5G Spectrum Explained: 5ಜಿ ಸ್ಪೆಕ್ಟ್ರಂ ಎಂದರೇನು? 900 ಮೆಗಾಹರ್ಟ್ಜ್ ಇತ್ಯಾದಿ ಬ್ಯಾಂಡ್​ವಿಡ್ತ್​ಗಳ ಉಪಯೋಗ ಏನು? ಇಲ್ಲಿದೆ ಡೀಟೇಲ್ಸ್

What is 5G Spectrum?: ವಿವಿಧ ಬ್ಯಾಂಡ್ ಶ್ರೇಣಿಯಲ್ಲಿ 5ಜಿ ಸ್ಪೆಕ್ಟ್ರಂ ಹರಾಜು ನಡೆಯುತ್ತಿದೆ. ಮೊದಲ ದಿನ 11,000 ಕೋಟಿ ರೂ ಮೌಲ್ಯದ ಬಿಡ್ಡಿಂಗ್​ಗಳು ಸಲ್ಲಿಕೆ ಆಗಿವೆ. ಲೋ ಬ್ಯಾಂಡ್, ಮಿಡ್ ಬ್ಯಾಂಡ್ ಮತ್ತು ಹೈ ಬ್ಯಾಂಡ್ ಎಂದು ಮೂರು ಸ್ತರದ ಬ್ಯಾಂಡ್​ಗಳು 5ಜಿ ನೆಟ್ವರ್ಕ್​ನಲ್ಲಿವೆ. ಲೋ ಬ್ಯಾಂಡ್​ನಲ್ಲಿ ವ್ಯಾಪ್ತಿ ಹೆಚ್ಚಿರುತ್ತದೆ, ಸ್ಪೀಡ್ ಕಡಿಮೆ ಇರುತ್ತದೆ. ಹೈ ಬ್ಯಾಂಡ್​ನಲ್ಲಿ ಸಿಗ್ನಲ್ ಹೆಚ್ಚು ದೂರಕ್ಕೆ ಹೋಗುವುದಿಲ್ಲ, ಆದರೆ, ಸ್ಪೀಡ್ ಗರಿಷ್ಠ ಇರುತ್ತದೆ.

5G Spectrum Explained: 5ಜಿ ಸ್ಪೆಕ್ಟ್ರಂ ಎಂದರೇನು? 900 ಮೆಗಾಹರ್ಟ್ಜ್ ಇತ್ಯಾದಿ ಬ್ಯಾಂಡ್​ವಿಡ್ತ್​ಗಳ ಉಪಯೋಗ ಏನು? ಇಲ್ಲಿದೆ ಡೀಟೇಲ್ಸ್
5ಜಿ
Follow us
|

Updated on:Jun 26, 2024 | 1:02 PM

ನವದೆಹಲಿ, ಜೂನ್ 26: ಕೇಂದ್ರ ಸರ್ಕಾರ ಈ ವರ್ಷದ 5ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯನ್ನು (5G spectrum auction) ನಿನ್ನೆ ಆರಂಭಿಸಿದೆ. 800 ಮೆಗಾಹರ್ಟ್ಜ್​ನಿಂದ ಹಿಡಿದು 26 ಗಿಗಾಹರ್ಟ್ಜ್​ವರೆಗೂ ಎಂಟು ಬ್ಯಾಂಡ್​ವಿಡ್ತ್​ಗಳಲ್ಲಿ 10,523 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಅನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳ ಒಟ್ಟು ರಿಸರ್ವ್ ಬೆಲೆ (reserve price) 96,317 ಕೋಟಿ ರೂ ಆಗಿದೆ. ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಈ ಸ್ಪೆಕ್ಟ್ರಂ ಖರೀದಿಗೆ ಮುಂದಾಗಿವೆ. ನಿನ್ನೆ ಮೊದಲ ದಿನ ವಿವಿಧ ಬ್ಯಾಂಡ್ ವಿಡ್ತ್​ಗಳಲ್ಲಿ 11,000 ಕೋಟಿ ರೂ ಮೊತ್ತದ ಬಿಡ್ಡಿಂಗ್ ನಡೆದಿರುವುದು ತಿಳಿದುಬಂದಿದೆ. ಹರಾಜಿನಲ್ಲಿದ್ದ ಎಂಟು ಬ್ಯಾಂಡ್​ವಿಡ್ತ್​ಗಳ ಪೈಕಿ 800 MHz, 900 MHz, 1800 MHz, 2100 MHz ಮತ್ತು 2500 MHz ಈ ಐದು ಬ್ಯಾಂಡ್​ವಿಡ್ತ್​ಗಳಲ್ಲಿ ಸ್ಪೆಕ್ಟ್ರಂ ಖರೀದಿಗೆ ಬಿಡ್ಡಿಂಗ್ ಸಲ್ಲಿಸಲಾಗಿದೆ.

