ಅದಾನಿ ಗ್ರೂಪ್ ತೇಜೋವಧೆ ಉದ್ದೇಶದಿಂದ ಹಿಂಡನ್ಬರ್ಗ್ ವರದಿ: ಎಜಿಎಂ ಸಭೆಯಲ್ಲಿ ಗೌತಮ್ ಅದಾನಿ ಆರೋಪ

Gautam Adani at 32nd AGM: 2022ರಲ್ಲಿ ಬಿಡುಗಡೆ ಆದ ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಹಲವು ಗುರುತರ ಆರೋಪಗಳನ್ನು ಮಾಡಲಾಗಿತ್ತು. ಅದಾನಿ ಗ್ರೂಪ್ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಿಡುಗಡೆ ಆದ ಹಿಂಡನ್ಬರ್ಗ್ ರಿಸರ್ಚ್ ವರದಿಯಿಂದ ಭಾರೀ ಹಾನಿಯಾಗಿತ್ತು. ಸಂಸ್ಥೆಯ ತೇಜೋವಧೆ ಮಾಡಲೆಂದೇ ಹಿಂಡನ್ಬರ್ಗ್ ವರದಿ ರೂಪಿಸಲಾಗಿತ್ತು ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಅದಾನಿ ಗ್ರೂಪ್ ತೇಜೋವಧೆ ಉದ್ದೇಶದಿಂದ ಹಿಂಡನ್ಬರ್ಗ್ ವರದಿ: ಎಜಿಎಂ ಸಭೆಯಲ್ಲಿ ಗೌತಮ್ ಅದಾನಿ ಆರೋಪ
ಗೌತಮ್ ಅದಾನಿ
Follow us
|

Updated on: Jun 24, 2024 | 2:46 PM

ನವದೆಹಲಿ, ಜೂನ್ 24: ಹಿಂಡನ್ಮಬರ್ಗ್ ರಿಸರ್ಚ್ ಸಂಸ್ಥೆ ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಲಾದ ಆರೋಪಗಳು ಆಧಾರರಹಿತವಾದವು ಎಂದು ಸಂಸ್ಥೆಯ ಛೇರ್ಮನ್ ಗೌತಮ್ ಅದಾನಿ (Gautam Adani) ಪುನರುಚ್ಚರಿಸಿದ್ದಾರೆ. ಅದಾನಿ ಗ್ರೂಪ್​ನ 32ನೇ ವಾರ್ಷಿಕ ಮಹಾಸಭೆಯಲ್ಲಿ (ಎಜಿಎಂ) ಮಾತನಾಡುತ್ತಿದ್ದ ಅವರು, ಅದಾನಿ ಗ್ರೂಪ್​ನ ತೇಜೋವಧೆ ಮಾಡಲೆಂದೇ ಹಿಂಡನ್ಬರ್ಗ್ ವರದಿ ರೂಪಿಸಿತ್ತು ಎಂದು ಪ್ರತ್ಯಾರೋಪ ಮಾಡಿದ್ದಾರೆ.

‘ಅದು ಎರಡು ಮಗ್ಗುಲಿನ ದಾಳಿಯಾಗಿತ್ತು. ಒಂದು ನಮ್ಮ ಹಣಕಾಸು ಸ್ಥಿತಿಯನ್ನು ಬೇಜವಾಬ್ದಾರಿಯುತವಾಗಿ ಟೀಕಿಸಲಾಯಿತು. ಇನ್ನೊಂದು, ಸುಳ್ಳು ಮಾಹಿತಿ ಮೂಲಕ ನಮಗೆ ರಾಜಕೀಯ ಬಣ್ಣ ಬಳಿಯಲಾಯಿತು. ನಮ್ಮ ಪಬ್ಲಿಕ್ ಆಫರ್​ನ ಪರಿಸಮಾಪ್ತಿಗೆ ಎರಡು ದಿನ ಮುಂಚೆ ನಡೆದ ಯೋಜಿತ ದಾಳಿ ಅದಾಗಿತ್ತು,’ ಎಂದು ಹಿಂಡನ್ಬರ್ಗ್ ರಿಸರ್ಚ್ ವರದಿ ವಿರುದ್ಧ ಗೌತಮ್ ಅದಾನಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?

2022ರ ಜನವರಿಯಲ್ಲಿ ಹಿಂಡನ್ಬರ್ಗ್ ರಿಸರ್ಚ್ ವರದಿ ಬಿಡುಗಡೆಗೆ ಮುನ್ನ ಅದಾನಿ ಗ್ರೂಪ್​ನ ಬಹುತೇಕ ಸ್ಟಾಕ್​ಗಳು ಉಚ್ಛ ಮಟ್ಟ ತಲುಪಿದ್ದವು. ಗೌತಮ್ ಅದಾನಿಯ ಷೇರುಸಂಪತ್ತು ಅವರನ್ನು ವಿಶ್ವದ ಟಾಪ್ 3 ಶ್ರೀಮಂತರ ಸಾಲಿಗೆ ತಂದು ನಿಲ್ಲಿಸಿತ್ತು. ಹಿಂಡನ್ಬರ್ಗ್ ವರದಿ ಬಂದ ಬಳಿಕ ಅದಾನಿ ಗ್ರೂಪ್​ನ ಎಲ್ಲಾ ಸ್ಟಾಕ್​ನ ಬೆಲೆ ನೆಲ ಕಚ್ಚಿತು. ಅದಾನಿ ಗ್ರೂಪ್​ನಿಂದ ಕೃತಕವಾಗಿ ಷೇರು ಉಬ್ಬರವಾಗುವಂತೆ ಮಾಡಲಾಗಿರುವುದು ಸೇರಿದಂತೆ ಬಹಳಷ್ಟು ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ತನ್ನ 100 ಪುಟಗಳ ವರದಿಯಲ್ಲಿ ಮಾಡಿತ್ತು.

