AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ಸೌಜನ್ಯ ಕೊಲೆ ಕೇಸ್ ತನಿಖೆಗೆ ಎನ್.ಶಶಿಕುಮಾರ್ ನೇತೃತ್ವದ ಎಸ್​​ಐಟಿ ರಚಿಸಿದ ಸರ್ಕಾರ

Karnataka News Today Live Updates:ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಬರಗಾಲ, ಕಸ್ತೂರಿ ರಂಗನ್ ವರದಿ ಚರ್ಚೆಗಾಗಿ ನಾಲ್ಕನೇ ದಿನಕ್ಕೆ ವಿಸ್ತರಣೆಯಾಗಿದೆ. ಬಿಜೆಪಿ ಆಡಳಿತ ವೈಫಲ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದೆ. ಕಾವೇರಿ ನೀರು ವಿವಾದ ಕುರಿತು ದೆಹಲಿಯಲ್ಲಿ ನಿರ್ಣಾಯಕ ಸಭೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಭೀಕರ ಬಸ್ ಅಗ್ನಿ ಅವಘಡದಲ್ಲಿ 9 ಮಂದಿ ದುರ್ಮರಣ ಹೊಂದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು ಲಭಿಸಿವೆ, ರೋಶಿಬಿನಾ ದೇವಿ ಬೆಳ್ಳಿ ಗೆದ್ದಿದ್ದಾರೆ.

TV9 Kannada News Live: ಸೌಜನ್ಯ ಕೊಲೆ ಕೇಸ್ ತನಿಖೆಗೆ ಎನ್.ಶಶಿಕುಮಾರ್ ನೇತೃತ್ವದ ಎಸ್​​ಐಟಿ ರಚಿಸಿದ ಸರ್ಕಾರ
ವಿಧಾನಸೌಧ
ಅಕ್ಷಯ್​ ಪಲ್ಲಮಜಲು​​
| Edited By: |

Updated on:Sep 24, 2026 | 10:30 PM

Share

LIVE NEWS & UPDATES

  • 24 Sep 2026 10:10 PM (IST)

    ಸೌಜನ್ಯ ಕೊಲೆ ಕೇಸ್ ತನಿಖೆಗೆ ಎಸ್​​ಐಟಿ ರಚಿಸಿದ ಸರ್ಕಾರ

    14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ನಿಗೂಢ ಸಾವು ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಸೌಜನ್ಯ ಕೊಲೆ ಕೇಸ್ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​​ಐಟಿ) ರಚನೆ ಮಾಡಿ ಅದೇಶ ಹೊರಡಿಸಿದೆ. ಎನ್.ಶಶಿಕುಮಾರ್ ನೇತೃತ್ವದ ಐವರು ಐಪಿಎಸ್ ಅಧಿಕಾರಿಗಳನ್ನ ನೇಮಿಸಲಾಗಿದೆ. (ಮತ್ತಷ್ಟು ಓದಿ)

  • 24 Sep 2026 08:07 PM (IST)

    ಮೈಸೂರು ದಸರಾ ಉದ್ಘಾಟಕರಾಗಿ ಗವಿ ಸಿದ್ದೇಶ್ವರ ಸ್ವಾಮೀಜಿ ಆಯ್ಕೆ

    ಈ ಭಾರಿ ಮೈಸೂರು ದಸರಾ ಉದ್ಘಾಟಕರು ಯಾರು ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. ಈ ಸಲ ಮೈಸೂರು ದಸರಾ ಊದ್ಘಾಟಕರಾಗಿ ಕೊಪ್ಪಳದ ಗವಿ ಸಿದ್ದೇಶ್ವರ ಮಠದ ಸ್ವಾಮೀಜಿಯವನ್ನು ಆಯ್ಕೆ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಸೆ.24) ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. (ಮತ್ತಷ್ಟು ಓದಿ)

  • 24 Sep 2026 07:36 PM (IST)

