ಬೈಜೂಸ್ ಕಥೆ.! ತನಿಖೆಯಲ್ಲಿ ಪತ್ತೆಯಾಗದ ವಂಚನೆ; 4,000 ಕೋಟಿ ರೂಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿದ ಪ್ರೋಸಸ್; ಇದೇನು ಸಾಲ ಮನ್ನವಾ?

Ministry of Corporate Affairs' probe on Byju's: ಬೈಜುಸ್ ಸಂಸ್ಥೆಯ ಮಾಲೀಕರು ಹಣಕಾಸು ಅಕ್ರಮಗಳನ್ನು ಎಸಗಿಲ್ಲ. ಆಡಳಿತದಲ್ಲಿ ವೈಫಲ್ಯವಾಗಿದೆ ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ. ಕಳೆದ ಒಂದು ವರ್ಷದಿಂದ ಕಾರ್ಪೊರೇಟ್ ಅಫೇರ್ಸ್ ಸಚಿವಾಲಯದಿಂದ ತನಿಖೆ ನಡೆಯುತ್ತಿದೆ. ಈ ತನಿಖೆಯ ಒಂದಷ್ಟು ಒಳ ಅಂಶಗಳ ಮಾಹಿತಿಯನ್ನು ಬ್ಲೂಮ್​ಬರ್ಗ್ ಸುದ್ದಿಸಂಸ್ಥೆ ಪಡೆದುಕೊಂಡು ವರದಿ ಮಾಡಿದೆ.

ಬೈಜೂಸ್ ಕಥೆ.! ತನಿಖೆಯಲ್ಲಿ ಪತ್ತೆಯಾಗದ ವಂಚನೆ; 4,000 ಕೋಟಿ ರೂಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿದ ಪ್ರೋಸಸ್; ಇದೇನು ಸಾಲ ಮನ್ನವಾ?
ಬೈಜುಸ್
Follow us
|

Updated on: Jun 26, 2024 | 2:55 PM

ನವದೆಹಲಿ, ಜೂನ್ 26: ಒಂದು ಕಾಲದಲ್ಲಿ ಭಾರತದ ಸೂಪರ್​ಸ್ಟಾರ್ ಸ್ಟಾರ್ಟಪ್ ಎಂದು ಬಣ್ಣಿಸಲ್ಪಡುತ್ತಿದ್ದ ಬೈಜುಸ್ ಸಂಸ್ಥೆ (Byju’s) ಇವತ್ತು ಬಹುತೇಕ ಅಸ್ತಿತ್ವ ಕಳೆದುಕೊಂಡಿದೆ. ಭಾರೀ ಭರವಸೆಯಲ್ಲಿ ಅದರಲ್ಲಿ ಹೂಡಿಕೆ ಮಾಡಿದವರು ಇವತ್ತು ಹಣ ಹೇಗೆ ವಸೂಲಿ ಮಾಡುವುದು ಎಂದು ಚಿಂತಾಕ್ರಾಂತರಾಗಿದ್ದಾರೆ. ಪ್ರೋಸಸ್ ವೆಂಚರ್ಸ್ ಸಂಸ್ಥೆ ಬೈಜುಸ್​ನಲ್ಲಿ ಹೂಡಿಕೆ ಮಾಡಿದ್ದ 530 ಮಿಲಿಯನ್ ಡಾಲರ್ ಹಣವನ್ನು ಕೈಬಿಟ್ಟಿದೆ. ಅಂದರೆ ಲೋನ್ ರೈಟ್ ಆಫ್ ಮಾಡಿದೆ. ಇದರ ಬೆನ್ನಲ್ಲೇ ಬೈಜುಸ್​ಗೆ ಒಂದಿಷ್ಟು ಸಮಾಧಾನ ತರುವ ಸುದ್ದಿಯೊಂದು ಬಂದಿದ್ದು, ಈ ಶಿಕ್ಷಣ ಕ್ಷೇತ್ರದ ಸ್ಟಾರ್ಟಪ್ ಕಂಪನಿಯಿಂದ ವಂಚನೆ ನಡೆದಿಲ್ಲದಿರುವುದು ತನಿಖೆಯಿಂದ ಗೊತ್ತಾಗಿದೆ.

ಕಾರ್ಪೊರೇಟ್ ಅಫೇರ್ಸ್ ಸಚಿವಾಲಯದ ಕಣ್ಗಾವಲಿನಲ್ಲಿ ಕಳೆದ ಒಂದು ವರ್ಷದಿಂದ ಬೈಜುಸ್ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಅದರ ವರದಿ ಇನ್ನೂ ಬಿಡುಗಡೆ ಆಗಿಲ್ಲ. ಕೆಲ ಅಂಶಗಳು ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿವೆ. ಬ್ಲೂಮ್​ಬರ್ಗ್ ಸುದ್ದಿಸಂಸ್ಥೆ ವರದಿ ಪ್ರಕಾರ, ತನಿಖೆಯಲ್ಲಿ ಬೈಜುಸ್ ಸಂಸ್ಥೆಯಿಂದ ವಂಚನೆ ನಡೆದಿರುವುದು ಗೊತ್ತಾಗಿಲ್ಲ. ಆದರೆ, ಅಸಮರ್ಪಕ ಆಡಳಿತ ನಿರ್ವಹಣೆ ಆಗಿದೆ ಎನ್ನುವುದನ್ನು ಆ ತನಿಖೆ ಪತ್ತೆ ಹಚ್ಚಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಬೈಜುಸ್​ಗೆ ಸಂದಾಯವಾದ ಫಂಡಿಂಗ್ ಹಣವನ್ನು ಪ್ರೊಮೋಟರ್​ಗಳು ವೈಯಕ್ತಿಕವಾಗಿ ಬಳಕೆ ಮಾಡಿಲ್ಲ ಎಂದೂ ತನಿಖೆಯಲ್ಲಿ ಗೊತ್ತಾಗಿದೆಯಂತೆ. ಇದರೊಂದಿಗೆ, ಬೈಜುಸ್ ಸಂಸ್ಥಾಪಕ ರವೀಂದ್ರನ್ ಅವರಿಗೆ ಕಷ್ಟಕೋಟಲೆಗಳ ಮಧ್ಯೆ ಒಂದಷ್ಟು ರಿಲೀಫ್ ಸಿಕ್ಕಂತಾಗಿದೆ.

ಬೈಜುಸ್ ನಷ್ಟಕ್ಕೆ ಕಾರಣಗಳಿವು…

ದುರ್ಬಲ ಆಡಳಿತ ಹೊಂದಿರುವುದು, ನಿಯಮಬದ್ಧ ನಡವಳಿಕೆ ಇಲ್ಲದಿರುವುದು, ಫಂಡಿಂಗ್ ವಾತಾವರಣದಲ್ಲಿ ಬದಲಾವಣೆ ಆಗಿದ್ದು ಇವು ಬೈಜುಸ್​ನ ನಷ್ಟ ಹೆಚ್ಚಳಕ್ಕೆ ಕಾರಣವಾಗಿವೆ. ಕಾನೂನುಪಾಲನೆ ಮತ್ತು ಹಣಕಾಸು ವಿಚಾರಗಳನ್ನು ನೋಡಿಕೊಳ್ಳಲು ವೃತ್ತಿಪರರನ್ನು ತರಲು ಬೈಜುಸ್ ವಿಫಲವಾಗಿದೆ ಎಂಬುದನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಡೆಸಿರುವ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸೊಳ್ಳೆ ಕಾಟ ಬಿಟ್ರೆ… ಬೆಂಗಳೂರನ್ನು ಅಮೆರಿಕದ ಸಿಲಿಕಾನ್ ವ್ಯಾಲಿಗೆ ಹೋಲಿಸಿದ ಯುಎಸ್ ರಿಟರ್ನ್ಡ್ ಉದ್ಯಮಿ

ಬೇರೆ ಕಂಪನಿಗಳನ್ನು ಖರೀದಿಸಿದಾಗ ಅದರ ವಿವರಗಳನ್ನು ಬೈಜುಸ್​ನ ಎಲ್ಲಾ ನಿರ್ದೇಶಕರ ಜೊತೆ ಹಂಚಿಕೊಳ್ಳಲಾಗಿರಲಿಲ್ಲ. ಅಂಥ ಒಪ್ಪಂದಗಳ ಬಗ್ಗೆ ಚರ್ಚೆ ನಡೆಸಲು ಬಹಳ ಅಲ್ಪ ಅವಧಿಯಲ್ಲಿ ಸಭೆ ಕರೆಯಲಾಗುತ್ತಿತ್ತು ಎಂದು ತನಿಖೆಯು ಮತ್ತಷ್ಟು ಲೋಪದೋಷಗಳನ್ನು ಎತ್ತಿ ತೋರಿಸಿದೆ.

ಸಾಲ ರೈಟ್ ಆಫ್ ಮಾಡಿದ ಪ್ರೋಸಸ್ ವೆಂಚರ್ಸ್

ಬೈಜುಸ್ ಸಂಸ್ಥೆಯಲ್ಲಿ ಹಲವು ಹೂಡಿಕೆದಾರರಿದ್ದಾರೆ. ಅವುಗಳ ಪೈಕಿ ಮೂರು ಪ್ರಮುಖ ಹೂಡಿಕೆದಾರರಾದ ಪ್ರೋಸಸ್, ಪೀಕ್ ಎಕ್ಸ್​ವಿ ಪಾರ್ಟ್ನರ್ಸ್ ಮತ್ತು ಚಾನ್ ಜುಕರ್ಬರ್ಗ್ ಇನಿಷಿಯೇಟಿವ್ ಸಂಸ್ಥೆಗಳು ಬೈಜುಸ್ ವಿರುದ್ಧ ಅಸಮಾಧಾನಗೊಂಡು ನಿರ್ದೇಶಕರ ಮಂಡಳಿಯಿಂದಲೇ ಹೊರಬಿದ್ದಿದ್ದವು. ಬ್ಲ್ಯಾಕ್​ರಾಕ್ ಸೇರಿದಂತೆ ಎಲ್ಲಾ ಹೂಡಿಕೆದಾರ ಸಂಸ್ಥೆಗಳು ಬೈಜುಸ್ ವ್ಯಾಲ್ಯುಯೇಶನ್ ಅನ್ನು ಶೇ. 90ಕ್ಕಿಂತಲೂ ಹೆಚ್ಚು ಇಳಿಸಿವೆ. ಬ್ಲ್ಯಾಕ್ ರಾಕ್ ಮೊದಲಾದ ಸಂಸ್ಥೆಗಳು ಶೂನ್ಯ ವ್ಯಾಲ್ಯುಯೇಶನ್ ಕೊಟ್ಟಿವೆ.

2018ರಲ್ಲಿ ಪ್ರೋಸಸ್ ಸಂಸ್ಥೆ ಬೈಜುಸ್​ನಲ್ಲಿ ಮೊದಲಿಗೆ 383 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಬಹಳಷ್ಟು ಕಂಪನಿಗಳು ಬೈಜುಸ್​ನಲ್ಲಿ ಮುಗಿಬಿದ್ದು ಹೂಡಿಕೆ ಮಾಡಿದ್ದವು. 2020ರ ಸಂದರ್ಭದಲ್ಲಿ ಬೈಜುಸ್​ನ ವ್ಯಾಲ್ಯುಯೇಶನ್ ಮೂರು ಬಿಲಿಯನ್ ಡಾಲರ್​ಗೂ ಅಧಿಕ ಇತ್ತು. ಬಳಿಕ ಕಳಪೆ ಆದಾಯ, ಕಳಪೆ ಬಿಸಿನೆಸ್ ಇತ್ಯಾದಿ ಕಾರಣಕ್ಕೆ ಬೈಜುಸ್ ಮೇಲೆ ಹೂಡಿಕೆದಾರರ ವಿಶ್ವಾಸ ಹೊರಟುಹೋಗಿತ್ತು.

ಇದನ್ನೂ ಓದಿ: 5G Spectrum Explained: 5ಜಿ ಸ್ಪೆಕ್ಟ್ರಂ ಎಂದರೇನು? 900 ಮೆಗಾಹರ್ಟ್ಜ್ ಇತ್ಯಾದಿ ಬ್ಯಾಂಡ್​ವಿಡ್ತ್​ಗಳ ಉಪಯೋಗ ಏನು? ಇಲ್ಲಿದೆ ಡೀಟೇಲ್ಸ್

ಸಾಲ ರೈಟ್ ಆಫ್ ಎಂದರೆ ಸಾಲ ಮನ್ನಾ ಅಲ್ಲ…

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೂಡಿಕೆದಾರ ಸಂಸ್ಥೆಯಾದ ಪ್ರೋಸಸ್ ವೆಂಚರ್ಸ್ ಬೈಜುಸ್​ನಲ್ಲಿರುವ ತಮ್ಮ 540 ಮಿಲಿಯನ್ ಡಾಲರ್ ಹೂಡಿಕೆಯನ್ನು ರೈಟ್ ಆಫ್ ಮಾಡಿರುವುದಾಗಿ ಹೇಳಿದೆ. ಇದರರ್ಥ ಸಾಲವನ್ನು ಕೈಬಿಟ್ಟಿದ್ದಾರೆ ಎಂದಲ್ಲ. ಕಾನೂನು ಮಾರ್ಗದಲ್ಲಿ ಬೈಜುಸ್ ಸಂಸ್ಥೆಯಿಂದ ಹಣ ವಸೂಲಿ ಮಾಡುತ್ತವೆ.

ಒಂದು ರೀತಿಯಲ್ಲಿ ಇದು ಬ್ಯಾಂಕುಗಳು ಅನುತ್ಪಾದಕ ಸಾಲಗಳನ್ನು ರೈಟ್ ಆಫ್ ಮಾಡಿದಂತೆ. ಈ ರೈಟ್ ಆಫ್ ಮಾಡಿದ ಸಾಲವನ್ನು ಬೇರೆ ಬೇರೆ ಮಾರ್ಗಗಳಲ್ಲಿ ವಸೂಲಿ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