‘ಕೆಲ ಮಾಧ್ಯಮಗಳು ಈ ವರದಿಯನ್ನು ಅತಿರೇಕವಾಗಿ ವರ್ಣಿಸಿದವು. ನಾವು ಶ್ರಮ ಪಟ್ಟು ಗಳಿಸಿದ್ದ ಮಾರುಕಟ್ಟೆ ಮೌಲ್ಯ ನಶಿಸುವಂತೆ ಮಾಡಿದವು,’ ಎಂದು ಗೌತಮ್ ಅದಾನಿ ವಿಷಾದಿಸಿದ್ದಾರೆ.

ಹಿಂಡನ್ಬರ್ಗ್ ರಿಸರ್ಚ್ ವರದಿ ಬಳಿಕ ಕುಸಿದುಹೋಗಿದ್ದ ಹೂಡಿಕೆದಾರ ಸಮೂಹದ ವಿಶ್ವಾಸ ಗಳಿಸಲು ಅದಾನಿ ಗ್ರೂಪ್ ಬಹಳಷ್ಟು ಕಸರತ್ತು ನಡೆಸಿದೆ. ಅದಾನಿ ಗ್ರೂಪ್​ನಿಂದ ಕೃತಕವಾಗಿ ಷೇರು ಉಬ್ಬರ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಸುಪ್ರೀಂಕೋರ್ಟ್ ನೇಮಿತ ತಜ್ಞರ ಸಮಿತಿಗೆ ಸಿಕ್ಕಿಲ್ಲ. ಹೂಡಿಕೆದಾರರ ರಕ್ಷಣೆಗೆ ನಿಯಮಗಳಲ್ಲಿ ಒಂದಷ್ಟು ಸುಧಾರಣೆಗಳಾಗಬೇಕು ಎಂಬುದನ್ನು ಆ ಸಮಿತಿ ಸಲಹೆ ನೀಡಿದೆ.

ಇದನ್ನೂ ಓದಿ: ಹಣ ಕಟ್ ಆಯ್ತು, ಗೊತ್ತಿಲ್ಲ ಎಲ್ಲೋಯ್ತು; ಗ್ರೋ ಪ್ಲಾಟ್​ಫಾರ್ಮ್ ವಿರುದ್ಧ ವಂಚನೆ ಆರೋಪದ ಸದ್ದು

ಇದರ ಮಧ್ಯೆ ಅದಾನಿ ಗ್ರೂಪ್ ಎರಡು ವರ್ಷಗಳಿಗಾಗುವಷ್ಟು ಸಾಲ ಮರುಪಾವತಿ ಮೊತ್ತ ತೀರಿಸಲು ಹೆಚ್ಚುವರಿ 40,000 ಕೋಟಿ ರೂ ಹಣವನ್ನು ಹೊಂದಿಸಿ ಇಟ್ಟಿತು. ಮಾರ್ಜಿನ್ ಲಿಂಕ್ಡ್ ಫೈನಾನ್ಸಿಂಗ್​ನಲ್ಲಿ 17,500 ಕೋಟಿ ರೂ ಮೊತ್ತದ ಸಾಲವನ್ನು ಮುಂಗಡವಾಗಿ ತೀರಿಸಿತು. ಇದರಿಂದ ಅದಾನಿ ಗ್ರೂಪ್​ನ EBITDA ಅನುಪಾತ 3.3ರಿಂದ 2.2ಕ್ಕೆ ಇಳಿಯಿತು.

ಹಿಂಡನ್ಬರ್ ವಿಚಾರದ ಕೋಲಾಹಲಗಳ ಮಧ್ಯೆಯೇ ಹಲವು ಜಾಗತಿಕ ಹೂಡಿಕೆದಾರ ಸಂಸ್ಥೆಗಳು ಅದಾನಿ ಗ್ರೂಪ್ ಕೈಹಿಡಿದವು. ಸಿಜಿಕ್ಯೂ ಪಾರ್ಟ್ನರ್ಸ್, ಟೋಟಲ್ ಎನರ್ಜೀಸ್, ಐಎಚ್​ಸಿ, ಕ್ಯೂಐಎ, ಯುಎಸ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆಗಳಿಂದ ಅದಾನಿ ಗ್ರೂಪ್​ಗೆ ಬಂಡವಾಳ ಹರಿದುಬಂದಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು