ದಿನ ಭವಿಷ್ಯ: ಇಂದು ಈ ರಾಶಿಯವರ ಭಾವನೆಯನ್ನು ಅಪರಿಚಿತರು ಅರಿಯುವರು…
Horoscope Today July 20: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಸೋಮವಾರದಂದು ಪಾಪಕ್ಕೆ ಪ್ರಾಯಶ್ಚಿತ್ತ, ಆಕಸ್ಮಿಕವಾಗಿ ಮಂಗಲ ಕಾರ್ಯದಲ್ಲಿ ಭಾಗಿ, ತಂದೆಗೆ ಸಹಕಾರ, ಸಹೋದರ ಸಂಗಮ, ರಕ್ಷಣಾತ್ಮಕ ಚಿಂತನೆ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವುದು. ಸ್ತ್ರೀಯರಿಂದ ಧನಸಹಾಯವು ಆಗಲಿದೆ. ಇಂದು ನಿಮಗೆ ಸಾಕಷ್ಟು ಸಮಯವಿರಲಿದ್ದು ಸದುಪಯೋಗ ಮಾಡಿಕೊಳ್ಳಬೇಕಿದೆ. ದೇಹವಿಂದು ನಿಮ್ಮ ನಿಯಂತ್ರಣದಲ್ಲಿ ಇರದು. ಸಂಗಾತಿಯ ನಡೆವಳಿಕೆಯನ್ನು ಪ್ರಶಂಸಿಸುವರು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ.
ವೃಷಭ ರಾಶಿ:
ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಇರಲಿದೆ. ತಿಳಿವಳಿಕೆಯ ಕೊರತೆಯಿಂದ ವ್ಯವಹಾರದಲ್ಲಿ ನಷ್ಟವಾದೀತು. ಧಾರ್ಮಿಕವಾಗಿ ಶ್ರದ್ಧೆ, ಭಕ್ತಿಗಳು ಕಡಿಮೆ ಆದೀತು. ಅವಶ್ಯಕ ವಸ್ತುಗಳು ಕಣ್ಮರೆಯಾದಾವು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು.
ಮಿಥುನ ರಾಶಿ:
ಧಾರ್ಮಿಕ ಮತ್ತು ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿ ಇಡುವರು. ದೇಹವನ್ನು ಬಲ ಮಾಡಿಕೊಳ್ಳಲು ಕಸರತ್ತು ಮಾಡುವಿರಿ. ಅನಿವಾರ್ಯವಾಗಿ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ಸ್ನೇಹಿತರ ಸಹಾಯವನ್ನು ಕೇಳುವಿರಿ. ಮಂಗಲ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಲಾಗದು. ಬದಲಾವಣೆಗಳನ್ನು ಕಾತರದಿಂದ ಕಾಯುವಿರಿ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ.
ಕರ್ಕಾಟಕ ರಾಶಿ:
ದೂರಪ್ರಯಾಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸ ಮಾಡಬೇಕಾಗಬಹುದು. ಒಳ್ಳೆಯ ರೂಢಿಯನ್ನು ತಪ್ಪಿಸಿಕೊಳ್ಳುವುದು ಬೇಡ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಹಿರಿಯರ ಮಾತಿನಿಂದ ನಿಮ್ಮ ಸಂವೇದನಾ ಕೇಂದ್ರವು ತೆರೆದುಕೊಳ್ಳಬಹುದು. ಆಲಸ್ಯದಿಂದ ಮನೆಯಲ್ಲಿ ಬೈಗುಳವನ್ನು ಕೇಳಬೇಕಾಗುವುದು. ನಿಮ್ಮ ಕೋಪಕ್ಕೆ ಒಂದು ಮಿತಿ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಮಕ್ಕಳ ಮೇಲಿನ ಮೋಹವನ್ನು ಕಡಿಮೆ ಮಾಡಿಕೊಳ್ಳಬೇಕಾಗುವುದು.
