ತುರ್ತು ಪರಿಸ್ಥಿತಿಯನ್ನು ಕರಾಳ ಅವಧಿ ಎಂದ ಸ್ಪೀಕರ್ ಓಂ ಬಿರ್ಲಾ; ಸದನದಲ್ಲಿ 2 ನಿಮಿಷ ಮೌನಾಚರಣೆ
Parliament Session Updates: ಮೂರು ಬಾರಿ ಸಂಸದರಾಗಿದ್ದ ಓಂ ಬಿರ್ಲಾ ಅವರು ಧ್ವನಿ ಮತದ ಮೂಲಕ ಮರು ಆಯ್ಕೆಯಾದ ನಂತರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದೆ ಬಂದು ಓಂ ಬಿರ್ಲಾ ಅವರನ್ನು ಅಭಿನಂದಿಸಿದರು. ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೂ ಹಸ್ತಲಾಘವ ಮಾಡಿದರು. ನಂತರ, ಇಬ್ಬರೂ ನಾಯಕರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೊಂದಿಗೆ ಓಂ ಬಿರ್ಲಾ ಅವರನ್ನು ಸ್ಪೀಕರ್ ಕುರ್ಚಿಯತ್ತ ಕರೆದೊಯ್ದರು.
ನವದೆಹಲಿ: ಇಂದು ಲೋಕಸಭೆ ಸ್ಪೀಕರ್ (Lok Sabha Speaker) ಆಗಿ ಎನ್ಡಿಎ ಅಭ್ಯರ್ಥಿ ಓಂ ಬಿರ್ಲಾ (Om Birla) ಮರು ಆಯ್ಕೆಯಾಗಿದ್ದಾರೆ. ಇದಾದ ನಂತರ ಎನ್ಡಿಎ ಮತ್ತು ಇಂಡಿಯಾ ಬ್ಲಾಕ್ ನಾಯಕರ ನಡುವೆ ಪರಿಸ್ಪರ ನಗು ಮತ್ತು ಹಸ್ತಲಾಘವಗಳು ನಡೆದವು. ಇದಾದ ಬಳಿಕ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ ತುರ್ತು ಪರಿಸ್ಥಿತಿಯನ್ನು “ಕರಾಳ ದಿನಗಳು” ಎಂದು ಪ್ರಸ್ತಾಪಿಸಿದರು. ಇದಾದ ನಂತರ ಸದನದಲ್ಲಿ 2 ನಿಮಿಷಗಳ ಮೌನಕ್ಕೆ ಕರೆ ನೀಡಲಾಯಿತು.
ಸ್ಪೀಕರ್ ಓಂ ಬಿರ್ಲಾ ಅವರು ತುರ್ತು ಪರಿಸ್ಥಿತಿಯನ್ನು ಕರಾಳ ಅವಧಿಯೆಂದು ಕರೆದಿದ್ದಕ್ಕೆ ವಿರೋಧ ಪಕ್ಷದವರು ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಓಂ ಬಿರ್ಲಾ ಅವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರ ಸ್ಮರಣಾರ್ಥ 2 ನಿಮಿಷಗಳ ಮೌನ ಆಚರಿಸಲು ಕರೆ ನೀಡಿದರು.
Lok Sabha Speaker Om Birla says “This House strongly condemns the decision to impose Emergency in 1975. Along with this, we appreciate the determination of all those people who opposed the Emergency, fought and fulfilled the responsibility of protecting the democracy of India.… pic.twitter.com/kCWDPQrKs2
— ANI (@ANI) June 26, 2024
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಇಂದು 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ನಿರ್ಧಾರವನ್ನು ಖಂಡಿಸಿದರು. ಈ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರ ಸ್ಮರಣೆಯಲ್ಲಿ 2 ನಿಮಿಷಗಳ ಮೌನವನ್ನು ಆಚರಿಸಿದರು. ಈ ಹಿನ್ನೆಲೆಯಲ್ಲಿ ತೀವ್ರ ಪ್ರತಿಭಟನೆಗಳು ಮತ್ತು ಪ್ರತಿಪಕ್ಷಗಳಿಂದ ಘೋಷಣೆಗಳು ಕೇಳಿಬಂದವು.