    ಬರ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

    ಕರ್ನಾಟಕದಲ್​ಲಿ ಮಳೆ ಬೆಳೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ರೈತರ ನೆರವಿಗೆ ಡಿಕೆ ಶಿವಕುಮಾರ್ ಸರ್ಕಾರ ಧಾವಿಸಿದೆ. ಹೌದು…ಬರ ಪೀಡಿತ ತಾಲೂಕಗಳ ಪ್ರತಿ ರೈತರಿಗೆ 2500 ರೂ. ಪರಿಹಾರ ಹಣ ಘೋಷಣೆ ತೀರ್ಮಾನಿಸಿದೆ. ಈ ಸಂಬಂಧ ಸದನದಲ್ಲಿ ಇಂದು (ಸೆ.24) ಬರದ ಬಗ್ಗೆ ಚರ್ಚೆ ಮಾಡುವಾಗ ಡಿಸಿಎ ಡಾ ಜಿ ಪರಮೇಶ್ವರ್ ಘೋಷಣೆ ಮಾಡಿದ್ದಾರೆ.

  • 24 Sep 2026 06:31 PM (IST)

    ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸಾವು

    ರೈಲು ಡಿಕ್ಕಿ ಹೊಡೆದು 8 ಎಮ್ಮೆಗಳು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ನಡೆದಿದೆ. ರೈಲ್ವೆ ಹಳಿ ದಾಟುತ್ತಿದ್ದ ಎಮ್ಮೆಗಳ ಮೇಲೆ ರೈಲು ಹರಿದಿದೆ. ಪರಿಣಾಮ 8 ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಮರಿಯಮ್ಮನಹಳ್ಳಿ ನಿವಾಸಿ ಕಾಳಪ್ಪ ಎಂಬುವರಿಗೆ ಈ ಎಮ್ಮೆಗಳು ಸೇರಿದ್ದು, ಘಟನೆಯಿಂದ ಎಮ್ಮೆ ಮಾಲೀಕರಿಗೆ ಭಾರೀ ನಷ್ಟವಾಗಿದೆ. ಇನ್ನು ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • 24 Sep 2026 06:27 PM (IST)

    ಶಿವಮೊಗ್ಗ ನಗರದ ಶಾಲೆಗಳಿಗೆ ನಾಳೆ ಅರ್ಧದಿನ ರಜೆ ಘೋಷಣೆ

    ನಾಳೆ (ಸೆ.25) ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ನಗರದ ಶಾಲೆಗಳಿಗೆ ಅರ್ಧದಿನ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗ ನಗರ ಶಾಲಾ ಅವಧಿಯಲ್ಲಿ ಬದಲಾವಣೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 8:30 ರಿಂದ 12:30 ರವರೆಗೆ ಮಾತ್ರ ತರಗತಿಗಳು / ಪರೀಕ್ಷೆಗಳು ನಡೆಯಲಿವೆ. ಇನ್ನುಳಿದಂತೆ ​ಮಧ್ಯಾಹ್ನದ ನಂತರ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲು ಮುಖ್ಯ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇನ್ನು ​SSLC ಅರ್ಧವಾರ್ಷಿಕ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ. ​SSLC ಪರೀಕ್ಷೆ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ ಯಥಾವತ್ ಆಗಿ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

  • 24 Sep 2026 05:59 PM (IST)

    2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂದ ರಾಹುಲ್

    2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ. ಮತಗಳ್ಳತನದಿಂದ ಪ್ರತಿ ಭಾರತೀಯನ ಅಧಿಕಾರ ಹನನ ಆಗಿದೆ.ಮುಂದಿನ 6 ತಿಂಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ. ಮತಗಳ್ಳತನಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕ್ಷ್ಯಗಳಿವೆ. ಆಯೋಗವನ್ನು ಕಾನೂನಿಗಿಂತ ಹೆಚ್ಚಿನ ಸ್ಥಾನದಲ್ಲಿ ಇಟ್ಟಿದ್ದಾರೆ. ಸರ್ಕಾರ ಚುನಾವಣಾ ಆಯೋಗವನ್ನು ದೊಡ್ಡ ಸ್ಥಾನದಲ್ಲಿ ಕೂರಿಸಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

  • 24 Sep 2026 04:26 PM (IST)

    ಕಾವೇರಿ ನೀರು ವಿವಾದ: CWRC ಶಿಫಾರಸನ್ನು ಎತ್ತಿ ಹಿಡಿದ CWMA

    ತುಮಿಳುನಾಡಿಗೆ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ CWRC ಶಿಫಾರಸನ್ನು CWMA ಎತ್ತಿ ಹಿಡಿದಿದ್ದು, ತಮಿಳುನಾಡಿಗೆ ನಿತ್ಯ 4,000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿದೆ. ಒಟ್ಟು 15 ದಿನಗಳಲ್ಲಿ 5.18 ಟಿಎಂಸಿ ನೀರು ಹರಿಸಲು ಸೂಚನೆ ನೀಡಿದೆ. ಇದರೊಂದಿಗ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ.