ಸಿಂಹ ರಾಶಿ:
ಕಛೇರಿಯಲ್ಲಿ ನಿಮ್ಮನ್ನು ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಿದ್ದರೂ ನಿಮಗೆ ಹಿಂಜರಿಕೆ ಉಂಟಾಗಲಿದೆ. ಒಣ ಭೂಮಿಯ ಮಾರಾಟದಿಂದ ಲಾಭವಿರಲಿದೆ. ವೃತ್ತಿಯ ಸಾಧನೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ. ಇಂದು ನಿಮ್ಮ ತಾಯಿ ನಿಮಗೆ ಮಾನಸಿಕ ಬಲವನ್ನು ತುಂಬುವಳು. ಸುಳ್ಳು ವ್ಯವಹಾರಗಳು ಹೆಚ್ಚು ಕಾಲ ನಡೆಯದು. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ.
ಕನ್ಯಾ ರಾಶಿ:
ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ವಿಚಿತ್ರ ಎನಿಸಬಹುದು. ತಾಳ್ಮೆಯಿಂದ ಆಗುವ ಕೆಲಸವನ್ನು ತಣ್ಣಗೇ ಮಾಡಿ ಮುಗಿಸಿ. ನಿಮ್ಮವರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ತುಡಿತ ಅತಿಯಾದೀತು. ಸಕಾಲದಲ್ಲಿ ಭೋಜನವನ್ನು ಮಾಡಲು ಕಷ್ಟವಾಗುವುದು. ಕುಚೋದ್ಯ ಮಾಡಲು ಹೋಗಿ ಕೆಂಗಣ್ಣಿಗೆ ಗುರಿಯಾಗುವಿರಿ.
ತುಲಾ ರಾಶಿ:
ನಿಮ್ಮ ಆಸಕ್ತಿಯನ್ನು ನೀವು ಬದಲಾಯಿಸಿಕೊಳ್ಳುವುದು ಬೇಡ. ಸಂಗಾತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮ್ಮ ಕೆಲಸದ ಮೇಲೇ ಹೆಚ್ಚು ಗಮನವಿಡುವುದು ಒಳ್ಳೆಯದು. ಇನ್ನೊಬ್ಬರಿಗೆ ನೋವಾಗದಂತೆ ಹೇಳುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಂದ ಹೆಮ್ಮೆ ಪಡುವ ಸಂಗತಿಗಳು ನಿರೀಕ್ಷಿತವಾಗಿ ಬರಲಿದೆ. ನಿಮ್ಮ ಸದ್ಭಾವವನ್ನು ಆಡಿಕೊಳ್ಳಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಅಂತಃಕರಣವು ಶುದ್ಧವಿದ್ದರೆ ನಿಮಗೆ ಸಿಗದು ಸಿಕ್ಕಿಯೇ ಸಿಗುವುದು.
ವೃಶ್ಚಿಕ ರಾಶಿ:
ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಅಸೂಯೆಯಿಂದ ನಿಮ್ಮ ಕೆಲಸವು ಹಿಂದುಳಿಯುವುದು. ಆರಂಭದ ಶೂರತ್ವದಿಂದ ಅಪಮಾನವಾಗುವುದು. ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣವನ್ನು ಕಳೆದುಕೊಳ್ಳಬಹುದು. ದುರಭ್ಯಾಸಕ್ಕೆ ಶರಣಾಗಿ ಹಣವನ್ನು ಕಳೆದುಕೊಳ್ಳಬಹುದು. ಅತಿಯಾದ ನಂಬಿಕೆಯು ಮುಳುವಾದೀತು ನಿಮಗೆ. ಶಾರೀರಿಕ ಪೀಡೆಯಿಂದ ಚಿಂತೆ ಉಂಟಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ.
