ ಅಲ್ಲಿ ಯಾವ ಕಡೆ ಮಾಡಬೇಕು ಎಂದು ನೋಡಲು ಬಂದಿದ್ದೇನೆ. ಈ ಮೊದಲೇ ಚರ್ಚೆ ಮಾಡಿದ್ದರು. ಈಗ ಖುದ್ದು ನೋಡಲು ಬಂದಿದ್ದೇನೆ ಎಂದರು.
ಹಾಸನ, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ವಾಸ್ತು ಪ್ರಕಾರವೇ ಅಂತ್ಯಕ್ರಿಯೆ ನೆರವೇರಲಿದೆ. ಹೀಗಾಗಿ ದೇವೇಗೌಡ ರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಬೆಂಗಳೂರಿನ ಖ್ಯಾತ ವಾಸ್ತು ತಜ್ಞ ಹರಿಪ್ರಸಾಧ್ ಅವರು ಹರದನಹಳ್ಳಿಗೆ ಭೇಟಿ ನೀಡಿ ಅಂತ್ಯಕ್ರಿಯೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಖ್ಯಾತ ವಾಸ್ತು ತಜ್ಞ ಹರಿಪ್ರಸಾದ್, ದೇವೇಗೌಡರ ಕುಟುಂಬ ದೇವರು, ವಾಸ್ತು ಬಿಟ್ಟು ಏನನ್ನೂ ಮಾಡಲ್ಲ. ಇಂತಹ ದೈವ ಭಕ್ತರು ಎಲ್ಲೂ ಸಿಗಲ್ಲ. ಎಲ್ಲಿ ಅಂತಿಮ ಸಂಸ್ಕಾರ ಎಂದು ಸ್ಥಳ ನಿಗದಿ ಆಗಿದೆ. ಆದರೆ ಅಲ್ಲಿ ಯಾವ ಕಡೆ ಮಾಡಬೇಕು ಎಂದು ನೋಡಲು ಬಂದಿದ್ದೇನೆ. ಈ ಮೊದಲೇ ಚರ್ಚೆ ಮಾಡಿದ್ದರು. ಈಗ ಖುದ್ದು ನೋಡಲು ಬಂದಿದ್ದೇನೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್ಡ್ರೈವ್ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

