AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಜನ್ಯ ಕೊಲೆ ಕೇಸ್ ತನಿಖೆಗೆ ಎನ್.ಶಶಿಕುಮಾರ್ ನೇತೃತ್ವದ ಎಸ್​​ಐಟಿ ರಚಿಸಿದ ಸರ್ಕಾರ

14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ನಿಗೂಢ ಸಾವು ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಸೌಜನ್ಯ ಕೊಲೆ ಕೇಸ್ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​​ಐಟಿ) ರಚನೆ ಮಾಡಿ ಅದೇಶ ಹೊರಡಿಸಿದೆ. ಎನ್.ಶಶಿಕುಮಾರ್ ನೇತೃತ್ವದ ಐವರು ಐಪಿಎಸ್ ಅಧಿಕಾರಿಗಳನ್ನ ನೇಮಿಸಲಾಗಿದೆ.

ಸೌಜನ್ಯ ಕೊಲೆ ಕೇಸ್ ತನಿಖೆಗೆ ಎನ್.ಶಶಿಕುಮಾರ್ ನೇತೃತ್ವದ ಎಸ್​​ಐಟಿ ರಚಿಸಿದ ಸರ್ಕಾರ
ವಿಧಾನಸೌಧ
ರಾಚಪ್ಪಾಜಿ ನಾಯ್ಕ್
| Edited By: |

Updated on:Sep 24, 2026 | 10:26 PM

Share

ಬೆಂಗಳೂರು, ಸೆಪ್ಟೆಂಬರ್ 24: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಮೂರು ತಿಂಗಳಲ್ಲೇ ವರದಿ ನೀಡುವಂತೆ ಸೂಚಿಸಿದೆ. ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಇಂದು (ಸೆಪ್ಟೆಂಬರ್ 24) ರಾಜ್ಯ ಸರ್ಕಾರ ಎಸ್​ಐಟಿ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ. ಎನ್.ಶಶಿಕುಮಾರ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, IPS ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್, ವೆಂಕಟೇಶ್ ಪ್ರಸನ್ನ ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ನಿಗೂಢ ಸಾವು ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿದೆ. ತಿಂಗಳ ಹಿಂದೆ ತೀರ್ಪು ಕಾಯ್ದಿರಿಸಿದ್ದ ನ್ಯಾ. ಸಂಜಯ್‌ ಕುಮಾರ್ ಪೀಠ ಮೊನ್ನೇ ಮಹತ್ವದ ಆದೇಶ ನೀಡಿದ್ದು, 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಡೆಡ್​ಲೈನ್ ನೀಡಿದೆ. ಅಲ್ಲದೇ ಹಿಂದೆ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ತನಿಖೆಗೆ ಸೇರಿಸದಂತೆ ಹೊಸದಾಗಿ ಪ್ರಕರಣದ ತನಿಖೆಗೆ ಸುಪ್ರೀಂ ಸೂಚನೆ ನೀಡಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಆದೇಶದ ಮೂಲಕ ಸೌಜನ್ಯ ಕೊಲೆ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದ್ದು, ಆರೋಪಿಗಳನ್ನ ಪತ್ತೆ ಹಚ್ಚುವ ನಿರೀಕ್ಷೆ ಮತ್ತೆ ಮೂಡಿದೆ.

ಇದನ್ನೂ ನೋಡಿ: ಸೌಜನ್ಯ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್​ ಆದೇಶದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆ

ಸೌಜನ್ಯ ಪ್ರಕರಣದ ಹಿನ್ನೆಲೆ

ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ 17 ವರ್ಷದ ಸೌಜನ್ಯ, ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ನಾಪತ್ತೆಯಾದಳು. ಅಕ್ಟೋಬರ್ 10, 2012: ಧರ್ಮಸ್ಥಳದ ಮಣ್ಣಸಂಕ ಎಂಬಲ್ಲಿನ ಪೊದೆಯೊಂದರಲ್ಲಿ ಸೌಜನ್ಯಳ ಅರ್ಧನಗ್ನ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿತ್ತು.ಆಕೆಯನ್ನು ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಅಕ್ಟೋಬರ್ 11, 2012: ಸ್ಥಳೀಯ ಪೊಲೀಸರು ಮಾನಸಿಕ ಅಸ್ವಸ್ಥ ಎನ್ನಲಾದ ಸಂತೋಷ್ ರಾವ್ ಎಂಬಾತನನ್ನು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದ್ರು. ಆದರೆ, ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಆತನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸೌಜನ್ಯ ಕುಟುಂಬ ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಸಾಕಷ್ಟು ಹೋರಾಟ, ಪ್ರತಿಭಟನೆಗಳು ನಡೆದಿವೆ.

ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೊದಲು ರಾಜ್ಯ ಸಿಐಡಿ (CID) ತನಿಖೆಗೆ ನೀಡಿತ್ತು. ನಂತರ ತನಿಖೆಯು ತೃಪ್ತಿಕರವಾಗಿಲ್ಲದ ಕಾರಣ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಬಳಿಕ ತನಿಖೆ ನಡೆಸಿದ ಸಿಬಿಐ, ಸಂತೋಷ್ ರಾವ್ ಮಾತ್ರವೇ ಏಕೈಕ ಆರೋಪಿ ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದ ಇತರ ಮೂವರು ವ್ಯಕ್ತಿಗಳಿಗೆ ಸಿಬಿಐ ಕ್ಲೀನ್ ಚಿಟ್ ನೀಡಿತ್ತು.

ಇನ್ನು ಬೆಂಗಳೂರಿನ 50ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (ವಿಶೇಷ ಸಿಬಿಐ) ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಏಕೈಕ ಆರೋಪಿಯಾಗಿದ್ದ ಸಂತೋಷ್ ರಾವ್‌ನನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿತ್ತು. ತನಿಖಾ ಸಂಸ್ಥೆಗಳ ವೈಫಲ್ಯ ಹಾಗೂ ಸಾಕ್ಷ್ಯ ನಾಶದ ಸಾಧ್ಯತೆಗಳ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ಹೊರಹಾಕಿತ್ತು. ಹೀಗಾಗಿ ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎನ್ನುವುದೇ ನಿಗೂಢವಾಗಿಯೇ ಉಳಿದಿಕೊಂಡಿದ್ದು, ಇದೀಗ ಹೊಸದಾಗಿ ರಚನೆಯಾಗಿರುವ ಎಸ್​​​​ಐಟಿ ತಂಡ, ಕೃತ್ಯ ಎಸಗಿದವರನ್ನ ಪತ್ತೆ ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Thu, 24 September 26

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