ಇದನ್ನೂ ಓದಿ: Rahul Gandhi: ಲೋಕಸಭೆ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ
ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ನಂತರ ಸದನದಲ್ಲಿ ಮಾತನಾಡಿದ ಓಂ ಬಿರ್ಲಾ, ತುರ್ತು ಪರಿಸ್ಥಿತಿಯ “ಕರಾಳ ಅವಧಿಯಲ್ಲಿ” ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಲಾಯಿತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಯಿತು. ತುರ್ತು ಪರಿಸ್ಥಿತಿಯು ಭಾರತದ ಹಲವಾರು ನಾಗರಿಕರ ಜೀವನವನ್ನು ನಾಶ ಮಾಡಿದೆ. ಹಲವಾರು ಜನರು ಸಾವನ್ನಪ್ಪಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳ ಅವಧಿಯಲ್ಲಿ ಕಾಂಗ್ರೆಸ್ನ ಸರ್ವಾಧಿಕಾರಿ ಸರ್ಕಾರದ ಕೈಯಲ್ಲಿ ಪ್ರಾಣ ಕಳೆದುಕೊಂಡ ಭಾರತದ ಅಂತಹ ಕರ್ತವ್ಯನಿಷ್ಠ ಮತ್ತು ದೇಶಭಕ್ತಿಯ ನಾಗರಿಕರ ಸ್ಮರಣೆಗಾಗಿ ನಾವು 2 ನಿಮಿಷಗಳ ಮೌನವನ್ನು ಆಚರಿಸುತ್ತೇವೆ” ಎಂದು ಬಿರ್ಲಾ ಹೇಳಿದರು.
PM Modi, LOP Rahul Gandhi both accompanying newly elected speaker OM Birla ji to the chair…
Finally a positive scene from our parliament….I hope it lasts.. pic.twitter.com/dojKCm9mi8
— Mr Sinha (@MrSinha_) June 26, 2024
“ಈ ಸದನವು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ನಿರ್ಧಾರವನ್ನು ಬಲವಾಗಿ ಖಂಡಿಸುತ್ತದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಹೋರಾಡಿದ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿದ್ದ ಎಲ್ಲ ಜನರ ಸಂಕಲ್ಪವನ್ನು ನಾವು ಪ್ರಶಂಸಿಸುತ್ತೇವೆ” ಎಂದು ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗಳು ಮತ್ತು ಘೋಷಣೆಗಳ ನಡುವೆ ಓಂ ಬಿರ್ಲಾ ಹೇಳಿದರು.
ತುರ್ತು ಪರಿಸ್ಥಿತಿಯ ಅವಧಿಯನ್ನು “ಭಾರತದ ಇತಿಹಾಸದಲ್ಲಿ ಕಪ್ಪು ಅಧ್ಯಾಯ” ಎಂದು ಕರೆದ ಸ್ಪೀಕರ್ ಓಂ ಬಿರ್ಲಾ, ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ “ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ದಾಳಿ ಮಾಡಿದರು” ಎಂದು ಹೇಳಿದರು.
ಇದನ್ನೂ ಓದಿ: Lok Sabha Speaker Election: ಇಂದು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ; ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ ಸಂಸತ್
“ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಯಾವಾಗಲೂ ರಕ್ಷಿಸಲಾಗಿದೆ, ಅವುಗಳನ್ನು ಯಾವಾಗಲೂ ಪ್ರೋತ್ಸಾಹಿಸಲಾಗುತ್ತದೆ. ಇಂದಿರಾಗಾಂಧಿ ಅಂತಹ ಭಾರತದ ಮೇಲೆ ಸರ್ವಾಧಿಕಾರವನ್ನು ಹೇರಿದರು. ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಲಾಯಿತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಯಿತು” ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಿಂದಿಯಲ್ಲಿ ಹೇಳಿದರು.
ತುರ್ತುಪರಿಸ್ಥಿತಿಯ ಅವಧಿ:
ಸುಮಾರು 2 ವರ್ಷಗಳ ಕಾಲ ಅಂದರೆ ಜೂನ್ 1975ರಿಂದ ಮಾರ್ಚ್ 1977ರವರೆಗೆ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದರು. ಸಂವಿಧಾನದ 352ನೇ ವಿಧಿಯ ಅಡಿಯಲ್ಲಿ ಅಂದಿನ ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಅದಕ್ಕೆ ಒಪ್ಪಿಗೆ ನೀಡಿದರು. ದೇಶಕ್ಕೆ ಸನ್ನಿಹಿತವಾದ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿವೆ ಎಂಬ ಕಾರಣಕ್ಕೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Wed, 26 June 24