2022ರ ಹರಾಜಿನಲ್ಲಿ 2300 ಮೆಗಾಹರ್ಟ್ಜ್, 3300 ಮೆಗಾಹರ್ಟ್ಜ್ ಮತ್ತು 26 ಗಿಗಾಹರ್ಟ್ಜ್ ಮೊದಲಾದ ಬ್ಯಾಂಡ್​ಗಳು ಮಾರಾಟವಾಗಿರಲಿಲ್ಲ. ಅವನ್ನು ಈಗ ಮತ್ತೊಮ್ಮೆ ಹರಾಜಿಗಿಡಲಾಗಿದೆ. ಆದರೂ ಕೂಡ ಇವುಗಳನ್ನು ಟೆಲಿಕಾಂ ಕಂಪನಿಗಳು ಕಣ್ಣೆತ್ತಿ ನೋಡಿಲ್ಲ. ಕುತೂಹಲ ಎಂದರೆ 5ಜಿ ಸರ್ವಿಸ್​ಗೆ ಬಹಳ ಉಪಯುಕ್ತ ಎಂದು ಪರಿಗಣಿಸಲಾದ 3300 ಮೆಗಾಹರ್ಟ್ಜ್ ಮತ್ತು 26 ಗಿಗಾಹರ್ಟ್ ಬ್ಯಾಂಡ್​ಗಳಿಗೆ ಬೇಡಿಕೆಯೇ ಬರಲಿಲ್ಲ.

ಏನಿವು 5ಜಿ ಸ್ಪೆಕ್ಟ್ರಂ ಬ್ಯಾಂಡ್​ಗಳು..?

5ಜಿ ನೆಟ್ವರ್ಕ್​ನಲ್ಲಿ ಮೂರು ಹಂತದ ರೇಡಿಯೋ ಫ್ರೀಕ್ವೆನ್ಸಿ ಬ್ಯಾಂಡ್​ಗಳಿರುತ್ತವೆ. ಕೆಲ, ಮಧ್ಯಮ ಮತ್ತು ಉನ್ನತ ಫ್ರೀಕ್ವೆನ್ಸಿ ಬ್ಯಾಂಡ್​ಗಳಿವೆ. ಒಂದು ಗಿಗಾಹರ್ಟ್ಜ್​ಗಿಂತ ಕೆಳಗಿನ ಫ್ರೀಕ್ವೆನ್ಸಿ ಇರುವ ಬ್ಯಾಂಡ್ ಕೆಳ ಹಂತದ್ದು. 1 ಗಿಗಾಹರ್ಟ್​ನಿಂದ 6 ಗಿಗಾಹರ್ಟ್​ವರೆಗಿನದ್ದು ಮಿಡ್ ಬ್ಯಾಂಡ್. 24 ಗಿಗಾಹರ್ಟ್ಜ್​ನಿಂದ 40 ಗಿಗಾಹರ್ಟ್ಜ್​ವರೆಗಿನದ್ದು ಹೈ ಬ್ಯಾಂಡ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಜೂನ್ 25, ಇಂದಿನಿಂದ 5ಜಿ ಸ್ಪೆಕ್ಟ್ರಂ ಹರಾಜು; ಲಕ್ಷ ಕೋಟಿ ರೂ ಮೌಲ್ಯದ ಬ್ಯಾಂಡ್​ವಿಡ್ತ್​ಗಳ ಮಾರಾಟ