ಧನು ರಾಶಿ:
ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ಸಣ್ಣ ವಿಚಾರಗಳಿಗೆ ದ್ವೇಷ ಸಾಧಿಸಿ ಏನು ಮಾಡುವುದಿದೆ. ಮರೆತು ಮುನ್ನಡೆದರೆ ಮಾರ್ಗ ಸುಗಮ. ಇಂದಿನ ಸೋಲೂ ನಿಮಗೆ ಗೆಲುವಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಬಯಸುವಿರಿ. ವಿದೇಶದ ವಿನಿಮಯದಿಂದ ಹಠಾತ್ ಲಾಭವು ಕಾಣಿಸುವುದಿ. ಮಕ್ಕಳನ್ನು ನಯವಾದ ಮಾತುಗಳಿಂದ ಸರಿದಾರಿಗೆ ತರಬೇಕಾಗಬಹುದು.
ಮಕರ ರಾಶಿ:
ನಿಮ್ಮ ಜೀವನದ ಎಲ್ಲ ಪರೀಕ್ಷೆಯನ್ನೂ ಪಾಸಾಗಬೇಕು ಎಂಬುದೇ ನಿಮ್ಮ ನಿಶ್ಚಲ ನಿರ್ಧಾರ. ಹಣಕಾಸಿನ ತೊಂದರೆ ಬಂದರೂ ಅದನ್ನು ನಿಭಾಯಿಸುವ ಚಾಣಕ್ಷತನ ನಿಮಗೆ ಗೊತ್ತಿದೆ. ತಂದೆಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ. ನಿಮ್ಮ ಪ್ರಗತಿಯು ಸಂದೇಹಕ್ಕೆ ಕಾರಣವಾಗಲಿದೆ. ನಿರುದ್ಯೋಗ ಎಂಬ ಕೊರಗು ನಿಮ್ಮನ್ನು ಕಾಡಬಹುದು. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾರ್ಯದ ಸ್ಥಳವನ್ನು ಒತ್ತಡದಿಂದ ಮುಕ್ತಮಾಡಿಕೊಳ್ಳಿ.
ಕುಂಭ ರಾಶಿ:
ಕುಟುಂಬದ ಒತ್ತಡವನ್ನು ಕಛೇರಿಗೆ ಒಯ್ಯವುದು ಬೇಡ. ಬಹು ಮುಖ್ಯ ಕೆಲಸಕ್ಕಾಗಿ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಇಂದು ಮಾಡಬೇಕಾದುದನ್ನು ಮಾಡಿ ಮುಗಿಸಿ. ದೈವವನ್ನು ನಂಬಿ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ. ಹೊಸ ವಿಷಯವನ್ನು ತಿಳಿದುಕೊಳ್ಳಲು ನಿರ್ಧಾರವನ್ನು ಮಾಡುವಿರಿ. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು.
ಮೀನ ರಾಶಿ:
ನೀವು ಉತ್ತಮ ನಡತೆಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ನಿಮ್ಮ ದುರಭ್ಯಾಸಗಳು ನಿಮ್ಮವರಿಗೆ ಅಪಮಾವನ್ನು ಮಾಡಿಸೀತು. ಆಯಾಸವಾಗಿದ್ದರೆ ವಿಶ್ರಾಂತಿಯನ್ನು ಸ್ವಲ್ಪ ಪಡೆಯಿರಿ. ಅತ್ಯಾಪ್ತರ ಕೆಲವು ವರ್ತನೆಗಳು ನಿಮಗೆ ಹಿಂಸೆಯನ್ನು ಕೊಡುತ್ತಿರುವುದು. ಪ್ರಾಪಂಚಿಕ ವಿಷಯದಲ್ಲಿ ಆಸಕ್ತಿ ಕಡಿಮೆ ಇರಲಿದೆ. ಕರ್ತವ್ಯದ ವಿಚಾರದಲ್ಲಿ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಸಾಧ್ಯ, ಕರಣ : ಕೌಲವ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:39 – 09:15, ಯಮಗಂಡ ಕಾಲ 10:50 – 12:26, ಗುಳಿಕ ಕಾಲ 14:12 – 15:37
-ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




