AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್ 25, ಇಂದಿನಿಂದ 5ಜಿ ಸ್ಪೆಕ್ಟ್ರಂ ಹರಾಜು; ಲಕ್ಷ ಕೋಟಿ ರೂ ಮೌಲ್ಯದ ಬ್ಯಾಂಡ್​ವಿಡ್ತ್​ಗಳ ಮಾರಾಟ

5G Spectrum Auction for 2024: ಈ ವರ್ಷದ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಇಂದು ಆರಂಭವಾಗಿದೆ. 800 ಮೆಗಾಹರ್ಟ್ಜ್​ನಿಂದ ಹಿಡಿದು 26 ಗೀಗಾಹರ್ಟ್ಜ್​ವರೆಗೆ ಎಂಟು ಬ್ಯಾಂಡ್​ವಿಡ್ತ್​ಗಳನ್ನು ಸರ್ಕಾರ ಮಾರುತ್ತಿದೆ. ಈ ವರ್ಷಕ್ಕೆ ಲಭ್ಯ ಇರುವ ಸ್ಪೆಕ್ಟ್ರಂನಲ್ಲಿ ಶೇ. 17ರಷ್ಟನ್ನು ಮಾತ್ರ ಹರಾಜಿಗಿಡಲಾಗಿದೆ. ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಸ್ಪೆಕ್ಟ್ರಂ ಖರೀದಿಗೆ ಮುಂದಾಗಿವೆ.

ಜೂನ್ 25, ಇಂದಿನಿಂದ 5ಜಿ ಸ್ಪೆಕ್ಟ್ರಂ ಹರಾಜು; ಲಕ್ಷ ಕೋಟಿ ರೂ ಮೌಲ್ಯದ ಬ್ಯಾಂಡ್​ವಿಡ್ತ್​ಗಳ ಮಾರಾಟ
ಮೊಬೈಲ್ ಟವರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2024 | 10:40 AM

Share

ನವದೆಹಲಿ, ಜೂನ್ 25: ಭಾರತ ಸರ್ಕಾರ ಈ ವರ್ಷದ ಸ್ಪೆಕ್ಟ್ರಂ ವಿತರಣೆಗೆ ಹರಾಜು ಪ್ರಕ್ರಿಯೆ (5G Spectrum Auction) ಇಂದು ಮಂಗಳವಾರ ಆರಂಭಿಸುತ್ತಿದೆ. ಲಭ್ಯ ಇರುವ ಸ್ಪೆಕ್ಟ್ರಂನಲ್ಲಿ ಶೇ. 17ರಷ್ಟನ್ನು ಮಾತ್ರವೇ ಇದೀಗ ಮಾರಲಾಗುತ್ತಿದೆ. 800 ಮೆಗಾಹರ್ಟ್ಜ್, 900 ಮೆಗಾಹರ್ಟ್ಜ್, 1800 ಮೆಗಾಹರ್ಟ್ಜ್, 2100 ಮೆಗಾಹರ್ಟ್ಜ್, 2300 ಮೆಗಾಹರ್ಟ್ಜ್, 2,500 ಮೆಗಾಹರ್ಟ್ಜ್, 3300 ಮೆಗಾಹರ್ಟ್ಜ್ ಮತ್ತು 26 ಗೀಗಾಹರ್ಟ್ಜ್ ಬ್ಯಾಂಡ್​ಗಳಲ್ಲಿ ಹರಾಜು ನಡೆಯಲಿದೆ. ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಸ್ಪೆಕ್ಟ್ರಂ ಖರೀದಿಗೆ ಪೈಪೋಟಿಯಲ್ಲಿವೆ. ಈ ಹರಾಜಿಗೆಂದು ಇ ಮೂರು ಕಂಪನಿಗಳು ಒಟ್ಟು 4,350 ಕೋಟಿ ರೂ ಠೇವಣಿ ಇಟ್ಟಿವೆ. ಜಿಯೋ ಅತಿಹೆಚ್ಚು, ಅಂದರೆ ಮೂರು ಸಾವಿರ ಕೋಟಿ ರೂ ಠೇವಣಿ ಇಟ್ಟಿದ್ದರೆ, ವೊಡಾಫೋನ್ ಐಡಿಯಾ 300 ಕೋಟಿ ರೂ ಇಟ್ಟಿದೆ.

