AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಣ್ಣಯ್ಯ’ ಧಾರಾವಾಹಿಗೆ ಗುಡ್​ಬೈ ಹೇಳಿದ ಸುಷ್ಮಿತ್; ಜಿಮ್ ಸೀನಾ ಪಾತ್ರ ಬದಲು

ಜೀ ಕನ್ನಡದ ಜನಪ್ರಿಯ 'ಅಣ್ಣಯ್ಯ' ಧಾರಾವಾಹಿಯ 'ಜಿಮ್ ಸೀನಾ' ಪಾತ್ರಧಾರೀ ಸುಷ್ಮಿತ್ ಜೈನ್ ದಿಢೀರನೆ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಈ ಪಾತ್ರಕ್ಕೆ ನೂತನ ನಟನ ಎಂಟ್ರಿಯಾಗುತ್ತಿದ್ದು, ಸುಷ್ಮಿತ್ ನಿರ್ಗಮನವು ಅಭಿಮಾನಿಗಳಿಗೆ ಬೇಸರ ತಂದಿದೆ. ಅತ್ತ ಶೀಘ್ರದಲ್ಲೇ ಆರಂಭವಾಗಲಿರುವ 'ಬಿಗ್ ಬಾಸ್ ಕನ್ನಡ 13' ರಿಯಾಲಿಟಿ ಶೋಗೆ ಇವರು ಕಾಲಿಡಲಿದ್ದಾರೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.

‘ಅಣ್ಣಯ್ಯ’ ಧಾರಾವಾಹಿಗೆ ಗುಡ್​ಬೈ ಹೇಳಿದ ಸುಷ್ಮಿತ್; ಜಿಮ್ ಸೀನಾ ಪಾತ್ರ ಬದಲು
ಅಣ್ಣಯ್ಯ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 13, 2026 | 8:10 AM

Share

ಮುಖ್ಯಾಂಶಗಳು

  • 'ಅಣ್ಣಯ್ಯ' ಧಾರಾವಾಹಿಗೆ 'ಜಿಮ್ ಸೀನಾ' ಗುಡ್‌ಬೈ
  • ವಿಡಿಯೋ ಮೂಲಕ ಸುಷ್ಮಿತ್ ಭಾವುಕ ಸಂದೇಶ
  • ಧಾರಾವಾಹಿಯಿಂದ ದಿಢೀರ್ ನಿರ್ಗಮನ

ಜೀ ಕನ್ನಡದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಮೂಲಕ ಎಲ್ಲರನ್ನೂ ರಂಜಿಸೋ ಕೆಲಸವನ್ನು ಸುಷ್ಮಿತ್ ಜೈನ್ ಮಾಡುತ್ತಿದ್ದರು. ಈ ಧಾರಾವಾಹಿ ಸಾಕಷ್ಟು ಒಳ್ಳೆಯ ಟಿಆರ್​ಪಿ ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ‘ಜಿಮ್ ಸೀನಾ’ ಎಂಬ ಜನಪ್ರಿಯ ಪಾತ್ರದಲ್ಲಿ ನಟಿಸುತ್ತಿದ್ದ ಸುಷ್ಮಿತ್ ಜೈನ್ ಅವರು ಈ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈ ಕುರಿತು ಸ್ವತಃ ಅವರೇ ವೀಡಿಯೊ ಸಂದೇಶದ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸುಷ್ಮಿತ್ ಜೈನ್ ಅವರ ಸಂದೇಶ

“ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಜಿಮ್ ಸೀನಾ ಮಾತಾಡ್ತಾ ಇದ್ದೀನಿ. ಇನ್ನು ಮುಂದೆ ಈ ಜಿಮ್ ಸೀನಾ ಅನ್ನೋ ಪಾತ್ರವನ್ನು ನಾನು ಮುಂದುವರಿಸುವುದಕ್ಕೆ ಆಗುತ್ತಿಲ್ಲ. ಕೆಲವು ಕಾರಣಾಂತರಗಳಿಂದ ಈ ನಿರ್ಧಾರ ತಗೆದುಕೊಳ್ಳಬೇಕಾಯಿತು. ನನ್ನ ಮನವಿ ಏನೆಂದರೆ, ಇಷ್ಟು ದಿನ ನನಗೆ ಹೇಗೆ ಬೆಂಬಲ ಹಾಗೂ ಪ್ರೀತಿ ಕೊಟ್ಟಿರೋ, ಹಾಗೆಯೇ ಇನ್ನು ಮುಂದೆ ಈ ಪಾತ್ರವನ್ನು ಅಭಿನಯಿಸಲು ಬರುವ ಹೊಸ ಕಲಾವಿದರಿಗೂ ಅದೇ ಪ್ರೀತಿ ಮತ್ತು ಸಪೋರ್ಟ್ ನೀಡಿ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ‘ ಎಂದು ಅವರು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ.

View this post on Instagram

A post shared by Zee Kannada (@zeekannada)

ಹೊಸ ನಟನ ಎಂಟ್ರಿ

ಸುಷ್ಮಿತ್ ಜೈನ್ ಅವರು ಧಾರಾವಾಹಿಯಿಂದ ಹೊರಬಿದ್ದ ಬೆನ್ನಲ್ಲೇ, ‘ಜಿಮ್ ಸೀನಾ’ ಪಾತ್ರಕ್ಕೆ ಹೊಸ ನಟರೊಬ್ಬರು ಸೇರ್ಪಡೆಯಾಗಿದ್ದಾರೆ. ಇನ್ಮುಂದೆ ಈ ಪಾತ್ರದಲ್ಲಿ ನೂತನ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ವಿಷಯ ಸುಷ್ಮಿತ್ ಜೈನ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಧಾರಾವಾಹಿಯಿಂದ ಹೊರ ಹೋಗಬಾರದಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಅಣ್ಣಯ್ಯ’ ಸೀರಿಯಲ್ ನಟ ವಿಕಾಶ್ ಹೊಸ ಸಿನಿಮಾ ‘ಪಾರ್ಥನ್ ಪರಪಂಚ’

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಸುಷ್ಮಿತ್?

ಮತ್ತೊಂದೆಡೆ, ‘ಕನ್ನಡ ಬಿಗ್ ಬಾಸ್ ಸೀಸನ್ 13’ ಶೀಘ್ರವೇ ಆರಂಭವಾಗಲಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸ್ಪರ್ಧಿಗಳ ಕುರಿತು ಕುತೂಹಲ ಹೆಚ್ಚಾಗಿದೆ. ಈ ಹಂತದಲ್ಲೇ ಸುಷ್ಮಿತ್ ಜೈನ್ ಅವರು ‘ಅಣ್ಣಯ್ಯ’ ಧಾರಾವಾಹಿಯಿಂದ ದಿಢೀರ್ ಹೊರಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದ್ದು, ಪ್ರೇಕ್ಷಕರಲ್ಲೂ ಈ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್