Fact Check: ಒಬ್ಬರ ಐಡಿಯಿಂದ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಲು ಆಗಲ್ಲವಾ? ವೈರಲ್ ಪೋಸ್ಟ್​ಗೆ ಐಆರ್​ಸಿಟಿಸಿ ಸ್ಪಷ್ಟನೆ

IRCTC clarification on train ticket restriction rumours: ಐಆರ್​ಸಿಟಿಸಿ ಪ್ಲಾಟ್​ಫಾರ್ಮ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಲಾಗಿನ್ ಆಗಬೇಕು. ಒಬ್ಬರ ಲಾಗಿನ್​ನಲ್ಲಿ ಬೇರೆಯರಿಗೆ ಟಿಕೆಟ್ ಬುಕ್ ಮಾಡುವಂತಿಲ್ಲ. ಮಾಡಿದರೆ ಜೈಲು ಶಿಕ್ಷೆ ಕಾದಿದೆ ಎನ್ನುವಂತಹ ಪೋಸ್ಟ್​ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಐಆರ್​ಸಿಟಿಸಿ ಸ್ಪಂದಿಸಿದ್ದು, ಈ ವೈರಲ್ ಪೋಸ್ಟ್​ನಲ್ಲಿರುವ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದೆ.

Fact Check: ಒಬ್ಬರ ಐಡಿಯಿಂದ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಲು ಆಗಲ್ಲವಾ? ವೈರಲ್ ಪೋಸ್ಟ್​ಗೆ ಐಆರ್​ಸಿಟಿಸಿ ಸ್ಪಷ್ಟನೆ
ಐಆರ್​ಸಿಟಿಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 26, 2024 | 4:12 PM

ನವದೆಹಲಿ, ಜೂನ್ 26: ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಒಬ್ಬರ ಲಾಗಿನ್​ನಲ್ಲಿ ಬೇರೆಯವರಿಗೆ ಟಿಕೆಟ್ ಬುಕ್ (train ticket booking) ಮಾಡಲು ನಿರ್ಬಂಧ ಇದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬುತ್ತಿದೆ. ಐಆರ್​ಸಿಟಿಸಿ ಸಂಸ್ಥೆ (IRCTC) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದೆ. ರೈಲ್ವೆ ಮಂಡಳಿ ಮಾರ್ಗಸೂಚಿ (Railway board guidelines) ಪ್ರಕಾರ ಐಆರ್​ಸಿಟಿಸಿ ವೆಬ್​ಸೈಟ್​ನಿಂದ ಟಿಕೆಟ್​ಗಳನ್ನು ಬುಕ್ ಮಾಡಬಹುದು ಎಂದು ಅದು ಹೇಳಿದೆ.

ಮೂರು ವರ್ಷ ಜೈಲು ಶಿಕ್ಷೆ ಆಗುತ್ತೆ ಎಂಬ ಸುಳ್ಳು ಸುದ್ದಿ…

ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡಬೇಕೆಂದರೆ ಲಾಗಿನ್ ಆಗಬೇಕು. ಒಬ್ಬರ ಯೂಸರ್ ಐಡಿಯಿಂದ ತಮ್ಮ ಕುಟುಂಬವಲ್ಲದ ಬೇರೆ ಸ್ನೇಹಿತರು ಮತ್ತು ಸಂಬಂಧಿಕರಿಗೆ ಟಿಕೆಟ್ ಬುಕ್ ಮಾಡುವಂತಿಲ್ಲ. ಹಾಗೊಂದು ವೇಳೆ ಟಿಕೆಟ್ ಬುಕ್ ಮಾಡಿದರೆ ಅಪರಾಧವಾಗುತ್ತದೆ. ರೈಲ್ವೆ ಕಾನೂನಿನ ಸೆಕ್ಷನ್ 143 ಪ್ರಕಾರ ಮಾನ್ಯತೆ ಪಡೆದ ವ್ಯಕ್ತಿ ಮಾತ್ರವೇ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಬಹುದು ಎಂದು ವೈರಲ್ ಆಗುತ್ತಿರುವ ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸೊಳ್ಳೆ ಕಾಟ ಬಿಟ್ರೆ… ಬೆಂಗಳೂರನ್ನು ಅಮೆರಿಕದ ಸಿಲಿಕಾನ್ ವ್ಯಾಲಿಗೆ ಹೋಲಿಸಿದ ಯುಎಸ್ ರಿಟರ್ನ್ಡ್ ಉದ್ಯಮಿ

ಬೇರೆಯವರಿಗೆ ಟಿಕೆಟ್ ಬುಕ್ ಮಾಡಿದರೆ ದಂಡವಾ? ರಿಯಾಲಿಟಿ ಚೆಕ್

ಸಾಮಾನ್ಯ ಐಆರ್​ಸಿಟಿಸಿ ಬಳಕೆದಾರ ತನ್ನ ಐಡಿ ಬಳಸಿ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಿದರೆ 10,000 ರೂ ದಂಡ ಹಾಗೂ 3 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದು ಸುಳ್ಳು ಎಂದು ಐಆರ್​ಸಿಟಿಸಿ ಹೇಳಿದೆ. ಪರ್ಸನಲ್ ಯೂಸರ್ ಐಡಿಯಿಂದ ಬುಕ್ ಮಾಡಲಾದ ಟಿಕೆಟ್​ಗಳನ್ನು ವಾಣಿಜ್ಯಾತ್ಮಕ ಮಾರಾಟಕ್ಕೆ ಬಳಸುವಂತಿಲ್ಲ. ಹಾಗೆ ಮಾಡಿದರೆ 1989ರ ರೈಲ್ವೆ ಇಲಾಖೆಯ ಸೆಕ್ಷನ್ 143 ಪ್ರಕಾರ ಅಪರಾಧ ಎನಿಸುತ್ತದೆ. ಇದು ಅಧಿಕೃತವಾಗಿ ಇರುವ ಕಾನೂನು.

ಒಂದೇ ಉಪನಾಮದವರಿಗೆ ಮಾತ್ರವಾ ಟಿಕೆಟ್ ಬುಕಿಂಗ್?

ರೈಲು ಟಿಕೆಟ್ ಬುಕ್ ಮಾಡುತ್ತಿರುವ ವ್ಯಕ್ತಿ ತನ್ನ ಉಪನಾಮ ಹೊಂದಿರುವ ಜನರಿಗೆ ಮಾತ್ರವೇ ಟಿಕೆಟ್ ಬುಕ್ ಮಾಡಲು ಅವಕಾಶ ಇರುತ್ತದೆ ಎಂದೂ ಈ ವೈರಲ್ ಪೋಸ್ಟ್​ನಲ್ಲಿ ತಿಳಿಸಲಾಗಿದೆ. ಇದೂ ಕೂಡ ಸುಳ್ಳು ಸುದ್ದಿಯೇ ಆಗಿದೆ. ಯಾರು ಬೇಕಾದರೂ ತಮ್ಮ ವೈಯಕ್ತಿಕ ಯೂಸರ್ ಐಡಿ ಬಳಸಿ ತಮ್ಮ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ರೈಲು ಟಿಕೆಟ್ ಕಾಯ್ದಿರಿಸಬಹುದು ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: 5ಜಿ ಸ್ಪೆಕ್ಟ್ರಂ ಎಂದರೇನು? 900 ಮೆಗಾಹರ್ಟ್ಜ್ ಇತ್ಯಾದಿ ಬ್ಯಾಂಡ್​ವಿಡ್ತ್​ಗಳ ಉಪಯೋಗ ಏನು? ಇಲ್ಲಿದೆ ಡೀಟೇಲ್ಸ್

ತಿಂಗಳಿಗೆ 24 ಟಿಕೆಟ್ ಬುಕಿಂಗ್​ಗೆ ಅವಕಾಶ

ಆಧಾರ್ ದೃಢೀಕರಣ ಹೊಂದಿರುವ ಬಳಕೆದಾರರು ತಿಂಗಳಿಗೆ 24 ಟಿಕೆಟ್​ಗಳನ್ನು ಬುಕ್ ಮಾಡಲು ಅವಕಾಶ ಇದೆ. ಆಧಾರ್ ಅಥೆಂಟಿಕೇಶನ್ ಮಾಡದ ಬಳಕೆದಾರರು ತಿಂಗಳಿಗೆ 12 ಟಿಕೆಟ್ ಬುಕಿಂಗ್ ಮಾಡಬಹುದು ಎಂದು ಐಆರ್​ಸಿಟಿಸಿ ಹೇಳಿದೆ.

ಟಿಕೆಟ್ ಅನ್ನು ವಾಣಿಜ್ಯಾತ್ಮಕವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ತಡೆಯಲು ಈ ಕ್ರಮ ತೆಗೆದುಕೊಂಡಿರಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್