  • 24 Sep 2026 04:23 PM (IST)

    ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ಡೆಡ್‌ಲೈನ್‌

    ಕಾಕ್ರೋಚ್ ಜನತಾ ಪಾರ್ಟಿ (CJP) ಗುರುವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದೆ. ಅವರು 48 ಗಂಟೆಗಳೊಳಗೆ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿ ಸಿಜೆಪಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಜೀತ್ ದೀಪ್ಕೆ, “ಮುಖ್ಯ ಚುನಾವಣಾ ಆಯುಕ್ತರೇ ದೇಶದ ಅತಿದೊಡ್ಡ ದೇಶವಿರೋಧಿ. ಜ್ಞಾನೇಶ್ ಕುಮಾರ್ ಈ ದೇಶದ ಅತಿದೊಡ್ಡ ದೇಶವಿರೋಧಿ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಏಕೆಂದರೆ ಅವರು ಭಾರತದ ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆಯಾಗಿದ್ದಾರೆ” ಎಂದು ಹೇಳಿದ್ದಾರೆ.

  • 24 Sep 2026 04:15 PM (IST)

    ಬಳ್ಳಾರಿಯ ಎಸ್‌ಪಿ ಸರ್ಕಲ್‌ಗೆ ಮಹರ್ಷಿ ವಾಲ್ಮೀಕಿ ಸರ್ಕಲ್ ಎಂದು ನಾಮಕರಣ

    ಬಳ್ಳಾರಿಯ ಎಸ್‌ಪಿ ಸರ್ಕಲ್‌ಗೆ ಮಹರ್ಷಿ ವಾಲ್ಮೀಕಿ ಸರ್ಕಲ್ ಎಂದು ನಾಮಕರಣಕ್ಕೆ‌ ಸರ್ಕಾರ ಸಮ್ಮತಿ ಬಳ್ಳಾರಿಯ ಎಸ್‌ಪಿ ಸರ್ಕಲ್‌ಗೆ ಮಹರ್ಷಿ ವಾಲ್ಮೀಕಿ ಸರ್ಕಲ್ ಎಂದು ನಾಮಕರಣಕ್ಕೆ ರಾಜ್ಯ‌ ಸರ್ಕಾರ ಸಮ್ಮತಿಸಿದೆ. ಹಿಂದಿನಿಂದಲೂ ಎಸ್ಪಿ ಸರ್ಕಲ್ ಎಂಬ ಹೆಸರಿತ್ತು. ಇದೀಗ ವಾಲ್ಮೀಕಿ ಸರ್ಕಲ್ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಇಮದು (ಸೆ.24) ಆದೇಶ ಹೊರಡಿಸಿದೆ. ಬಳ್ಳಾರಿಯ ವಾರ್ಡ್‌ ನಂ 37 ರಲ್ಲಿ ಮಹರ್ಷಿ ವಾಲ್ಮೀಕಿ ಸರ್ಕಲ್ ಇದ್ದು, ಜ. 1 ರಂದು ವಾಲ್ಮೀಕಿ ಪುತ್ಥಳಿ ಉದ್ಘಾಟನೆ‌ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಗಲಭೆ ಬಳಿಕ ವಾಲ್ಮೀಕಿ ಅನಾವರಣ ಮುಂದೂಂಡಲಾಗಿತ್ತು. ಇದೀಗ ಪುತ್ಥಳಿ ಉದ್ಘಾಟನೆಗೆ ಆಡಳಿತಾತ್ಮಕ ಅನುಮೋದಿನೆ ನೀಡಿದೆ

  • 24 Sep 2026 03:29 PM (IST)