ಇಲ್ಲಿ ಲೋ ಬ್ಯಾಂಡ್ 5ಜಿ ಸಾಮಾನ್ಯವಾಗಿ 600 ಮೆಗಾಹರ್ಟ್ಜ್​ನಿಂದ 700 ಮೆಗಾಹರ್ಟ್ಜ್​ವರೆಗಿನ ಶ್ರೇಣಿಯಲ್ಲಿ ಸಿಗ್ನಲ್ ಹೊರಡಿಸುತ್ತದೆ. ಇದರ ಕವರೇಜ್ ಏರಿಯಾ ಅಥವಾ ವ್ಯಾಪ್ತಿ ದೊಡ್ಡದಿರುತ್ತದೆ. ಆದರೆ, ಇಂಟರ್ನೆಟ್ ವೇಗ ಅಥವಾ ಡಾಟಾ ಸ್ಪೀಡ್ ಕಡಿಮೆ ಇರುತ್ತದೆ. ಸುಮಾರು 50 ಎಂಬಿಪಿಎಸ್ ಆಸುಪಾಸಿನ ಸ್ಪೀಡ್ ಇರುತ್ತದೆ.

ಮಿಡ್ ಬ್ಯಾಂಡ್ 5ಜಿ ಸುಮಾರು 1.7ರಿಂದ 2.5 ಬಿಗಾಹರ್ಟ್ಜ್​ವರೆಗಿನ ಶ್ರೇಣಿಯಲ್ಲಿ ಸಿಗ್ನಲ್ ಕಳುಹಿಸುತ್ತದೆ. ಲೋ ಬ್ಯಾಂಡ್​ಗಿಂತ ಇದರ ಕವರೇಜ್ ಏರಿಯಾ ಕಡಿಮೆ ಇರುತ್ತದೆ. ಆದರೆ, ಇಂಟರ್ನೆಟ್ ಸ್ಪೀಡ್ 900 ಎಂಬಿಪಿಎಸ್​ವರೆಗೂ ಇರುತ್ತದೆ.

ಹೈ ಬ್ಯಾಂಡ್ 24 ಗಿಗಾಹರ್ಟ್ಜ್​ಗಿಂತ ಹೆಚ್ಚು ಮಟ್ಟದಲ್ಲಿ ಸಿಗ್ನಲ್ ರವಾನಿಸುತ್ತದೆ. ಇದರ ವ್ಯಾಪ್ತಿ ಕಡಿಮೆಯಾದರೂ ಇಂಟರ್ನೆಟ್ ಸ್ಪೀಡ್ ಬಹಳ ವೇಗವಾಗಿ ಇರುತ್ತದೆ. 10ಜಿಬಿಪಿಎಸ್​ವರೆಗೂ ಇಂಟರ್ನೆಟ್ ವೇಗ ತಲುಪಬಹುದು. ಟೆಲಿಕಾಂ ಕಂಪನಿಗಳು ಕೆಲ ನಿರ್ದಿಷ್ಟ ಪ್ರದೇಶಗಳಿಗೆ ಈ ಹೈಬ್ಯಾಂಡ್ ಅನ್ನು ಅಳವಡಿಸಬಹುದು.

ಇದನ್ನೂ ಓದಿ: ಈ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತ ಮಹಿಳೆಯರಿಗೆ ಇಲ್ಲವಾ ಕೆಲಸ? ತಮಿಳುನಾಡಿನ ಫಾಕ್ಸ್​​ಕಾನ್ ಘಟಕದಲ್ಲಿ ಕೆಲಸಕ್ಕಾಗಿ ಮಹಿಳೆಯರ ಪರದಾಟ

ಭಾರತದಲ್ಲಿ 5ಜಿ ಯಾವಾಗ?

ಭಾರತದಲ್ಲಿ ಈಗಾಗಲೇ 5ಜಿ ನೆಟ್ವರ್ಕ್ ಅಸ್ತಿತ್ವದಲ್ಲಿದೆ. ರಿಲಾಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ದೇಶದ ಅನೇಕ ಕಡೆ 5ಜಿ ನೆಟ್ವರ್ಕ್ ಅಳವಡಿಸಿವೆ. ಆದರೆ, ಪೂರ್ಣವಾಗಿ ಇನ್ನೂ ವ್ಯಾಪಿಸಿಲ್ಲ. ಹಂತ ಹಂತವಾಗಿ ನೆಟ್ವರ್ಕ್ ಅಭಿವೃದ್ಧಿಗೊಳ್ಳುತ್ತಿದೆ. ಅದೇ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳು 5ಜಿ ಬ್ಯಾಂಡ್​ಗಳನ್ನು ಖರೀದಿಸುತ್ತಿವೆ. ರಿಲಾಯನ್ಸ್​ನ ಜಿಯೋ ಫೈಬರ್, ಏರ್ಟೆಲ್​ನ ಎಕ್ಸ್​ಟ್ರೀಮ್ ಏರ್​ಫೈಬರ್ ಯೋಜನೆಗಳು 5ಜಿ ಸರ್ವಿಸ್ ಒದಗಿಸುತ್ತಿವೆ.

5ಜಿ ಬಳಕೆದಾರರು ಬ್ಯಾಂಡ್​ಗಳನ್ನು ಆಯ್ದುಕೊಳ್ಳಬೇಕಾ?

5ಜಿ ನೆಟ್ವರ್ಕ್ ಬಳಸಬೇಕಾದರೆ ಅದನ್ನು ಸಪೋರ್ಟ್ ಮಾಡುವ ಮೊಬೈಲ್ ಬೇಕು. ಅಂದರೆ 5ಜಿ ಫೋನ್ ಇದ್ದರೆ 5ಜಿ ಇಂಟರ್ನೆಟ್ ಸೌಲಭ್ಯ ಪಡೆಯಬಹುದು. 4ಜಿ ಸಪೋರ್ಟ್ ಇರುವ ಮೊಬೈಲ್​ನಲ್ಲಿ 5ಜಿ ಸಿಕ್ಕುವುದಿಲ್ಲ.

ಇದನ್ನೂ ಓದಿ: ಸೋಲಾರ್ ಸೆಲ್​ಗೆ ಚೀನಾ ಮೇಲೆ ಅವಲಂಬನೆ ಇನ್ಮುಂದೆ ಕಡಿಮೆ; ಸ್ವಾವಲಂಬನೆ ಹಾದಿಯಲ್ಲಿ ಭಾರತ

ಇನ್ನು, 5ಜಿ ನೆಟ್ವರ್ಕ್​ನಲ್ಲಿ ಲೋ ಬ್ಯಾಂಡ್, ಮಿಡ್ ಬ್ಯಾಂಡ್, ಹೈ ಬ್ಯಾಂಡ್ ಎಂಬ ಮೂರು ಹಂತದ ಶ್ರೇಣಿಗಳಿವೆ. 5ಜಿ ಬಳಕೆದಾರರು ಮ್ಯಾನುಯಲ್ ಆಗಿ ಈ ಬ್ಯಾಂಡ್ ಆಯ್ದುಕೊಳ್ಳಬೇಕಿಲ್ಲ. ಒಂದು ಸ್ಥಳದಲ್ಲಿ ಲಭ್ಯ ಇರುವ ಬ್ಯಾಂಡ್​ಗಳು ತನ್ನಂತಾನೆ ನೆಟ್ವರ್ಕ್​ನಲ್ಲಿ ಜೋಡಿತವಾಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 26 June 24

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