ಸದ್ಯ ವಿವಿಧ ಸ್ಪೆಕ್ಟ್ರಂಗಳಿಗೆ ತೀವ್ರ ಪೈಪೋಟಿ ಇಲ್ಲವಾಗಿದ್ದು, ಮೀಸಲು ದರಗಳಿಗೆ ಮಾರಾಟವಾಗುವ ಸಾಧ್ಯತೆ ಇದೆ. ಸರ್ಕಾರ ಈ ಹರಾಜಿನಿಂದ 10,000 ಕೋಟಿ ರೂ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ. ಬ್ರೋಕರೇಜ್ ಸಂಸ್ಥೆಗಳು ಅಂದಾಜಿಸಿರುವ ಪ್ರಕಾರ ಸರ್ಕಾರಕ್ಕೆ 4,000 ಕೋಟಿ ರೂನಿಂದ 16,600 ಕೋಟಿ ರೂವರೆಗೆ ಆದಾಯ ಸಿಗಬಹುದು.

20 ವರ್ಷದವರೆಗೆ ಸ್ಪೆಕ್ಟ್ರಂ ಇಟ್ಟುಕೊಳ್ಳಬಹುದು…

ಈಗ ಹರಾಜಿನಲ್ಲಿ ಖರೀದಿಸಲಾದ ಸ್ಪೆಕ್ಟ್ರಂ 20 ವರ್ಷದವರೆಗೂ ಸಿಂಧು ಇರುತ್ತದೆ. ಅಂದರೆ, ಖರೀದಿಸುವ ಕಂಪನಿಗಳು ಸ್ಪೆಕ್ಟ್ರಂ ಅನ್ನು 20 ವರ್ಷದವರೆಗೂ ಬಳಸಬಹುದು. 10 ವರ್ಷದ ಬಳಿಕ ಈ ಕಂಪನಿಗಳು ಬೇಕೆಂದರೆ ಆ ಸ್ಪೆಕ್ಟ್ರಂ ಅನ್ನು ಮಾರಬಹುದು, ಲೀಸ್​ಗೆ ಕೊಡಬಹುದು, ಹಂಚಬಹುದು ಅಥವಾ ಮರಳಿಸಲೂ ಬಹುದು.

ಇದನ್ನೂ ಓದಿ: ಅದಾನಿ ಗ್ರೂಪ್ ತೇಜೋವಧೆ ಉದ್ದೇಶದಿಂದ ಹಿಂಡನ್ಬರ್ಗ್ ವರದಿ: ಎಜಿಎಂ ಸಭೆಯಲ್ಲಿ ಗೌತಮ್ ಅದಾನಿ ಆರೋಪ

ಕಂತುಗಳಲ್ಲಿ ಕಟ್ಟಿದರೆ ಬಡ್ಡಿದರ ಹೆಚ್ಚು

ಸ್ಪೆಕ್ಟ್ರಂ ಹರಾಜಿನಲ್ಲಿ ಬ್ಯಾಂಡ್​ಗಳನ್ನು ಖರೀದಿಸುವ ಟೆಲಿಕಾಂ ಕಂಪನಿಗಳು 10 ದಿನದೊಳಗೆ ಹಣ ಪಾವತಿ ಮಾಡಬೇಕು. ಪೂರ್ತಿ ಹಣವನ್ನು ಒಮ್ಮೆಲೆ ಕಟ್ಟಬಹುದು. ಅಥವಾ ವಾರ್ಷಿಕ ಕಂತುಗಳಲ್ಲೂ ಕಟ್ಟಬಹುದು. ಯಾವುದೇ ಆದರೂ ಹರಾಜು ಆಗಿ 10 ದಿನದೊಳಗೆ ಕಟ್ಟಬೇಕು. ಕಂತುಗಳಲ್ಲಿ ಹಣ ಕಟ್ಟುವುದಾದರೆ ಬಡ್ಡಿದರ ಶೇ. 8.65ರಷ್ಟಿದೆ. 2022ರ ಹರಾಜಿನಲ್ಲಿ ಈ ಬಡ್ಡಿದರ ಶೇ. 7.2ರಷ್ಟಿತ್ತು. ಈಗ ಅದನ್ನು ಹೆಚ್ಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