    ಜನಾರ್ದನ ರೆಡ್ಡಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ

    ಆ್ಯಂಬಿಡೆಂಟ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿ ಖಾನ್‌ಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಪ್ರಕರಣದಿಂದ ಕೈಬಿಟ್ಟ ಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಇನ್ನು ಇದು ಇಂದು (ಸೆ.24) ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆಗೆ ಬಂದಿದ್ದು, ಗಾಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿಖಾನ್‌ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

  • 24 Sep 2026 03:26 PM (IST)

    ಬರ ಘೋಷಣೆ ಮಾಡುವಾಗ ಗ್ರಾಮ ಪಂಚಾಯ್ತಿ ಕೇಂದ್ರವಾಗಿಟ್ಟಿಕೊಳ್ಳಿ: ಸಿಎಂಗೆ ಶ್ರೀಗಳ ಸಲಹೆ

    ಬರ ಘೋಷಣೆ ಮಾಡುವಾಗ ತಾಲೂಕು ಬದಲು ಗ್ರಾಮ ಪಂಚಾಯಿತಿ ಕೇಂದ್ರವಾಗಿಟ್ಟುಕೊಂಡು ಘೋಷಣೆ ಮಾಡಿ ಎಂದು ಸರ್ಕಾರಕ್ಕೆ ಸಿರಿಗೆರೆ ತರಳುಬಾಳು ಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಲಹೆ ನೀಡಿದ್ದಾರೆ. ತರಳಬಾಳು ಪೀಠದ ಶಿವಕುಮಾರಶ್ರೀ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಈಗ ಬರ ಘೋಷಣೆ ಬಗ್ಗೆ ರಾಜಕೀಯ ಒತ್ತಡ ಬರುತ್ತವೆ. ಈಗ ನೀವು ಒಂದು ತಾಲೂಕು ಘೋಷಣೆ ಮಾಡಿದರೆ ಅದೇ ರೀತಿ ಹಾಳಾದ ಪಕ್ಕದ ಜಮೀನು ಸಹ ಹಾಳಾಗಿರುತ್ತೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಅನ್ಯಾಯ ಆಗುತ್ತದೆ. ಮೋಡಗಳು ತಾಲೂಕುಗಳನ್ನ ನೋಡಿ ಸುರಿಯುವುದಿಲ್ಲ. ಒಂದು ಗ್ರಾ.ಪಂ. ಒಂದು ಘಟಕ ಅಂತಾ ಮಾಡಿದ್ರೆ ಅನುಕೂಲ ಎಂದು ವೇದಿಕೆ ಮೇಲಿದ್ದ ಸಿಎಂ ಡಿಕೆ ಶಿವಕುಮಾರ್​​ಗೆ ಸಲಹೆ ಕಿವಿಮಾತು ಹೇಳಿದರು.

  • 24 Sep 2026 02:51 PM (IST)

    ಬರ ಪರಿಹಾರ ನೀಡಲು ಮುಂದಾದ ಡಿಕೆಶಿ ಸರ್ಕಾರ

    ಕರ್ನಾಟಕದಲ್​ಲಿ ಮಳೆ ಬೆಳೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ರೈತರ ನೆರವಿಗೆ ಧಾವಿಸಲು ಡಿಕೆ ಶಿವಕುಮಾರ್ ಸರ್ಕಾರ ಮುಂದಾಗಿದೆ. ಹೌದು…ಬರ ಪೀಡಿತ ತಾಲೂಕಗಳ ರೈತರಿಗೆ ನೆರವಿನ ಹಣ ಘೋಷಣೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕೇಂದ್ರದ ಹಣಕ್ಕಾಗಿ ಕಾಯದೇ ಆರಂಭಿಕ ಹಂತದಲ್ಲಿ ಪ್ರತಿ ರೈತನಿಗೆ 2500 ರೂಪಾಯಿ ಬರ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ಪಡೆಯುಲು ತೀರ್ಮಾನಿಸಿದೆ. ಬಳಿಕ ಸಿಎಂ ಡಿಕೆ ಶಿವಕುಮಾರ್ ಅವರು ಬರ ಪರಿಹಾರದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.

  • 24 Sep 2026 02:35 PM (IST)

    30 ಸಾವಿರ ಹಣ ಸ್ವೀಕರಿಸುತ್ತಿದ್ದ ಪ್ರಭಾರ RI ಲೋಕಾಯುಕ್ತ ಬಲೆಗೆ

    ಜಮೀನಿನ ಪೌತಿ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಮಧುಗಿರಿ ಕಸಬಾ ಹೋಬಳಿಯ ಪ್ರಭಾರ ಕಂದಾಯ ನಿರೀಕ್ಷಕ (RI) ನಾಗೇಶ್ ಎಂಬುವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೂಲತಃ ಗ್ರಾಮಾಡಳಿತಾಧಿಕಾರಿಯಾಗಿದ್ದ (VA) ನಾಗೇಶ್ ಅವರು ಮಧುಗಿರಿ ಕಸಬಾ ಹೋಬಳಿಯ ಪ್ರಭಾರ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

  • 24 Sep 2026 01:39 PM (IST)

    ವಿಧಾನ ಪರಿಷತ್ ಚುನಾವಣೆ ಘೋಷಣೆ ಬೆನ್ನಲ್ಲೇ ಮೈತ್ರಿಪಡೆ ಚುರುಕು

    ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್ ಮಣಿಸಲು ಬಿಜೆಪಿ-ಜೆಡಿಎಸ್ ಎನ್‌ಡಿಎ ಮೈತ್ರಿಪಡೆ ರಾಜಕೀಯ ತಂತ್ರಗಾರಿಕೆಗೆ ಧುಮುಕಿದೆ. ವಿಧಾನಸೌಧದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕೊಠಡಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರ ಮಹತ್ವದ ಜಂಟಿ ಸಭೆ ಗುರುವಾರ ನಡೆಯಿತು.

  • 24 Sep 2026 01:32 PM (IST)

    ದರ್ಶನ್ ಪರ ವಕೀಲರ ಮನವಿ ವಜಾ; ಆರೋಪಿ ಪ್ರದೋಷ್‌ಗೆ ಸೆ.28 ರಂದು ಕೋರ್ಟ್‌ಗೆ ಹಾಜರಾಗಲು ಸಮನ್ಸ್

    ನಟ ದರ್ಶನ್ ಹಾಗೂ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಪ್ರಮುಖ ಆದೇಶ ಹೊರಡಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ಅವರನ್ನು ಸಾಕ್ಷ್ಯ ವಿಚಾರಣೆಗೆ ಸೆಪ್ಟೆಂಬರ್ 28 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಮನ್ಸ್ ಜಾರಿಗೊಳಿಸಿ ಕೋರ್ಟ್ ಆದೇಶಿಸಿದೆ.

  • 24 Sep 2026 01:19 PM (IST)

    ತಮಿಳುನಾಡಿಗೆ ಕಾವೇರಿ ನೀರು ಹರಿಸಲು ದೆಹಲಿಯಲ್ಲಿ CWRC ನಿರ್ಧಾರ

    ಭೀಕರ ಬರಗಾಲದಿಂದ ತತ್ತರಿಸಿರುವ ಕರ್ನಾಟಕಕ್ಕೆ ಮತ್ತೆ ದೊಡ್ಡ ಆಘಾತ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 4,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಮಹತ್ವದ ಶಿಫಾರಸು ಮಾಡಲಾಗಿದೆ.

  • 24 Sep 2026 12:45 PM (IST)

    ಚಿಕ್ಕೋಡಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಭಾರಿ ಆಕ್ರೋಶ

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಆಸ್ಪತ್ರೆಯಲ್ಲಿ ಕಂಡುಬಂದ ತೀವ್ರ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯನ್ನು ಕಂಡು ಉಪಲೋಕಾಯುಕ್ತರು ವೈದ್ಯಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

  • 24 Sep 2026 12:33 PM (IST)

    ಐಪಿಎಸ್ ಅಧಿಕಾರಿ ಕುಷಾಲ್ ಚೌಕ್ಸೆ ದಿಢೀರ್ ವರ್ಗಾವಣೆ

    ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಹಿರಿಯ ಐಪಿಎಸ್ ಅಧಿಕಾರಿ ಕುಷಾಲ್ ಚೌಕ್ಸೆ  ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಚಿತ್ರದುರ್ಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  • 24 Sep 2026 12:14 PM (IST)

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕಷ್ಟ ಎಂದ ರಾಜ್ಯ: ಒಂದು ವಾರದಲ್ಲಿ ಅಫಿಡವಿಟ್ ಸಲ್ಲಿಕೆಗೆ ಸುಪ್ರೀಂ ನಿರ್ದೇಶನ

    ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅತ್ಯಂತ ಪ್ರಮುಖ ಅರ್ಜಿಯ ವಿಚಾರಣೆ ನಡೆದಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನೀರು ಬಿಡುಗಡೆ ಆದೇಶವನ್ನು ಮುಂದುವರಿಸಲು ಪೀಠ ಸೂಚನೆ ನೀಡಿದೆ. ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಲಾಗಿದೆ.

  • 24 Sep 2026 12:12 PM (IST)

    ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭ: ತಮಿಳುನಾಡಿಗೆ ನೀರು ಹರಿವು ಕುರಿತು ಮಹತ್ವದ ಚರ್ಚೆ

    ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಜಂಟಿ ಸಭೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕೃತವಾಗಿ ಆರಂಭವಾಗಿದೆ.

  • 24 Sep 2026 11:25 AM (IST)

    ಬಾಗಲಕೋಟೆ ಜಿಲ್ಲೆಗೆ ಬಿಜೆಪಿ ನಾಯಕಿ ಮಾಧವಿಲತಾಗೆ ಪ್ರವೇಶ ನಿಷೇಧ

    ಹೈದರಾಬಾದ್‌ನ ಬಿಜೆಪಿ ನಾಯಕಿ ಹಾಗೂ ಪ್ರಖರ ವಾಗ್ಮಿ ಕೊಂಪೆಲ್ಲಾ ಮಾಧವಿ ಲತಾ ಅವರಿಗೆ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸದಂತೆ ಅಕ್ಟೋಬರ್ 23ರವರೆಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಸಂಗಪ್ಪ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

  • 24 Sep 2026 10:34 AM (IST)

    ಶಾಸಕ ಯಶವಂತರಾಯಗೌಡ ರಾಜೀನಾಮೆ ಬೆನ್ನಲ್ಲೇ ಮಣಿದ ಸರ್ಕಾರ: ವಿಜಯಪುರದ ಇಂಡಿ ತಾಲೂಕು ಬರ ಪಟ್ಟಿಗೆ ಸೇರ್ಪಡೆ

    ತಮ್ಮ ಇಂಡಿ ಕ್ಷೇತ್ರವನ್ನು ಬರ ಪಟ್ಟಿಗೆ ಸೇರ್ಪಡೆಗೊಳಿಸಿಲ್ಲ ಎಂದು ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಪ್ರತಿಭಟನೆಗೆ ಅಂತಿಮವಾಗಿ ರಾಜ್ಯ ಸರ್ಕಾರ ಮಣಿದಿದೆ. ಇಂಡಿ ತಾಲೂಕನ್ನು ‘ಗ್ರೌಂಡ್ ಟ್ರೂಥಿಂಗ್’ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರ ತಕ್ಷಣವೇ ಅಧಿಕೃತ ಅಧಿಸೂಚನೆ  ಹೊರಡಿಸಿದೆ.

  • 24 Sep 2026 10:14 AM (IST)

    ಧಾರವಾಡದ ಖ್ಯಾತ ಮನೋವೈದ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ

    ನಾಡಿನ ಖ್ಯಾತ ಮನೋವೈದ್ಯರು, ಪ್ರಸಿದ್ಧ ಮನೋವಿಜ್ಞಾನ ಲೇಖಕರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಆನಂದ ಪಾಂಡುರಂಗಿ (74) ಅವರು ಇಂದು (ಸೆಪ್ಟೆಂಬರ್ 24) ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಳೆದ ಎರಡು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಧಾರವಾಡ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ.

  • 24 Sep 2026 09:52 AM (IST)

    ಮಾನವೀಯತೆ ಮೆರೆದ ಕೋಲಾರ ಸಂಸದ

    ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಗಾಯಾಳುವಿನ ನೆರವಿಗೆ ಧಾವಿಸುವ ಮೂಲಕ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ತಮ್ಮ ಮಾನವೀಯತೆ ಮೆರೆದಿದ್ದಾರೆ.

