Multiple Bank Accounts: ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅನುಕೂಲವಾ, ಅನನುಕೂಲವಾ? ಇಲ್ಲಿದೆ ಡೀಟೇಲ್ಸ್

Pros and Cons of having multiple bank accounts: ಇವತ್ತಿನ ದಿನಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತೇವೆ. ಯಾವುದಾದರೂ ಒಂದು ಬ್ಯಾಂಕಲ್ಲಿ ಒಂದು ಖಾತೆ ಇದ್ದರೆ ಸಾಕಪ್ಪಾ ಎಂದು ಕೆಲವೊಮ್ಮೆ ಅನಿಸಬಹುದು. ಈಗಾಗಲೇ ಐದಾರು ಬ್ಯಾಂಕ್ ಖಾತೆಗಳಿದ್ದರೂ ಇನ್ನೂ ಹೊಸ ಖಾತೆಗಳು ಬೇಕೆನಿಸಬಹುದು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಅದರ ಅನುಕೂಲ, ಅನನುಕೂಲಗಳೇನು ತಿಳಿದಿರಿ....

Multiple Bank Accounts: ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅನುಕೂಲವಾ, ಅನನುಕೂಲವಾ? ಇಲ್ಲಿದೆ ಡೀಟೇಲ್ಸ್
ಬ್ಯಾಂಕ್ ಖಾತೆ
Follow us
|

Updated on: Jun 25, 2024 | 2:36 PM

ಬ್ಯಾಂಕ್ ಖಾತೆ ತೆರೆದಿರುವ ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಖಾತೆ (multiple bank accounts) ಹೊಂದಿರುತ್ತಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಹೊಸ ಖಾತೆಗಳನ್ನು ಸೃಷ್ಟಿಸುತ್ತೇವೆ. ಕೆಲಸ ಬದಲಿಸಿದಾಗ ಬೇರೆ ಬ್ಯಾಂಕ್ ಖಾತೆ ರಚಿಸಬೇಕಾಗಬಹುದು. ಸರ್ಕಾರದ ಸೌಲಭ್ಯಗಳ ಹಣ ಪಡೆಯಲೆಂದು ಪ್ರತ್ಯೇಕ ಖಾತೆ ರಚಿಸಬೇಕಾಗಬಹುದು. ಕಡಿಮೆ ಬಡ್ಡಿಗೆ ಗೃಹ ಸಾಲ ಸಿಗುತ್ತೆ ಎಂದು ಯಾವುದಾದರೂ ಬ್ಯಾಂಕ್​ನಲ್ಲಿ ಖಾತೆ ಸೃಷ್ಟಿಸಬಹುದು. ಹೀಗೆ ಬೇರೆ ಬೇರೆ ಕಾರಣಕ್ಕೆ ಹೆಚ್ಚಿನ ಜನರ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿರುತ್ತವೆ. ಈ ಸಂದರ್ಭದಲ್ಲಿ ಒಂದೇ ಬ್ಯಾಂಕ್ ಇದ್ದರೆ ಚೆಂದವಾ, ಹೆಚ್ಚಿನ ಬ್ಯಾಂಕ್​ಗಳಲ್ಲಿ ಖಾತೆಗಳಿದ್ದರೆ ಸರಿಯಾ ಎಂಬ ಅನಿಸಿಕೆ, ಅನುಮಾನಗಳು ಮೂಡದೇ ಇರದು.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಇರುವ ಅನುಕೂಲಗಳಿವು…

  • ಸರ್ಕಾರದ ಸಬ್ಸಿಡಿಗಳಿಗೆ ಒಂದು ಖಾತೆ, ಪಿಂಚಣಿ ಬರಲು ಒಂದು ಖಾತೆ, ಉಳಿತಾಯ ಹಣ ಇಡಲು ಒಂದು ಖಾತೆ, ನಿತ್ಯದ ವೆಚ್ಚಕ್ಕೆ ಒಂದು ಖಾತೆ, ಟ್ರೇಡಿಂಗ್​ಗೆ ಒಂದು ಖಾತೆ, ಅಥವಾ ಯುಪಿಐ, ಆನ್ಲೈನ್ ಪೇಮೆಂಟ್​ಗೆ ಒಂದು ಖಾತೆ, ಹೀಗೆ ಬೇರೆ ಬೇರೆ ಪ್ರಮುಖ ಕಾರ್ಯಗಳಿಗೆ ಪ್ರತ್ಯೇಕ ಖಾತೆಗಳಿದ್ದರೆ ಅನುಕೂಲ ಆಗಬಹುದು.
  • ಬ್ಯಾಂಕ್​ನ ಸರ್ವರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹಣದ ವಹಿವಾಟು ನಡೆಸಲು ಸಾಧ್ಯವಾಗದೇ ಹೋಗಬಹುದು. ಅಂಥ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್​ಗಳಲ್ಲಿ ಖಾತೆಗಳಿದ್ದರೆ ಅನುಕೂಲವಾಗುತ್ತದೆ.
  • ಎಟಿಎಂಗಳಿಂದ ಹೆಚ್ಚು ಬಾರಿ ನಗದು ಹಣ ವಿತ್​ಡ್ರಾ ಮಾಡಿಕೊಳ್ಳುವವರಿಗೆ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅನುಕೂಲವಾಗಬಹುದು. ಯಾಕೆಂದರೆ ಒಂದು ಎಟಿಎಂ ಕಾರ್ಡ್​ನಲ್ಲಿ ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಬಳಕೆ ಮಾಡಲು ಮಿತಿ ಇರುತ್ತದೆ. ಬೇರೆ ಬ್ಯಾಂಕ್​ನ ಎಟಿಎಂ ಇದ್ದರೆ ಹೆಚ್ಚು ಬಾರಿ ಎಟಿಎಂ ಬಳಸಬಹುದು.

ಇದನ್ನೂ ಓದಿ: ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ

ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅನನುಕೂಲಗಳೇನು?

  • ಹೆಚ್ಚಿನ ಬ್ಯಾಂಕುಗಳ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ನಿಯಮ ಇರುತ್ತದೆ. ಕೆಲ ಬ್ಯಾಂಕುಗಳು ಝೀರೋ ಬ್ಯಾಲನ್ಸ್ ಅಕೌಂಟ್ ಸೌಲಭ್ಯ ನೀಡುತ್ತವೆ. ಇನ್ನೂ ಕೆಲ ಬ್ಯಾಂಕುಗಳ ಖಾತೆಯಲ್ಲಿ ಒಂದು ಸಾವಿರ ರೂ ಕನಿಷ್ಠ ಬ್ಯಾಲನ್ಸ್ ಇರಬೇಕು. ಮತ್ತೆ ಕೆಲ ಬ್ಯಾಂಕ್ ಖಾತೆಗಳಲ್ಲಿ 10,000 ರೂ ಮಿನಿಮಮ್ ಬ್ಯಾಲನ್ಸ್ ಇರಬೇಕು.
  • ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ, ಎಲ್ಲವನ್ನೂ ಬಳಸುವ ಅಗತ್ಯ ಬೀಳದೇ ಹೋಗಬಹುದು. ಕಾರಣಾಂತರಗಳಿಂದ ಕೆಲವು ಖಾತೆಗಳ ಬಳಕೆಯನ್ನೇ ನಿಲ್ಲಿಸುವ ಸಾಧ್ಯತೆ ಇರುತ್ತದೆ. ಇವು ಡಾರ್ಮಂಟ್ ಅಕೌಂಟ್ ಆಗಿ ತಿರುಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