  • 24 Sep 2026 09:41 AM (IST)

    ಚಲಿಸುತ್ತಿದ್ದ ಬಸ್‌ನ ಎಸಿ ಸ್ಫೋಟಗೊಂಡು 9 ಪ್ರಯಾಣಿಕರು ಸಜೀವ ದಹನ

    ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಜೇವಾರ್ ಬಳಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಖಾಸಗಿ ಸ್ಲೀಪರ್ ಕೋಚ್ ಬಸ್‌ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಹಿಳೆ ಸೇರಿದಂತೆ 9 ಜನರು ಸಜೀವವಾಗಿ ದಹನಗೊಂಡಿದ್ದಾರೆ. ದೆಹಲಿಯಿಂದ ಸಂಚರಿಸುತ್ತಿದ್ದ ಬಸ್‌ನಲ್ಲಿ ಚಲಿಸುತ್ತಿರುವಾಗಲೇ ಎಸಿ ದಿಢೀರ್ ಸ್ಫೋಟಗೊಂಡಿದ್ದೇ ಈ ಭೀಕರ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ 

  • 24 Sep 2026 09:40 AM (IST)

    ಇಂದು CWRC, CWMA ಮಹತ್ವದ ಸಭೆ

    ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅತ್ಯಂತ ನಿರ್ಣಾಯಕ ಸಭೆಗಳನ್ನು ನಡೆಸಲಿವೆ. ವಿನೀತ್ ಗುಪ್ತಾ ಅವರ ನೇತೃತ್ವದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಲಿದೆ.

Breaking News Today Live in Kannada: ರಾಜ್ಯದಲ್ಲಿ ಎದುರಾಗಿರುವ ತೀವ್ರ ಬರಗಾಲ ಹಾಗೂ ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿರುವ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಧಾನಸಭೆಯ ವಿಶೇಷ ಅಧಿವೇಶನವು ಇಂದು 4ನೇ ದಿನಕ್ಕೆ ಕಾಲಿಟ್ಟಿದೆ. ಆರಂಭದಲ್ಲಿ ಮೂರು ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಜನಪ್ರತಿನಿಧಿಗಳು ಹಾಗೂ ವಿರೋಧ ಪಕ್ಷಗಳ ತೀವ್ರ ಒತ್ತಾಯಕ್ಕೆ ಮಣಿದ ಸರ್ಕಾರ, ಅಧಿವೇಶನವನ್ನು ನಾಲ್ಕನೇ ದಿನಕ್ಕೂ ಮುಂದುವರಿಸಿದೆ. ಒಂದೆಡೆ ಸದನದ ಒಳಗೆ ಪ್ರಮುಖ ವಿಷಯಗಳ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಆಡಳಿತ ವೈಫಲ್ಯ ಹಾಗೂ ವಿವಿಧ ನೀತಿಗಳನ್ನು ಖಂಡಿಸಿ ವಿಧಾನಸೌಧದ ಆವರಣದ ಹೊರಗಡೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಇನ್ನು ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಅತ್ಯಂತ ನಿರ್ಣಾಯಕ ಸಭೆಗಳನ್ನು ನಡೆಸಲಿವೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಜೇವಾರ್ ಬಳಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಖಾಸಗಿ ಸ್ಲೀಪರ್ ಕೋಚ್ ಬಸ್‌ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಹಿಳೆ ಸೇರಿದಂತೆ 9 ಜನರು ಸಜೀವವಾಗಿ ದಹನಗೊಂಡಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ತಮ್ಮ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದ್ದು, ದೇಶದ ಪದಕದ ಪಟ್ಟಿಗೆ ಮತ್ತಷ್ಟು ಬೆಳ್ಳಿ ಹಾಗೂ ಕಂಚಿನ ಪದಕಗಳು ಸೇರ್ಪಡೆಯಾಗಿವೆ. ವುಶು ಕ್ರೀಡೆಯಲ್ಲಿ ಭಾರತದ ತಾರೆ ರೋಶಿಬಿನಾ ದೇವಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರೆ, ಪುರುಷರ ಡಬಲ್ ರೋಯಿಂಗ್ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಇಲ್ಲಿದೆ ನೋಡಿ ಲೈವ್ ವಿಡಿಯೋ 

Published On - Sep 24,2026 9:39 AM

Follow Us
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